Cashless treatment scheme : ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರದ ಜಾರಿಗೆ ತಂದಿದೆ. ಹೌದು, ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ ನೀಡುವ ಯೋಜನೆಯನ್ನು ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ.
Cashless treatment scheme ಎಷ್ಟು ರೂಪಾಯಿಯವರೆಗೆ ಚಿಕಿತ್ಸೆ
ಈ ಯೋಜನೆಯಡಿಯಲ್ಲಿ ಅಪಘಾತದಲ್ಲಿ ಗಾಯಗೊಂಡವರಗೆ 7 ದಿನಗಳ ಕಾಲ 1.5 ಲಕ್ಷ ರೂಪಾಯಿಯವರೆಗೆ ನಗದು ರಹಿತವಾಗಿ ಚಿಕಿತ್ಸೆನೀಡಲಾಗುತ್ತದೆ. ಅಪಘಾತ ಸಂಭವಿಸಿದ 24 ಗಂಟೆಯೊಳಗಾಗಿ ಪೋಲೀಸರು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಹೇಳಿದ್ದಾರೆ.
ಅಲ್ಲದೆ, ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಕ್ಕೂ 2 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ನಿತಿನ್ ಗಡ್ಕರಿ ಘೋಷಿಸಿದ್ದಾರೆ.
ಅಪಘಾತ ಸಂಭವಿಸಿದ 24 ಗಂಟೆಗಳೊಳಗೆ ಗಾಯಾಳುಗಳ ಚಿಕಿತ್ಸೆಗೆ ನಾನು Cashless treatment scheme ಹೊಸ ಯೋಜನೆ ಆರಂಭಿಸಿದ್ದೇವೆ. ಪೊಲೀಸರಿಂದ ಮಾಹಿತಿ ಬಂದ ಕೂಡಲೇ1.5 ಲಕ್ಷ ರೂಪಾಯಿಯವರೆಗೆ ನಾವು 7 ದಿನಗಳ ಕಾಲ ಚಿಕಿತ್ಸೆಗೆ ಹಣ ಒದಗಿಸಲಿದ್ದೇವೆ. ಹಿಟ್ ಆ್ಯಂಡ್ ರನ್ ಪ್ರಕರಣಗಳಲ್ಲಿ ಮೃತಪಟ್ಟವರ ಕುಟುಂಬಕ್ಕೂ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
Cashless treatment scheme 2024 ರಲ್ಲಿ ರಸ್ತೆ ಅಪಘಾತದಲ್ಲಿ ಎಷ್ಟು ಜನ ಸಾವನ್ನಪ್ಪಿದ್ದರು?
ರಸ್ತೆ ಸುರಕ್ಷತೆಯು ಸರ್ಕಾರದ ಅತ್ಯುನ್ನತ ಆದ್ಯತೆಯಾಗಿದೆ. 2024 ರಲ್ಲಿ 1.84 ಲಕ್ಷ ಜನ ರಸ್ತೆ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ ಎಂಬ ಆಘಾತಕಾರಿ ಅಂಕಿ ಅಂಶ ಉಲ್ಲೇಖಿಸಿದ ಅವರು 30 ಸಾವಿರ ಜನ ಹೆಲ್ಮೆಟ್ ಧರಿಸದೆ ಮೃತಪಟ್ಟಿದ್ದಾರೆ. ಅಪಘಾತಕ್ಕೀಡಾಗಿದವರಲ್ಲಿ ಶೇ. 66 ರಷ್ಟು ಜನ 18 ರಿಂದ 24 ವಯೋಮಾನದವರಾಗಿದ್ದರು ಎಂದರು.
ಇದನ್ನೂ ಓದಿ : How to do crop survey ಮೊಬೈಲ್ ನಲ್ಲಿ ಹೀಗೆ ಬೆಳೆ ಸಮೀಕ್ಷೆ ಮಾಡಿ 2025
ಶಾಲೆ ಮತ್ತು ಕಾಲೇಜುಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಸೂಕ್ತವ್ಯವಸ್ಥೆ ಇಲ್ಲದೆ 10 ಸಾವಿರ ಮಕ್ಕಳು ಮೃತಪಟ್ಟಿದ್ದಾರೆ ಎಂದು ಗಡ್ಕರಿ ಹೇಳಿದರು. ಶಾಲಾಬಸ್ ಮತ್ತು ಆಟೋಗಳಿಗೆ ನಿಯಮ ರೂಪಿಸಲಾಗಿದೆಎಂದರು.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಾರಿಗೆ ಸಚಿವರ ಜೊತೆಗಿನ ಸಭೆ ಬಳಿಕ ಗಡ್ಕರಿ ಈ ಘೋಷಣೆಗಳನ್ನು ಮಾಡಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ಅಂತಿಮ ಆಯ್ಕೆ ಪಟ್ಟಿ ಪ್ರಕಟ
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಸಲ್ಲಿಸಿದ ಅಭ್ಯರ್ಥಿಗಳ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಲಾಗಿದೆ. ನಿಮ್ಮ ಹೆಸರು ಹೀಗೆ ಚೆಕ್ ಮಾಡಿ.
ಕಲಬುರಗಿ ಜಿಲ್ಲೆಯ ಅಫಜಲ್ಪುರ, ಚಿಂಚೋಳಿ, ಚಿತ್ತಾಪುರ, ಕಲಬುರಗಿ ಗ್ರಾಮಾಂತರ, ಕಲಬುರಗಿ ನಗರ, ಜೇವರ್ಗಿ, ಸೇಡ ಹಾಗೂ ಶಹಾಬಾದ್ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ವಿವಿಧ ಕಾರಣಗಳಿಂದ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಹುದ್ದೆಗಳಿಗೆ 2022-23ನೇ ಸಾಲಿನಲ್ಲಿ (141 ಮತ್ತು465 ಹುದ್ದೆಗಳಿಗೆ) ಒಂದು ಬಾರಿಗೆ ಆಫಲೈನ್ ಮೂಲಕ ಅರ್ಜಿ ಆಹ್ವಾನಿಸಿ ದಿನಾಂಕ02-01-2025 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಆಯ್ಕೆ ಸಮಿತಿ ಸಭೆ ನಡೆಸಿ, ಅಭ್ಯರ್ಥಿಗಳು ಸಲ್ಲಿಸಿದ ದಾ ಖಲಾತಿಗಳ ಆಧಾರದ ಮೇಲೆ ಅಂತಿಮವಾಗಿ ತಾತ್ಕಾಲಿವಾಗಿ ಆಯ್ಕೆ ಪಟ್ಟಿ ಹೊರಡಿಸಲಾಗಿದೆ.
ಈ ಅಭ್ಯರ್ಥಿಗಳ ಪಟ್ಟಿಯನ್ನು ಸಂಬಂಧಪಟ್ಟ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸೂಚನಾ ಫಲಕಕ್ಕೆ ಪ್ರಕಟಿಸಲಾಗಿದ್ದು, ಈ ತಾತ್ಕಾಲಿಕ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕ್ಷೇಪಣೆ ಇದ್ದಲ್ಲಿ 7 ದಿನದೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ ಎಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ತಾತ್ಕಾಲಿಕ ಅಂತಿಮಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಧ್ಯವರ್ತಿಗಳು ಮತ್ತು ಇತರೆ ಬೇರೆ ಯಾರಾದರೂ ಇಲಾಖೆಯ ಸಿಬ್ಬಂದಿಗಳ ಹೆಸರು ಹೇಳಿ ಹಣ ಕೇಳಿದ್ದಲ್ಲಿ ತಕ್ಷಣ ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ದೂರವಾಣಿ ಸಂಖ್ಯೆ 08472 278659 ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕು ಅಥವಾ ಕಚೇರಿಗೆ ದೂರು ಸಲ್ಲಿಸಬಹುದು ಎಂದು ಅವರು ತಿಳಿಸಿದ್ದಾರೆ.