Bele vime numbers ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಿಮ್ಮ ಬೆಳೆ ಹಾಳಾಗಿದ್ದರೆ ವಿಮಾ ಪರಿಹಾರ ಪಡೆಯಲು ನೀವೇನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಮುಂಗಾರು ಹಂಗಾಮಿಗೆ ವಿಮೆ ಮಾಡಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಯಾರು ಯಾರು ಮುಂಗಾರು ಹಂಗಾಮಿನ ಬೆಳೆಗಳಿಗೆ ವಿಮೆ ಮಾಡಿಸಿದ್ದೀರೋ ನಿಮ್ಮ ಬೆಳೆ ಮಳೆಯಿದ ಹಾನಿಯಾಗಿದ್ದರೆ ಕೂಡಲೇ ವಿಮಾ ಕಂಪನಿಗೆ ದೂರು ನೀಡಬೇಕು.
ಒಂದು ವೇಳೆ ಇನ್ನೂವಿಮೆ ಹಣ ಕಟ್ಟಿಲ್ಲವಾದರೆ ಜುಲೈ 31 ರೊಳಗೆ ನಿಮ್ಮ ಬೆಳೆಗೆ ವಿಮೆ ಮಾಡಿಸಬಹುದು. ಬೆಳೆ ವಿಮೆ ಮಾಡಿಸಿದ ನಂತರ ನೀವು ಬೆಳೆ ಸಮೀಕ್ಷೆ ಮಾಡಿಕೊಳ್ಳಬೇಕು. ಬೆಳೆ ಸಮೀಕ್ಷೆಯನ್ನು ಸ್ವತಃ ನೀವೇ ಮಾಡಿಕೊಳ್ಳಬಹುದು. ಬೆಳೆ ಸಮೀಕ್ಷೆ ಮಾಡಿದ ನಂತರ ನೀವು ನಿಮ್ಮ ಜಿಲ್ಲೆಯ ವಿಮಾ ಕಂಪನಿಗೆ ದೂರು ನೀಡಲೇಬೇಕು. ಆಗ ವಿಮಾ ಕಂಪನಿಯ ಸಿಬ್ಬಂದಿಗಳು ರೈತರ ಜಮೀನಿಗೆ ಬಂದು ಬೆಳೆ ಪರಿಶೀಲನೆ ಮಾಡುತ್ತಾರೆ. ನಂತರ ಬೆಳೆ ಹಾಳಾಗಿರುವ ಕುರಿತು ವರದಿ ಮಾಡಿ ಮೇಧಿಕಾರಿಗಳಿಗೆ ವಿಮಾ ಪರಿಹಾರ ಸಲ್ಲಿಸಲು ವಿನಂತಿಸಿಕೊಳ್ಳುತ್ತಾರೆ.
Bele vime numbers ಬೆಳೆ ವಿಮಾ ಕಂಪನಿಯ ಉಚಿತ ಸಹಾಯವಾಣಿ ನಂಬರ್
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ವಿಮೆ ಮಾಡಿಸಿದ ರೈತರು ಕರ್ನಾಟಕದ ರೈತರಿಗೆ ವಿಮೆ ಹಣ ಜಮೆಯಾಗಲು ಕೆಳಗೆ ನೀಡಲಾದ ಬೆಳೆ ವಿಮೆ ಸಹಾಯವಾಣಿ ನಂಬರಿಗೆ ಕರೆ ಮಾಡಿ.
Bele vime numbers ಯಾವ ಜಿಲ್ಲೆಯ ರೈತರು ಯಾವ ವಿಮಾ ಕಂಪನಿಗೆ ಕರೆ ಮಾಡಬೇಕು?
ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ಬೆಳೆ ವಿಮೆ ಪಾವತಿಸಿದ ರೈತರಿಗೆ ಜಿಲ್ಲಾವಾರು ವಿಮಾ ಕಂಪನಿಗಳ ಮಾಹಿತಿ ಇಲ್ಲಿದೆ.
ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬುದನ್ನು ಚೆಕ್ ಮಾಡಲು ಈ
https://samrakshane.karnataka.gov.in/publichome.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ Farmers ಕೆಳಗಡೆ Premium Calculator, crop you can insure, check status, know your Insurance co. Find Gram Panchayat and crop Insurance details on survey No ಹೀಗೆ ಕೆಲವು ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ನೀವು Know Your Insurance Co ಮೇಲೆ ಕ್ಲಿಕ್ ಮಾಡಬೇಕು.
ಅಥವಾ ಈ
https://samrakshane.karnataka.gov.in/HomePages/frmKnowYourInsCompany.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಆಗ ಜಿಲ್ಲಾವಾರು ವಿಮಾ ಕಂಪನಿಯ ಪೇಜ್ ಕಾಣಿಸುತ್ತದೆ. ಅಲ್ಲಿ ನೀವು Select District ನಲ್ಲಿ ನಿಮ್ಮ ಜಿಲ್ಲೆಆಯ್ಕೆ ಮಾಡಿಕೊಳ್ಳಬೇಕು. ಆಗ ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬುದು ಕಾಣಿಸುತ್ತದೆ. ಇಲ್ಲಿ ಕೆಳಗೆ ವಿಮಾ ಕಂಪನಿಯ ಹೆಸರು ಹಾಗೂ ಆ ಕಂಪನಿಯ ಸಹಾಯವಾಣಿ ನಂಬರ್ ನೀಡಲಾಗಿದೆ.ಆ ನಂಬರಿಗೆ ನೀವು ಕರೆ ಮಾಡಿ ವಿಚಾರಿಸಬಹುದು.
Bele vime numbers ಬೆಳೆ ವಿಮೆ ನೋಂದಣಿ ಪ್ರಕ್ರಿಯೆಗೆ ಸಂಬಂಧಿಸಿದಂತೆ 080-2656 4535, 080 2656 4536, 080 2656 4537 ಗೆ ಕರೆ ಮಾಡಬಹುದು.
ಬೆಳೆ ವಿಮೆ ಜಮೆಯ ಕುರಿತಂತೆ ಈ ಕೆಳಗಿನ ನಂಬರುಗಳಿಗೆ ಕರೆ ಮಾಡಬಹುದು.
ಇದನ್ನೂ ಓದಿ : Village Land map ನಿಮ್ಮೂರಿನ ಎಲ್ಲಾ ಜಮೀನುಗಳ ಮ್ಯಾಪ್ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿ 2024
ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿಯ ಉಚಿತ ಸಹಾಯವಾಣಿ 1800 425 0505 ಗೆ ಸಂಪರ್ಕಿಸಬಹುದು.
ಯೂನಿವರ್ಸಲ್ ಸ್ಯಾಂಪೂ ಕಂಪನಿಯ ಉಚಿತ ಸಹಾಯವಾಣಿ 1800 200 5142 ಗೆ ಸಂಪರ್ಕಿಸಬಹುದು.
ಎಸ್.ಬಿ.ಐ ಕಂಪನಿಯ ಉಚಿತ ಸಹಾಯವಾಣಿ 1800 180 1551 ಗೆ ಸಂಪರ್ಕಿಸಬಹುದು.
ಹೆಚ್.ಡಿ.ಎಫ್.ಸಿ ಎರ್ಗೋ ಉಚಿತ ಸಹಾಯವಾಣಿ 1800 266 0700 ಗೆ ಸಂಪರ್ಕಿಸಬಹುದು.
ಫ್ಯೂಚರ್ ಜನರಲ್ ಇನ್ಸುರೆನ್ಸ್ ಕಂಪನಿಯ ಉಚಿತ ಸಹಾಯವಾಣಿ 1800 266 4141 ಗೆ ಸಂಪರ್ಕಿಸಬಹುದು.
ಐಸಿಐಸಿಐ ಲೋಂಬಾರ್ಡ್ ಇನ್ಸುರೆನ್ಸ್ ಕಂಪನಿ ಉಚಿತ ಸಹಾಯವಾಣಿ 1800 103 7712 ಗೆ ಸಂಪರ್ಕಿಸಬಹುದು.
ಬಜಾಜ್ ಅಲಾಯನ್ಸ್ ಇನ್ಸುರೆನ್ಸ್ ಕಂಪನಿ ಉಚಿತ ಸಹಾಯವಾಣಿ 1800 209 5959 ಗೆ ಸಂಪರ್ಕಿಸಬಹುದು.