Baragala money credited ಬರಗಾಲ ಪೀಡಿತ ತಾಲೂಕುಗಳ ರೈತರ ಖಾತೆಗೆ ಬರ ಪರಿಹಾರ ಹಣ ಹಂತ ಹಂತವಾಗಿ ಜಮೆ ಮಾಡಲಾಗುತ್ತಿದೆ.
ಹೌದು, ಯಾವ ಯಾವ ರೈತರಿಗೆ ಬರ ಪರಿಹಾರ ಹಣ ಜಮೆಯಾಗಿಲ್ಲವೋ ಅಂತಹ ರೈತರ ಖಾತೆಗೆ ಈಗ ಬರ ಪರಿಹಾರ ಹಣ ಜಮೆ ಮಾಡಲಾಗುತ್ತಿದೆ.
ಯಾವ ಯಾವ ಜಿಲ್ಲೆಗಳ ರೈತರ ಖಾತೆಗೆ ಬರ ಪರಿಹಾರ ಹಣ ಜಮೆ ಮಾಡಲಾಗುತ್ತಿದೆ? ನಿಮಗೆ ಬರಗಾಲ ಪರಿಹಾರ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡುವುದು ಹೇಗೆ? ಬರ ಪರಿಹಾರ ಹಣ ಜಮೆ ಆಗದೆ ಇರುವ ರೈತರು ಯಾರಿಗೆ ಸಂಪರ್ಕಿಸಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
Baragala money credited ಕೊಪ್ಪಳ ಜಿಲ್ಲೆಯ 92630 ರೈತರ ಖಾತೆಗೆ ಬರ ಪರಿಹಾರ ಹಣ ಜಮೆ
ಸರ್ಕಾರ 2023-24ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಕೊಪ್ಪಳ ಜಿಲ್ಲೆಯ 7 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರದಿಂದ ಜಿಲ್ಲೆಗೆ 92630 ರೈತರಿಗೆ 82.67 ಕೋಟಿ ರೂಪಾಯಿ Baragala money credited ನೇರವಾಗಿ ರೈತರ ಖಾತೆಗೆ ಡಿಬಿಟಿ ಮೂಲಕ ಜಮೆ ಮಾಡಲಾಗಿದೆ.
ಬೆಳೆ ಸಮೀಕ್ಷೆ ದತ್ತಾಂಶ ಮಾಹಿತಿ ಆಧಾರದ ಮೇಲೆ ಫ್ರೂಟ್ಸ್ ಐಡಿ ಹೊಂದಿರುವ ರೈತರಿಗೆ ಹಂತ ಹಂತವಾಗಿ ಬರ ಪರಿಹಾರ ವಿತರಣೆ ಮಾಡಲಾಗುತ್ತಿದೆ. ಬಾಕಿ ಉಳಿದ ರೈತರಿಗೆ ಹಂತ ಹಂತವಾಗಿ ಪರಿಹಾರ ಪಾವತಿಸುವ ಕಾರ್ಯ ಪ್ರಗತಿಯಲ್ಲಿದೆ.
ಇದನ್ನು ಓದಿ : Mobile Number ಹಾಕಿ ಬರ ಪರಿಹಾರ ಜಮೆಯಾಗುತ್ತೋ ಇಲ್ಲವೋ ಚೆಕ್ ಮಾಡಿ 2024
ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಸಂದೇಹ ಇದ್ದರೆ ರೈತರಿಗೆ ಅನುಕೂಲವಾಗುವಂತೆ ತಾಲೂಕುವಾರು ಸಹಾಯವಾಣಿಯನ್ನು ತೆರೆಯಲಾಗಿದೆ. ರೈತರು ತಮ್ಮ ತಾಲೂಕಿಗೆ ಒಳಪಡುವ ತಹಶೀಲ್ದಾರ್ ಕಚೇರಿಯ ಸಹಾಯವಾಣಿಗೆ ಕರೆ ಮಾಡಿ ಅಥವಾ ಹತ್ತಿರದ ರೈತ ಸಂಪರ್ಕಗಳಿಗೆ ಭೇಟಿ ನೀಡಿ ಅಥವಾ ರೈತ ಕರೆ ಕೇಂದ್ರ ದೂರವಾಣಿ ಸಂಖ್ಯೆ 1902 ರಿಂದ ಮಾಹಿತಿ ಪಡೆಯಬಹುದು.
ಕೊಪ್ಪಳ ಜಿಲ್ಲೆಯ ಸಹಾಯವಾಣಿ ನಂಬರ್ ಗಳು
ಜಿಲ್ಲಾಧಿಕಾರಿಗಳ ಕಚೇರಿ ಕೊಪ್ಪಳ7676732001, ತಾಲೂಕು ಕಚೇರಿ ಕೊಪ್ಪಳ 9380252356, ತಾಲೂಕು ಕಚೇರಿ ಯಲಬುರ್ಗಾ 9448833207, ತಾಲೂಕು ಕಚೇರಿ ಕುಷ್ಟಗಿ 08536 267031, ತಾಲೂಕು ಕಚೇರಿ ಕನಕಗಿರಿ 080 23900982, 7019926721, 7251961075, ತಾಲೂಕು ಕಚೇರಿ ಕುಕನೂರು 8050303495, ತಾಲೂಕು ಕಚೇರಿ ಗಂಗಾವತಿ 9740793877, ತಾಲೂಕು ಕಚೇರಿ ಕಾರಟಗಿ 8277932133, 8277929650, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಕೊಪ್ಪಳ 7760956433, ಸಹಾಯಕ ಕಚೇರಿ ಯಲಬುರ್ಗಾ 8277932125, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಕುಷ್ಟಗಿ 8277932126 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿಯ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
Baragala money credited ನಿಮ್ಮ ಖಾತೆಗೆ ಬರಗಾಲ ಪರಿಹಾರ ಹಣ ಜಮೆಯಾಗಿದೆಯೇ? ಇಲ್ಲೇ ಚೆಕ್ ಮಾಡಿ
ಬರ ಪರಿಹಾರ ಹಣ ಯಾವ ಯಾವ ರೈತರಿಗೆ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ
https://parihara.karnataka.gov.in/service92/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ಬರ ಪರಿಹಾರ ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ.
ಅಲ್ಲಿ ನಿಮಗೆ ಮೂರು ಆಯ್ಕೆಗಳು ಕಾಣಿಸುತ್ತವೆ. ವರ್ಷ 2023-24 ಆಯ್ಕೆ ಮಾಡಿಕೊಳ್ಳಬೇಕು. ನಂತರ ಋತು ಮುಂಗಾರು ಆಯ್ಕೆ ಮಾಡಿಕೊಳ್ಳಬೇಕು. ವಿಪತ್ತು ಮಾಡಿ ಬರ ಆಯ್ಕೆ ಮಾಡಿಕೊಳ್ಳಬೇಕು. ನಂತರ ಹುಡುಕು ಮೇಲೆ ಕ್ಲಿಕ್ ಮಾಡಬೇಕು.
ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಬೇಕು ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಸರ್ವೆ ನಂಬರ್ ನಮೂದಿಸಬೇಕು. ಸರ್ ನಾಕ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಹಿಸ್ಸಾ ನಂಬರ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಪಡೆಯಿರಿ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಖಾತೆಗೆ ಬರ ಪರಿಹಾರ ಹಣ ಜಮೆಯಾಗಿರುವ ಮಾಹಿತಿ ಕಾಣಿಸುತ್ತದೆ.
Baragala money credited ಇಂಡಿ ತಾಲೂಕಿನ ರೈತರ ಖಾತೆಗೆ 64.71 ಕೋಟಿ ರೂಪಾಯಿ ಬರ ಪರಿಹಾರ ಜಮೆ
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಒಟ್ಟು 42320 ರೈತರಿಗೆ 64.71 ಕೋಟಿ ರೂಪಾಯಿ ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದು ತಹಶೀಲ್ದಾರ ಮಂಜುಳಾ ನಾಯಕ ಮಾಹಿತಿ ನೀಡಿದರು.
ರೈತರಲ್ಲಿ ಕೆಲವು ರೈತರ ಖಾತೆಗಳು ಸ್ಥಗಿತಗೊಂಡಿವೆ. ಕೆಲವು ರೈತರ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗಳಿಗೆ ಲಿಂಕ್ ಇಲ್ಲದಿರುವುದು.ಕೆಲವು ರೈತರಹೆಸರುಗಳು ಬ್ಯಾಂಕ್ ಖಾತೆಯಲ್ಲಿ ಮತ್ತುಆಧಾರ್ ಕಾರ್ಡ್ಗಳಲ್ಲಿ ಬೇರೆ ಬೇರೆಯಾಗಿರುವುದು. ರೈತರ ಬೇರೆ ಕಡೆಗೆ ಹೋಗಿರುವುದು ಸೇರಿದಂತೆ ಇನ್ನಿತರ ತಾಂತ್ರಿಕ ಕಾರಣಗಳಿಂದ ಕೆಲವು ರೈತರ ಖಾತೆಗೆ ಬರಗಾಲ ಪರಿಹಾರ ಹಣ ಜಮೆಯಾಗಿಲ್ಲ.