Bele hani parihara jame : ಮಳೆಯಿಂದಾಗಿ ಯಾವ ಯಾವ ರೈತರ ಬೆಳೆ ಹಾನಿಯಾಗಿದೆಯೋ ಅಂತಹ ರೈತರಿಗೆ ವಾರದಲ್ಲೇ ಪರಿಹಾರ ನೀಡಬೇಕೆಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ವಾರದೊಳಗೆ ಪರಿಹಾರ ನೀಡಲು, ಸಂಪೂರ್ಣವಾಗಿ ಹಾನಿಯಾಗಿರುವ ರಸ್ತೆಗಳನ್ನು ಪಟ್ಟಿ ಮಾಡಿ ವರದಿ ಕೊಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಈವರೆಗೆ ಶೇ. 32 ರಷ್ಟು ಹೆಚ್ಚು ಮಳೆಯಾಗಿದೆ. ಇಲ್ಲಿಯವರೆಗೆ 61,700 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುವ ಬಗ್ಗೆ ವರದಿ ಬಂದಿದೆ. ಬೆಳೆ ಹಾನಿಗೆ ಇನ್ನೊಂದು ವಾರದಲ್ಲಿ ಪರಿಹಾರ ನೀಡುವಂತೆ ಸೂಚನೆ ನೀಡಲಾಗಿದೆ. ಭೂ ಕುಸಿತ ಸೇರಿ ಮಳೆ ಸಂಬಂಧಿ ದುರ್ಘಟನೆಗಳಲ್ಲಿ58 ಮಂದಿ ಬಲಿಯಾಗಿದ್ದಾರೆ. ಅವರಿಗೂ ಪರಿಹಾರ ನೀಡಲಾಗಿದೆ ಹಾಳಾಗಿರುವ ರಸ್ತೆಗಳ ರಿಪೇರಿಗೆ ಜಿಲ್ಲಾಧಿಕಾರಿಗಳಿಗೆ 760 ಕೋಟಿ ರೂಪಾಯಿ ಅನುದಾನ ನೀಡಿದ್ದೇವೆ ಎಂದರು.
ಇದನ್ನೂ ಓದಿ : Grahalakshmi hana jame ಇಂದಿನಿಂದ ಗೃಹಲಕ್ಷ್ಮೀ ಯೋಜನೆಯ ಜೂನ್ ಜುಲೈ ತಿಂಗಳ ಹಣ ಮಹಿಳೆಯರ ಖಾತೆಗೆ ಜಮೆ 2024
ಇದುವರೆಗೂ ಉತ್ತರ ಕರ್ನಾಟಕ ಹಾಗೂ ರಾಜ್ಯದ ಅಲ್ಲಲ್ಲಿ ಬೆಳೆ ಹಾನಿಯಾಗಿರುವ ವರದಿ ಬಂದಿದ್ದು, ಮಲೆನಾಡು ಪ್ರದೇಶದಲ್ಲಿ ಬೆಳೆ ಹಾನಿ ಜೊತೆಗೆ ಗುಡ್ಡ ಕುಸಿತ ಉಂಟಾಗಿದೆ. ಹಾನಿಗೆ ಸಂಬಂಧಿಸಿದಂತೆ ತಕ್ಷಣ ಪರಿಹಾರ ನೀಡಲು ಈಗಾಗಲೇ ಸೂಚನೆ ನೀಡಲಾಗಿದೆ. ಇನ್ನೂ ಬೆಳೆ ಸಮೀಕ್ಷೆ ನಡೆಯುತ್ತಿದ್ದು, ಹಾನಿಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದರು.
Bele hani parihara jame ನಿಮ್ಮ ಬೆಳೆ ಹಾನಿಯಾಗಿದೆಯೇ? ಇಲ್ಲಿ ದೂರು ನೀಡಿ
ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನ ಬೆಳೆ ಹಾನಿಯಾಗಿದ್ದರೆ ಕೂಡಲೇ ತಮ್ಮ ಹತ್ತಿರದ ಗ್ರಾಮ ಪಂಚಾಯತ್ ನವಲ್ಲಿ ದೂರು ನೀಡಬೇಕು. ನಿಮ್ಮ ಜಮೀನಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ದೊಂದಿಗೆ ಬೆಳೆ ಹಾನಿಯಾಗಿರುವಕುರಿತು ದೂರು ನೀಡಬಹುದು.
Bele hani parihara jame ಬೆಳೆ ಸಮೀಕ್ಷೆ ಆಗಿದೆಯೇ? ಕೂಡಲೇ ಸಮೀಕ್ಷೆ ಮಾಡಿ
ನಿಮ್ಮ ಜಮೀನಿನಲ್ಲಿ ಯಾವ ಬೆಳೆ ಹಾಕಲಾಗಿದೆ ಎಂಬುದರ ಕುರಿತು ರೈತರು ಬೆಳೆ ಸಮೀಕ್ಷೆ ಮಾಡಿರಬೇಕು. ಹೌದು, ಬೆಳೆ ಸಮೀಕ್ಷೆ ಆದರೆ ಮಾತ್ರ ಮುಂದೆ ರೈತರಿಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗಲಿದೆ.
ನೀವು ಮೊಬೈಲ್ ನಲ್ಲಿಬೆಳೆ ಸಮೀಕ್ಷೆ ಮಾಡಲು ಈ
https://play.google.com/store/apps/details?id=com.csk.farmer23_24.cropsurvey&hl=en_IN
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. install ಮೇಲೆ ಕ್ಲಿಕ್ ಮಾಡಬೇಕು. ನಂತರ open ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲೋ ಮೇಲೆ ಕ್ಲಿಕ್ ಮಾಡಬೇಕು. ಆಗ ಮುಂಗಾರು ಬೆಳೆ ಸಮೀಕ್ಷೆ 2024-25 ಕಾಣಿಸುತ್ತದೆ. ಅದರಲ್ಲಿ ನೀವು 2024-25 ವರ್ಷ ಆಯ್ಕೆ ಮಾಡಿಕೊಳ್ಳಬೇಕು. ಋತು ಮುಂಗಾರು ಆಯ್ಕೆ ಮಾಡಿಕೊಳ್ಳಬೇಕು. ನಂತರ ಸರಿ ಮೇಲೆ ಕ್ಲಿಕ್ ಮಾಡಿ ವೈಲ್ ಯೂಸಿಂಗ್ ದಿ ಆ್ಯಪ್ ಹಾಗೂ ಅಲೋ ಮೇಲೆಕ್ಲಿಕ್ ಮಾಡಿ ಹೌದು ಆಯ್ಕೆ ಮಾಡಿಕೊಳ್ಳಬೇಕು. ನಂತರ ಆಧಾರ್ ಕಾರ್ಡ್ ನಲ್ಲಿರುವಂತೆ ನಿಮ್ಮ ಹೆಸರುಪ ಹಾಗೂ ಆಧಾರ್ ಕಾರ್ಡ್ ನಮೂದಿಸಿ ಸಕ್ರಿಯಗೊಳಿಸು ಮೇಲೆ ಕ್ಲಿಕ್ ಮಾಡಿ ನೀವೇ ಸ್ವತಃ ಬೆಳೆ ಸಮೀಕ್ಷೆಮಾಡಬಹುದು. ನಿಮ್ಮ ಸರ್ವೆ ನಂಬರ್ ನಮೂದಿಸಿದ ನಂತರ ಬೆಳೆಯ ಫೋಟೋ ಅಪ್ಲೋಡ್ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು.
Bele hani parihara jame ಬೆಳೆ ಸಮೀಕ್ಷೆ ಇತರ ಸದಸ್ಚರಿಂದ ಮಾಡಿಸಿ
ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಮಾಡಲು ಸಮಸ್ಯೆಯಾಗುತ್ತಿದ್ದರೆ ನಿಮ್ಮ ಊರಿನಲ್ಲಿ ನಿಯೋಜಿಸಿದ ಪ್ರತಿನಿಧಿಯಿಂದ ಬೆಳೆ ಸಮೀಕ್ಷೆ ಮಾಡಿಸಬಹುದು. ಅಥವಾ ನಿಮ್ಮೂರಿನಲ್ಲಿ ಇತರ ಸದಸ್ಯರು ಅಥವಾ ಕುಟುಂಬದ ಸದಸ್ಯರಿಂದ ಮೊಬೈಲ್ ನಲ್ಲಿಬೆಳೆ ಸಮೀಕ್ಷೆ ಮಾಡಿಸಬಹುದು. ಒಂದಂತು ನಿಜ ಬೆಳೆಹಾನಿಯಾಗಲಿ ಬರ ಪರಿಹಾರವಾಗಲಿ ಬೆಳೆ ಸಮೀಕ್ಷೆ ಆಗಿದ್ದರೆ ಮಾತ್ರ ಪರಿಹಾರ ಹಣ ರೈತರ ಖಾತೆಗೆ ಜಮೆಯಾಗಲಿದೆ. ಬೆಳೆ ಸಮೀಕ್ಷೆ ಮಾಡಿಸದಿದ್ದರೆ ಪರಿಹಾರದಿಂದ ವಂಚಿತರಾಗಬೇಕಾಗುತ್ತದೆ.