Bara parihara credited ಬರ ಪರಿಹಾರ ಹಣ ಬಿಡುಗಡೆ ಆಧಾರ್ ನಂಬರ್ ಹಾಕಿ ಇಲ್ಲೇ ಚೆಕ್ ಮಾಡಿ

Written by Admin

Updated on:

Spread the love

Bara parihara credited : ಅಂತೂ ಬರಗಾಲ ಪರಿಹಾರದ ಎರಡನೇ ಕಂತಿನ ಹಣ ಈಗ ಜಮೆಯಾಗಿದೆ.  ಹೌದು,  ಶನಿವಾರ ನನ್ನ ಖಾತೆಗೆ ಬರಗಾಲ ಪರಿಹಾರದ ಎರಡನೇ ಕಂತಿನ ಹಣ ಜಮೆಯಾಯಿತು. ನಿಮ್ಮ ಖಾತೆಗೆ ಜಮೆಯಾಯಿತೋ ಇಲ್ಲವೋ ಹಾಗೂ ಯಾವ ಸರ್ವೆ ನಂಬರಿಗೆ ಜಮೆಯಾಗಿದೆ ಎಂಬುದನ್ನು ಈಗಲೇ ಚೆಕ್ ಮಾಡಿಕೊಳ್ಳಿ.

Bara parihara credited ನಿಮ್ಮ ಖಾತೆಗೆ ಬರ ಪರಿಹಾರ ಹಣ ಜಮೆಯಾಯಿತೋ ಇಲ್ಲವೋ ಇಲ್ಲೇ ಚೆಕ್ ಮಾಡಿ

ಬರ ಪರಿಹಾರ ಹಣ ಯಾವ ಯಾವ ರೈತರಿಗೆ  ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://parihara.karnataka.gov.in/service92/       

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ  ನಿಮಗೆ ಭೂಮಿ ಆನ್ಲೈನ್ ಪರಿಹಾರ ಇನ್ಪುಟ್ ಸಬ್ಸಿಡಿ ಪಾವತಿ ವಿವರಗಳು ಪೇಜ್ ಕಾಣಿಸುತ್ತದೆ.

ಅಲ್ಲಿ ನೀವು Select Year / ವರ್ಷ  2023-24 ಆಯ್ಕೆ ಮಾಡಿಕೊಳ್ಳಬೇಕು. ನಂತರ Select Season / ಋತು ಆಯ್ಕೆ ಮಾಡಿಯಲ್ಲಿ ಮುಂಗಾರು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ Select Calamity ವಿಪತ್ತು ಆಯ್ಕೆ ಮಾಡಿಯಲ್ಲಿ ಬರ ಆಯ್ಕೆ ಮಾಡಬೇಕು. ನಂತರ Get Data / ಹುಡುಕು ಮೇಲೆ ಕ್ಲಿಕ್ ಮಾಡಬೇಕು.

ಅಲ್ಲಿ ನಿಮಗೆ ಆಧಾರ್ ಸಂಖ್ಯೆ, ರೈತರ ಗುರುತಿನ ಸಂಖ್ಯೆ (ಎಫ್ಐಡಿ) , ಮೊಬೈಲ್ ಸಂಖ್ಯೆ ಹಾಗೂ ಸರ್ವೆ ನಂಬರ್  ಹೀಗೆ ನಾಲ್ಕು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನಿಮಗೆ ಆಧಾರ್  ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು.  ಬರ ಪರಿಹಾರ ಹಣ ಯಾವ ಸರ್ವೆ ನಂಬರಿಗೆ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಸರ್ವೆ ನಂಬರ್ ನಮೂದಿಸಬೇಕು. ನಂತರ ಸರ್ ನಾಕ್ ನಲ್ಲಿ ಸ್ಟಾರ್ ಹಾಗೂ ಹಿಸ್ಸಾ ನಂಬರ್ ನಲ್ಲಿಯೂ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ  Fetch/ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು.

Bara parihara

ಆಗ ನಿಮಗೆ ನೀವು ನಮೂದಿಸಿದ  ಸರ್ವೆ ನಂಬರಿಗೆ ಬರಗಾಲ ಪರಿಹಾರ ಹಣ ಎಷ್ಟು ಜಮೆಯಾಗಿದೆ. ಯಾವ ಬ್ಯಾಂಕಿಗೆ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.

ಇದನ್ನೂ ಓದಿ Mini Tractor Subsidy ಮಿನಿ ಟ್ರ್ಯಾಕ್ಟರ್ ಖರೀದಿಗೆ 1 ಲಕ್ಷ ರೂಪಾಯಿಯರವಗೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ 

ಒಂದು ವೇಳೆ ನಿಮಗೆ ನೀವು ನಮೂದಿಸಿದ ಸರ್ವೆ ನಂಬರಿಗೆ ಹಣ ಜಮೆಯಾಗಿಲ್ಲವಾದರೆ Data not found ಎಂದು ಕಾಣಿಸುತ್ತದೆ.

Bara parihara credited ಯಾವ ಯಾವ ಬೆಳೆಗೆ ಎಷ್ಟು ಬರ ಪರಿಹಾರ ಜಮೆ?

ರೈತರ ಎಲ್ಲಾ ಬೆಳೆಗೆ ಒಂದೇ ರೀತಿ ಬರಗಾಲ ಪರಿಹಾರ ಹಣ ಜಮೆಯಾಗುವುದಿಲ್ಲ. ಹೌದು, ಎನ್.ಡಿ.ಆರ್.ಎಫ್ / ಎಸ್.ಡಿ.ಆರ್.ಎಫ್ ಮಾರ್ಗಸೂಚಿ ಪ್ರಕಾರ ರಾಜ್ಯ ಸರ್ಕಾರವು ಪ್ರತಿ ಹೆಕ್ಟೇರ್ (ಗರಿಷ್ಠ ಎರಡು ಹೆಕ್ಟೇರ್ ಗೆ) ಪರಿಹಾರ ಮೊತ್ತವನ್ನು ನಿಗದಿಪಡಿಸಿದೆ. ಮಳೆಯಾಶ್ರಿತ / ಖುಷ್ಕಿ ಬೆಳೆಗೆ 8500 ರೂಪಾಯಿ ನಿಗದಿಪಡಿಸಲಾಗಿದೆ. ನೀರಾವರಿ ಬೆಳೆಗೆ 17000 ರೂಪಾಯಿ ನಿಗದಿಪಡಿಸಲಾಗಿದೆ. ಹಾಗೂ ಬಹುವಾರ್ಷಿಕ /  ತೋಟಗಾರಿಕೆ ಬೆಳೆಗಳಿಗೆ 22500 ರೂಪಾಯಿವರೆಗೆ ಪರಿಹಾರ ನೀಡಲು ನಿಗದಿಪಡಿಸಲಾಗಿದೆ.

ಮೊದಲು ತಾತ್ಕಾಲಿಕವಾಗಿ ರೈತರ ಖಾತೆಗೆ 2ಸಾವಿರ ರೂಪಾಯಿ ಜಮೆ ಮಾಡಲಾಯಿತು. ನಂತರ ಎರಡನೇ ಹಂತದಲ್ಲಿ ಏಪ್ರೀಲ್ ಮೇ ಮೊದಲ ವಾರದಲ್ಲಿ ಬರ ಪರಿಹಾರದ ಎರಡನೇ ಕಂತು ರೈತರ ಖಾತೆಗೆ ಜಮೆ ಮಾಡಲಾಯಿತು. ಅಂದು ಯಾವ ಯಾವ ರೈತರ ಖಾತೆಗೆ ಹಣ ಜಮೆಯಾಗಿಲ್ಲವೋ ಅಂತಹ ರೈತರ ಖಾತೆಗೆ ಈಗ ಹಣ ಜಮೆ ಮಾಡಲಾಗುತ್ತಿದೆ. ಹೌದು, ಎಕರೆಗೆ 2500 ರಿಂದ 3000 ರೂಪಾಯಿಯವರೆಗೆ ಬರ ಪರಿಹಾರ ಹಣ ಜಮೆ ಮಾಡಲಾಗುತ್ತಿದೆ. ಹಾಗಾಗಿ ಯಾವ ಯಾವ ರೈತರ ಖಾತೆಗೆ ಹಣ ಜಮೆಯಾಗಿದೆ ಎಂಬುದನ್ನು ಈಗ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಬಹುದು.

Leave a Comment