Bhagyalakshmi Bond status ಭಾಗ್ಯಲಕ್ಷ್ಮೀ ಬಾಂಡ್ ಯೋಜನೆಯಡಿ 1 ಲಕ್ಷ ಹಣ ಜಮೆ ಚೆಕ್ ಮಾಡಿ

Written by Admin

Published on:

Spread the love

Bhagyalakshmi Bond status : ಭಾಗ್ಯಲಕ್ಷ್ಮೀ ಯೋಜನೆಯಡಿ ಯಾರು ತಮ್ಮ ಮಗಳ ಹೆಸರಿಗೆ ಬಾಂಡ್ ಪಡೆದಿದ್ದಾರೋ ಅವರ ಮಕ್ಕಳ ವಯಸ್ಸು 18 ತುಂಬಿರುತ್ತದೆಯೋ ಅವರಿಗೆ ಒಂದು ಲಕ್ಷರೂಪಾಯಿಯವರೆಗೆ ಹಣ ಸಿಗಲಿದೆ.

ಹೌದು, ತಮಗೆಲ್ಲಾ ಗೊತ್ತಿದ್ದ ಹಾಗೆ ಭಾಗ್ಯಲಕ್ಷ್ಮೀ ಯೋಜನೆಯನ್ನು 2006 ರಲ್ಲಿ ಆರಂಭಿಸಲಾಗಿದೆ. ಈ ಯೋಜನೆ ಅಡಿ ದಿನಾಂಕ 01-04-2006 ರಿಂದ 31-07-2008 ರ ಅವಧಿಯಲ್ಲಿಜನಿಸಿ ಭಾಗ್ಯಲಕ್ಷ್ಮೀ ಯೋಜನೆಯಡಿ ನೋಂದಣಿಯಾಗಿ 18 ವರ್ಷ ಪೂರ್ಣಗೊಂಡಿರುವ ಬಿಪಿಎಲ್ ಕುಟುಂಬದ ಮೊದಲ 2 ಹೆಣ್ಣು ಮಕ್ಕಳಿಗೆ ಪ್ರಸಕ್ತ ಸಾಲಿನಲ್ಲಿ ಏಪ್ರೀಲ್  2024 ರ ನಂತರ ಪರಿಪಕ್ವ ಮೊತ್ತವನ್ನು ಭಾರತೀಯ ಜೀವ ವಿಮಾ ನಿಗಮದಿಂದ ನೀಡುವ ಸಂಬಂಧ ಅರ್ಹ ಫಲಾನುಭವಿಗಳ ಪೋಷಕರು ಅಗತ್ಯ ದಾಖಲೆಗಳನ್ನು ಸಂಬಂಧಿಸಿದ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸಲ್ಲಿಸಿ, ಭಾಗ್ಯಲಕ್ಷ್ಮೀ  ಯೋಜನೆಯ ಪರಿಪಕ್ವ ಮೊತ್ತವನ್ನು ಪಡೆದುಕೊಳ್ಳಬೇಕೆಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಈ ಪರಿಪಕ್ವ ಮೊತ್ತ ಪಾವತಿಸಲು ಇಲಾಖೆಯಿಂದ ಯಾವುದೇ ಶುಲ್ಕ ಇರುವುದಿಲ್ಲ. ಸಂಪೂರ್ಣವಾಗಿ ಉಚಿತವಾಗಿ ಪಾವತಿಸಲಾಗುತ್ತದೆ. ಒಂದು ವೇಳೆ ಈ ಬಗ್ಗೆ ಯಾರಾದರೂ ಹಣ ಕೇಳಿದರೆ ಕಚೇರಿಯ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಬಹುದಾಗಿದೆ.

Bhagyalakshmi Bond status

ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಅಫಜಲ್ಪುರ, ಆಳಂದ, ಚಿಂಚೋಳಿ, ಚಿತ್ತಾಪುರ, ಕಲಬುರಗಿ (ಗ್ರಾಮೀಣ), ಕಲಬುರಗಿ (ನಗರ), ಜೇವರ್ಗಿ, ಸೇಡಂ ಮತ್ತು ಶಹಾಬಾದಗಳಲ್ಲಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಕಚೇರಿ ಅವಧಿಯಲ್ಲಿ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.

Bhagyalakshmi Bond status ಭಾಗ್ಯಲಕ್ಷ್ಮೀ ಬಾಂಡ್ ನಿಂದ ಎಷ್ಟು ಹಣ ಸಿಗಲಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಭಾಗ್ಯಲಕ್ಷ್ಮೀ ಬಾಂಡ್ ಪಡೆದ ಪಾಲಕರು ತಮ್ಮ ಮಗಳಿಗೆ ಯಾವಾಗ ಎಷ್ಟು ಹಣ ಸಿಗಲಿದೆ ಎಂಬುದನ್ನು ಚೆಕ್ ಮಾಡಲು ಈ

http://blakshmi.kar.nic.in:8080/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭಾಗ್ಯಲಕ್ಷ್ಮೀ ಸ್ಟೇಟಸ್ ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಭಾಗ್ಯಲಕ್ಷ್ಮೀ ಯೋಜನೆಯ ಕುರಿತಂತೆ ನಿಮಗೆ ಮಾಹಿತಿ ಕಾಣಿಸುತ್ತದೆ.

Bhagyalakshmi scheme status  ಭಾಗ್ಯಲಕ್ಷ್ಮೀ  ಯೋಜನೆ ಸ್ಟೇಟಸ್

Bhagyalakshmi Bond status ಚೆಕ್ ಮಾಡಲು ಮೇಲ್ಗಡೆ Home ಪಕ್ಕದಲ್ಲಿರುವ query/search ಕೆಳಗಡೆ ಕಾಣುವ Multi Search ಮೇಲೆ ಕ್ಲಿಕ್ ಮಾಡಬೇಕು.

ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ District ನಲ್ಲಿ ನಿಮ್ಮ ಜಿಲ್ಲೆ, Project ನಲ್ಲಿ ತಾಲೂಕು, cercle ನಲ್ಲಿ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಮಗುವಿನ ಹೆಸರು ನಮೂದಿಸಬೇಕು. ಹುಟ್ಟಿದ ದಿನಾಂಕ ನಮೂದಿಸಿ ಅಲ್ಲಿ ಕಾಣುವ ಕೋಡ್ ನಂಬರ್ ನ್ನು ಕೆಳಗಡೆ ಇಮೇಜ್ ಕೋಡ್ ಬಾಕ್ಸ್ ನಲ್ಲಿ ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ PM kisan list released ಪಿಎಂ ಕಿಸಾನ್ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ 2024

ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ Child Id ಕೆಳಗಡೆ ಕಾಣುವ ನಂಬರ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಮತ್ತೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಭಾಗ್ಯಲಕ್ಷ್ಮೀ ಬಾಂಡ್ ಸ್ಟೇಟಸ್ ಮಾಹಿತಿ ಕಾಣುತ್ತದೆ.

Bhagyalakshmi Bond status ಭಾಗ್ಯಲಕ್ಷ್ಮೀ ಬಾಂಡ್ ಸ್ಟೇಟಸ್ ನಲ್ಲಿ ಏನೇನು ಮಾಹಿತಿ ಇರುತ್ತದೆ?

ಸ್ಟೇಟಸ್ ನಲ್ಲಿ ಬಾಂಡ್ ವಿತರಿಸಲಾಗಿದೆಯೋ ಇಲ್ಲವೋ?  ಎಲ್ಐಸಿಯಿಂದ ಪ್ರಿಂಟ್ ಆಗಿದೆಯೋ ಇಲ್ಲವೋ? ಜಿಲ್ಲೆ, ತಾಲೂಕು, ಗ್ರಾಮ, ಮಗುವಿನ ಹೆಸರು, ತಂದೆ ತಾಯಿಯ ಹೆಸರು, ಯಾವ ವರ್ಗಕ್ಕೆ ಮಗು ಸೇರಿದೆ?  ಭಾಗ್ಯಲಕ್ಷ್ಮೀ ಪಾಲಿಸಿ ಮಾಡಿಸುವಾಗ ತಂದೆ ತಾಯಿಯ ವಯಸ್ಸು ಎಷ್ಟಿತ್ತು. ಮಗುವಿನ ಹೆಸರಿಗೆ ಎಷ್ಟು ಹಣ ಜಮೆ ಮಾಡಲಾಗುವುದು. ಹಾಗೂ ಚೆಕ್ ನಂಬರ್ ಸೆರಿದಂತೆ ಇನ್ನಿತರ ಮಾಹಿತಿ ಇರುತ್ತದೆ.

Bhagyalakshmi Bond status ಭಾಗ್ಯಲಕ್ಷ್ಮೀ ಯೋಜನೆಯಡಿ ಮಗುವಿನ ಹೆಸರಿಗೆ ಎಷ್ಟು ಠೇವಣಿ ಜಮೆ

ಭಾಗ್ಯಲಕ್ಮೀ ಯೋಜನೆಯನ್ನು ಆಗಸ್ಟ್ 2008 ರಲ್ಲಿ ಮಾರ್ಪಡಿಸಲಾಗಿದೆ. ಮಾರ್ಪಡಿಸಿದ ದಿನಾಂಕ 1-8-2008 ರ ನಂತರ ಭಾಗ್ಯಲಕ್ಷ್ಮೀ ಯೋಜನೆಯಡಿ ನೋಂದಣಿಯಾದ ಕುಟುಂಬದ ಮೊದಲ  ಮಗುವಿನ ಹೆಸರಿನಲ್ಲಿ 19300 ರೂಪಾಯಿ ಹಾಗೂ ಎರಡನೇ ಮಗುವಿನ ಹೆಸರಿನಲ್ಲಿ 18350 ರೂಪಾಯಿ ಮೊತ್ತವನ್ನು ಠೇವಣಿ ಮಾಡಲಾಗಿರುತ್ತದೆ. ಮೊದಲು 10 ಸಾವಿರ ರೂಪಾಯಿ ಠೇವಣಿ ಇಡಾಗುತ್ತಿತ್ತು. 18 ವರ್ಷ ಪೂರ್ಣಗೊಂಡು ನಿಬಂದನೆಗಳನ್ನು ಪೂರೈಸಿದ ಕುಟುಂಬದ ಮೊದಲನೇ ಫಲಾನುಭವಿಗೆ 100097 ರೂಪಾಯಿ ಹಾಗೂ ಎರಡನೇ ಫಲಾನುಭವಿಗೆ 100052 ರೂಪಾಯಿ ದೊರೆಯುತ್ತದೆ.

Leave a Comment