Check land mutation status ಜಮೀನಿನ ಮೊಟೇಷನ್ ಮೊಬೈಲ್ ಪಡೆಯಿರಿ 2025

Written by Admin

Published on:

Spread the love

Check land mutation status : ರೈತರಿಗಿಲ್ಲಿದೆ ಸಂತಸದ ಸುದ್ದಿ. ರೈತರು ಈಗ ತಮ್ಮ ಜಮೀನಿನ ಮುಟೇಷನ್ ಪ್ರತಿಯನ್ನು ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲೇ ಪಡೆದುಕೊಳ್ಳಬಹುದು.

ಹೌದು, ಮುಟೇಷನ್ ಪ್ರತಿ ಪಡೆಯಲು ರೈತರೀಗ ಕಚೇರಿಗಳ ಮುಂದೆ ನಿಂತುಕೊಳ್ಳುವ ಅಗತ್ಯವಿಲ್ಲ. ಮನೆಯಲ್ಲಿಯೇ ಕುಳಿತು ಡೌನ್ಲೋಡ್ ಮಾಡಿಕೊಳ್ಳಬಹುದು. ಇದಕ್ಕೆ ರೈತರ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಕ್ಷಣಾರ್ಧದಲ್ಲಿ ಮುಟೇಷನ್ ಪಡೆದುಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ. ಇಲ್ಲಿದೆ ಸಂಪೂರ್ಣ ಮಾಹಿತಿ.

Check land mutation status  ರೈತರು ತಮ್ಮ ಜಮೀನಿನ ದಾಖಲೆಗಳನ್ನು ಆನ್ಲೈಲ್ ನಲ್ಲಿಯೇ ಪಡೆದುಕೊಳ್ಳಲು ಸರ್ಕಾರವು ಈಗ ಎಲ್ಲ ವ್ಯವಸ್ಥೆಯನ್ನು ಸರಳೀಕರಣಗೊಳಿಸಿದೆ. ಜಮೀನಿನ ಪೋಡಿ, ಜಮೀನಿನ ಸ್ಕೆಚ್, ಜಮೀನಿನ ಪಹಣಿ ಸೇರಿದಂತೆ ಇನ್ನಿತರ ದಾಖಲೆಗಳನ್ನು ನೋಡಲು ಯಾವ ಕಚೇರಿಗಳಿಗೂ ಹೋಗಬೇಕಿಲ್ಲ. ರೈತರಿಗೆ ಸ್ವಲ್ಪ ಮೊಬೈಲ್  ಮಾಹಿತಿಯಿದ್ದರೆ ಸಾಕು, ಮೊಬೈಲ್ ನಲ್ಲೇ ಜಮೀನಿನ ದಾಖಲೆಗಳನ್ನು ಪಡೆದುಕೊಳ್ಳಬಹುದು.

Check land mutation status ಆನ್ಲೈನ್ ನಲ್ಲೇ ಮುಟೇಷನ್ ಪಡೆದುಕೊಳ್ಳಉವುದು ಹೇಗೆ?

ರೈತರು ತಮ್ಮ ಜಮೀನಿನ ಮುಟೇಷನ್ ಪ್ರತಿಯನ್ನು ಆನ್ಲೈನ್ ನಲ್ಲಿ ಪಡೆದುಕೊಳ್ಳಲು ಈ

https://landrecords.karnataka.gov.in/Service11/MR_MutationExtract.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ಆನ್ಲೈನ್ ಮುಟೇಷನ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಹಾಗೂ ಸರ್ವೆ ನಂಬರ್ ಆಯ್ಕೆ ಮಾಡಿಕೊಳ್ಳಬೇಕು.  ನಂತರ Fetch Details ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಆಯ್ಕೆ ಮಾಡಿಕೊಂಡ ಸರ್ವೆನಂಬರ್ ಹಾಗೂ ಹಿಸ್ಸಾ ನಂಬರ್ ಪಟ್ಟಿ ಕಾಣುತ್ತದೆ. ಅಲ್ಲಿ ಮುಟೇಷನ್ ಯಾವರ ರೀತಿ ಆಗಿದೆ. ಹಾಗೂ ತಾಲೂಕಿನ ತಹಶೀಲ್ದಾರರು ಯಾವಾಗ ಅಪ್ರೂವ್ ಮಾಡಿದ್ದಾರೆ ಎಂಬ ಮಾಹಿತಿ ಕಾಣುತ್ತದೆ. ಕೆಳಗಡೆ ಸ್ಕ್ರೋಲ್ ಮಾಡಿದಾಗ ಎಲ್ಲಾ ಮಾಹಿತಿ ಕಾಣುತ್ತದೆ.

Check land mutation status
Check land mutation status

ನಿಮ್ಮ ಸರ್ವೆ ನಂಬರ್ ಮತ್ತು ಹಿಸ್ಸಾ ಇದ್ದರೆ ಅಲ್ಲಿ ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಬೇಕು,ನಂತರ ನೀವು ಯಾವ ಸರ್ವೆ ನಂಬರ್ ಮುಟೇಷನ್ ಪ್ರತಿ ನೋಡಬೇಕೆಂದುಕೊಂಡಿದ್ದೀರೋ ಅಲ್ಲಿ ಕಾಣುತ್ತದೆ. ಅಲ್ಲಿ ಕಾಣುವ ಪ್ರಿವಿವ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.  ಅದೇ ಮುಟೇಶನ್ ಪ್ರತಿಯಾಗಿರುತ್ತದೆ.

Check land mutation status ಮುಟೇಷನ್ ಪ್ರತಿಯಲ್ಲಿ ಏನೇನು ಮಾಹಿತಿ ಇರುತ್ತದೆ?

Check land mutation status ಮುಟೇಷನ್ ಪ್ರತಿಯಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಮುಟೇಷನ್ ಹೇಗಾಗಿದೆ? ಅಂದರೆ ಪಿತ್ರಾರ್ಜಿತವೋ, ಪೋಡಿಯಿಂದಾಗಿಯೋ, ಕೋರ್ಟ್ ಆದೇಶದಿಂದಾಗಿಯೋ ಪಹಣಿ ಬದಲಾವಣೆಯಾಗಿದೆಯೋ ಎಂಬ ಮೆಸೇಜ್ ಕಾಣುತ್ತದೆ. ಸರ್ವೆ ನಂಬರ್ ಎಷ್ಟು ಎಕರೆ ಹೊಂದಿದೆ ಎಂಬುದು ಕಾಣುತ್ತದೆ. ಇದರೊಂದಿಗೆ ಬ್ಯಾಂಕಿನಿಂದ ಸಾಲ ಪಡೆದಿದ್ದರೆ ಅದು ಸಹ ಕಾಣತ್ತದೆ ಸಹಕಾರ ಬ್ಯಾಂಕಿನಿಂದ ಸಾಲ ಪಡೆದಿದ್ದರೆ ಬ್ಯಾಂಕಿನ ಹೆಸರು, ಅದೇ ರೀತಿ ರಾಷ್ಟ್ರೀಕೃತ ಬ್ಯಾಂಕಿನಿಂದ ಸಾಲ ಪಡೆದಿದ್ದರೆ ಆ ಬ್ಯಾಂಕಿನ ಹೆಸರು ಹಾಗೂ ಎಷ್ಚು ಸಾಲ ಯಾವಾಗ ಪಡೆಯಲಾಗಿದೆ ಎಂಬುದು ಕಾಣುತ್ತದೆ.

Check land mutation status

ಜಮೀನು ತಂದೆತಾಯಿಯಿಂದ ಮಕ್ಕಳ ಹೆಸರಿಗೆ ವರ್ಗಾವಣೆಯಾಗಿದ್ದರೆ ಹಕ್ಕು ಬದಲಾವಣೆ ಮಾಡಿದವರು ಹಾಗೂ ಹಕ್ಕು ಬದಲಾವಣೆ ಪಡೆದವರ ಹೆಸರು ಇರುತ್ತದೆ. ಇದರಂದಿಗೆ ಎಷ್ಟು ಎಕರೆ ವರ್ಗಾವಣೆ ಮಾಡಲಾಗಿದೆ ಎಂಬುದು ಕಾಣುತ್ತದೆ.

ಇದನ್ನೂ ಓದಿ Bhagyalakshmi bond amount ಭಾಗ್ಯಲಕ್ಷ್ಮೀ ಹಣ ಜಮೆಯಾಗಬೇಕೇ? ಈ ಕೆಲಸ ಮಾಡಿ

Check land mutation status  ಒಂದು ವೇಳೆ ಆ ಜಮೀನಿಗೆ ನಿಗದಿತ ಅವಧಿಯೊಳಗೆ ಯಾರಿಂದಾದರೂ ಆಕ್ಷೇಪಣೆ ಬಂದರೆ ನ್ಯಾಯಾಲಯದಿಂದ ತಡೆಯಾಜ್ಞೆ ಬಂದರೆ ಅದು ಸಹ ಕಾಣುತ್ತದೆ.  ರೈತರು ಜಮೀನಿನ ಮುಟೇಶನ್ ಗಾಗಿ ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಸಹ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಸ್ಟೇಟಸ್ ಚೆಕ್ ಮಾಡಲು ಯಾರ ಸಹಾಯವೂ ಬೇಕಿಲ್ಲ. ಮನೆಯಲ್ಲಿಯೇ ಕುಳಿತು ಚೆಕ್ ಮಾಡಬಹುದು.

Leave a Comment