Bara parihara status ಆಧಾರ್ ನಂಬರ್ ಹಾಕಿ ಬರಗಾಲ ಪರಿಹಾರ ಜಮೆ ಚೆಕ್ ಮಾಡಿ 2024

Written by Admin

Updated on:

Spread the love

Bara parihara status : ರೈತರು ಈಗ ತಮ್ಮ ಬಳಿಯಿರುವ ಆಧಾರ್ ನಂಬರ್ ಹಾಕಿ ತಮಗೆ ಬರಗಾಲ ಪರಿಹಾರ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು.

Bara Parihara Status

ಇದರೊಂದಿಗೆ ತಮಗೆ ಎಷ್ಟು ಬರಗಾಲ ಪರಿಹಾರ ಹಣ ಜಮೆಯಾಗಿದೆ ಎಂಬುದನ್ನು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

Bara parihara status ಆಧಾರ್ ನಂಬರ್ ಹಾಕಿ ಬರಗಾಲ ಪರಿಹಾರ ಚೆಕ್ ಮಾಡುವುದು ಹೇಗೆ?

ಆಧಾರ್ ನಂಬರ್ ಹಾಕಿ ತಮಗೆಷ್ಟು ಬರಗಾಲ ಪರಿಹಾರ ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://parihara.karnataka.gov.in/service92

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಕಂದಾಯ ಇಲಾಖೆಯ  BHOOMI ONLINE PARIHARA (INPUT SUBSIDY) PAYMENT DETAILS / ಭೂಮಿ ಆನ್ಲೈನ್ ಪರಿಹಾರ ಪಾವತಿ ವಿವರಗಳು ಪೇಜ್ ಓಪನ್ ಆಗುತ್ತದೆ.

ಅಲ್ಲಿ ನೀವು Select Year / ವರ್ಷ ಆಯ್ಕೆ ಮಾಡಿಯಲ್ಲಿ 2023-24 ಆಯ್ಕೆ ಮಾಡಿಕೊಳ್ಳಬೇಕು. Select Season ಋತು ಆಯ್ಕೆ ಮಾಡಿಯಲ್ಲಿKharif / ಮುಂಗಾರು ಆಯ್ಕೆ ಮಾಡಿಕೊಳ್ಳಬೇಕು. ನಂತರ  Select Calamity ವಿಪತ್ತಿನ ವಿಧದಲ್ಲಿ ನೀವು Drought / ಬರ  Get Data ಹುಡುಕು ಮೇಲೆ ಕ್ಲಿಕ್ ಮಾಡಬೇಕು.

ಅಲ್ಲಿ ನಿಮಗೆ ಕೆಲವು ಆಯ್ಕೆಗಳು ಕಾಣಿಸುತ್ತವೆ.  ಹೌದು ಅಲ್ಲಿ ಕಾಣುವ Aadhaar Number / ಆಧಾರ್ ಸಂಖ್ಯೆ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ Fetch / ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಬರಗಾಲ ಪರಿಹಾರ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತದೆ. ಅಲ್ಲಿ ನಿಮ್ಮ ಹೆಸರು ಕಾಣಿಸುತ್ತದೆ. ಅದರ ಹಿಂದಿರುವ ಸರ್ಕಲ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮಗೆ ಯಾವಾಗ ಬರಗಾಲ ಪರಿಹಾರ ಹಣ ಯಾವ ಬ್ಯಾಂಕ್ ಖಾತೆಗೆ ಜಮೆಯಾಗಿದೆ ಎಷ್ಟು ಹಣ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ. ಅಲ್ಲಿನಿಮ್ಮ ಹೆಸರು ಕಾಣಿಸದಿದ್ದರೆ ನೀವು ಸರ್ವೆ ನಂಬರ್ ನಮೂದಿಸಿಯೂ ಸ್ಟೇಟಸ್ ಚೆಕ್ ಮಾಡಬಹುದು.

Bara parihara status ಸರ್ವೆ ನಂಬರ್ ಹಾಕಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಆಧಾರ್ ಕಾರ್ಡ್ ನಂಬರ್ ದಿಂದ ಸ್ಟೇಟಸ್ ಓಪನ್ ಆಗದೆ ಇರುವ ರೈತರು ಸರ್ವೆ ನಂಬರ್  ನಮೂದಿಸಿ ಚೆಕ್ ಮಾಡಬಹುದು. ಅಲ್ಲಿ ಕಾಣುವ Survey  Number / ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಬೇಕು.ಆಗ ಇನ್ನೊಂದು ಪೇಜ್ ಕಾಣಿಸುವುದು ಅಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.ಇದಾದ ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಸರ್ವೆ ನಂಬರ್ ನಮೂದಿಸಬೇಕು. ಸರ್ನಾಕ್ ನಲ್ಲಿ ಸ್ಟಾರ್ ಹಾಗೂ ಹಿಸ್ಸಾ ನಂಬರ್ ನಲ್ಲಿಯೂ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ Village map ಈ ಮ್ಯಾಪ್ ನಲ್ಲಿ ಜಮೀನಿಗೆ ಹೋಗುವ, ಬಂಡಿದಾರಿ, ಕಾಲುದಾರಿ ಚೆಕ್ ಮಾಡಿ 2024

ಆಗ ನಿಮ್ಮ ಆಧಾರ್ ಕಾರ್ಡ್ ಕೊನೆಯ ನಾಲ್ಕು ಅಂಕಿಗಳು ಕಾಣಿಸುತ್ತವೆ.  ಆಗ ನಿಮಗೆ ಯಾವ ಬ್ಯಾಂಕಿಗೆ ಬರಗಾಲ ಪರಿಹಾರ ಹಣ ಜಮೆಯಾಗಿದೆ. ಎಷ್ಟು ಹಣ ಜಮೆಯಾಗಿದೆ. ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಸರ್ವೆ ನಂಬರ್, ಬೆಳೆ ಹಾಗೂ ಜಮೀನಿನ ವಿಸ್ತೀರ್ಣದ ಮಾಹಿತಿ ಕಾಣಿಸುತ್ತದೆ.

Baragala parihara status

Bara parihara status ಮೊಬೈಲ್ ನಂಬರ್ ಹಾಕಿಯೂ ಸ್ಟೇಟಸ್ ಚೆಕ್ ಮಾಡಿ

ಸರ್ವೆ ನಂಬರ್ ದಿಂದಲೂ ನಿಮಗೆ ಬರಗಾಲ ಪರಿಹಾರ ಸ್ಟೇಟಸ್ ಓಪನ್ ಆಗದಿದ್ದರೆ ಮೊಬೈಲ್ ನಂಬರ್ ಹಾಕಿಯೂ ಚೆಕ್ ಮಾಡಬಹುದು. ಮೊಬೈಲ್ ನಂಬರ್ ದಿಂದ ಸ್ಟೇಟಸ್ ಓಪನ್ ಆಗದಿದ್ದರೆ ನಿಮ್ಮ ಫ್ರೂಟ್ಸ್ ಐಡಿ ಹಾಕಿ ಸ್ಟೇಟಸ್ ಚೆಕ್ ಮಾಡಬಹುದು.  ಯಾವ ಬ್ಯಾಂಕಿನಲ್ಲಿಯಾವ ದಿನಾಂಕದಂದು ಹಾಗೂ ಯಾವ ಸರ್ವೆ ನಂಬರ್ ಹಾಗೂ ಯಾವ ಬೆಳೆಗೆ ಬರಗಾಲ ಪರಿಹಾರ ಜಮೆಯಾಗಿರುವ ಮಾಹಿತಿ ದೊರೆಯಲಿದೆ.

1 thought on “Bara parihara status ಆಧಾರ್ ನಂಬರ್ ಹಾಕಿ ಬರಗಾಲ ಪರಿಹಾರ ಜಮೆ ಚೆಕ್ ಮಾಡಿ 2024”

Leave a Comment