Bhagyalakshmi bond amount ಭಾಗ್ಯಲಕ್ಷ್ಮೀ ಹಣ ಜಮೆಯಾಗಬೇಕೇ? ಈ ಕೆಲಸ ಮಾಡಿ

Written by Admin

Published on:

Spread the love

Bhagyalakshmi bond amount : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ  ಯೋಜನೆಯು ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ಭಾಗ್ಯಲಕ್ಷ್ಮೀ ಯೋಜನೆಯ 2006-2007 ನೇ ಸಾಲಿನ ಫಲಾನಭವಿಗಳು ಯೋಜನೆ ಸೌಲಭ್ಯ ಪಡೆಯಲು ಸೂಚಿಸಲಾಗಿದೆ.

ಯೋಜನೆಯಡಿ 2006-2007ನೇ ಸಾಲಿನಲ್ಲಿ ಒಟ್ಟು 1527 ಫಲಾನುಭವಿಗಳು ನೋಂದಣಿಯಾಗಿದ್ದು, ವಯಸ್ಸು 18 ವರ್ಷ ಪೂರ್ಣಗೊಂಡಿರುವುದರಿಂದ ಎಲ್ಐಸಿಯಿಂದ ಪರಿಪಕ್ವ  ಮೊತ್ತ ಮಂಜೂರಾಗಿದೆ. ಅರ್ಹ ಫಲಾನುಭವಿಗಳು ವಿವರಕ್ಕೆ ಹತ್ತಿರದ ಅಂಗನವಾಡಿ ಕೇಂದ್ರ ಅಥವಾ ಎನ್.ಆರ್. ಕಾಲನಿಯ ಬೆಂಗಳೂರು ರಾಜ್ಯಶಿಶು ಅಭಿವೃದ್ಧಿ ಯೋಜನಾ ಕಚೇರಿಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080 2660 1917 ಗೆ ಸಂಪರ್ಕಿಸಲು ಕೋರಲಾಗಿದೆ.

Bhagyalakshmi bond amount ಭಾಗ್ಯಲಕ್ಷ್ಮೀ ಸ್ಟೇಟಸ್

ಭಾಗ್ಯಲಕ್ಷ್ಮೀ ಯೋಜನೆಯ ಬಾಂಡ್ ಗಳ ಅವಧಿ ಮುಗಿದರೂ ತಾಂತ್ರಿಕ ಕಾರಣಗಳಿಂದಾಗಿ ಹಲವಾರು ಫಲಾನುಭವಿಗಳ ಖಾತೆಗೆ ಇನ್ನೂ ಹಣ ಜಮೆಯಾಗಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಕಳೆದ ಏಪ್ರೀಲ್ ತಿಂಗಳಿಂದಲೇ ಭಾಗ್ಯಲಕ್ಷ್ಮೀ ಯೋಜನೆಯ ಬಾಂಡ್ ಗಳು ಮೆಚ್ಯೂರಿಟಿಯಾಗಲು ಆರಂಭವಾಗಿದ್ದು, ಕೆಲವರಿಗೆ ಜಮೆಯಾದರೆ ಇನ್ನೂ ಕೆಲವರಿಗೆ ಹಣ ಜಮೆಯಾಗುತ್ತಿಲ್ಲ.  ಯಾರಿಗೆ ಇನ್ನೂ ಭಾಗ್ಯಲಕ್ಷ್ಮೀ ಯೋಜನೆಯ ಹಣ ಜಮೆಯಾಗಿಲ್ಲವೋ  ಅವರು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ದಾಖಲೆಗಳನ್ನು ಸಲ್ಲಿಸಬಹುದು.

ಇದನ್ನೂ ಓದಿ Ekyc rejected list ಯಾರ ಇಕೆವೈಸಿ ಆಗಿಲ್ಲವೋ ಆ ರೈತರ ಪಟ್ಟಿ ಬಿಡುಗಡೆ ನಿಮ್ಮ ಹೆಸರು ಇಲ್ಲೇ ಚೆಕ್ ಮಾಡಿ 2025

2006 ರ ನಂತರ ಬಡತನ ರೇಖೆಯ ಕೆಳಗಿರುವ (ಬಿಪಿಎಲ್) ಕುಟುಂಬದಲ್ಲಿ ಜನಿಸಿದ ಇಬ್ಬರು ಹೆಣ್ಣುಮಕ್ಕಳು ಯೋಜನೆಗೆ ಅರ್ಹರಾಗಿದ್ದರು. ತಾಯಿತಂದೆ ಅಥವಾ ಪಾಲಕರು ಅರ್ಜಿ ಸಲ್ಲಿಸಿದ್ದರೆ ಎಲ್.ಐ.ಸಿ ಬಾಂಡ್ ನೀಡಲಾಗುತ್ತಿತ್ತು. ಬಾಂಡ್ ನಲ್ಲಿ ನಮೂದಿಸಿದ ಮೊತ್ತವನ್ನು ಮಗವಿಗೆ 18 ವರ್ಷ ತುಂಬಿದ ಬಳಿಕ ನೀಡುವ ಯೋಜನೆಯಡಿ 32 ರಿಂದ 45 ಸಾವಿರ ರೂಪಾಯಿ ಮೌಲ್ಯದ ಬಾಂಡಗಳ್ನುಆರಂಭದ ವರ್ಷಗಳಲ್ಲಿ ವಿತರಿಸಲಾಗಿದೆ. 2008 ರಲ್ಲಿ ನಿಯಮಗಳನ್ನು ಪರಿಷ್ಕರಿಸಲಾಗಿದ್ದು, ಬಾಂಡ್ ಮೌಲ್ಯ ಹೆಚ್ಚಿಸಲಾಗಿದೆ.

Bhagyalakshmi bond amount

Bhagyalakshmi bond amount 2008 ರ ಆಗಸ್ಟ್ ನಲ್ಲಿ ಜನಿಸಿದ ಮೊದಲ ಮಗುವಿಗೆ 19,300 ರೂಪಾಯಿ ಎಲ್.ಐ.ಸಿಯಲ್ಲಿ ಡೆಪಾಸಿಟ್ ಇರಿಸಿದ್ದು, 18 ವರ್ಷದ ಬಳಿಕ 1,00,097 ರೂಪಾಯಿ ಹಾಗೂ ಎರಡನೇ ಮಗುವಿಗೆ 18,350 ರೂಪಾಯಿ ಡೆಪಾಸಿಟ್ ಇರಿಸಿದ್ದು, 18 ವರ್ಷದ ಬಳಿಕ 100,052 ರೂಪಾಯಿ ನೀಡಲಾಗುತ್ತದೆ.

Bhagyalakshmi bond amount : ಭಾಗ್ಯಲಕ್ಷ್ಮೀ ಯೋಜನೆಯ ಸ್ಟೇಟಸ್ ಇಲ್ಲೇ ಚೆಕ್ ಮಾಡಿ

ಭಾಗ್ಯಲಕ್ಷ್ಮೀ ಯೋಜನೆ ಯಾರು ಯಾರು ತಮ್ಮ ಮಗಳ ಹೆಸರಿಗೆ ಬಾಂಡ್ ಪಡೆದಿದ್ದಾರೋ ಅಂತಹವರು ತಮ್ಮ ಮಗಳ ಹೆಸರಿಗೆ ಭಾಗ್ಯಲಕ್ಷ್ಮೀ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಬಹುದು..

ಭಾಗ್ಯಲಕ್ಷ್ಮೀ ಬಾಂಡ್ ಸ್ಟೇಟಸ್ ಮೊಬೈಲ್ ನಲ್ಲೇ ನೋಡಲು ಈ

http://blakshmi.kar.nic.in:8080/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭಾಗ್ಯಲಕ್ಷ್ಮೀ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಭಾಗ್ಯಲಕ್ಷ್ಮೀ ಯೋಜನೆಯ ಕುರಿತಂತೆ ಮಾಹಿತಿ ಇರುತ್ತದೆ.  ಯೋಜನೆ ಆರಂಭಾವಾದಾಗ  ಭಾಗ್ಯಲಕ್ಷ್ಮೀ ಯೋಜನೆಯಡಿ ನಿಬಂಧನೆಗಳ ಮಾಹಿತಿ ಇರುತ್ತದೆ. Bhagyalakshi status ಚೆಕ್ ಮಾಡಲು ಮೇಲ್ಗಡೆ Home ಪಕ್ಕದಲ್ಲಿರುವ query/search ಕೆಳಗಡೆ ಕಾಣುವ Multi Search ಮೇಲೆ ಕ್ಲಿಕ್ ಮಾಡಬೇಕು.

ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ District ನಲ್ಲಿ ನಿಮ್ಮ ಜಿಲ್ಲೆ, Project ನಲ್ಲಿ ತಾಲೂಕು, cercle ನಲ್ಲಿ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಮಗುವಿನ ಹೆಸರು ನಮೂದಿಸಬೇಕು. ಹುಟ್ಟಿದ ದಿನಾಂಕ ನಮೂದಿಸಿ ಅಲ್ಲಿ ಕಾಣುವ ಕೋಡ್ ನಂಬರ್ ನ್ನು ಕೆಳಗಡೆ ಇಮೇಜ್ ಕೋಡ್ ಬಾಕ್ಸ್ ನಲ್ಲಿ ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು.

ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ Child Id ಕೆಳಗಡೆ ಕಾಣುವ ನಂಬರ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಮತ್ತೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಭಾಗ್ಯಲಕ್ಷ್ಮೀ ಬಾಂಡ್ ಸ್ಟೇಟಸ್ ಮಾಹಿತಿ ಕಾಣುತ್ತದೆ.

Leave a Comment