Check crop insurance money ರೈತರ ಈ ಬೆಳೆಗಳಿಗೆ ಇಷ್ಟು ವಿಮೆ ಹಣ ಜಮೆ? ಹೀಗೆ ಚೆಕ್ ಮಾಡಿ 2024

Written by Admin

Published on:

Spread the love

Check crop insurance money : ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಸಲಿಚ್ಚಿಸುವ ರೈತರು ಯಾವ ಬೆಳೆಗೆ ವಿಮೆ ಮಾಡಿಸಿದರೆ ಎಷ್ಟು ವಿಮೆ ಹಣ ಜಮೆಯಾಗಬಹುದು ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ರೈತರು, ಬೆಳೆ ವಿಮೆ ಮಾಡಿಸುವ ಮುನ್ನ ತಾವು ಯಾವ ಬೆಳೆಗೆ ವಿಮೆ ಹಣ ಪಾವತಿಸುತ್ತಿದ್ದಾರೆ? ಎಷ್ಟು ವಿಮೆ ಹಣ ಪಾವತಿಸುತ್ತಿದ್ದಾರೆ? ಯಾವ ವಿಮಾ ಕಂಪನಿಗೆ ವಿಮೆ ಹಣ ಕಟ್ಟುತ್ತಿದ್ದಾರೆ ಎಂಬುದನ್ನೆಲ್ಲಾ ತಿಳಿದುಕೊಳ್ಳಬೇಕಾಗುತ್ತದೆ. ಹಾಗಾದರೆ ಮೇಲೆ ತಿಳಿಸಿದ ಮಾಹಿತಿಗಳನ್ನು ಎಲ್ಲಿ ಚೆಕ್ ಮಾಡಬೇಕು ಹೇಗೆ  ಚೆಕ್ ಮಾಡಬೇಕು ಎಂಬ ನಿಮ್ಮಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

Check crop insurance money

Check crop insurance money ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗಲಿದೆ ಚೆಕ್ ಮಾಡುವುದು  ಹೇಗೆ?

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ರೈತರು ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಿದರೆ  ಎಷ್ಟು ವಿಮೆ ಹಣ  ಜಮೆಯಾಗಲಿದೆ  ಎಂಬುದನ್ನು ಚೆಕ್ ಮಾಡಲು ಈ

https://samrakshane.karnataka.gov.in/Premium/Crops_You_Can_Insure.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಸಂರಕ್ಷಣೆಯ  crop you can Insure  ಎಂಬ ಪೇಜ್ ತೆರೆದುಕೊಳ್ಳುತ್ತದೆ. ಒಂದು ವೇಳೆ ನಿಮಗೆ ಮೇಲಿನ ಲಿಂಕ್ ಓಪನ್ ಆಗದಿದ್ದರೆ ಈ

https://samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ಅಲ್ಲಿ ತೆರೆದುಕೊಳ್ಳುವ ಪೇಜ್ ನಲ್ಲಿಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಲು ಅರ್ಜಿ ಆಹ್ವಾನಿಸಿದ್ದರಿಂದ  Kharif  ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ / Go ಮೇಲೆ ಕ್ಲಿಕ್ ಮಾಡಬೇಕು. ನಂತರ ಫಾರ್ಮರ್ಸ್ ಕೆಳಗಡೆ ಕಾಣುವ Crop you can Insure ಮೇಲೆ ಕ್ಲಿಕ್ ಮಾಡಬೇಕು. Crop you can Insure ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದಾದ ನಂತರ ನೀವು Display ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ಆಗ ನೀವು ಯಾವ ಯಾವ ಯಾವ ಬೆಳೆಗಳಿಗೆ ಎಷ್ಟು ವಿಮೆ ಹಣ ಜಮೆಯಾಗಲಿದೆ ಎಂಬ ಮಾಹಿತಿ ಕಾಣಿಸುತ್ತದೆ. ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಊರು,  ಕಾಣಿಸುತ್ತದೆ. ಅದರ  ಬೆಳೆಗಳ ಹೆಸರು, ಎಷ್ಟು ವಿಮೆ ಹಣ ಜಮೆಯಾಗಲಿದೆ ಎಂಬ ಮಾಹಿತಿ ಕಾಣಿಸುತ್ತದೆ.

Check crop insurance money  ಬೆಳೆ ಹಾನಿಯಾದರೆ ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗಲಿದೆ?

ಪ್ರಾಕೃತಿಕ ವಿಕೋಪ ಅಂದರೆ ಅತೀವೃಷ್ಟಿ, ಅನಾವೃಷ್ಟಿ, ಬರಗಾಲ, ಭೂ ಕುಸಿತ, ಗುಡುಗು ಸಿಡಿಲಿನಿಂದ ಬೆಳೆ ಹಾನಿಯಾದರೆ ಮಾತ್ರ  ವಿಮೆ ಹಣ ರೈತರಿಗೆ ಜಮೆ ಆಗಲಿದೆ.  ಹೌದು, ಇದಕ್ಕಾಗಿ ನೀವು ಬೆಳೆ ಹಾಳಾದ ನಂತರ ವಿಮಾ ಕಂಪನಿಗೆ ತಿಳಿಸಬೇಕಾಗುತ್ತದೆ.

ಉದಾಹರಣೆಗೆ ನೀವು ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನವರಾಗಿದ್ದರೆ  ತೊಗರಿ ಬೆಳೆಗೆ ಪ್ರತಿ ಹೆಕ್ಟೇರಿಗೆ 48 ಸಾವಿರ ರೂಪಾಯಿಯವರೆಗೆ ಬೆಳೆ ವಿಮೆ ಹಣ ಜಮೆಯಾಗಲಿದೆ.

Check crop insurance

ಪಪ್ಪಾಯ ಬೆಳೆಗೆ 1 ಲಕ್ಷ 34 ಸಾವಿರ ರೂಪಾಯಿಯವರೆಗೆ ಬೆಳೆ ವಿಮೆ ಹಣ ಜಮೆಯಾಗಲಿದೆ. ಅದೇ ರೀತಿ ನೀರಾವರಿ ಭತ್ತ ಬೆಳೆಗೆ ವಿಮೆ ಮಾಡಿಸಿದ್ದರೆ ಪ್ರತಿ ಹೆಕ್ಟೇರಿಗೆ 93250 ರೂಪಾಯಿಯವರೆಗೆ ಹಣ ಜಮೆಯಾಗಲಿದೆ.

Check crop insurance money ಮೆಣಸಿನ ಕಾಯಿಗೆ ಎಷ್ಟು ವಿಮೆ ಹಣ ಜಮೆಯಾಗಲಿದೆ?

ಮೆಣಸಿನ ಕಾಯಿಗೆ ಬೆಳೆ ವಿಮೆ ಮಾಡಿಸಿದ್ದರೆ 71 ಸಾವಿರ ರೂಪಾಯಿಯವರೆಗೆ ವಿಮೆ ಹಣ ಜಮೆಯಾಗಲಿದೆ. ಅದೇ ರೀತಿ ಉದ್ದಿನಬೆಳೆಗೆ ವಿಮೆ ಮಾಡಿಸಿದ್ದರೆ ಪ್ರತಿ ಹೆಕ್ಟೇರಿಗೆ 32750 ರೂಪಾಯಿ ಹಣ ಜಮೆಯಾಗಲಿದೆ. ಸೂರ್ಯಕಾಂತಿ ಬೆಳೆಗೆ ವಿಮೆ ಮಾಡಿಸಿದ್ದರೆ ಪ್ರತಿ ಹೆಕ್ಟೇರಿಗೆ 40 ಸಾವಿರ ರೂಪಾಯಿಯವರೆಗೆ ವಿಮೆ ಹಣ ಜಮೆಯಾಗಲಿದೆ.

ಇದನ್ನೂ ಓದಿ : land RTC mutation check ಪಹಣಿ, ಮುಟೇಶನ್ ಮೊಬೈಲ್ ನಲ್ಲೇ ಚೆಕ್ ಮಾಡಿ 2024

ಹತ್ತಿ ಬೆಳೆಗೆ ವಿಮೆ ಮಾಡಿಸಿದ್ದರೆ ಪ್ರತಿ ಹೆಕ್ಟೇರಿಗೆ 49 ಸಾವಿರ ರೂಪಾಯಿಯವರೆಗೆ ಬೆಳೆ ವಿಮೆ ಹಣ ಜಮೆಯಾಗಲಿದೆ. ಅದೇ ರೀತಿ ಹೆಸರು ಬೆಳೆಗೆ ವಿಮೆ ಮಾಡಿಸಿದ್ದರೆ 33 ಸಾವಿರ ರೂಪಾಯಿಯವರೆಗೆ ರೈತರ ಖಾತೆಗೆ ಹಣ ಜಮೆಯಾಗಲಿದೆ.

ಒಟ್ಟಿನಲ್ಲಿ ರೈತರು ಮೊದಲು ಯಾವ ವಿಮಾ ಕಂಪನಿಗೆ ಹಣ ಪಾವತಿಸುತ್ತಿದ್ದಾರೆ ಆ ವಿಮಾ ಕಂಪನಿಯ ಸಿಬ್ಬಂದಿ ನಂಬರ್ ಪಡೆದುಕೊಳ್ಳುವುದು ಅತೀ ಮಹತ್ವದ್ದಾಗಿದೆ.

Leave a Comment