Baragala parihara : ರಾಜ್ಯದಲ್ಲಿ ಮುಂಗಾರು ಹಂಗಾಮು ಕೈಕೊಟ್ಟಿದ್ದರಿಂದ ರಾಜ್ಯದಲ್ಲಿ 216 ಕ್ಕೂಹೆಚ್ಚು ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಯಿತು. ಆದರೆ ಯಾವ ಬೆಳೆಗೆ ಎಷ್ಟು ಬರಗಾಲ ಪರಿಹಾರ ನೀಡಲಾಗುವುದು ಎಂಬುದರ ಬಗ್ಗೆ ಬಹುತೇಕ ರೈತರಿಗೆ ಗೊತ್ತಿರಲಿಕ್ಕಿಲ್ಲ. ತಮಗೆಲ್ಲಾ ಗೊತ್ತಿದ್ದ ಹಾಗೆ ಎನ್.ಡಿ.ಆರ್.ಎಫ್ ಎಸ್.ಡಿ.ಆರ್.ಎಫ್ ಮಾರ್ಗಸೂಚಿಗಳ ಪ್ರಕಾರ ಬರಗಾಲ ಪರಿಹಾರ ನೀಡಲಾಗುವುದು. ಮಳೆಯಾಶ್ರಿತ, ತೋಟಗಾರಿಕೆ ಹಾಗೂ ಬಹುವಾರ್ಷಿಕ ಬೆಳೆಗಳಿಗೆ ಎಷ್ಟು ಬರ ಪರಿಹಾರ ಹಣ ಜಮೆ ಮಾಡಲಾಗಿದೆ ಎಂಬುದರ ಮಾಹಿತಿ ಇಲ್ಲಿದೆ.
Baragala parihara ಯಾವ ಬೆಳೆಗೆ ಎಷ್ಟು ಬರ ಪರಿಹಾರ ಹಣ ನೀಡಲಾಗುವುದು?
ಎನ್.ಡಿ.ಆರ್.ಎಫ್. ಮಾರ್ಗಸೂಚಿಯ ಪ್ರಕಾರ ಪ್ರತಿ ಹೆಕ್ಟೇರ್ ಮಳೆ ಆಶ್ರಿತ ಬೆಳೆಗೆ 8500 ರೂಪಾಯಿ ನಿಗದಿಪಡಿಸಲಾಗಿದೆ., ನೀರಾವರಿ ಬೆಳೆಗೆ 17 ಸಾವಿರ ರೂಪಾಯಿ ನಿಗದಿಪಡಿಸಲಾಗಿದೆ. ಅದೇ ರೀತಿ ಬಹುವಾರ್ಷಿಕ ಬೆಳೆಗೆ 22500 ರೂಪಾಯಿ ಪರಿಹಾರ ನಿಗದಿ ಮಾಡಿದೆ. ಮಾರ್ಗಸೂಚಿ ಅನ್ವಯ ಎರಡು ಹೆಕ್ಟೇರ್ ವರೆಗೆ ಮಾತ್ರ ಬೆಳೆ ಪರಿಹಾರ ನೀಡಲಾಗುತ್ತದೆ. ಸದ್ಯ ರಾಜ್ಯದಲ್ಲಿ ತಾತ್ಕಾಲಿಕವಾಗಿ 2 ಸಾವಿರ ರೂಪಾಯಿ ಬರ ಪರಿಹಾರ ಹಣ ನೀಡಲಾಗಿದೆ.
Baragala parihara ನಿಮಗೆಷ್ಟು ಬರ ಪರಿಹಾರ ಹಣ ಜಮೆಯಾಗಿದೆ? ಚೆಕ್ ಮಾಡುವುದು ಹೇಗೆ?
ಪ್ರಸ್ತುತ ಸಾಲಿನ ಮುಂಗಾರು ಹಂಗಾಮು ಸೇರಿದಂತೆ ಹಿಂದೆ ಎರಡು ವರ್ಷ ಯಾವ ಹಂಗಾಮಿಗೆ ಎಷ್ಟು ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ ಎಂಬುದನ್ನು ಸಹ ಇಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ. ಇಲ್ಲಿದೆ ನೋಡಿ ಮಾಹಿತಿ.
ಬೆಳೆ ಹಾನಿ ಪರಿಹಾರದ ಸ್ಟೇಟಸ್ ಚೆಕ್ ಮಾಡಲು ಈ
https://landrecords.karnataka.gov.in/PariharaPayment/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪರಿಹಾರ ಹಣ ಸಂದಾಯ ವರದಿ ಕಾಣಿಸುತ್ತದೆ. ಅಲ್ಲಿ ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.. ಇಲ್ಲಿ ಸೆಲೆಕ್ಟ್ ಕಾಲಾಮಿಟಿ ಟೈಪ್ ನಲ್ಲಿ ಫ್ಲಡ್ ಅಥವಾ ಡ್ರಾಟ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ 2023ನೇ ವರ್ಷ ಆಯ್ಕೆ ಮಾಡಿಕೊಳ್ಳಬೇಕು.
ಇದನ್ನೂ ಓದಿ : Pradhanmantri krishi sinchayi ಯೋಜನೆಯಡಿ ಸಬ್ಸಿಡಿಗೆ ಅರ್ಜಿ ಆಹ್ವಾನ 2023-24
ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಬೇಕು. ನಂತರ ಕ್ಯಾಪ್ಚ್ಯಾ ಕೋಡ್ ಹಾಕಿ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಜಮೆಯಾಗಿರುವ ಸ್ಟೇಟಸ್ ಚೆಕ್ ಮಾಡಬಹುದು.
ಕೆಲವು ರೈತರಿಗೇಕೆ Baragala parihara ಜಮೆಯಾಗುತ್ತಿಲ್ಲ?
ಬರಗಾಲ ಪರಿಹಾರ ತಾತ್ಕಾಲಿಕ 2 ಸಾವಿರ ರೂಪಾಯಿ ಹಣ ಬಿಡುಗಡೆಯಾದರೂ ಇನ್ನೂ ಬಹುತೇಕ ರೈತರಿಗೆ ಬರ ಪರಿಹಾರ ಹಣ ಜಮಯಾಗುತ್ತಿಲ್ಲ. ಆದರೆ ಯಾವ ಕಾರಣಕ್ಕಾಗಿ ಜಮೆಯಾಗುತ್ತಿಲ್ಲ ಎಂಬುದರ ಬಗ್ಗೆ ಬಹಳಷ್ಟು ರೈತರಿಗೆ ಈ ಕುರಿತು ಮಾಹಿತಿ ಗೊತ್ತಿರುವುದಿಲ್ಲ. ಅಂತಹ ರೈತರಿಗೆ ಇಲ್ಲಿದೆ ಮಾಹಿತಿ.
ಫ್ರೂಟ್ಸ್ ಐಡಿ ಇದ್ದರೆ ಮಾತ್ರ ಬರ ಪರಿಹಾರ ಹಣ ಜಮೆ?
ಫ್ರೂಟ್ಸ್ ಐಡಿ ಹೊಂದಿದ್ದ ರೈತರಿಗೆ ಮಾತ್ರ ಬರ ಪರಿಹಾರ ಹಣ ಜಮೆ ಮಾಡಲಾಗುತ್ತಿದೆ. ಬಹುತೇಕ ರೈತರ ಫ್ರೂಟ್ಸ್ ಐಡಿಯನ್ನು ಕೃಷಿ ಇಲಾಖೆಯಿಂದ ಪಡೆದು ಮಾಡಲಾಗಿದೆ. ಆದರೆ ಇನ್ನೂ ಬಹಳಷ್ಟು ರೈತರು ಫ್ರೂಟ್ಸ್ ಐಡಿ ಹೊಂದಿಲ್ಲ. ಅಂತಹ ರೈತರು ಕೂಡಲೇ ಫ್ರೂಟ್ಸ್ ಐಡಿಯನ್ನು ಪಡೆದುಕೊಳ್ಳಬೇಕು. ಫ್ರೂಟ್ಸ್ ಐಡಿ ಹೊಂದಿದ್ದರೆ ಮಾತ್ರ ಬರಗಾಲ ಪರಿಹಾರ ಹಣ ಜಮೆಯಾಗಲಿದೆ.
ಫ್ರೂಟ್ಸ್ ಐಡಿಗೆ ಬೇಕಾಗುವ ದಾಖಲೆಗಳು ಯಾವುವು?
ಫ್ರೂಟ್ಸ್ ಐಡಿ ಮಾಡಿಸಲು ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ಇದರೊಂದಿಗೆ ರೈತರಿಗಿರುವ ಸರ್ವೆ ನಂಬರ್ ಗಳ ಪಹಣಿ ಇರಬೇಕು. ಇದರೊಂದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವದರಾಗಿದ್ದರೆ ಆರ್.ಡಿ. ಸಂಖ್ಯೆ ಇರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇರಬೇಕು.ಬ್ಯಾಂಕ್ ಪಾಸ್ ಬುಕ್ ಇರಬೇಕು. ಹಾಗೂ ಇತ್ತೀಚಿನ ಫೋಟೋ ಇರಬೇಕು. ಈ ಎಲ್ಲಾ ದಾಖಲೆಗಳೊಂದಿಗೆ ರೈತರು ಫ್ರೂಟ್ಸ್ ಐಡಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.
ಫ್ರೂಟ್ಸ್ ಐಡಿ ಎಲ್ಲಿ ಮಾಡಿಸಬೇಕು?
ರೈತರು ಫ್ರೂಟ್ಸ್ ಐಡಿಯನ್ನು ಮೊಬೈಲ್ ನಲ್ಲಿಯೂ ಮಾಡಿಸಬಹುದು ಅಥವಾ ಗ್ರಾಮ ಒನ್ ಕೇಂದ್ರ, ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಸಿಎಸ್.ಸಿ ಕೇಂದ್ರಗಳಲ್ಲಿಯೂ ಮಾಡಿಸಬಹುದು.
ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು.