Bele hani parihara ಬೆಳೆ ಹಾನಿ ಪರಿಹಾರ ಜಮೆ ಯಾವ ಬೆಳೆಗೆ ಎಷ್ಟು ಜಮೆ? 2024

Written by Admin

Published on:

Spread the love

Bele hani parihara : ಬರಗಾಲ ಘೋಷಿತ ತಾಲೂಕುಗಳ ರೈತರ ಖಾತೆಗೆ ಸೋಮವಾರದಿಂದ ಹಣ ಜಮೆ ಮಾಡಲಾಗುವುದು.

ಹೌದು, ಈ ಕುರಿತು ಈಗಾಗಲೇ ನಿರ್ಧಾರ ಮಾಡಲಾಗಿದೆ. ಚುನಾವಣೆ ಪೂರ್ವದಲ್ಲಿಯೇ ರೈತರಿಗೆ ಗುಡ್ ನ್ಯೂಸ್ ಸಿಗಲಿದೆ. ಯಾವ ಬೆಳೆಗೆ ಎಷ್ಟು ಬರ ಪರಿಹಾರ ಹಣ ಸಿಗಲಿದೆ? ಬರಗಾಲ ಪರಿಹಾರ ಹಣ ಜಮೆಯಾಗಿರುವ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Bele hani parihara

ಎನ್.ಡಿ.ಆರ್.ಎಫ್ ನಿಯಮಗಳಂತೆ ಅನುಮೋದನೆ ಪ್ರಕ್ರಿಯೆ ಚುನಾವಣಾ ಆಯೋಗದ ಅನುಮತಿ, ಕಾನೂನು ಸಮರದ ಘಟ್ಟವನ್ನು ದಾಟಿದ ಬೆಳೆ ನಷ್ಟ ಪರಿಹಾರ, ಅರ್ಹ ರೈತರ ಬ್ಯಾಂಕ್ ಖಾತೆಗೆ ಸೋಮವಾರದಿಂದ ಆರಂಭವಾಗಲಿದೆ.

ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಮುಂಗಾರು ಹಾಗೂ ಹಿಂಗಾರು ಬೆಳೆ ಹಾನಿಯಾಗಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಮುಂಗಾರು ಹಂಗಾಮಿನ ಬೆಳೆ ಬಹಳಷ್ಟು ಹಾನಿಯಾಗಿದ್ದರಿಂದ ರಾಜ್ಯ ಸರ್ಕಾರವು 220 ತಾಲೂಕುಗಳನ್ನು ಬರಗಾಲ ಪ್ರದೇಶವೆಂದು ಘೋಷಣೆ ಮಾಡಿತ್ತು.  ರಾಜ್ಯ ಸರ್ಕಾರವು ತಾತ್ಕಾಲಿಕವಾಗಿ 2 ಸಾವಿರ ರೂಪಾಯಿ ರೈತರ ಖಾತೆಗೆ ಜಮೆ ಮಾಡಿತ್ತು.ಈಗ ಕೇಂದ್ರ ಸರ್ಕಾರವು ಬರಗಾಲ ಹಣ ಬಿಡುಗಡೆ ಮಾಡಿದ್ದರಿಂದ ಸೋಮವಾರದಿಂದ ರೈತರ ಖಾತೆಗೆ ಜಮೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಈಗ ಮುಂಗಾರು ಹಂಗಾಮಿನ ಬೆಳೆ ಹಾನಿ ನೆರವು ರೈತರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ  ಜಮೆಯಾಗಲಿದೆ.

Bele hani parihara ರಾಜ್ಯ ಸರ್ಕಾರ ನಿಗದಿಪಡಿಸಿದ ಪರಿಹಾರ

ರಾಜ್ಯ ಸರ್ಕಾರವು ಪ್ರತಿ ಹೆಕ್ಟೇರ್ (ಗರಿಷ್ಠ ಎರಡು ಹೆಕ್ಟೇರ್ ಗೆ) ಪರಿಹಾರ ಮೊತ್ತವನ್ನು ನಿಗದಿಪಡಿಸಿದೆ. ಮಳೆಯಾಶ್ರಿತ / ಖುಷ್ಕಿ ಬೆಳೆಗೆ 8500 ರೂಪಾಯಿ ನಿಗದಿಪಡಿಸಲಾಗಿದೆ. ನೀರಾವರಿ ಬೆಳೆಗೆ 17000 ರೂಪಾಯಿ ನಿಗದಿಪಡಿಸಲಾಗಿದೆ. ಹಾಗೂ ಬಹುವಾರ್ಷಿಕ /  ತೋಟಗಾರಿಕೆ ಬೆಳೆಗಳಿಗೆ 22500 ರೂಪಾಯಿವರೆಗೆ ಪರಿಹಾರ ನೀಡಲು ನಿಗದಿಪಡಿಸಲಾಗಿದೆ.

Bele hani parihara ಬರಗಾಲ ಪರಿಹಾರ ನಿಮಗೆಷ್ಟು ಜಮೆಯಾಗಿದೆ? ಇಲ್ಲೇ ಚೆಕ್ ಮಾಡಿ

ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ  ಪರಿಹಾರ ಸ್ಟೇಟಸ್ ಚೆಕ್ ಮಾಡಲು ಈ

https://parihara.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ನಿಮಗೆ ಪರಿಹಾರ ಹಣ ಸಂದಾಯ ವರದಿ ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ನೀವು  Select Calamity Type ನಲ್ಲಿ Drought ಆಯ್ಕೆ ಮಾಡಿಕೊಳ್ಳಬೇಕು. ನಂತರ   Select Year Type 2023-24 ಆಯ್ಕೆಮಾಡಿಕೊಳ್ಳಬೇಕು. Enter Valid 12 Digit Aadhar ನಲ್ಲಿ ನಿಮ್ಮ ಆಧಾರ್ ನಂಬರ್ ಹಾಕಬೇಕು. ನಂತರ  Enter Captcha  ನಲ್ಲ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು.  ನಂತರ ವಿವರಗಳನ್ನು ಪಡೆಯಲು / Fetch Details ಮೇಲೆ ಕ್ಲಿಕ್ ಮಾಡಬೇಕು.  ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಯಾವ ಬ್ಯಾಂಕಿಗೆ ಎಷ್ಟು ಹಣ ಜಮಯಾಗಿದೆ.ಯಾವ ದಿನಾಂಕದಂದು ಹಣ ಜಮೆಯಾಗಿದೆ.

ಒಂದು ವೇಳೆ ಬರ ಪರಿಹಾರ ಜಮೆಯಾಗಿಲ್ಲವಾದರೆ ನಿಮಗೆ ಹಣ ಸಂದಾಯವಾಗಿಲ್ಲ Payment not Made ಎಂಬ ಸಂದೇಶ ಕಾಣಿಸುತ್ತದೆ.

Bele hani parihara  34 ಬರ ಲಕ್ಷ ರೈತರ ಖಾತೆಗೆ ಪರಿಹಾರ ಜಮೆ

ಇಲಾಖೆ ಮೂಲಗಳ ಪ್ರಕಾರ ಬೆಳೆ ಹಾನಿ ಅನುಭವಿಸಿದ ಅರ್ಹ ರೈತರ 34 ಲಕ್ಷ ಎಂದು ಅಂದಾಜಿಸಲಾಗಿದೆ. ಬೆಳೆ ಯಾವುದು,ಜಮೀನಿ ಪ್ರಮಾಣ, ಪರಿಹಾರ ಮೊತ್ತವೆಷ್ಟು ಎಂದು ಫ್ರೂಟ್ಸ್ ತಂತ್ರಾಂಶದಲ್ಲಿ ಲೆಕ್ಕಹಾಕಿ 27 ಲಕ್ಷ ರೈತರ ದತ್ತಾಂಶವನ್ನು ಅಂತಿಮಗೊಳಿಸಲಾಗಿದೆ. ಬೆಳೆ ಪರಿಹಾರ ಪಾವತಿಸಲು ಚುನಾವಣೆ ಆಯೋಗದ ಸಹಮತಿ ಲಭಿಸಿದೆ.

ಇದನ್ನೂ ಓದಿ Orignial land tippani ನಿಮ್ಮ ಜಮೀನಿನ ಟಿಪ್ಪಣಿ, ಪೋಡಿ ಮೊಬೈಲ್ ನಲ್ಲೇ ಚೆಕ್ ಮಾಡಿ 2024

ಭಾರತೀಯ ರಿಸರ್ವ್ ಬ್ಯಾಂಕ್ ಒಪ್ಪಿಗೆ ಪಡೆದಿದ್ದು, ಸೋಮವಾರದಿಂದ ಆಯಾ ರೈತರ ಬ್ಯಾಂಕ್ ಖಾತೆಗೆ ನಗದು ನೇರ ವರ್ಗಾವಣೆ ಪ್ರಕ್ರಿಯೆ ಶುರುವಾಗಲಿದೆ. ಬುಧವಾರದೊಳಗೆ ನಗದು ನೇರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

Bele hani parihara status

ಎಸ್.ಡಿ.ಆರ್.ಎಫ್ ಮಾರ್ಗಸೂಚಿ ಪ್ರಕಾರ ಅರ್ಹ ರೈತರಿಗೆ ಬೆಳೆ ಪರಿಹಾರ ಪಾವತಿಸಲು 2700 ಕೋಟಿ ರೂಪಾಯಿ ವೆಚ್ಚವಾಗುವ ಸಾಧ್ಯತೆಗಳಿವೆ. ಮಧ್ಯಂತರ ಪರಿಹಾರವಾಗಿ ನೀಡಿದ 2 ಸಾವಿರ ರೂಪಾಯಿ ಮುರಿದುಕೊಂಡು ಉಳಿದ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.

Leave a Comment