Bele hani parihara status : ರಾಜ್ಯದ ಭರ್ಜರಿ ಗುಡ್ ನ್ಯೂಸ್ ನ್ನು ಸರ್ಕಾರ ನೀಡಿದೆ. ಹೌದು, 7 ಲಕ್ಷ ರೈತರ ಖಾತೆಗೆ ಬರ ಪರಿಹಾರ ಜಮೆ ಮಾಡಲು ಸರ್ಕಾರ ನಿರ್ಧರಿಸಿದೆ.
ಕಳೆದ ವರ್ಷ ಮುಂಗಾರು ಹಂಗಾಮಿನ ಬೆಳೆ ನಷ್ಟಕ್ಕೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿದ 3457 ಕೋಟಿ ರೂಪಾಯಿ ಬರ ಪರಿಹಾರ ಹಣವನ್ನು 27.5 ಲಕ್ಷ ರೈತರಿಗೆ ಹಂಚಿದ ಬಳಿಕ ಉಳಿದಿರುವ 808 ಕೋಟಿ ರೂಪಾಯಿ ಹಣದಲ್ಲಿ ಹೆಚ್ಚುವರಿಯಾಗಿ 7 ಲಕ್ಷ ರೈತರಿಗೆ ಬರ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ.
ಜೊತೆಗೆ ಎನ್.ಡಿ.ಆರ್.ಎಫ್ ಅಡಿ ರಾಜ್ಯಕ್ಕೆ ಹೆಚ್ಚುವರಿಯಾಗಿ ಹಂಚಿಕೆಯಾಗಿರುವ 232 ಕೋಟಿ ರೂಪಾಯಿಗಳಿಗೆ ರಾಜ್ಯ ಸರ್ಕಾರ ಇನ್ನೂ 232 ಕೋಟಿರೂಪಾಯಿ ಸೇರಿಸಿ ಈ ಹಣದಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಬೆಳೆ ನಷ್ಟದ ತೊಂದರೆಗೊಳಗಾಗಿರುವ ಜೀವನೋಪಾಯ ಪರಿಹಾರವಾಗಿ ತಲಾ 2800 ರಿಂದ 3000 ರೂಪಾಯಿಯವರೆಗೆ ಹೆಚ್ಚುವರಿ ಪರಿಹಾರ ನೀಡಲು ಕೂಡ ತೀರ್ಮಾನಿಸಿದೆ.
ವಿಧಾನಸೌಧದಲ್ಲಿ ಸೋಮವಾರ ನಡೆದ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಸಚಿವ ಸಂಪುಟ ಉಪ ಸಮಿತಿಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು, ಈ ಪರಿಹಾರ ಮೊತ್ತವನ್ನು 1 ವಾರದಲ್ಲಿ ರೈತರ ಖಾತೆಗ ಜಮೆ ಮಾಡಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.
Bele hani parihara status ನಿಮ್ಮ ಖಾತೆಗೆ ಬರ ಪರಿಹಾರ ಹಣ ಎಷ್ಟುಜಮೆ ಮಾಡಲಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ
ಬರಗಾಲ ಪರಿಹಾರ ಹಣ ನಿಮ್ಮ ಖಾತೆಗೆ ಎಷ್ಟು ಹಣ ಜಮೆ ಮಾಡಲಾಗಿದೆ ಎಂಬುದನ್ನು ಚೆಕ್ ಮಾಡಲು ಈ
https://parihara.karnataka.gov.in/service92/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಂತರ ನಿಮಗೆ ಭೂಮಿ ಆನ್ಲೈನ್ ಪರಿಹಾರ ಇನ್ಪುಟ್ ಸಬ್ಸಿಡಿ ಪಾವತಿ ವಿವರಗಳು ಪೇಜ್ ಓಪನ್ ಆಗುತ್ತದೆ.
ಅಲ್ಲಿ ನೀವು Select Year / ವರ್ಷ 2023-24 ಆಯ್ಕೆ ಮಾಡಿಕೊಳ್ಳಬೇಕು. ನಂತರ Select Season / ಋತು ಆಯ್ಕೆ ಮಾಡಿಯಲ್ಲಿ ಮುಂಗಾರು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ Select Calamity ವಿಪತ್ತು ಆಯ್ಕೆ ಮಾಡಿಯಲ್ಲಿ ಬರ ಆಯ್ಕೆ ಮಾಡಬೇಕು. ನಂತರ Get Data / ಹುಡುಕು ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ : land RTC mutation check ಪಹಣಿ, ಮುಟೇಶನ್ ಮೊಬೈಲ್ ನಲ್ಲೇ ಚೆಕ್ ಮಾಡಿ 2024
ಅಲ್ಲಿ ನಿಮಗೆ ಆಧಾರ್ ಸಂಖ್ಯೆ, ರೈತರ ಗುರುತಿನ ಸಂಖ್ಯೆ, ಮೊಬೈಲ್ ಸಂಖ್ಯೆಹಾಗೂ ಸರ್ವೆ ನಂಬರ್ ಈ ನಾಲ್ಕರಲ್ಲಿ ಆಧಾರ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ನಂತರ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಆಧಾರ್ ಕಾರ್ಡ್ ಕೊನೆಯ ಸಂಖ್ಯೆ, ನಿಮ್ಮ ಹೆಸರು ನಿಮ್ಮ ಎಫ್ಐಡಿ ಕಾಣಿಸುತ್ತದೆ. ಅಲ್ಲಿ ಕಾಣುವ ಸರ್ಕಲ್ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮಗೆ ಮಾಲಿಕರ ಹೆಸರು ಕಾಣಿಸುತ್ತದೆ. ಆ ಮಾಲಿಕರಿಗೆ ಯಾವ ಬ್ಯಾಂಕಿನಲ್ಲಿ ಯಾವಾಗ ಬರ ಪರಿಹಾರ ಹಣ ಜಮೆಯಾಗಿದೆ ಎಂಬುದು ಕಾಣಿಸುತ್ತದೆ.
Bele hani parihara status ರೈತರ ಹೆಸರಿಗೆ ಎಫ್ಐಡಿ ಇದ್ದರೆ ಮಾತ್ರ ಬರ ಪರಿಹಾರ ಜಮೆ
ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಇದ್ದರೆ ಮಾತ್ರ ಬರ ಪರಿಹಾರ ಹಣ ಜಮೆಯಾಗುವುದು. ನಿಮ್ಮ ಹೆಸರಿಗೆ ಎಫ್ಐಡಿ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ
https://fruitspmk.karnataka.gov.in/MISReport/GetDetailsByAadhaar.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಫಾರ್ಮರ್ಸ್ ಡಿಟೇಲ್ ಕೆಳಗಡೆ ನಿಮ್ಮ ಆಧಾರ್ ನಂಬರ್ ನಮೂದಿಸಬೇಕು. ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಆಗಿದ್ದರೆ ನಿಮ್ಮ ಹೆಸರು, ಫ್ರೂಟ್ಸ್ ಐಡಿ ನಂಬರ್ ಕಾಣಿಸುತ್ತದೆ.ಈ ಫ್ರೂಟ್ಸ್ ಐಡಿ ನಂಬರ್ ಸಹಾಯದಿಂದ ನೀವು ಸರ್ಕಾರಿ ಯೋಜನೆಗಳ ಮೂಲಕ ವಿವಿಧ ಸೌಲಭ್ಯಗಳನ್ನು ಪಡೆಯಬಹುದು.