Bara parihara helpline number ಬರಗಾಲ ಪರಿಹಾರ ಜಮೆಯಾಗಿಲ್ಲವೇ? ಈ ನಂಬರಿಗೆ ಕರೆ ಮಾಡಿ 2024

Written by Admin

Published on:

Spread the love

Bara parihara helpline number : ಬರಗಾಲ ಪರಿಹಾರ ಹಣ ಯಾವ ರೈತರಿಗೆ ಜಮೆಯಾಗಿಲ್ಲವೋ ಅಂತಹ ರೈತರಿಗಾಗಿ ಸಹಾಯವಾಣಿ ನಂಬರ್ ಆರಂಭಿಸಲಾಗಿದೆ.

ಹೌದು, ಯಾವ ಯಾವ ರೈತರಿಗೆ ಬೆಳೆ ಹಾನಿ ಪರಿಹಾರ ಬಂದಿಲ್ಲವೋ ಆ ರೈತರು ಇಲ್ಲಿ ನೀಡಲಾದ ಸಹಾಯವಾಣಿ ನಂಬರ್ ಗೆ ಕರೆ ಮಾಡಿ ವಿಚಾರಿಸಬಹುದು. ಹಾಗಾದರೆ ನಿಮಗೆ ಬರಗಾಲ ಪರಿಹಾರ ಹಣ ಏಕೆ ಜಮೆಯಾಗಿಲ್ಲ? ಬರಗಾಲ ಪರಿಹಾರ ಹಣ ಎಷ್ಟು ಜಮೆಯಾಗಲಿದೆ? ಯಾವ ತಾಲೂಕಿನ ರೈತರು ಯಾವ ನಂಬರಿಗೆ ಕರೆ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Bara parihara helpline number

ಬೆಳೆ ಹಾನಿ ಪರಿಹಾರದ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ನೀಡಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಹಾಯವಾಣಿ ಪ್ರಾರಂಭಿಸಲು ಕ್ರಮಕೈಗೊಳ್ಳಲಾಗಿದೆ. ಈ ಮೂಲಕ ಸರಿಯಾದ ಮಾಹಿತಿಯನ್ನು ರೈತರಿಗೆ ತಲುಪಿಸಲು ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು,ಈ ಮೂಲಕ ರೈತರಿಗೆ ನೆರವಾಗಲು ಜಿಲ್ಲಾಡಳಿತ ಮುಂದಾಗಿದೆ.

2023ನೇ ಸಾಲಿನ ಮುಂಗಾರಿನ ಹಂಗಾಮಿನ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರಿಗೆ ಬೆಳೆ ಪರಿಹಾರದ ಮೊದಲನೇ ಕಂತಾಗಿ 2000 ರೂಪಾಯಿ ಪಾವತಿಸಲಾಗಿದೆ.

ಇದೀಗ ಅರ್ಹತೆಯಂತೆ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿ ಆಧಾರದಲ್ಲಿ ಫ್ರೂಟ್ಸ್ ಐಡಿ ಹೊಂದಿರುವ ಪಹಣಿ ಜೋಡಣೆಯಾಗಿರುವ ರೈತರಿಗೆ ಪರಿಹಾರ ತಂತ್ರಾಂಶದ ಮೂಲಕ ಪರಿಹಾರ ಪಾವತಿಸಲಾಗುತ್ತಿದೆ.

Bara parihara helpline number ನಿಮಗೆಷ್ಟು ಬರ ಪರಿಹಾರ ಹಣ ಜಮೆಯಾಗಿದೆ? ಇಲ್ಲೇ ಚೆಕ್ ಮಾಡಿ

ನಿಮಗೆ ಬರ ಪರಿಹಾರ ಹಣ ಎಷ್ಟು ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://parihara.karnataka.gov.in/service92/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ನಂತರ ಅಲ್ಲಿ ತೆರೆದುಕೊಳ್ಳುವ ಪೇಜ್ ನಲ್ಲಿ  ನೀವು Select Year / ವರ್ಷ  2023-24 ಆಯ್ಕೆ ಮಾಡಿಕೊಳ್ಳಬೇಕು. ನಂತರ Select Season / ಋತು ಆಯ್ಕೆ ಮಾಡಿಯಲ್ಲಿ ಮುಂಗಾರು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ Select Calamity ವಿಪತ್ತು ಆಯ್ಕೆ ಮಾಡಿಯಲ್ಲಿ ಬರ ಆಯ್ಕೆ ಮಾಡಬೇಕು. ನಂತರ Get Data / ಹುಡುಕು ಮೇಲೆ ಕ್ಲಿಕ್ ಮಾಡಬೇಕು.

ಅಲ್ಲಿ ನಿಮಗೆ ಆಧಾರ್ ಸಂಖ್ಯೆ, ರೈತರ ಗುರುತಿನ ಸಂಖ್ಯೆ, ಮೊಬೈಲ್ ಸಂಖ್ಯೆಹಾಗೂ ಸರ್ವೆ ನಂಬರ್ ಈ ನಾಲ್ಕರಲ್ಲಿ ಯಾವುದಾದರೊಂದು ಒಂದನ್ನು ಆಯ್ಕೆಮಾಡಿಕೊಳ್ಳಬೇಕು.

Bara parihara helpline number ಬರ ಪರಿಹಾರ ಜಮೆ ಚೆಕ್ ಮಾಡಲು ಯಾವ ದಾಖಲೆ ಬೇಕು?

ಬರ ಪರಿಹಾರ ಜಮೆ ಮಾಡಲು ಯಾವ ದಾಖಲೆ ಬೇಕಿಲ್ಲ.ನಿಮ್ಮ  ಸರ್ವೆ ನಂಬರ್ ಗೊತ್ತಿದ್ದರೆ.ಸಾಕು, ಸರ್ವೆ ನಂಬರ್ ನಮೂದಿಸಿ ಚೆಕ್ ಮಾಡಬಹುದು. ಹೌದು,  ನೀವು ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.ಇದಾದ ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಗ್ರಾಮ ಆಯ್ಕೆಮಾಡಿಕೊಳ್ಳಬೇಕು. ನಂತರ ನಿಮ್ಮ ಸರ್ವೆ ನಂಬರ್ ನಮೂದಿಸಬೇಕು. ನಂತರ ಸರ್ನೋಕ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಹಿಸ್ಸಾ ನಂಬರ್ ನಲ್ಲಿಯೂ ಸಹ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು.

ಇದನ್ನೂ ಓದಿ Village map ಈ ಮ್ಯಾಪ್ ನಲ್ಲಿ ಜಮೀನಿಗೆ ಹೋಗುವ, ಬಂಡಿದಾರಿ, ಕಾಲುದಾರಿ ಚೆಕ್ ಮಾಡಿ 2024

ಇದಾದ ನಂತರ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು.  ಆಗ ನೀವು ನಮೂದಿಸಿದ ಸರ್ವೆ ನಂಬರ್ ನಲ್ಲಿ ಬರುವ ಜಮೀನಿನ ಮಾಲಿಕರ ಹೆಸರಿಗಿರುವ ಕೊನೆಯ ನಾಲ್ಕು ಅಂಕಿಗಳು ಕಾಣಿಸುತ್ತವೆ. ಅದರ ಹಿಂದಿರುವ ಬಾಕ್ಸ್ಆಯ್ಕೆ ಮಾಡಿಕೊಂಡ ನಂತರ ನಿಮಗೆ ಮಾಲಿಕರ ಹೆಸರು ಕಾಣಿಸುತ್ತದೆ. ಆ ಮಾಲಿಕರಿಗೆ  ಯಾವ ಬ್ಯಾಂಕಿನಲ್ಲಿ ಯಾವಾಗ ಬರ ಪರಿಹಾರ ಹಣ ಜಮೆಯಾಗಿದೆ ಎಂಬುದು ಕಾಣಿಸುತ್ತದೆ.

Bara parihara

ಇದೇ ರೀತಿ ನೀವು ನಿಮ್ಮ ಸರ್ವೆ ನಂಬರ್ ನಲ್ಲಿ ಬರುವ ಇತರ ಜಮೀನಿನ ಮಾಲಿಕರಿಗೂ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

ಸಹಾಯವಾಣಿ ಸಿಬ್ಬಂದಿ ಜವಾಬ್ದಾರಿಗಳೇನು?

ಸಹಾಯವಾಣಿಗೆ ಸಂಪರ್ಕಿಸುವ ರೈತರ ವೈಯಕ್ತಿಕ ಮಾಹಿತಿ ಪಡೆದು ವೆಬ್ಸೈಟ್ ನಲ್ಲಿ ಬರ ಪರಿಹಾರ ನೀಡಿರುವ ಕುರಿತು ಕಾರ್ಯಾಲಯದ ಸಮಯ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30 ರವರೆಗೆ ಮಾಹಿತಿ ನೀಡುವುದು.

Bara parihara helpline number ಸಹಾಯವಾಣಿ ನಂಬರ್ ಗಳು

Bara parihara helpline number  ಜಿಲ್ಲಾಧಿಕಾರಿ ಕಾರ್ಯಾಲಯ 080 26676143, ದೇವನಹಳ್ಳಿ ತಹಶೀಲ್ದಾರ ಕಚೇರಿ 9916975739, ದೇವನಹಳ್ಳಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ 080 27682383,  ದೊಡ್ಡಬಳ್ಳಾಪುರ ತಹಶೀಲ್ದಾರ ಕಾರ್ಯಾಲಯ 8867586873, ದೊಡ್ಡಬಳ್ಳಾಪುರ ಸಹಾಯಕ ಕೃಷಿ ನಿರ್ದೇಶಕರ ಕಚೇರಿ 8277929961, ಹೊಸಕೋಟೆ ತಹಶೀಲ್ದಾರ ಕಚೇರಿ ಕಾರ್ಯಾಲಯ 8861869657, ಹೊಸಕೋಟೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿ 080 27931235, ನೆಲಮಂಗಲ ತಹಶೀಲ್ದಾರ ಕಾರ್ಯಾಲಯ, ನೆಲಮಂಗಲ ಸಹಾಯಕ ಕೃಷಿ ನಿರ್ದೇಶಕರ ಕಚೇರಿ 8277934015 ಕಚೇರಿಗೆ ಕರೆ ಮಾಡಿ ತಿಳಿದುಕೊಳ್ಳಬಹುದು.

Leave a Comment