Bele vime calculate ನೀವೆಷ್ಟು ಬೆಳೆ ವಿಮೆ ಪಾವತಿಸಿದರೆ ಎಷ್ಟು ಜಮೆ? ಇಲ್ಲೇ ಚೆಕ್ ಮಾಡಿ 2024

Written by Admin

Updated on:

Spread the love

Bele vime calculate : ಪ್ರಸಕ್ತ ಸಾಲಿನ ಅಂದರೆ 2024-25 ನೇ ಸಾಲಿಗೆ ಮುಂಗಾರು ಹಂಗಾಮಿನ ಬೆಳೆಗಳಿಗೆ ವಿಮೆ ಮಾಡಿಸಲು ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ.

ರೈತರು ಯಾವ ಯಾವ ಬೆಳೆಗಳನ್ನು ಬಿತ್ತನೆ  ಮಾಡಲಿಚ್ಚಿಸಿರುತ್ತಾರೋ ಆ ಬೆಳೆಗಳಿಗೆ ವಿಮೆ ಹಣ ಎಷ್ಟು ಜಮೆಯಾಗಲಿದೆ ಎಂಬುದನ್ನು ಇಲ್ಲೇ ಚೆಕ್ ಮಾಡಬಹುದು.

Bele vime calculate

ಹೌದು, ರೈತ ಬಾಂಧವರೇ ನೀವು ಬೆಳೆ ವಿಮೆ ಮಾಡಿಸುವುದಕ್ಕಿಂತ ಮುಂಚಿತವಾಗಿ ನೀವು  ಯಾವ ಬೆಳೆಗೆ ಎಷ್ಟು ವಿಮೆ ಹಣ ಪಾವತಿಸಬೇಕು? ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗಬಹುದು ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ಮಾಹಿತಿ.

Bele vime calculate ಯಾವ ಬೆಳೆಗೆ ಎಷ್ಟು ವಿಮೆ ಹಣ ಕಟ್ಟಬೇಕು? ಹೀಗೆ ಚೆಕ್ ಮಾಡಿ

ರೈತರು ಪ್ರಸಕ್ತಸಾಲಿನ ಮುಂಗಾರು ಹಂಗಾಮಿಗೆ ಯಾವ ಯಾವ ಬೆಳೆಗಳಿಗೆ ನೀವು ವಿಮೆ ಮಾಡಿಸಬೇಕೆಂದುಕೊಂಡಿದ್ದೀರೋ  ಆ ಬೆಳೆಗಳಿಗೆ ಎಷ್ಟು ವಿಮೆ ಹಣ ಪಾವತಿಸಬೇಕೆಂದುಕೊಂಡಿದ್ದೀರಾ ಎಂಬುದನ್ನು ಚೆಕ್ ಮಾಡಲು ಈ

https://samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನೀವು ವರ್ಷದ ಆಯ್ಕೆಯಲ್ಲಿ 2024-25 ಸೆಲೆಕ್ಟ್ ಮಾಡಿಕೊಳ್ಳಬೇಕು. ಋಃತು ಆಯ್ಕೆಯಲ್ಲಿ Kharif ಸೆಲೆಕ್ಟ್ ಮಾಡಿಕೊಳ್ಳಬೇಕು. ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

Premium Calculator ಮೇಲೆ ಕ್ಲಿಕ್ ಮಾಡಬೇಕು.ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.ಇದಾದ ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು.ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು.

ನೀವು ಯಾವ ಬೆಳೆಗೆ ವಿಮೆ ಮಾಡಿಸಬೇಕೆಂದುಕೊಂಡಿದ್ದೀರೋ ಆ ಬೆಳೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ನಿಮ್ಮ ಜಮೀನು ಎಷ್ಟು ಎಕರೆ ಇದೆ ಎಂಬುದನ್ನು ನಮೂದಿಸಬೇಕು. ನಂತರ Show Premium ಮೇಲೆ ಕ್ಲಿಕ್ ಮಾಡಬೇಕು. ಆಗ ನೀವೆಷ್ಟು  ಬೆಳೆ ವಿಮೆ ಪಾವತಿಸಬೇಕಾಗುತ್ತದೆ ಹಾಗೂ ನಿಮಗೆಷ್ಟುಬೆಳೆ ವಿಮೆ ಜಮೆಯಾಗಬಹುದು ಎಂಬ ಮಾಹಿತಿ ಕಾಣಿಸುತ್ತದೆ.

Bele vime calculate ನೀವು ಒಂದು ಎಕರೆಗೆ ವಿಮೆ ಮಾಡಿಸಬೇಕಾದರೆ ಎಷ್ಟು ವಿಮೆ ಜಮೆ?

ನೀವು ಒಂದು ಎಕರೆಗೆ ವಿಮೆ ಹಣ ಪಾವತಿಸುತ್ತಿದ್ದರೆ ನಿಮಗೆಷ್ಟುವಿಮೆ ಹಣ ಜಮೆಯಾಗಬಹುದು. ಅದರಲ್ಲಿ ನೀವು ತೊಗರಿ ಬೆಳೆಗೆ ವಿಮೆ ಮಾಡಿಸುವುದಾದರೆ ನಿಮಗೆಷ್ಟು ವಿಮೆ ಹಣ ಜಮೆಯಾಗಬಹುದು?

ಇದನ್ನೂ ಓದಿ Bhagyalakshmi status ಭಾಗ್ಯಲಕ್ಷ್ಮೀ ಯೋಜನೆಯಡಿ ನಿಮ್ಮ ಮಗಳ ಹೆಸರಿಗೆಷ್ಟು ಹಣ ಜಮೆ ಇಲ್ಲೇ ಚೆಕ್ ಮಾಡಿ 2024

ಒಂದು ಎಕರೆ ತೊಗರಿಗೆ ವಿಮೆ ಹಣ ಪಾವತಿಸುವುದಾದರೆ ನೀವು 388 ರೂಪಾಯಿ ಪಾವತಿಸಬೇಕಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲು ಸೇರಿ ಒಟ್ಟು 1427 ವಿಮೆ ಹಣ ಪಾವತಿಯಾಗುತ್ತದೆ.

Bele vime calculation

ನಿಮ್ಮ ಬೆಳೆ ಪ್ರಾಕೃತಿಕ ವಿಕೋಪದಿಂದಾಗಿ ಬೆಳೆ ಸಂಪೂರ್ಣ ಹಾನಿಯಾದರೆ ನಿಮಗೆ 19 ಸಾವಿರ ರೂಪಾಯಿಯವರೆಗೆ ವಿಮೆ ಹಣ ಜಮಯಾಗಲಿದೆ. ನಿಮ್ಮ ಬಳೆ ಯಾವ ಹಂತದಲ್ಲಿ ಹಾನಿಯಾಗಿದೆ ಆ ಆಧಾರದ ಮೇಲೆ ರೈತರಿಗೆ ವಿಮೆ ಹಣ ಜಮೆಯಾಗಲಿದೆ. ಆರಂಭದಲ್ಲಿ ಬಿತ್ತನೆ ಸಂದರ್ಭದಲ್ಲಿಯೇ ಹಾಳಾದರೆ ನಿಮಗೆ ಕಡಿಮೆ ವಿಮೆ ಹಣ ಜಮೆಯಾಗಲಿದೆ. ಇದನ್ನೂ ಸಹವ ವಿಮಾ ಕಂಪನಿ ನಿರ್ಧರಿಸುತ್ತದೆ.  ವಿಮಾ ಕಂಪನಿಯ ಸಿಬ್ಬಂದಿಗಳು ರೈತರ ಜಮೀನಿಗೆ ಬಂದು ಬೆಳೆ ವಿಮೆ ನಿರ್ಧರಿಸುತ್ತಾರೆ.

Bele vime calculate ಬೆಳೆ ವಿಮೆ ಪಾವತಿಸುವ ಮುನ್ನ ರೈತರೇನು ಮಾಡಬೇಕು?

ಬೆಳೆ ವಿಮೆ ಹಣ ಪಾವತಿಸುವ ಮುನ್ನ ರೈತರು ಯಾವ ವಿಮಾ ಕಂಪನಿಗೆ ಹಣ ಪಾವತಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಏಕೆಂದರೆ ನಿಮ್ಮಬೆಳೆ ಆಕಸ್ಮಾತ್ ಹಾನಿಯಾಗಿದ್ದರೆ ಆ ವಿಮಾ ಕಂಪನಿಗೆ ಕರೆ ಮಾಡಬೇಕಾಗುತ್ತದೆ. ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದೀರೋ ಆ ವಿಮಾ ಕಂಪನಿಯ ಸಿಬ್ಬಂದಿಯ ಮೊಬೈಲ್ ನಂಬರ್ ಸಹ ಪಡೆದುಕೊಳ್ಳಬೇಕು. ಮುಂದೆ ಈ ವಿಮಾ ಕಂಪನಿಯ ಸಿಬ್ಬಂದಿಯ ಮೂಲಕ ನೀವು ಬೆಳೆ ವಿಮೆಯ ಮಾಹಿತಿ ಪಡೆದುಕೊಳ್ಳಲು ಸಹಾಯವಾಗುತ್ತದೆ.

Leave a Comment