Bele hani money : ರೈತರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್.ಈಗ ಇನ್ನೊಂದು ಜಿಲ್ಲೆಯ ರೈತರ ಖಾತೆಗೆ ಬರ ಪರಿಹಾರ ಹಣ ಜಮೆಯಾಗಿದೆ. ಹೌದು, ತುಮಕೂರು ಜಿಲ್ಲೆಯ 1,23,332 ರೈತರ ಖಾತೆಗೆ 74 ಕೋಟಿ ರೂಪಾಯಿ ಬರ ಪರಿಹಾರದ ಹಣವನ್ನುಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದದಲ್ಲಿ ತಾಲೂಕು ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದರು.ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ 15975 ರೈತರಿಗೆ 9,28,23,283 ರೂಪಾಯಿ ಗುಬ್ಬಿಯ 8234 ರೈತರಿಗೆ 4,10,29,295 ರೂಪಾಯಿ ಬರ ಪರಿಹಾರ ಜಮೆ ಮಾಡಲಾಗಿದೆ.
ಕೊರಟಗೆರೆಯ 12144 ರೈತರಿಗೆ 7,2813,925 ರೂಪಾಯಿ ಬರ ಪರಿಹಾರ ಜಮೆ ಮಾಡಲಾಗಿದೆ. ಅದೇ ರೀತಿ ಕುಣಿಗಲ್ ತಾಲೂಕಿನ 19,022 ರೈತರಿಗೆ 9,64,53,201 ರೈತರಿಗೆ, ಮುಧುಗಿರಿ ತಾಲೂಕಿನ 15,548 ರೈತರಿಗೆ 8,97,83,195 ರೂಪಾಯಿ ಜಮೆ ಮಾಡಲಾಗಿದೆ. ಪಾವಗಡ ತಾಲೂಕಿನ 5641 ರೈತರಿಗೆ 4,25,83,561 ರೂಪಾಯಿ, ಶಿರಾ ತಾಲೂಕಿನ 17013 ರೈತರಿಗೆ 11,19,28,237 ರೂಪಾಯಿ ಜಮೆ ಮಾಡಲಾಗಿದೆ. ತಿಪಟೂರ ತಾಲೂಕಿನ 14,955 ರೈತರಿಗೆ 7,78,65,493 ರೂಪಾಯಿ ತುಮಕೂರು ತಾಲೂಕಿನ 11,004 ರೈತರಿಗೆ 5, 20,55,965 ರೂಪಾಯಿ ತುರುವೆಕೇರೆ ತಾಲೂಕಿನ 12786 ರೈತರಿಗೆ 6,48,09,796 ರೂಪಾಯಿ ಸೇರಿದಂತೆ 1,32,332 ರೈತರಿಗೆ 74,21,45,951 ರೂಪಾಯಿ ಬರ ಪರಿಹಾರವನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
Bele hani money ಫ್ರೂಟ್ಸ್ ಐಡಿ ಇರಬೇಕು?
ಬರ ಪರಿಹಾರ ಹಣವನ್ನು ಖಾತೆಗೆ ಜಮೆ ಮಾಡಿದ ರೈತರ ಪಟ್ಟಿಯ ವಿವರವನ್ನು ಜಿಲ್ಲಾಧಿಕಾರಿಗಳ ಕಚೇರಿ ಜಾಲತಾಣ,ಎಲ್ಲಾ ತಾಲೂಕು ಕಚೇರಿ, ಗ್ರಾಮ ಪಂಚಾಯತಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಚಾರಪಡಿಸಬೇಕು.
ಇದನ್ನೂ ಓದಿ : Village map ಈ ಮ್ಯಾಪ್ ನಲ್ಲಿ ಜಮೀನಿಗೆ ಹೋಗುವ, ಬಂಡಿದಾರಿ, ಕಾಲುದಾರಿ ಚೆಕ್ ಮಾಡಿ 2024
ಖಾತೆಗೆ ಬರ ಪರಿಹಾರ ಹಣ ಜಮೆಯಾಗದ ರೈತರು ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಫ್ರೂಟ್ಸ್ ಐಡಿ ಹಾಗೂ ಆಧಾರ್ ಸಂಖ್ಯೆ ಯೊಂದಿಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಬೇಕು
Bele hani money ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಈಗಾಗಲೇ ಇದ್ದರೆ ಚೆಕ್ ಮಾಡಿ
ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಇದ್ದರೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದಕ್ಕಿಂತ ಮುಂಚಿತವಾಗಿ ಚೆಕ್ ಮಾಡಬಹುದು. ಹೌದು, ಆನ್ನಲೈನ್ ನಲ್ಲಿ ಪ್ರೂಟ್ಸ್ ಐಡಿ ಚೆಕ್ ಮಾಡಲು ಈ
https://fruitspmk.karnataka.gov.in/MISReport/GetDetailsByAadhaar.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಫಾರ್ಮರ್ಸ್ ಡಿಟೇಲ್ ಕೆಳಗಡೆ ನಿಮ್ಮ ಆಧಾರ್ ನಂಬರ್ ನಮೂದಿಸಬೇಕು. ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಆಗಿದ್ದರೆ ನಿಮ್ಮ ಹೆಸರು, ಫ್ರೂಟ್ಸ್ ಐಡಿ ನಂಬರ್ ಕಾಣಿಸುತ್ತದೆ.ಈ ಫ್ರೂಟ್ಸ್ ಐಡಿ ನಂಬರ್ ಸಹಾಯದಿಂದ ನೀವು ಸರ್ಕಾರಿ ಯೋಜನೆಗಳ ಮೂಲಕ ವಿವಿಧ ಸೌಲಭ್ಯಗಳನ್ನು ಪಡೆಯಬಹುದು.
Bele hani money ಎಫ್.ಐಡಿಗಾಗಿ ರೈತರು ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬಹುದೇ?
ಪ್ರೂಟ್ಸ್ ಐಡಿಯನ್ನು ರೈತರು ಮೊಬೈಲ್ ನಲ್ಲೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಹೌದು, ಆನ್ಲೈನ್ ನಲ್ಲಿ ಅಂದರೆ ನಿಮ್ಮ ಬಳಿಯಿರುವ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬೇಕಾದರೆ ಈ
https://fruits.karnataka.gov.in/OnlineUserLogin.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು Citizen Registration ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಗುರುತಿನ ದೃಢೀಕರಣ ಸೇವೆ Identity Valiadation Service ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಆಧಾರ್ ನಲ್ಲಿರುವಂತೆ ಹೆಸರು ಬರೆಯಬೇಕು. ಅದರ ಕೆಳಗಡೆ ಆಧಾರ್ ಸಂಖ್ಯೆ ನಮೂದಿಸಬೇಕು. ನಂತರ I Agree ಆಯ್ಕೆ ಮಾಡಿಕೊಳ್ಳಬೇಕು. ನಂತರ ಸಲ್ಲಿಸಿ / Submit ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಕೆಳಲಾದ ಅಗತ್ಯ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.