Bele vime hana  2 ಲಕ್ಷ ರೈತರಿಗೆ 76 ಕೋಟಿ ಬೆಳೆ ವಿಮೆ ಪರಿಹಾರ ಜಮೆ

Written by Admin

Published on:

Spread the love

Bele vime hana : ಪ್ರಸಕ್ತ 2024-25ನೇ ಸಾಲಿನ ಬೆಳೆ ವಿಮೆ ಸ್ಥಳೀಯ ವಿಕೋಪದಡಿ ಜಿಲ್ಲೆಯ ಒಟ್ಟು 2,03,720 ರೈತರಿಗೆ 76.94 ಕೋಟಿ ರೂಪಾಯಿ ಪರಿಹಾರ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ.

ಹೌದು, ರೈತರು ತಮ್ಮ ಬ್ಯಾಂಕುಗಳಿಗೆ ಭೇಟಿ ನೀಡಿ ತಮ್ಮ ಖಾತೆಗೆಪರಿಹಾರ ಹಣ ಜಮೆಯಾಗಿರುವುದನ್ನು ಖಾತ್ರಿ ಪಡಿಸಿಕೊಳ್ಳುವಂತೆ ಕಲಬುರಗಿ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಕಳೆದ ಆಗಸ್ಟ್ ಕೊನೆ ವಾರ ಹಾಗೂ ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಸುರಿದ ಮಳೆಯಿಂದಾಗಿ ವಿವಿಧ ಬೆಳೆಗಳು ಮತ್ತು ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಹೆಸರು, ಉದ್ದು ಹಾಗೂ ಸೋಯಾಬಿನ್ ಬೆಳೆಗಳು ಹಾಗೂ ನವೆಂಬರ್ ತಿಂಗಳಿನಲ್ಲಿ ಮಳೆ ಬಾರದೆ ತೊಗರಿ ಬೆಳೆ ಹಾಳಾದ ಕಾರಣ ರೈತರು ವಿಮೆ ಕಂಪನಿಗೆ ದೂರು ಸಲ್ಲಿಸಿದ್ದರು.

Bele vime hana ದೂರಿನಂತೆ ಇದೀಗ ಬೆಳೆ ವಿಮೆ ಪರಿಹಾರ ಜಮೆ ಮಾಡಲಾಗಿದೆ. ಇದರ ಹೊರತಾಗಿ ಬಾಕಿ ಉಳಿದ ಅರ್ಹ ರೈತರಿಗೆ ಅಂತಿಮ ಪಾವತಿಯನ್ನು ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ನಿರ್ಧರಿಸಿ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿCheck Land Survey sketch ನಿಮ್ಮ ಜಮೀನಿನ ಸರ್ವೆ ಸ್ಕೆಚ್ ಮೊಬೈಲ್ ನಲ್ಲಿ ಹೀಗೆ ಪಡೆಯಿರಿ 2024

Bele vime hana ಪ್ರಸಕ್ತ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಯೋಜನೆಯಡಿ ತೊಗರಿ, ಹೆಸರು, ಉದ್ದು, ಸೋಯಾಬಿನ್, ಹತ್ತಿ ಹಾಗೂ ಇತರೆ ಬೆಳೆಗಳಿಗೆ ಒಟ್ಟಾರೆ ಜಿಲ್ಲೆಯಲ್ಲಿ 2,04,073 ರೈತರು ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡಿದ್ದರು.

Bele vime hana ನಿಮಗೆಷ್ಟು ಬೆಳೆ ವಿಮೆ ಹಣ ಜಮೆಯಾಗಿದೆ? ಇಲ್ಲೇ ಚೆಕ್ ಮಾಡಿ

2023-24 ನೇ ಸಾಲೀನ ಮುಂಗಾರು ಹಂಗಾಮಿನ ಬೆಳೆ ವಿಮೆ ಹಣ ಜಮೆಯಾಗಿದೆಯೋಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ಸಂರಕ್ಷಣೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು 2024-25 ರ ಕೆಳಗಡೆ ಖಾರೀಫ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ.  ಫಾರ್ಮರ್ಸ್ ಕಾಲಂ ಕೆಳಗಡೆ ಕಾಣುವ Check Status ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊದು ಪೇಜ್ ತೆರೆದುಕೊಳ್ಳುತ್ತದೆ.

ಅಲ್ಲಿ ನಿಮಗೆ Proposal ಹಾಗೂ Mobile No. ಮತ್ತು Aadhaar ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೀವು  ಮೊಬೈಲ್ ನಂಬರ್ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ಬೆಳೆ ವಿಮೆ ಮಾಡಿಸುವಾಗ ಯಾವ ಮೊಬೈಲ್ ನಂಬರ್ ಕೊಟ್ಟಿರುತ್ತಾರೋ ಆ ಮೊಬೈಲ್ ನಂಬರ್ ನಮೂದಿಸಬೇಕು. ಇದಾದ ಮೇಲೆ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ಒಂದು ವೇಳೆ ಕ್ಯಾಪ್ಚ್ಯಾ ಕೋಡ್ ಸರಿಯಾಗಿ ಕಾಣಿಸದಿದ್ದರೆ ರಿಫ್ರೆಶ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಹೊಸ ಕ್ಯಾಪ್ಚ್ಯಾ ಕೋಡ್ ಅಪ್ಡೇಟ್ ಆಗುತ್ತದೆ. ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ನಮೂದಿಸಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಬೆಳೆ ವಿಮೆ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದು ಕಾಣಿಸುತ್ತದೆ.

ಈಗ ಕಲಬುರಗಿ ಜಿಲ್ಲೆಯಲ್ಲಿ ಬೆಳೆ ವಿಮೆಹಣ ಬಿಡುಗಡೆಯಾಗಿದೆ. ಅತೀ ಶೀಘ್ರದಲ್ಲಿಇತರ ಜಿಲ್ಲೆಗಳ ರೈತರ ಖಾತೆಗೆ ಮುಂಗಾರು ಹಂಗಾಮಿನ ಬೆಳೆ ವಿಮೆ ಹಣ ಜಮೆಯಾಗಲಿದೆ. ಯಾರು ಯಾರು ಬೆಳೆ ವಿಮೆ ಮಾಡಿಸಿದ ನಂತರ ವಿಮಾ ಕಂಪನಿಗೆ ದೂರು ಸಲ್ಲಿಸಿದ್ದಾರೋ ಅಂತಹ ರೈತರ ಖಾತೆಗೆ ಮಾತ್ರ ಬೆಳೆ ವಿಮೆ ಹಣ ಜಮೆಯಾಗುವ ಸಾಧ್ಯತೆಯಿದೆ.

 

Leave a Comment