check crop loan ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಇಲ್ಲೇ ಚೆಕ್ ಮಾಡಿ 2024

Written by Admin

Published on:

Spread the love

check crop loan : ಸರ್ವೆ ನಂಬರ್ ಹಾಕಿ ರೈತರು ತಮ್ಮ ಯಾವ ಜಮೀನಿನ ಮೇಲೆ ಎಷ್ಟು ಸಾಲವಿದೆ ಎಂಬುದನ್ನು ಚೆಕ್ ಮಾಡಬಹುದು. ಹೌದು, ಈಗ ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

check crop loan ರೈತರು ಯಾವ ಬ್ಯಾಂಕಿನಿಂದ ಸಾಲ ಪಡೆಯಲಾಗಿದೆ ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ

ರೈತರು ತಮ್ಮ ಜಮೀನಿನ ಮೇಲೆ ಎಷ್ಟು ಸಾಲ check crop loan ಪಡೆಯಾಲಾಗಿದೆ ಎಂಬುದನ್ನು ಚೆಕ್ ಮಾಡಲು ಸರ್ವೆ ನಂಬರ್ ಬಳಸಬೇಕಾಗುತ್ತದೆ.  ಸರ್ವೆ ನಂಬರ್ ಹಾಕಿ ಚೆಕ್ ಮಾಡಲು ಈ

https://landrecords.karnataka.gov.in/Service2/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ಆನ್ಲೈನ್ ಲ್ಯಾಂಡ್ ರಿಕಾರ್ಡ್ಸ್ ವೀವ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಯಾವ ಜಿಲ್ಲೆಗೆ ಸಂಬಂಧಿಸಿದ್ದಾರೋ ಆ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದಾದನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಹೋಬಳಿ ಸೆಲೆಕ್ಟ್ ಮಾಡಿ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ಜಾವ ಜಮೀನಿನ ಅಂದರೆ ಮೇಲೆ ಸಾಲ ತೆಗೆದುಕೊಳ್ಳಲಾಗಿದೆ ಎಂಬುದನ್ನು ಚೆಕ್ ಮಾಡಲು ಆ ಸರ್ವೆ ನಂಬರ್ ಹಾಕಬೇಕು.

ನಂತರ Go ಮೇಲೆ ಕ್ಲಿಕ್ ಮಾಡಬೇಕು. ಇದಾದ ಮೇಲೆ surnoc ನಲ್ಲಿ * ಆಯ್ಕೆ ಮಾಡಿಕೊಳ್ಳಬೇಕು. Hissa Number ನಲ್ಲಿಯೂ * ಆಯ್ಕೆ ಮಾಡಿಕೊಳ್ಳಬೇಕು. ನಂತರ ಪಿರಿಯಡ್ ನಲ್ಲಿ2023-2024 ಆಯ್ಕೆ ಮಾಡಿಕೊಂಡು ಇಯರ್ ನಲ್ಲಿಯೂ 2023-2024 ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ Fetch details ಮೇಲೆ ಕ್ಲಿಕ್ ಮಾಡಬೇಕು.

check crop loan ರೈತರಿಗೆ ಯಾವ ಯಾವ ಮಾಹಿತಿ ಸಿಗಲಿದೆ?

ರೈತರು ತಾವು ನಮೂದಿಸಿದ ಸರ್ವೆ ನಂಬರ್ ನಲ್ಲಿ ಯಾವ ಯಾವ ಜಮೀನಿ

check crop loan

ನ ಮಾಲಿಕರು ಬರುತ್ತಾರೋ ಆ ರೈತರ ಹೆಸರು ಕಾಣುತ್ತದೆ. ಹಾಗೂ ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಹಾಗೂ ಖಾತಾ ನಂಬರ್ ಮಾಹಿತಿ ಕಾಣುತ್ತದೆ. ಇದಾದ ಮೇಲೆ ಅಲ್ಲಿ ಕಾಣುವ View ಮೇಲೆ ಕ್ಲಿಕ್ ಮಾಡಬೇಕು. ಆಗ ಆರ್.ಟಿಸಿ (ಪಹಣಿ) ಪೇಜ್ ತೆರೆದುಕೊಳ್ಳುತ್ತದೆ.

ನೀವು  ನಮೂದಿಸಿದ ಸರ್ವೆ ನಂಬರಿನಲ್ಲಿ ಯಾವ ಯಾವ ರೈತರು ಬರುತ್ತಾರೆ. ಎಂಬ ಮಾಹಿತಿಯೊಂದಿಗೆ ಆ ರೈತರ ಜಮೀನು ಜಂಟಿಯಾಗಿದೆಯೋ ಅಥವಾ ಪ್ರತ್ಯೇಕವಾಗಿದೆಯೋ ಎಂಬ ಮಾಹಿತಿ ಇರುತ್ತದೆ. ಇದರೊಂದಿಗೆ 11ನೇ ಕಾಲಂನಲ್ಲಿ ಋಣಗಳು ಕಾಲಂ ಕೆಳಗಡೆ ಯಾವ ಬ್ಯಾಂಕಿನಿಂದಎಷ್ಟು ಸಾಲ ಪಡೆಯಲಾಗಿದೆ.  ಎಂಬ ಮಾಹಿತಿ ಇರುತ್ತದೆ.

ಇದನ್ನೂ ಓದಿ Pm kisan new list ಈ ಪಟ್ಟಿಯಲ್ಲಿರುವ ರೈತರಿಗೆ ಮಾತ್ರ ಪಿಎಂ ಕಿಸಾನ್ ಹಣ ಜಮೆ 2024

ಒಂದು ವೇಳೆ ನೀವು ಸಾಲ ಮರುಪಾವತಿಸಿದ್ದರೂ ಪಹಣಿಯಲ್ಲಿ ಸಾಲದ ಮಾಹಿತಿ ಕಾಣುತ್ತಿದ್ದರೆ ನೀವು ಯಾವ ಬ್ಯಾಂಕಿನಿಂದ ಸಾಲ ಪಡೆಯಲಾಗಿದೆಯೋ ಆ ಬ್ಯಾಂಕಿಗೆ ತೆರಳಿ ಈ ಕುರಿತು ಮಾಹಿತಿ ನೀಡಬೇಕು. ಅಲ್ಲಿ ಸಾಲ ಮರುಪಾವತಿಸಲಾಗಿದೆ ಎಂಬ ನೋ ಡ್ಯೂ ಸರ್ಟಿಫಿಕೇಟ್ ಪಡೆದುಕೊಂಡು ನಿಮ್ಮ ಕಂದಾಯ ಇಲಾಖೆಯಲ್ಲಿ ಸಲ್ಲಿಸಿ ಋಣವನ್ನು ತೆಗೆಸಬಹುದು.

check crop loan ಪಹಣಿಯಲ್ಲಿ ಏನೇನು ಮಾಹಿತಿ ಇರುತ್ತದೆ?

ರೈತರ ಪ್ರಮುಖ ದಾಖಲೆಯಲ್ಲಿ ಒಂದಾದ ಪಹಣಿಯಲ್ಲಿ ರೈತರು ತಮಗೆ ಗೊತ್ತಿಲ್ಲದೆ ಬೇರೆಯವರು ಸಾಲ ಪಡೆದಿದ್ದರೂ ಗೊತ್ತಾಗುತ್ತದೆ. ರೈತರು ತಮ್ಮ ಪಹಣಿಯನ್ನು ಚೆಕ್ ಮಾಡಿ ಸಾಲ ಸೇರಿದಂತೆ ಇನ್ನಿತರ ಮಾಹಿತಿಯನ್ನು ಮನೆಯಲ್ಲಿಯೇ ಕುಳಿತು ಚೆಕ್ ಮಾಡಬಹುದು. ಇದಕ್ಕಾಗಿ ರೈತರು ಯಾವ ಕಚೇರಿಗೂ ಹೋಗಬೇಕಿಲ್ಲ. ಮೊಬೈಲ್ ನಲ್ಲಿ ಕೇವಲ ಸರ್ವೆ ನಂಬರ್ ನಮೂದಿಸಿದರೆ ಸಾಕು ಪಹಣಿಯ ಮಾಹಿತಿಯನ್ನು ಪಡೆಯಬಹುದು.

ರೈತರು ಮೇಲೆ ತಿಳಿಸಿದಂತೆ ಇತರ ಸರ್ವೆ ನಂಬರ್ ಗಳ ಮೇಲಿರುವ ಬೆೆೆಳೆ ಸಾಲದ ಮಾಹಿತಿಯನ್ನು ಚೆಕ್ ಮಾಡಬಹುದು.

Leave a Comment