Bele vime calculation ರೈತರು ಯಾವ ಬೆಳೆಗೆ ಎಷ್ಟು ವಿಮೆ ಪಾವತಿಸಿದರೆ ಹಣ ಜಮೆ? ಇಲ್ಲಿದೆ ಮಾಹಿತಿ 2024

Written by Admin

Updated on:

Spread the love

Bele vime calculation : ಮುಂಗಾರು ಹಂಗಾಮಿಗೆ ರೈತರು ಯಾವ ಬೆಳೆಗೆ ಎಷ್ಟು ವಿಮಾ ಹಣ ಪಾವತಿಸಬೇಕು? ಬೆಳೆ ವಿಮೆ ಪಾವತಿಸಿದ ನಂತರ ಪ್ರಾಕೃತಿಕ ವಿಕೋಪದಿಂದಾಗಿ ಬೆಳೆ ಹಾನಿಯಾದರೆ ಎಷ್ಟು ವಿಮೆ ಹಣ ಜಮೆಯಾಗಬಹುದು ಎಂಬುದರ ಮಾಹಿತಿ ಇಲ್ಲಿದೆ.

ಹೌದು, ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಯಾವ ಬೆಳೆಗೆ ಎಷ್ಟು ವಿಮೆ ಹಣ ಪಾವತಿಸಬೇಕಾಗುತ್ತದೆ ಹಾಗೂ ಎಷ್ಟು ವಿಮೆ ಹಣ ಜಮೆಯಾಗಬಹುದು ಎಂಬುದನ್ನು ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು.

ರೈತ ಮಿತ್ರರೆ ಬೆಳೆ ವಿಮೆ ಹಣ ಪಾವತಿಸುವುದಕ್ಕಿಂತ ಮುಂಚಿತವಾಗಿ ನೀವು ನಿಮ್ಮ ಮೊಬೈಲ್ ನಲ್ಲೇ ಒಮ್ಮೆ ಬೆಳೆ ವಿಮೆ ಚೆಕ್ ಮಾಡಿಕೊಳ್ಳಬಹುದು.

Bele vime calculation ಬೆಳೆ ವಿಮೆ ಮಾಡಿಸಲು ಯಾವ ಬೆಳೆಗೆ ಎಷ್ಟು ಹಣ ಕಟ್ಟಬೇಕು?

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ರೈತರು ಯಾವ ಬೆಳೆಗೆ ಎಷ್ಟು ವಿಮೆ ಹಣ ಕಟ್ಟಬೇಕು ಎಂಬುದನ್ನು ಚೆಕ್ ಮಾಡಲು ಈ

https://samrakshane.karnataka.gov.in/publichome.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನೀವು Premium calculator  ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ಯಾವ ಬೆಳೆಗೆ ವಿಮೆ ಮಾಡಿಸಬೇಕೆಂದುಕೊಂಡಿದ್ದೀರೋ ಆ ಬೆಳೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಎಕರೆ ಗುಂಟೆ ನಮೂದಿಸಬೇಕು. ನಂತರ ನೀವು Show Premium ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ.  ಅಲ್ಲಿ ನಿಮಗೆ ಎಷ್ಟುರೂಪಾಯಿಯವರೆಗೆ ಬೆಳೆ ವಿಮೆ ಹಣ ಜಮೆಯಾಗಬಹುದು.ಇದಾದ ನಂತರ ನಿಮಗೆ ಫಾರ್ಮರ್ ಶೇರ್ ನಲ್ಲಿ ರೈತರು ಎಷ್ಟು ವಿಮೆ ಹಣ ಪಾವತಿಸಬೇಕು ಎಂಬುದು ಕಾಣಿಸುತ್ತದೆ. ನಂತರ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಪಾಲು ಎಷ್ಟಿದೆ ಎಂಬ ಮಾಹಿತಿ ಕಾಣಿಸುತ್ತದೆ.

Check crop insurance

Bele vime calculation ಬೆಳೆ ವಿಮೆ ಹಣ ರೈತರಿಗೆ ಯಾವಾಗ ಜಮೆಯಾಗುತ್ತದೆ?

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆ ಅಭಾವ ಅಥವಾ ಇತರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಸ್ಥಳ, ನಿರ್ಧಿಷ್ಠ, ಪ್ರಕೃತಿ ವಿಕೋಪಗಳಾದ ಆಲಿಕಲ್ಲು, ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಘ ಸ್ಫೋಟ ಹಾಗೂ ಗುಡುಗು ಮಿಂಚುಗಳಿಂದ ಉಂಟಾಗುವ ಬೆಂಕಿ ಅವಘಡ ಸಂದರ್ಭದಲ್ಲಿ ಬೆಳೆ ನಷ್ಟ ಉಂಟಾದರೆ ರೈತರು ಬೆಳೆವಿಮೆಯ ಸದುಪಯೋಗ ಪಡೆದುಕೊಳ್ಳಬಹುದು.

ಇದನ್ನೂ ಓದಿ Adharcard Pahani link ಪಹಣಿಗೆ ಆಧಾರ್ ಲಿಂಕ್ ಮಾಡಿದರೆ ಮಾತ್ರ ಸರ್ಕಾರಿ ಸೌಲಭ್ಯ – ಮೊಬೈಲ್ ನಲ್ಲಿ ಹೀಗೆ ಲಿಂಕ್ ಮಾಡಿ 2024

ರೈತರು ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಹಾಗೂ ನೋಂದಣಿಗಾಗಿ ಹತ್ತಿರದ ಬ್ಯಾಂಕುಗಳಿಗೆ, ನಾಗರಿಕ ಸೇವಾ ಕೇಂದ್ರ (ಸಿಎಸ್.ಸಿ ಸೆಂಟರ್)ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸಂಪರ್ಕಿಸಲು ಕೋರಲಾಗಿದೆ.

Bele vime calculation ರೈತರು ಯಾವ ಬೆಳೆಗೆ ಎಷ್ಟು ವಿಮಾ ಕಂತು ಪಾವತಿಸಬೇಕು?

ಹೆಸರು ಬೆಳೆಗೆ ವಿಮೆ ಪಾವತಿಸುವುದಾದರೆ ಒಂದು ಎಕರೆಗೆ 294 ರೂಪಾಯಿ ಪಾವತಿಸಬೇಕು. ಇದಕ್ಕೆ ಜುಲೈ 15 ಕೊನೆಯ ದಿನವಾಗಿದೆ. ಉದ್ದು ಬೆಳೆಗೆ 265 ರೂಪಾಯಿ ಪಾವತಿಸಬೇಕು. ತೊಗರಿ ಬೆಳೆಗೆ 389 ರೂಪಾಯಿ ಪಾವತಿಸಬೇಕಾಗುತ್ತದೆ. ಸೋಯಾಬಿನ್ ಬೆಳೆಯಾಗಿದ್ದರೆ ಪ್ರತಿ ಎಕರೆಗೆ1007 ರೂಪಾಯಿ ಪಾವತಿಸಬೇಕು. ಅದೇ ರೀತಿ ನಿಮ್ಮದು ಹತ್ತಿ ಬೆಳೆಯಾಗಿದ್ದರೆ ಒಂದು ಎಕರೆಗೆ 1303 ರೂಪಾಯಿ ಪಾವತಿಸಬೇಕು.ಈ ಎಲ್ಲಾ ಬೆಳೆಗಳಿಗೆ ವಿಮೆ ಮಾಡಿಸಲು ಜುಲೈ 31 ಕೊನೆಯ ದಿನವಾಗಿದೆ.

ಬೆಳೆ ವಿಮೆ ನೋಂದಣಿ ಮಾಡಿಸಲು ರೈತರ ಬಳಿ ಫ್ರೂಟ್ಸ್ಐಡಿ (ಎಫ್ಐಡಿ) ಕಡ್ಡಾಯವಾಗಿ ಹೊಂದಿರಬೇಕು. ಎಫ್ಐಡಿ ಇದ್ದರೆ ಮಾತ್ರ ನಿಮಗೆ ಮುಂದೆ ಬೆಳೆ ವಿಮೆ ಹಣ ಜಮೆಯಾಗಲಿದೆ.

ಕಲಬುರಗಿ ಜಿಲ್ಲೆಗೆ ವಿಮಾ ಕಂಪನಿ ಬದಲಾವಣೆ

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನಗೊಳಿಸಲು FFCO TOKIO General Insurance Co. Ltd. ಕಂಪನಿಯನ್ನು ನಿಗದಿಪಡಿಸಲಾಗಿದೆ.

Leave a Comment