Bara parihara number : ಕಳೆದ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟ ಕಾರಣ ಜಿಲ್ಲೆಯ ಎಲ್ಲಾ 11 ತಾಲೂಕುಗಳನ್ನು ತೀವ್ರ ಬರಗಾಲ ಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಜಿಲ್ಲೆಯ 2,63,393 ರೈತರಿಗೆ 274.51 ಕೋಟಿ ರೂಪಾಯಿ ಇನ್ಪುಟ್ ಸಬ್ಸಿಡಿ ಬರ ಪರಿಹಾರ ನೀಡಲು ಜಿಲ್ಲಾಧಿಕಾರಿಬಿ. ಫೌಜಿಯಾ ತರನ್ನುಮ್ ಅವರು ಅನುಮೋದನೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿ ಆಧಾರದ ಮೇಲೆ ಪ್ರೂಟ್ಸ್ ಐಡಿ ಹೊಂದಿರುವ ಮತ್ತು ಪಹಣಿ ಜೋಡಣೆಯಾಗಿರುವ 2,82,010 ರೈತರಿಗೆ ಈಗಾಗಲೇ ಡಿಬಿಟಿ ಮೂಲಕ ಎಸ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಮೊದಲನೇ ಕಂದಾಗಿ ಗರಿಷ್ಠ 2 ಸಾವಿರರೂಪಾಯಿಗಳ್ನು 56.02 ಕೋಟಿ ರೂಪಾಯಿ ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಲಾಗಿದ್ದು, ಇದರೊಂದಿಗೆ ಇಂದು ನೀಡಲಾಗಿರುವ ಅನುಮೋದನೆ ಸೇರಿದಂತೆ ಒಟ್ಟಾರೆ ಎರಡು ಹಂತದಲ್ಲಿ ಇದುವರೆಗೂ ಜಿಲ್ಲೆಯ 2,82,010 ರೈತರಿಗೆ 330.53 ಕೋಟಿ ರೂಪಾಯಿ ರೈತರ ಖಾತೆಗೆ ಜಮೆ ಮಾಡಿದಂತಾಗಲಿದೆ ಎಂದು ತಿಳಿಸಿದ್ದಾರೆ.
ಇನ್ನೂ ಬೆಳೆ ಹಾನಿ ಪರಿಹಾರ ಹಣ ಖಾತೆಗೆಜಮೆ ಆಗದೆ ಇರುವ ಬಗ್ಗೆ ರೈತರು ದೂರುಗಳನ್ನು ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಅನುಕೂಲವಾಗುವಂತೆ ಜಿಲ್ಲಾ ಮತ್ತು ತಾಲೂಕುವಾರು ಸಹಾಯವಾಣಿಗಳನ್ನು ತೆರೆಯಲಾಗಿದೆ. ಕಚೇರಿ ಸಮಯದಲ್ಲಿ ಸಂಪರ್ಕಿಸಿ ಇದರ ಲಾಭ ಪಡೆದುಕೊಳ್ಳುವಂತೆ ರೈತರಲ್ಲಿ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
Bara parihara number ಬೆಳೆ ಹಾನಿ / ಬರಗಾಲ ಪರಿಹಾರ ಹಣ ಜಮೆಯಾಗಿದೆಯೇ? ಇಲ್ಲೇ ಚೆಕ್ ಮಾಡಿ
ಬರಗಾಲ ಪರಿಹಾರ ಹಣ ನಿಮ್ಮ ಖಾತೆಗೆ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ
https://parihara.karnataka.gov.in/service92/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ ಮೂರು ಆಯ್ಕೆಗಳು ಕಾಣಿಸುತ್ತವೆ. ವರ್ಷ 2023-24 ಆಯ್ಕೆ ಮಾಡಿಕೊಳ್ಳಬೇಕು. ನಂತರ ಋತು ಮುಂಗಾರು ಆಯ್ಕೆ ಮಾಡಿಕೊಳ್ಳಬೇಕು. ವಿಪತ್ತು ಮಾಡಿ ಬರ ಆಯ್ಕೆ ಮಾಡಿಕೊಳ್ಳಬೇಕು. ನಂತರ ಹುಡುಕು ಮೇಲೆ ಕ್ಲಿಕ್ ಮಾಡಬೇಕು.
ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಬೇಕು ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಸರ್ವೆ ನಂಬರ್ ನಮೂದಿಸಬೇಕು. ಸರ್ ನಾಕ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಹಿಸ್ಸಾ ನಂಬರ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಪಡೆಯಿರಿ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಖಾತೆಗೆ ಬರ ಪರಿಹಾರ ಹಣ ಜಮೆಯಾಗಿರುವ ಮಾಹಿತಿ ಕಾಣಿಸುತ್ತದೆ.
Bara parihara number ಬೆಳೆ ಹಾನಿ / ಬರಗಾಲ ಪರಿಹಾರ ಸಹಾಯವಾಣಿ ಸಂಖ್ಯೆಗಳು ಮಾಹಿತಿ ಇಲ್ಲಿದೆ
ಜಿಲ್ಲಾಧಿಕಾರಿ ಕಚೇರಿ 1077, ಆಳಂದ ತಾಲೂಕಿನ ರೈತರು 9845858252, ಅಫಜಲ್ಪೂರ ತಾಲೂಕಿನ ರೈತರು 7760208044, 7760605777 ಗೆ ಸಂಪರ್ಕಿಸಬೇಕು. ಚಿತ್ತಾಪುರ ತಾಲೂಕಿನ ರೈತರು 08474 236250, ಚಿಂಚೋಳಿ ತಾಲೂಕಿನ ರೈತರು 08475 200138, ಅಥವಾ 200127 ಗೆ ಸಂಪರ್ಕಿಸಬೇಕು.
ಇದನ್ನೂ ಓದಿ : Village map ಈ ಮ್ಯಾಪ್ ನಲ್ಲಿ ಜಮೀನಿಗೆ ಹೋಗುವ, ಬಂಡಿದಾರಿ, ಕಾಲುದಾರಿ ಚೆಕ್ ಮಾಡಿ 2024
ಕಾಳಗಿ ತಾಲೂಕಿನ ರೈತರು 9243866424, ಕಲಬುರಗಿ ತಾಲೂಕಿನ ರೈತರು 08472 278636,9880683702, ಕಮಲಾಪುರ ತಾಲೂಕಿನ ರೈತರು 08478200144, ಜೇವರ್ಗಿ ತಾಲೂಕಿನ ರೈತರು 7441843393 ಅಥವಾ 7019270898 ಗೆ ಸಂಪರ್ಕಿಸಲು ಕೋರಲಾಗಿದೆ. ಯಡ್ರಾಮಿ ತಾಲೂಕಿನ ರೈತರು 9743682346 ಗೆ, ಶಹಾಬಾದ್ ತಾಲೂಕಿನ ರೈತರು 08474295910 ಗೆ ಸಂಪರ್ಕಿಸಲು ಕೋರಲಾಗಿದೆ.
ಸೇಡಂ ತಾಲೂಕಿನ ರೈತರು ಸೇಡಂ ತಹಶೀಲ್ದಾರ್ ಕಚೇರಿಯಲ್ಲಿನ ಸಹಾಯವಾಣಿ ಸಂಖ್ಯೆ 9741680444, 9449309308, 9448786422 ಹಾಗೂ 08411 276184 ಗೆ ಸಂಪರ್ಕಿಸಲು ಕೋರಲಾಗಿದೆ.
Bara parihara number ಬೆಳೆ ಹಾನಿ ಪರಿಹಾರ ಪಡೆಯಲು ಫ್ರೂಟ್ಸ್ ನೋಂದಣಿ ಕಡ್ಡಾಯವಾಗಿದೆ
ಬೆಳೆ ಹಾನಿ ಪರಿಹಾರ ಪಡೆದುಕೊಳ್ಳಲು ಫ್ರೂಟ್ಸ್ ಐಡಿಗೆ ಪಹಣಿ ಜೋಡಣೆ ಕಡ್ಡಾಯವಾಗಿರುವುದರಿಂದ ಇದುವರೆಗೂ ಫ್ರೂಟ್ಸ್ ನೋಂದಣಿ ಮಾಡಿಕೊಳ್ಳದ ರೈತರು ತಮ್ಮ ಆಧಾರ್ ಕಾರ್ಡ್, ಪಹಣಿ ಹಾಗೂ ಬ್ಯಾಂಕ್ ಪಾಸ್ ಬುಕ್ ದಾಖಲೆಗಳನ್ನು ತೆಗೆದುಕೊಂಡು ಹತ್ತಿರದ ಕಂದಾಯ, ಕೃಷಿ ಅಥವಾ ತೋಟಗಾರಿಕೆ ಇಲಾಖೆಗಳ ಕಚೇರಿಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಅಂತಹ ರೈತರು ಬೆಳೆ ಪರಿಹಾರಕ್ಕೆ ಅರ್ಹರಾಗಿರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.