Bele vime jame: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ವಿಮೆ ಮಾಡಿಸಿದ ರೈತರಲ್ಲಿ ಕೆಲವರಿಗೆ ಹೆಚ್ಚು ಇನ್ನೂ ಕೆಲವರಿಗೆ ಕಡಿಮೆ ವಿಮೆ ಹಣ ಜಮೆಯಾಗುತ್ತದೆ?
ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಯಲ್ಲಿ ಮಾತ್ರವಲ್ಲ ಒಂದೇ ಊರಿನಲ್ಲಿ ಒಬ್ಬ ರೈತರಿಗಿಂತ ಇನ್ನೊಬ್ಬ ರೈತರಿಗೇಕೆ ಬೆಳೆ ವಿಮೆ ಹೆಚ್ಚು ಕಡಿಮೆ ಜಮೆ ಆಗುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
Bele vime jame ರೈತರು ಯಾವ ವಿಮಾ ಕಂಪನಿಗೆ ವಿಮೆ ಕಂತು ಕಟ್ಟಿದ್ದಾರೆ?
ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸುವ ರೈತರು ಮೊದಲು ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದಾರೆ. ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಹೌದು, ನಿಮ್ಮಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬುದನ್ನು ಚೆಕ್ ಮಾಡಲು ಈ
https://samrakshane.karnataka.gov.in/publichome.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು Know your Insurance co. ಮೇಲೆ ಕ್ಲಿಕ್ ಮಾಡಬೇಕು. ಆಗ ರಾಜ್ಯದಲ್ಲಿ ಯಾವ ಯಾವ ಜಿಲ್ಲೆಗಳಿಗೆ ಯಾವ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬ ಪಟ್ಟಿ ಕಾಣಿಸುತ್ತದೆ. ನಿಮ್ಮ ಜಿಲ್ಲೆಗೆ ಯಾವಿ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬ ಹೆಸರು ಸಹ ಕಾಣಿಸುತ್ತದೆ. ರೈತರು ತಮ್ಮ ಜಿಲ್ಲೆಯ ವಿಮಾ ಕಂಪನಿಯನ್ನು ನೆನಪಿಟ್ಟುಕೊಳ್ಳಬೇಕು. ಇದರೊಂದಿಗೆ ಆ ವಿಮಾ ಕಂಪನಿಯ ಸಹಾಯವಾಣಿ ನಂಬರ್ ಹಾಗೂ ಮೊಬೈಲ್ ನಂಬರ್ ಪಡೆದುಕೊಳ್ಳಬೇಕು.
Bele vime jame ಬೆಳೆ ವಿಮೆ ಮಾಡಿಸಿದ ಮಾತ್ರಕ್ಕೆ ಬೆಳೆ ವಿಮೆ ಜಮೆಯಾಗಲ್ಲ?
ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ಮಾತ್ರಕ್ಕೆ ವಿಮೆ ಹಣ ಜಮೆಯಾಗುವುದಿಲ್ಲ. ಹೌದು, ಪ್ರಾಕೃತಿಕ ವಿಕೋಪದಿಂದಾಗಿ ಬೆಳೆ ಹಾನಿಯಾದರೆ ಬೆಳೆ ಪ್ರವಾಹದಿಂದಾಗಿ ಅತೀ ಮಳೆಯಿಂದಾಗಿ ಸಂಪೂರ್ಣ ಮುಳುಗಿ ಹೋದರೆ, ಕೊಚ್ಚಿ ಹೋದರೆ ಹಾಗೂ ಮಳೆಯಿಲ್ಲದೆ ಬೆಳೆ ಹಾನಿಯಾದರೆ ರೈತರಿಗೆ ವಿಮೆ ಸಿಗುವುದು.
ಇದನ್ನೂ ಓದಿ : Pm kisan fund ಪಿಎಂ ಕಿಸಾನ್ 17ನೇ ಕಂತು ಬಿಡುಗಡೆಗೆ ಮೋದಿ ಸಹಿ ನಿಮ್ಮ ಹೆಸರು ಚೆಕ್ ಮಾಡಿ
ಪ್ರಾಕೃತಿಕ ವಿಕೋಪದಿಂದಾಗಿ ಬೆಳೆ ಹಾನಿಯಾದಾಗ 72 ಗಂಟೆಯೊಳಗೆ ಆಯಾ ವಿಮಾ ಕಂಪನಿಗೆ ತಿಳಿಸಬೇಕು. ಆಗ ವಿಮಾ ಕಂಪನಿಯ ಸಿಬ್ಬಂದಿಗಳು ಬಂದು ಬೆಳೆ ಹಾನಿಯಾಗಿರುವ ಕುರಿತು ವರದಿ ಮಾಡುತ್ತಾರೆ.
Bele vime jame ನಿಮ್ಮ ಜಮೀನಿನಲ್ಲಿ ಯಾವ ಬೆಳೆ ಬಿತ್ತಿದ್ದೀರಿ? ಸಮೀಕ್ಷೆ ಮಾಡುವುದು ಕಡ್ಡಾಯ
ರೈತರು ತಾವು ಯಾವ ಬೆಳೆ ಬಿತ್ತಿದ್ದೀರಿ ಎಂಬುದರ ಕುರಿತು ಬೆಳೆ ಸಮೀಕ್ಷೆ ಮಾಡಿಸಬೇಕು. ಬೆಳೆ ಸಮೀಕ್ಷೆಯಾದರೆ ಮಾತ್ರ ನಿಮಗೆ ವಿಮೆ ಹಣ ಜಮೆಯಾಗಲಿದೆ.
Bele vime jame ಬೆಳೆ ವಿಮೆ ಹೇಗೆ ನಿರ್ಧರಿಸುತ್ತಾರೆ?
ವಿಮಾ ಘಟಕದಲ್ಲಿ ಶೇ.75 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡರೆ, ಅಥವಾ ಬಿತ್ತನೆಯಾದ ನಂತರ ಕಟಾವಿಗೆ ಮೊದಲು ಸಕಾಲಕ್ಕೆ ಮಳೆ ಬಾರದೆ ನಿರೀಕ್ಷಿತ ಇಳುವರಿಗಿಂತ ಶೇ. 50 ಕ್ಕಿಂತ ಹೆಚ್ಚು ಇಳುವರಿ ನಷ್ಟ ಆದಲ್ಲಿ ಅಥವಾ ಅಕಾಲಿಕ ಮಳೆಯಿಂದ ಬೆಳೆ ಮುಳುಗಡೆ ಅಥವಾ ಕಟಾವಿನ ನಂತರ 14 ದಿನದೊಳಗೆ ಅಕಾಲಿಕ ಮಳೆಯಿಂದ ಬೆಳೆ ನಾಶವಾದರೆ ವಿಮಾ ಸಂಸ್ಥೆ ವೈಯಕ್ತಿಕವಾಗಿ ನಷ್ಟವನ್ನು ನಿರ್ಧರಿಸಿ ಪರಿಹಾರ ನೀಡಲು ಅವಕಾಶವಿರುತ್ತದೆ.
Bele vime jame ಬೆಳೆ ವಿಮೆ ಮಾಡಿಸಲು ಯಾವ ಯಾವ ದಾಖಲೆ ಬೇಕು?
ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಲು ರೈತರ ಬಳಿ ಎಫ್ಐಡಿ ಇರಬೇಕು. ಇದರೊಂದಿಗೆ ಆಧಾರ್ ಕಾರ್ಡ್, ಜಮೀನಿನ ಪಹಣಿ ಇರಬೇಕು.ಈ ದಾಖಲೆಯೊಂದಿಗೆ ನಿಮ್ಮ ಹತ್ತಿರದ ಗ್ರಾಮ ಒನ್, ಸೇವಾ ಸಿಂಧು, ಬೆಂಗಳೂರು ಒನ್, ಕರ್ನಾಟಕ ಒನ್ ಅಥವಾ ಹತ್ತಿರದ ಬ್ಯಾಂಕ್ ನಲ್ಲಿ ಬೆಳೆ ವಿಮೆ ಮಾಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಲು ಕೋರಲಾಗಿದೆ.