Bele sala manna status ನ್ನು ರೈತರು ತಮ್ಮ ಬಳಿಯಿರುವ ಆಧಾರ್ ನಂಬರ್ ಹಾಕಿ ಕೇವಲ ಒಂದೇ ನಿಮಿಷದಲ್ಲಿ ಯಾರ ಸಹಾಯವೂ ಇಲ್ಲದೆ ಚೆಕ್ ಮಾಡಿಕೊಳ್ಳಬಹುದು.
ಹೌದು, ತಮಗೆಲ್ಲಾ ಗೊತ್ತಿದ್ದ ಹಾಗೆ 2018 ರಲ್ಲಿ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ 1 ಲಕ್ಷ ರೂಪಾಯಿಯವರೆಗೆ ಬೆಳೆ ಸಾಲಮನ್ನಾ ಘೋಷಣೆ ಮಾಡಿದ್ದರು. ಆಗ 2017 ರವರೆಗೆ ಹಿಂದೆ ಸಾಲ ಪಡೆದ ಹಲವಾರು ರೈತರು ಇದರ ಲಾಭ ಪಡೆದಿದ್ದರು. ಕೆಲವು ತಾಂತ್ರಿಕ ಕಾರಣಗಳಿಂದಾಗಿ ಇನ್ನೂ ಹಲವಾರು ರೈತರು ಸಾಲಮನ್ನಾ ಭಾಗ್ಯದಿಂದ ವಂಚಿತರಾಗಿದ್ದರು. ನಂತರ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಬೆಳೆ ಸಾಲಮನ್ನಾ ಭಾಗ್ಯ ಪಡೆದಿದ್ದರು. ಆದರೂ ಇನ್ನೂ ಕೆಲವು ರೈತರಿಗೆ ಸಾಲಮನ್ನಾ ಏಕೆ ಆಗಲಿಲ್ಲ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
Bele sala manna status ನ್ನು ಆಧಾರ್ ನಂಬರ್ ಹಾಕಿ ಚೆಕ್ ಮಾಡುವುದು ಹೇಗೆ?
Bele sala manna status ನ್ನು ರೈತರು ತಮ್ಮ ಬಳಿಯಿರು ಆಧಾರ್ ನಂಬರ್ ಹಾಕಿ ಚೆಕ್ ಮಾಡಲು ಈ
https://clws.karnataka.gov.in/clws/pacs/citizenreport/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಮೂದಿಸಬೇಕು. ನಂತರ Fetch Report ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಬ್ಯಾಂಕಿನ ಹೆಸರು, ಬ್ರ್ಯಾಂಚ್ ಸ್ಥಳ, ನಿಮ್ಮ ಹೆಸರು ಕಾಣಿಸುತ್ತದೆ. ನಿಮ್ಮ ಬ್ಯಾಂಕ್ ಅಕೌಂಟ್ ಯಾವ ಪ್ರಕಾರದ್ದಾಗಿದೆ ಎಂಬ ಮಾಹಿತಿ ಸಹ ಕಾಣಿಸುತ್ತದೆ. ನಿಮ್ಮ ಹೆಸರಿಗೆ 2017 ರ ಮೊದಲು ಎಷ್ಟು ಸಾಲವಿತ್ತು ಎಂಬುದು ಕಾಣಿಸುತ್ತದೆ. ಅದರ ಕೆಳಗಡೆ ನಿಮಗೆ ಎಷ್ಟು ಬೆಳೆ ಸಾಲ ಮನ್ನಾ ಆಗಿದೆ. ಹಾಗೂ ಪೇಮೆಂಟ್ ಸ್ಟೇಟಸ್ ಮತ್ತು ಯಾವ ದಿನಾಂಕದಂದು ಬೆಳೆ ಸಾಲಮನ್ನಾ ಹಣ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.
Bele sala manna ಮಾಡಲು ಒತ್ತಾಯ
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಆರ್.ಅಶೋಕ್ ರವರು 2 ಲಕ್ಷ ರೂಪಾಯಿಯವರೆಗೆ ರೈತರ ಬೆಳೆ ಸಾಲಮನ್ನಾ ಮಾಡಬೇಕೆಂದು ಪ್ರಸಕ್ತ ಸಾಲಿನ ಕಾಂಗ್ರೆಸ್ ಸರ್ಕಾರಕ್ಕೆ ಒತ್ತಾಯಿಸಿದ್ದರು. ಈ ಕುರಿತು ರೈತರು ಸಹ ಬೆಳೆ ಸಾಲಮನ್ನಾ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ರೈತರ ಬೆಳೆ ಸಾಲ ಮನ್ನಾ ಮಾಡಬೇಕು. ತೆಲಂಗಾಣಿ ರಾಜ್ಯದಲ್ಲಿ ರೈತರ ಬೆಳೆ ಸಾಲ ಮನ್ನಾ ಮಾಡಿದಂತೆ ಕರ್ನಾಟಕದಲ್ಲಿಯೂ ರೈತರ ಬೆಳೆ ಸಾಲಮನ್ನಾ ಮಾಡಬೇಕೆಂದು ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಿದ್ದರು. ಬೆಳೆ ಸಾಲಮನ್ನಾದೊಂದಿಗೆ ಪ್ರತಿ ಎಕರೆಗ 25 ಸಾವಿರ ರೂಪಾಯಿಯವರೆಗೆ ಪರಿಹಾರ ನೀಡಬೇಕೆಂದು ಒತ್ತಾಯ ಮಾಡಿದ್ದರು.
ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಮುಂಗಾರು ಕೈಕೊಟ್ಟಿದ್ದರಿಂದ ರೈತರ ಅಪಾರ ಬೆಳೆ ಹಾನಿಯಾಗಿ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ರೈತರ ಬೆಳೆ ಸಾಲ ಮನ್ನಾ ಮಾಡಿ ಆರ್ಥಿಕ ಸಹಾಯ ಮಾಡಬೇಕೆಂಬ ಒತ್ತಾಯವಿದೆ. ರಾಜ್ಯದ ಮುಖ್ಯಮಂತ್ರಿಯವರು ಬೆಳೆಸಾಲ ಮನ್ನಾಮಾಡುತ್ತಾರೋ ಇಲ್ಲವೋ ಎಂಬದು ಕಾದು ನೋಡಬೇಕಾಗಿದೆ. ಆದರೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ.
ಇದನ್ನೂ ಓದಿ : How to do crop survey ಮೊಬೈಲ್ ನಲ್ಲಿ ಹೀಗೆ ಬೆಳೆ ಸಮೀಕ್ಷೆ ಮಾಡಿ 2025
ರಾಜ್ಯದಲ್ಲಿ 200 ಕ್ಕೂ ಹೆಚ್ಚು ತಾಲೂಕುಗಳನ್ನುಈಗಾಗಲೇ ಬರಗಾಲ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ. ರಾಜ್ಯದ ರೈತರಿಗೆ ತಾತ್ಕಾಲಿಕವಾಗಿ 2 ಸಾವಿರ ರೂಪಾಯಿ ಹಣವನ್ನು ತಾತ್ಕಾಲಿಕವಾಗಿ ಜಮೆ ಮಾಡಲಾಗುತ್ತಿದೆ. ಈಗಾಗಲೇ ರಾಜ್ಯದ ಬಹುತೇಕ ರೈತರ ಖಾತೆಗೆ ಹಣ ಜಮೆ ಸಹ ಮಾಡಲಾಗಿದೆ. ತಮಗೂ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇೆ ಚೆಕ್ ಮಾಡಬಹುದು.
Bele sala manna status ಬರ ಪರಿಹಾರ ಲಿಸ್ಟ್ ನಲ್ಲಿ ನಿಮ್ಮ ಹೆಸರು ಚೆಕ್ ಮಾಡುವುದು ಹೇಗೆ?
ಬರ ಪರಿಹಾರ ಲಿಸ್ಟ್ ನಲ್ಲಿ ತಮ್ಮ ಹೆಸರು ಇರುವುದನ್ನು ಚೆಕ್ ಮಾಡಲು ಈ
https://parihara.karnataka.gov.in/service87/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪರಿಹಾರ ಬೆನಿಫಿಶಿಯರಿ ಪೇಮೆಂಟ್ ರಿಪೋರ್ಟ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮಊರು ಆಯ್ಕೆ ಮಾಡಿಕೊಳ್ಳಬೇಕು.
ಯಾವ ವರ್ಷದ ಬೆಳೆ ಹಾನಿ ಪರಿಹಾರ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ವರ್ಷವನ್ನು select Year ನಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ನಂತರ select Season ನಲ್ಲಿ ಖಾರೀಪ್ ಆಯ್ಕೆ ಮಾಡಿಕೊಳ್ಳಬೇಕು. Select Calamity ನಲ್ಲಿ Flood ಆಯ್ಕೆ ಮಾಡಿಕೊಳ್ಳಬೇಕು. ನಂತರ Get Report ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಆಯ್ಕೆ ಮಾಡಿಕೊಂಡ ಊರಲ್ಲಿ ಯಾರು ಯಾರಿಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ ಹಾಗೂ ಅವರಿಗೆ ಎಷ್ಟು ಹಣ ಜಮೆಯಾಗಿದೆ ಎಂಬ ಪಟ್ಟಿ ಕಾಣಿಸುತ್ತದೆ. ಅದರ ಮುಂದುಗಡೆ ಇರುವ View Status ಮೇಲೆ ಕ್ಲಿಕ್ ಮಾಡಿದರೆ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಜಿಲ್ಲೆ, ಬ್ಯಾಂಕ್ಹೆಸರು ಹಾಗೂ ನಿಮಗೆ ಎಷ್ಟು ಹಣ ಜಮೆಯಾಗಿದೆ? ನಿಮ್ಮ ಹೆಸರು ಹಾಗೂ ಪೇಮೆಂಟ್ ಸ್ಟೇಟಸ್ ಕಾಣಿಸುತ್ತದೆ. ಅದರ ಕೆಳಗಡೆ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಬೆಳೆ, ಹಾಗೂ ಎಷ್ಟು ಎಕರೆಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.