Baragala hana : ಸಣ್ಣ ಮತ್ತು ಅತೀ ಸಣ್ಣ ಒಣ ಬೇಸಾಯ ಮಾಡುವ ಸುಮಾರು 16 ಲಕ್ಷ ಕುಟುಂಬಗಳಿಗೆ ಬರಗಾಲದಿಂದ ಆಗಿರುವ ಜೀವನೋಪಾಯ ನಷ್ಟಕ್ಕೆ ಪರಿಹಾರವಾಗಿ ತಲಾ 3 ಸಾವಿರ ಪರಿಹಾರ ನೀಡಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದಿಂದ ಎನ್.ಡಿ.ಆರ್.ಎಫ್ ಹಣ ಬಿಡುಗಡೆ ಆದ ಬಳಿಕ ರೈತರಿಗೆ ಅರ್ಹತೆಯ ಆಧಾರದಲ್ಲಿ ಬರಗಾಲ ಪರಿಹಾರ ಹಣವನ್ನು ಪಾವತಿಸಲಾಗುತ್ತಿದ್ದು, ಈ ವರೆಗೆ 32.12 ಲಕ್ಷರೈತರಿಗೆ ಸಂಪೂರ್ಣ ಬೆಳೆ ಪರಿಹಾರ ಮೊತ್ತವನ್ನು ಜಮೆ ಮಾಡಲಾಗಿದೆ ಎಂದು ವಿವರಿಸಿದರು.
ಇನ್ನೂ ಸುಮಾರು ಎರಡು ಲಕ್ಷ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ದಾಖಲೆ ಪರಿಶೀಲನೆ ಹಂತದಲ್ಲಿದೆ. ಇದಲ್ಲದೆ ಸಾಕಷ್ಟು ತಾಲೂಕುಗಳಲ್ಲಿ ಬರ ಪರಿಹಾರ ಪಟ್ಟಿಯಲ್ಲಿ ಸೇರದೆ ಇದ್ದ ಮಳೆ ಆಧಾರಿತ ಬೆಳೆಗಳಿಗೂ ಪರಿಹಾರ ಧನ ವಿತರಿಸಲು ಮತ್ತು ಎರಡು ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶವನ್ನು ಒಳಗೊಳ್ಳುವ ಸುಮಾರು 1.63 ಲಕ್ಷ ಅರ್ಹ ರೈತರಿಗೂ ಪರಿಹಾರ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಮೊದಲ ಬಾರಿಗೆ ಇದು ಸುಮಾರು 460 ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಲಾಗುತ್ತಿದೆ. ಬರ ಕೈಪಿಡಿಯಲ್ಲಿ ಇದಕ್ಕೆ ಅವಕಾಶವಿದೆ. ರಾಜ್ಯದ 240 ತಾಲೂಕುಗಳಲ್ಲಿ 223 ತಾಲೂಕುಗಳನ್ನು ಬರಗಾಲ ತಾಲೂಕುಗಳೆಂದು ಘೋಷಿಸಲಾಗಿದೆ.ಅವುಗಳಲ್ಲಿ 196 ತೀವ್ರ ಬರ ಪೀಡಿತ ಎಂದು ವರ್ಗಿಕರಿಸಲಾಗಿದೆ.
ಬರ ಪರಿಹಾರವಾಗಿ ರಾಜ್ಯದ ರೈತರ ಖಾತೆಗಳಿಗೆ 4300 ಕೋಟಿ ರೂಪಾಯಿ ಜಮೆ ಆಗಲಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ 20 ದಿನ ಬೇಕಾಗಬಹುದು.ಈಗಾಗಲೇ 32 ಲಕ್ಷಕ್ಕೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ ಸುಮಾರು 3 ಸಾವಿರ ಕೋಟಿ ರೂಪಾಯಿ ಜಮೆ ಮಾಡಲಾಗಿದೆ ಎಂದರು.
ಇದನ್ನೂ ಓದಿ : Village map ಈ ಮ್ಯಾಪ್ ನಲ್ಲಿ ಜಮೀನಿಗೆ ಹೋಗುವ, ಬಂಡಿದಾರಿ, ಕಾಲುದಾರಿ ಚೆಕ್ ಮಾಡಿ 2024
ಸುಪ್ರಿಂಕೋರ್ಟ್ ಗೆ ಹೋಗಿ ಕಾನೂನು ಹೋರಾಟ ನಡೆಸಿ ಇಲ್ಲಿಯವರೆಗೆ ಸುಮಾರು 3454 ಕೋಟಿ ರೂಪಾಯಿ ಕೇಂದ್ರದಿಂದ ಬಂದಿದೆ. ಈಗಾಗಲೇ ರೈತರ ಖಾತೆಗೆ ಈ ಹಣವನ್ನು ಜಮೆ ಮಾಡಲಾಗುತ್ತಿದೆ. ಇದುವರೆಗೆ 32.12 ಲಕ್ಷ ರೈತರಖಾತೆಗಳಿಗೆ ಬರ ಪರಿಹಾರ ಹಣವನ್ನುಸಂಪೂರ್ಣವಾಗಿ ಜಮೆ ಮಾಡಲಾಗಿದೆ. ಮೊದಲ ಮತ್ತು ಎರಡನೇ ಕಂತುಗಳಿಂದ ಇಲ್ಲಿಯವರೆಗೆ 3000 ಕೋಟಿ ರೂಪಾಯಿಗಳನ್ನು ನೇರ ವರ್ಗಾವಣೆ (ಡಿಬಿಟಿ) ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ಹೇಳಿದರು.
ಸುಮಾರು 15 ಲಕ್ಷ ರೈತರ ಖಾತೆಗಳಿಗೆ ಎರಡನೇ ಕಂತಿನ ಪರಿಹಾರದ ಹಣ ಇನ್ನೂ ಜಮೆಯಾಗಿಲ್ಲ.ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳಿಂದ ಪರಿಶೀಲನೆ ಹಂತದಲ್ಲಿದೆ. ಒಂದೊಮ್ಮೆ ಅದನ್ನುತೆರವುಗೊಳಿಸಿದರೆ 33 ಲಕ್ಷಕ್ಕೂ ಹೆಚ್ಚು ರೈತರ ಖಾತೆಗಳಿಗೆ ಪರಿಹಾರ ಹೋಗುತ್ತಿತ್ತು ಎಂದು ಅವರು ತಿಳಿಸಿದರು.
Baragala hana ಬರ ಪರಿಹಾರ ನಿಮಗೆಷ್ಟು ಹಣ ಜಮೆ? ಇಲ್ಲೇ ಚೆಕ್ ಮಾಡಿ
ಬರಗಾಲ ಪರಿಹಾರ ನಿಮಗೆಷ್ಚು ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ
https://parihara.karnataka.gov.in/PariharaPayment/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪರಿಹಾರ ಹಣ ಸಂದಾಯ ವರದಿ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿನೀವು ಆಧಾರ್ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ Select calamity type ನಲ್ಲಿ Drought ಆಯ್ಕೆ ಮಾಡಿಕೊಳ್ಳಬೇಕು.Select Year Type ನಲ್ಲಿ 2023-24 ಆಯ್ಕೆ ಮಾಡಿಕೊಳ್ಳಬೇಕು. ಮಾಡಿಕೊಳ್ಳಬೇಕು.
ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಬೇಕು. ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ಇದಾದ ನಂತರ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ಬರಗಾಲ ಪರಿಹಾರ ಹಣ ಜಮೆಯಾಗಿದೆಯೋ ಇಲ್ಲವೋ ಎಂಬ ಮಾಹಿತಿ ಕಾಣಿಸುತ್ತದೆ. ಒಂದು ವೇಳೆ ನಿಮಗೆ ಮೇಲಿನ ಲಿಂಕ್ ಓಪನ್ ಆಗದಿದ್ದರೆ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
Baragala hana ಆಧಾರ್ ನಂಬರ್ ಹಾಕಿ ಹೀಗೂ ಚೆಕ್ ಮಾಡಿ
ಮೇಲಿನ ಲಿಂಕ್ ಓಪನ್ ಆಗದಿದ್ದರೆ ಈ
https://parihara.karnataka.gov.in/service92/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಆಧಾರ್ ಸಂಖ್ಯೆ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಿ ನಂತರ Fetchಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಹೆಸರು ಕಾಣಿಸುತ್ತದೆ. ನಿಮ್ಮ ಹೆಸರಿನ ಹಿಂದಿರುವ ಬಾಕ್ಸ್ ಆಯ್ಕೆ ಮಾಡಿಕೊಂಡರೆ ಸಾಕು ನಿಮಗೆ ಬರಗಾಲ ಪರಿಹಾರ ಹಣ ಜಮೆಯಾಗಿದ್ದು ಕಾಣಿಸುತ್ತದೆ. ಯಾವ ದಿನಾಂಕದಂದು ಯಾವ ಬ್ಯಾಂಕ್ ಖಾತೆಗೆ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.