Bara parihara list ಇಲ್ಲಿ ನಿಮ್ಮ ಹೆಸರಿದ್ದರೆ ಬರಗಾಲ ಪರಿಹಾರ ಹಣ ಜಮೆ 2024

Written by Admin

Updated on:

Spread the love

Bara parihara list : ರಾಜ್ಯದ ರೈತರಿಗೆ ಈಗಾಗಲೇ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಹೌದು, ತಮಗೆಲ್ಲಾ ಗೊತ್ತಿದ್ದ ಹಾಗೆ ಕೇಂದ್ರ ಸರ್ಕಾರವು ರಾಜ್ಯದ ರೈತರಿಗೆ ಬರಗಾಲ ಪರಿಹಾರ ಹಣ ಬಿಡುಗಡೆ ಮಾಡಲು ಒಪ್ಪಿದೆ.

ಅತೀ ಶೀಘ್ರದಲ್ಲಿ ರೈತರ ಖಾತೆಗೆ ಬರ ಪರಿಹಾರ ಹಣ ಜಮೆ ಮಾಡಲಾಗುವುದು ಎಂದು ಕೃ ಭೈರೇಗೌಡ  ತಿಳಿಸಿದ್ದರು. ಹಾಗಾಗಿ ಚುನಾವಣಾ ಪೂರ್ವದಲ್ಲಿ ಜಮೆಯಾಗದಿದ್ದರೆ ಚನಾವಣೆ ನಂತರ ರೈತರ ಖಾತೆಗೆ ಬರಗಾಲ ಪರಿಹಾರ 2ನೇ ಕಂತಿನ ಹಣ ಜಮೆಯಾಗುವುದು ಗ್ಯಾರೆಂಟಿ.

parihara payment

Bara parihara list  ಇಲ್ಲಿ ಹೆಸರಿದ್ದರೆ ಮಾತ್ರ ಬರ ಪರಿಹಾರ ಹಣ ಜಮೆ

ಇಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ಬರ ಪರಿಹಾರ ಜಮೆ? ನಿಮ್ಮ ಹೆಸರು ಚೆಕ್ ಮಾಡಿ

ಬರಗಾಲ ಪರಿಹಾರ ಹಣ ಜಮೆಯಾಗುವ ಹೆಸುರಗಳ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಚೆಕ್ ಮಾಡಲು  ಈ

https://fruitspmk.karnataka.gov.in/MISReport/FarmerDeclarationReport.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ರೈತರ ಪಟ್ಟಿ ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.ಇದಾದ ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ವೀಕ್ಷಿಸು ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ಕ್ರಮ ಸಂಖ್ಯೆ, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಪಿಎಂಕೆಐಡಿ, ಹೆಸರು, ಸ್ಥಿತಿ ಅಂದರೆ ನಿಮ್ಮ ಹೆಸರು ಪಿಎಂಕೆಐಡಿಗೆ ಸ್ವೀಕೃತವಾಗಿದೆಯೋ ಇಲ್ಲವೋ ಎಂಬುದು ಕಾಣಿಸುತ್ತದೆ. ಇಲ್ಲಿ ನಿಮ್ಮ ಹೆಸರಿದ್ದರೆ ಹಿಂದೆ ರಾಜ್ಯ ಸರ್ಕಾರದ ವತಿಯಿಂದ ನೀಡಲಾದ ಹೆಚ್ಚುವರಿ 4 ಸಾವಿರ ರೂಪಾಯಿ ಪಡೆಯುವಲ್ಲಿ ನೀವು ಅರ್ಹತೆ ಹೊಂದಿದ್ದೀರಿ. ಈಗ ಆ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ.

Bara parihara list  ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಇದೆಯೇ? ಇಲ್ಲೇ ಚೆಕ್ ಮಾಡಿ

ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://fruitspmk.karnataka.gov.in/MISReport/GetDetailsByAadhaar.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಫ್ರೂಟ್ಸ್ ಪಿಎಂಕಿಸಾನ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಬೇಕು. ನಂತರ Search ಮೇಲೆ ಕ್ಲಿಕ್ ಮಾಡಬೇಕು. ಆಗ ಫ್ರೂಟ್ಸ್ ಐಡಿ ಕಾಣಿಸುತ್ತದೆ.

parihara payment report

ಫ್ರೂಟ್ಸ್ ಐಡಿ ಕಾಣಿಸುತ್ತದೆ.ನಂತರ ಪಿಎಂಕೆಐಡಿ ಕಾಣಿಸುತ್ತದೆ. ಇದಾದ ನಂತರ ನಿಮ್ಮ ಹೆಸರು ಕಾಣಿಸುತ್ತದೆ. ಅಂದರೆ ನಿಮ್ಮ ಹೆಸರಿಗೆ ಪ್ರೂಟ್ಸ್ ಐಡಿ ಇದೆ ಎಂದರ್ಥ. ಇಲ್ಲಿ ನಿಮ್ಮ ಹೆಸರು ಪ್ರೂಟ್ಸ್ ಐಡಿ ಇದ್ದರೆ ನಿಮಗೆ ಬರಗಾಲ ಪರಿಹಾರ ಹಣ ಜಮೆಯಾಗುವುದು ಖಚಿತವಾಗಿರುತ್ತದೆ.

Bara parihara list ಯಾವ ಯಾವ ಬೆಳೆಗಳಿಗೆ ಎಷ್ಟೆಷ್ಟು ಬರ ಪರಿಹಾರ ನೀಡಲಾಗುವುದು?                 

ಎಸ್.ಡಿಆರ್.ಎಫ್ ಮಾರ್ಗಸೂಚಿಯ ಪ್ರಕಾರ ಶೇ. 33 ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿರುವ ರೈತರಿಗೆ ಪ್ರತಿ ಹೆಕ್ಟೇರಿಗೆ 8500 ರೂಪಾಯಿ ಬರ ಪರಿಹಾರ ನೀಡಲಾಗುವುದು. ನೀರಾವರಿ ಪ್ರದೇಶಕ್ಕೆ ಹೆಕ್ಟೇರಿಗೆ 17 ಸಾವಿರ  ನೀಡಲಾಗುವುದು. ಅದೇ ರೀತಿ ತೋಟಗಾರಿಕೆ ಬೆಳೆಗಳಿಗೆ 22 ಸಾವಿರ ರೂಪಾಯಿಯವರೆಗೆ ಬರ ಪರಿಹಾರ ನೀಡಲಾಗುವುದು.

ಇದನ್ನೂ ಓದಿ Gruhalkashmi scheme status ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಹಣ ಜಮೆ ಇಲ್ಲೇ ಚೆಕ್ ಮಾಡಿ 2024

ರಾಜ್ಯ ಸರ್ಕಾರವು  ಪ್ರತಿ ರೈತರಿಗೆ ತಾತ್ಕಾಲಿಕವಾಗಿ ರೈತರಿಗೆ 2 ಸಾವಿರ ರೂಪಾಯಿಯಂತೆ  ಪರಿಹಾರ ಹಣ ಜಮೆ ಮಾಡಲಾಗಿದೆ. ರಾಜ್ಯದ ರೈತರ ಖಾತೆಗೆ ಹಣವೂ ಜಮೆಯಾಗಿದೆ.

ಕೇಂದ್ರ ಸರ್ಕಾರವು  ಕರ್ನಾಟಕಕ್ಕೆ 3454 ಕೋಟಿ ರೂಪಾಯಿ ಬರ ಪರಿಹಾರ ಬಿಡುಗಡೆ ಮಾಡುವುದಾಗಿ (ಶನಿವಾರ) ಘೋಷಣೆ ಮಾಡಿದೆ. ಈ ಹಣದ ಆಧಾರದ ಮೇಲೆ ಬರಗಾಲ ಪರಿಹಾರ ಹಣ ರೈತರ ಖಾತೆಗೆ ಜಮೆ ಮಾಡಲಾಗುವುದು. ರೈತರಿಗೆ ಎಕರೆಗೆ ಎಷ್ಟು ಜಮೆ ಮಾಡಲಾಗುವುದು ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿ ನೀಡಲಾಗಿಲ್ಲ. ರೈತರ ಖಾತೆಗೆ ಬರ ಪರಿಹಾರ ಹಣ ಜಮೆ ಮಾಡುವ ದಿನ ಗೊತ್ತಾಗಲಿದೆ. ಅಥವಾ ಅದಕ್ಕಿಂತ ಮುಂಚಿತವಾಗಿ ರಾಜ್ಯ ಸರ್ಕಾರವು ಘೋಷಣೆ ಮಾಡಿದಾಗ ಎಷ್ಟು ಹಣ ಜಮೆಯಾಗುವುದು ಎಂಬುದರ ಮಾಹಿತಿ ದೊರೆಯಲಿದೆ.

Leave a Comment