Birth death Registration app : ಜನನ ಮತ್ತು ಮರಣ ನೋಂದಣಿಗಳನ್ನು ಸರಳಗೊಳಿಸಲು ಸಿವಿಲ್ ರಿಜಿಸ್ಟ್ರೇಶನ್ ಸಿಸ್ಟಮ್ (ಸಿ.ಆರ್.ಎಸ್) ಮೊಬೈಲ್ ಆ್ಯಪ್ ನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದ್ದಾರೆ.
CRS App ಎಂದು ಕರೆಯಲ್ಪಡುವ ಮೊಬೈಲ್ ಅಪ್ಲಿಕೇಶನ್, ನಾಗರಿಕರು ಜನನ ಮತ್ತು ಮರಣಗಳನ್ನು ಎಲ್ಲಿಂದಲಾದರೂ ಯಾವುದೇ ಸಮಯದಲ್ಲೂ ನೋಂದಾಯಿಸಲು ಅನುವು ಮಾಡಿಕೊಡುತ್ತದೆ. ಅರ್ಥಾತ್ ಮನೆಯಿಂದಲೇ ಇನ್ನೂ ನೋಂದಣಿ ಮಾಡಬಹುದು.
ಇದು ನೋಂದಣಿಗಳನ್ನು ಡಿಜಿಟಲೀಕರಣ ಮಾಡುತ್ತದೆ ಹಾಗೂ ಈ ಪ್ರಕ್ರಿಯೆಯನ್ನು ಕಾಗದರಹಿತವಾಗಿಸುತ್ತದೆ. ರಿಜಿಸ್ಟ್ರಾರ್ ಜನರಲ್ ಮತ್ತು ಸೆನ್ಸಸ್ ಕಮಿಶನರ್ ಅವರು ಈ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ.
ಯಾವುದೇ ಸಮಯದಲ್ಲಿ ಯಾವುದೇ ಸ್ಥಳದಲ್ಲಿ ಮತ್ತು ಅವರ ರಾಜ್ಯದ ಅಧಿಕೃತ ಭಾಷೆಯಲ್ಲಿ ಜನನ- ಮರಣ ನೋಂದಾಯಿಸಲು ನಾಗರಿಕರಿಗೆ ಅವಕಾಶ ನೀಡಲಾಗಿದೆ. ಈ ಆ್ಯಪ್ ನೋಂದಣಿಗೆ ಬೇಕಾದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಶಾರವರು ಟ್ವಿಟ್ ನಲ್ಲಿ ತಿಳಿಸಿದ್ದಾರೆ.
Birth death Registration app ಆ್ಯಪ್ ಹೇಗೆ ಕೆಲಸ ಮಾಡಲಿದೆ?
ಮೊಬೈಲ್ ನಲ್ಲಿ ಜನನ ಮತ್ತು ಮರಣ ನೋಂದಣಿ ಮಾಡಿಸಲು ಗೂಗಲ್ ಪ್ಲೇ ಸ್ಟೋರ್ ನಿಂದ CRR ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಲಾಗಿನ್ ಪ್ರಕ್ರಿಯೆ ಪೂರ್ಣಗೊಳಿಸಲು ಆ್ಯಪ್ ಕ್ಯಾಪ್ಚ್ಯಾ ಕೋಡ್ ನೀಡುತ್ತದೆ. ಅದನ್ನು ನಮೂದಿಸಿದ ಬಳಿಕ ಎಸ್.ಎಂ.ಎಸ್ ಮೂಲಕ ಓಟಿಪಿ ಬರುತ್ತದೆ. ಓಟಿಪಿ ಹಾಕಿ ಲಾಗಿನ್ ಆಗುಬಹುದು.
ನಂತರ ಯೂಸರ್ ಐಡಿ, ಪಾಸ್ವರ್ಡ್ ದಾಖಲಿಸಬೇಕು. ನೈಜತೆ ಪರಿಶೀಲನೆಗಾಗಿ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಓಟಿಪಿ ಬರುತ್ತದೆ. ಅದನ್ನು ದೃಢೀಕರಿಸಬೇಕು. ಆ್ಯಪ್ ಓಪನ್ ಆದ ನಂತರ ಮುಖಪುಟ ಪರದೆಯಲ್ಲಿ ಪ್ರೊಫೈಲ್ ಜನನ, ಸಾವು, ಶುಲ್ಕ ಆಯ್ಕೆಗಳು ಕಾಣಿಸುತ್ತವೆ.
ಇದನ್ನೂ ಓದಿ : grahalakshmi 13th installment money ಗೃಹಲಕ್ಷ್ಮೀ 13ನೇ ಕಂತಿನ ಹಣ ಯಾವಾಗ ಜಮೆ? ಇಲ್ಲೇ ಚೆಕ್ ಮಾಡಿ
ಜನ್ಮವನ್ನು ನೋಂದಾಯಿಸಲು, ಜನನ ಮತ್ತು ನಂತರ ಜನನ ನೋಂದಣಿ ಆಯ್ಕೆ ಮಾಡಿ, ಮಗುವಿನ ಜನ್ಮ ದಿನಾಂಕ, ವಿಳಾಸ, ಕುಟುಂಬದ ಮಾಹಿತಿ ನಮೂದಿಸಿ. ಅಗತ್ಯ ದಾಖಲೆ ಲಗತ್ತಿಸಿ. ಮರಣವನ್ನು ನೋಂದಾಯಿಸಲು ಇದೇ ರೀತಿಯ ಪ್ರಕ್ರಿಯೆ ಮಾಡಿ. ಮರಣ ದಿನಾಂಕ, ವಿಳಾಸ, ಇತರ ಮಾಹಿತಿ ನೀಡಿ. ಅಗತ್ಯ ದಾಖಲೆ ಲಗತ್ತಿಸಿ. ಎಲ್ಲಾ ವಿವರ ನೀಡಿದ ನಂತರ ನಿಗದಿತ ಶುಲ್ಕವನ್ನು ಆನ್ಲೈನ್ ನಲ್ಲೇ ಕಟ್ಟಿದರೆ ಜನನ ಅಥವಾ ಮರಣದ ಡಿಜಿಟಲ್ ಪ್ರಮಾಣ ಪತ್ರ ಬರುತ್ತದೆ. ಅದನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಬಹುದು.
Birth death Registration app ನೀವು ಹುಟ್ಟಿದ ವಾರ ಯಾವುದು? ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ
ನೀವು ಯಾವ ವಾರ ಹುಟ್ಟಿದ್ದೀರಿ ಎಂಬುದನ್ನು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು ಈಗ ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ.? ಇಲ್ಲಿದೆ ನೋಡಿ ಮಾಹಿತಿ.
Birth death Registration app ನೀವು ಹುಟ್ಟಿದ ವಾರ ಯಾವುದು?ಚೆಕ್ ಮಾಡುವುದು ಹೇಗೆ?
ನೀವು ಯಾವ ವಾರ ಹುಟ್ಟಿದ್ದೀರಿ ಎಂಬುದನ್ನು ಚೆಕ್ ಮಾಡಲು ಈ
https://www.thecalculatorsite.com/misc/birthday-calculator.php
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೊಂದು ಪೇಜ್ ಓಪನ್ ಆಗುತ್ತದೆ. ಹೌದು, ನಿಮಗೆ Birthday Calculator ಪೇಜ್ ಕಾಣಿಸುತ್ತದೆ., ಅಲ್ಲಿ ಯಾವ ತಿಂಗಳಲ್ಲಿ ಯಾವ ದಿನಾಂಕ ಹಾಗೂ ಯಾವ ವರ್ಷದಲ್ಲಿ ನಿಮ್ಮ ಜನನವಾಗಿದೆ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ calculator ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಯಾವ ವಾರ ಹುಟ್ಟಿದ್ದೀರಿ? ನಿಮಗೆ ಎಷ್ಟು ವರ್ಷ, ಎಷ್ಟು ತಿಂಗಳು ಹಾಗೂ ಎಷ್ಟು ದಿನ ಆಗಿದೆ ಎಂಬ ಮಾಹಿತಿ ಕಾಣಿಸುತ್ತದೆ. ಅದರ ಕೆಳಗಡೆ ನಿಮ್ಮ ರಾಶಿ ಚಕ್ರ ಯಾವುದು ಎಂಬ ಮಾಹಿತಿ ಸಹ ಕಾಣಿಸುತ್ತದೆ. ಅದರ ಕುರಿತು ಮಾಹಿತಿ ಸಹ ನೀಡಲಾಗಿರುತ್ತದೆ.