Baragala parihara jame ಕೇಂದ್ರ ಸರ್ಕಾರದ ವತಿಯಿಂದ ಬಿಡುಗಡೆಗೊಂಡ ಬರಗಾಲ ಪರಿಹಾರ ಹಣ ಕೆಲವು ರೈತರಿಗೆ ಜಮೆಯಾದರೆ ಇನ್ನೂ ಕೆಲವು ರೈತರಿಗೆ ಜಮೆಯಾಗಿಲ್ಲ. ಎಲ್ಲಾ ಅರ್ಹತೆಗಳಿದ್ದರೂ ಜಮೆಯಾಗಿಲ್ಲ.
ಹೌದು, ಬರಗಾಲ ತಾಲೂಕು ಪ್ರದೇಶವೆಂದು ಘೋಷಣೆದಯಾರೂ ಸಹ ಆ ತಾಲೂಕಿನ ರೈತರಲ್ಲಿ ಕೆಲವು ರೈತರಿಗೆ ಮಾತ್ರ ಬರಗಾಲ ಪರಿಹಾರ ಹಣ ಜಮೆಯಾಗಿದೆ. ಯಾವ ಕಾರಣಕ್ಕಾಗಿ ಜಮೆಯಾಗಿಲ್ಲ ಎಂಬ ಮಾಹಿತಿಯ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕೆಲವು ರೈತರ ಹೆಸರಿಗೆ ಎಫ್ಐಡಿ ಇದ್ದರೂ ಹಾಗೂ ಬೆಳೆ ಸಮೀಕ್ಷೆಮಾಡಿಸಿದರೂ ಬರಗಾಲ ಪರಿಹಾರ ಹಣ ಜಮೆಯಾಗಿಲ್ಲ. ಇನ್ನೂ ಯಾವ ಯಾವ ಕಾರಣಕ್ಕಾಗಿ ಬರಗಾಲ ಪರಿಹಾರ ಹಣ ಜಮೆಯಾಗಿಲ್ಲ. ಅಂತಹ ರೈತರೇನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
Baragala parihara jame ಬರಗಾಲ ಪರಿಹಾರ ಹಣ ಕೆಲವು ರೈತರಿಗೇಕೆ ಜಮೆಯಾಗಿಲ್ಲ? ಇಲ್ಲಿದೆ ಪ್ರಮುಖ ಕಾರಣಗಳು
ರೈತರು ಮೊದಲು ಜಮೀನಿನ ಪಹಣಿಗೆ ತಮ್ಮ ಎಫ್ಐಡಿ ಇದೆಯೋ ಇಲ್ಲವೋ ಎಂಬುದು ಖಚಿತಪಡಿಸಿಕೊಳ್ಳಬೇಕು.
ತಮ್ಮ ಬ್ಯಾಂಕ್ ಖಾತೆಗೆ ಎನ್.ಪಿ.ಸಿ.ಐ ಲಿಂಕ್ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು.
ಎನ್.ಪಿ.ಸಿ.ಐ (NPCI) ಲಿಂಕ್ ಇದ್ದಲ್ಲಿ ಎಫ್ಐಡಿಯಲ್ಲಿ ಇರುವ ಬ್ಯಾಂಕ್ ಖಾತೆ ಸಂಖ್ಯೆಗೂ ಎನ್.ಪಿ.ಸಿಐ ಲಿಂಕ್ ಇರುವ ಸಂಖ್ಯೆ ಒಂದೇ ಆಗಿರಬೇಕು.ಎನ್.ಪಿ.ಸಿ.ಐ ಲಿಂಕ್ ಹಾಗೂ ಎಫ್ಐಡಿ ಇರುವ ಬ್ಯಾಂಕ್ ಖಾತೆ ಸಂಖ್ಯೆ ಬೇರೆ ಬೇರೆ ಆಗಿದ್ದಲ್ಲಿ ಎಫ್ಐಡಿ ಇರುವ ಬ್ಯಾಂಕ್ ಖಾತೆ ಸಂಖ್ಯೆಯನ್ನು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಬದಲಾವಣೆ ಮಾಡಿಸಿಕೊಳ್ಳಬೇಕು.
ಆಧಾರ್ ಕಾರ್ಡ್ ನಲ್ಲಿ ಇರುವ ಹೆಸರಿಗೂ ಬ್ಯಾಂಕ್ ಖಾತೆಯಲ್ಲಿರುವ ಹೆಸರು ಒಂದೇ ಆಗಿರಬೇಕು.
ಅಕೌಂಟ್ ಇನ್ ವ್ಯಾಲಿಡ್, ಕ್ಲೋಸ್, ಬ್ಲಾಕ್ ಆಧಾರ್ ನಾಟ್ ಸಿಡಿಂಗ್ ಹಾಗೂ ಇತರ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಳ್ಳುತ್ತಿದ್ದು ಪರಿಶೀಲಿಸಿಕೊಂಡು ಚಾಲ್ತಿ ಮಾಡಿಸಿಕೊಳ್ಳುವುದು.
ಇದನ್ನೂ ಓದಿ Village map ಈ ಮ್ಯಾಪ್ ನಲ್ಲಿ ಜಮೀನಿಗೆ ಹೋಗುವ, ಬಂಡಿದಾರಿ, ಕಾಲುದಾರಿ ಚೆಕ್ ಮಾಡಿ 2024
ಆಧಾರ್ ಕಾರ್ಡ್ ದಲ್ಲಿ ಹಾಗೂ ಪಹಣಿ ಪತ್ರಿಕೆಯಲ್ಲಿ ಹೆಸರು ಒಂದೇ ಆಗಿರಬೇಕು. ಸರ್ಕಾರದ ವತಿಯಿಂದ ಇನ್ನೂ ಹಂತ ಹಂತವಾಗಿ ಬರಗಾಲ ಪರಿಹಾರ ಹಣ ಬಿಡುಗಡೆಗೊಳ್ಳುತ್ತದೆ. ಆಗ ಉಳಿದ ರೈತರ ಖಾತೆಗೆ ಬರಗಾಲ ಪರಿಹಾರ ಹಣ ಜಮೆಯಾಗಿಲದೆ.
Baragala parihara jame ಬರಗಾಲ ಪರಿಹಾರ ನಿಮಗೇಕೆ ಜಮೆಯಾಗಿಲ್ಲ? ಇಲ್ಲಿ ಚೆಕ್ ಮಾಡಿ
ಬರಗಾಲ ಪರಿಹಾರ ಹಣ ನಿಮಗೇಕೆ ಜಮೆಯಾಗಿಲ್ಲ ಬರ ಪರಿಹಾರ ಹಣ ತಡೆಹಿಡಿಯಲಾಗಿದೆಯೋ ಎಂಬುದನ್ನು ಚೆಕ್ ಮಾಡಲು ಈ
https://parihara.karnataka.gov.in/service92/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ಭೂಮಿ ಆನ್ಲೈನ್ ಪರಿಹಾರ ಇನ್ಪುಟ್ ಸಬ್ಸಿಡಿ ಪಾವತಿ ವಿವರಗಳು ಪೇಜ್ ಓಪನ್ ಆಗುತ್ತದೆ.
ಅಲ್ಲಿ ನೀವು Select Year / ವರ್ಷ 2023-24 ಆಯ್ಕೆ ಮಾಡಿಕೊಳ್ಳಬೇಕು. ನಂತರ Select Season / ಋತು ಆಯ್ಕೆ ಮಾಡಿಯಲ್ಲಿ ಮುಂಗಾರು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ Select Calamity ವಿಪತ್ತು ಆಯ್ಕೆ ಮಾಡಿಯಲ್ಲಿ ಬರ ಆಯ್ಕೆ ಮಾಡಬೇಕು. ನಂತರ Get Data / ಹುಡುಕು ಮೇಲೆ ಕ್ಲಿಕ್ ಮಾಡಬೇಕು.
ಅಲ್ಲಿ ನಿಮಗೆ ಆಧಾರ್ ಸಂಖ್ಯೆ, ರೈತರ ಗುರುತಿನ ಸಂಖ್ಯೆ, ಮೊಬೈಲ್ ಸಂಖ್ಯೆಹಾಗೂ ಸರ್ವೆ ನಂಬರ್ ಈ ನಾಲ್ಕರಲ್ಲಿ ಯಾವುದಾದರೊಂದು ಒಂದನ್ನು ಆಯ್ಕೆಮಾಡಿಕೊಳ್ಳಬೇಕು.
Baragala parihara jame payment Baragala ಸರ್ವೆ ನಂಬರ್ ಆಯ್ಕೆ ಮಾಡಿ ಬರ ಪರಿಹಾರ ಚೆಕ್
ನೀವು ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.ಇದಾದ ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಗ್ರಾಮ ಆಯ್ಕೆಮಾಡಿಕೊಳ್ಳಬೇಕು. ನಂತರ ನಿಮ್ಮ ಸರ್ವೆ ನಂಬರ್ ನಮೂದಿಸಬೇಕು. ನಂತರ ಸರ್ನೋಕ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಹಿಸ್ಸಾ ನಂಬರ್ ನಲ್ಲಿಯೂ ಸಹ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ನಮೂದಿಸಿದ ಸರ್ವೆ ನಂಬರ್ ನಲ್ಲಿ ಬರುವ ಜಮೀನಿನ ಮಾಲಿಕರ ಹೆಸರು ಕಾಣಿಸುತ್ತದೆ. ಅದರ ಹಿಂದಿರುವ ಬಾಕ್ಸ್ ಆಯ್ಕೆ ಮಾಡಿಕೊಂಡರೆ ಯಾವ ಬ್ಯಾಂಕಿನಲ್ಲಿ ಯಾವಾಗ ಬರ ಪರಿಹಾರ ಹಣ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸಲಿದೆ.