Check FID Number : ರೈತರು ಈಗ ತಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ಎಫ್ಐಡಿ ಇದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ರೈತ ಮಿತ್ರರೆ, ಈಗ ಬೆಳೆ ಹಾನಿ ಪರಿಹಾರ, ಬರಗಾಲ ಪರಿಹಾರ, ಬೆಳೆ ವಿಮೆ ಪರಿಹಾರ ಹಾಗೂ ಬ್ಯಾಂಕುಗಳಿಂದ ರೈತರಿಗೆ ಸಾಲ ಸೌಲಭ್ಯ ಸಿಗಬೇಕಾದರೆ ಎಫ್ಐಡಿ ಇರುವುದು ಕಡ್ಡಾಯವಾಗಿದೆ. ರೈತರ ಹೆಸರಿಗೆ ಎಫ್ಐಡಿ ಇದ್ದರೆ ಮಾತ್ರ ರೈತರ ಬರ ಪರಿಹಾರ ಬೆಳೆ ವಿಮೆ ಸೇರಿದಂತೆ ಇನ್ನಿತರ ಸರ್ಕಾರದ ಸೌಲಭ್ಯಗಳು ಸಿಗುತ್ತವೆ.
ತೋಟಗಾರಿಕೆ, ಕೃಷಿ, ಪಶು ಸಂಗೋಪನೆ, ಮೀನುಗಾರಿಕೆ, ರೇಷ್ಮೆ ಇಲಾಖೆಯ ವತಿಯಿಂದ ಸಬ್ಸಿಡಿ ಪಡೆಯಲು ಎಫ್ಐಡಿ ಇರುವುದು ಕಡ್ಡಾಯವಾಗಿದೆ. ಹಾಗಾಗಿ ಒಮ್ಮೆ ನೀವು ನಿಮ್ಮ ಎಫ್ಐಡಿಯನ್ನು ಮೊಬೈಲ್ ನಲ್ಲಿ ಚೆಕ್ ಮಾಡಿ ನೋಡಿಕೊಳ್ಳಿ. ಚೆಕ್ ಮಾಡುವ ವಿಧಾನ ಇಲ್ಲಿದೆ.
ಕೃಷಿ ಇಲಾಖೆಯ ಬಳಿಯಿರುವ ರೈತರ ದಾಖಲೆಗಳ ಆಧಾರದ ಮೇಲೆ ಈಗಾಗಲೇ ಬಹಳಷ್ಟು ರೈತರ ಎಫ್ಐಡಿ ಮಾಡಲಾಗಿದೆ. ಆದರೂ ಸಹ ಇನ್ನೂ ಬಹಳಷ್ಟು ರೈತರಿಗೆ ಎಫ್ಐಡಿ ಆಗಿಲ್ಲ.ಹಾಗಾಗಿ ಒಮ್ಮೆ ಚೆಕ್ ಮಾಡಿ ನೋಡಬಹುದು.
Check FID Number ಆಧಾರ್ ನಂಬರ್ ಹಾಕಿ ಎಫ್ಐಡಿ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?
ಆಧಾರ್ ನಂಬರ್ ಹಾಕಿ ಮೊಬೈಲ್ ನಲ್ಲಿ ಎಫ್ಐಡಿ ಚೆಕ್ ಮಾಡಲು ಈ
https://fruitspmk.karnataka.gov.in/MISReport/GetDetailsByAadhaar.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಫ್ರೂಟ್ಸ್ ತಂತ್ರಾಂಶದ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಆಧಾರ್ ಕಾರ್ಡ್ ನಮೂದಿಸಬೇಕು. ನಂತರ Search ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ.
ಅಲ್ಲಿ ಫಾರ್ಮರ್ಸ್ ಡಿಟೇಲ್ಸ್ ಕೆಳಗಡೆ FruitID ಇರುತ್ತದೆ. ನಿಮ್ಮ ಎಫ್ಐಡಿ ಸಂಖ್ಯೆಯು FID ಇದ್ದು, ಅದರ ಮುಂದುಗಡೆ ಕೆಲವು ಅಂಕಿಗಳು ಇರುತ್ತದೆ. ಉದಾಹರಣೆಗೆ FID0395494984848484 ಹೀಗೆ ಇರುತ್ತದೆ. ಅದರ ಕೆಳಗಡೆ ಪಿಎಂಕೆಐಡಿ ಇರುತ್ತದೆ.
Check FID Number ಎಫ್ಐಡಿ ಆಗದಿದ್ದರೆ ರೈತರೇನು ಮಾಡಬೇಕು?
ಯಾವ ರೈತರಿಗೆ ಎಫ್ಐಡಿ ಆಗಿಲ್ಲವೋ ಆ ರೈತರು ಮೊಬೈಲ್ ನಲ್ಲೇ ಎಫ್ಐಡಿ ಗೆ ಅರ್ಜಿ ಸಲ್ಲಿಸಬಹುದು. ನಿಮಗೆ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಲು ಸಮಸ್ಯೆಯಾಗುತ್ತಿದ್ದರೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆ ಬೇಕು?
ಫ್ರೂಟ್ಸ್ ಐಡಿಗೆ ಅರ್ಜಿ ಸಲ್ಲಿಸಲು ರೈತರಿಗೆ ಮುಖ್ಯವಾಗಿ ಬೇಕಾಗಿರುವುದು ಆಧಾರ್ ಕಾರ್ಡ್. ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ ಬೇಕಾಗುತ್ತದೆ. ಜಮೀನಿಗೆ ಸಂಬಂಧಿಸಿದ ಸರ್ವೆ ನಂಬರ್ (ಆರ್.ಟಿ.ಸಿ) ಸಲ್ಲಿಸಬೇಕು.
ಇದನ್ನೂ ಓದಿ : Job card list ನಲ್ಲಿ ನಿಮ್ಮ ಹೆಸರಿದೆಯೇ ಮೊಬೈಲ್ ನಲ್ಲೇ ಚೆಕ್ ಮಾಡಿ 2024
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಆರ್.ಡಿ. ಸಂಖ್ಯೆಯಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಇತ್ತೀಚನ ಭಾವಚಿತ್ರ ಬೇಕಾಗುತ್ತದೆ.
Check FID Number ರೈತರೇಕೆ ಫ್ರೂಟ್ಸ್ ಐಡಿ ಮಾಡಿಸಬೇಕು?
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸೌಲಭ್ಯಗಳು ಸಿಗಬೇಕಾದರೆ ವಿವಿಧ ಇಲಾಖೆಗಳಿಂದ ಸಬ್ಸಿಡಿಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ಪಡೆಯಲು ಫ್ರೂಟ್ಸ್ ಐಡಿ ಇರಬೇಕು. ಇದರೊಂದಿಗೆ ರೈತರ ಎಲ್ಲಾ ಸರ್ವೆ ನಂಬರ್ ಗಳು ಫ್ರೂಟ್ಸ್ ಐಡಿಯಲ್ಲಿ ಆ್ಯಡ್ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು. ಹೆಸರು, ತಂದೆಯ ಹೆಸರು, ಬ್ಯಾಂಕ್ ಅಕೌಂಟ್, ಆಧಾರ್ ಕಾರ್ಡ್ ನಂಬರ್, ಮೊಬೈಲ್ ನಂಬರ್ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ದಾಖಲೆಗಳು ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು. ಇನ್ನೇಕೆ ತಡ ನಿಮ್ಮ ಬಳಿಯಿರುವ ಮೊಬೈಲ್ ನಲ್ಲಿ Check FID Number