Check Land owner Name ನೀವು ನಿಂತಿರುವ ಸ್ಥಳದ ಮಾಲಿಕರು ಯಾರಿದ್ದಾರೆ? ಇಲ್ಲೇ ಚೆಕ್ ಮಾಡಿ 2024

Written by Admin

Updated on:

Spread the love

Check Land owner Name ನೀವು ನಿಂತಿರುವ ಜಮೀನು ಯಾರ ಹೆಸರಿನ ಮೇಲಿದೆ ಅಂದರೆ ಆ ಜಮೀನಿನ ಮಾಲಿಕರು ಯಾರು ಎಂಬುದನ್ನು ರಾಜ್ಯದ ಯಾವುದೇ ಮೂಲೆಯಲ್ಲಿ ನಿಂತು ನೀವು ಜಮೀನಿನ ಮಾಲಿಕರು ಯಾರಿದ್ದಾರೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು.

ಹೌದು, ಇದಕ್ಕಾಗಿ ರೈತರು ಯಾ ಬಳಿಯೂ ಹೋಗಬೇಕಿಲ್ಲ, ತಮ್ಮ ಬಳಿಯಿರುವ ಸ್ಮಾರ್ಟ್ ಫೋನ್ ನಲ್ಲೇ ಇಲ್ಲಿ ಕೆಳಗೆ ತಿಳಿಸಿದ ಮಾಹಿತಿಗಳ ಪ್ರಕಾರ ನೀವು ಅತೀ ಸುಲಭವಾಗಿ ಜಮೀನಿನ ಮಾಲಿಕರ ಹೆಸರು ತಿಳಿದುಕೊಳ್ಳಬಹುದು. ಇದರೊಂದಿಗೆ ಅಕ್ಕಪಕ್ಕದ ಜಮೀನಿನ ಮಾಲಿಕರು ಯಾರೆಂಬುದನ್ನು ಸಹ ತಿಳಿದುಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.

Check Land owner Name ನೀವು ನಿಂತಿರುವ ಜಮೀನು ಯಾರ ಹೆಸರಿಗಿದೆ? ಚೆಕ್ ಮಾಡುವುದು ಹೇಗೆ?

ರೈತರು ತಾವು ನಿಂತಿರುವ ಜಮೀನು ಯಾರ ಹೆಸರಿಗಿದೆ ಹಾಗೂ ಜಮೀನಿನ ಅಕ್ಕಪಕ್ಕದ ಜಮೀನು ಮಾಲಿಕರ ಹೆಸರುಗಳನ್ನು ಚೆಕ್ ಮಾಡಲು  ಈ

https://play.google.com/store/apps/details?id=com.ksrsac.sslr&hl=en_IN&pli=1

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಆಗ ನಿಮಗೆ Dishaank ಆ್ಯಪ್ ಕಾಣಿಸುತ್ತದೆ. ಅಲ್ಲಿ ನಿಮಗೆ ಕಾಣಿಸುವ install ಮೇಲೆ ಕ್ಲಿಕ್ ಮಾಡಬೇಕು. ಇದಾದ ಮೇಲೆ ಓಪನ್ ಮೇಲೆ ಕ್ಲಿಕ್ ಮಾಡಬೇಕು.  ವೈಲ್ ಯುಸಿಂಗ್ ದಿ ಆ್ಯಪ್ ಕ್ಲಿಕ್ ಮಾಿಡದ ನಂತರ ನೀವು ಭಾಷೆ ಯಲ್ಲಿ ಕನ್ನಡ ಆಯ್ಕೆ ಮಾಡಿಕೊಳ್ಳಬೇಕು.

ಒಂದು ವೇಳೆ ನೀವು ಇಂಗ್ಲೀಷ್ ನಲ್ಲಿ ನೋಡಬೇಕಾದರೆ ಇಂಗ್ಲೀಷ್ ಆಯ್ಕೆ ಮಾಡಿಕೊಳ್ಳಬಹುದು. ಕನ್ನಡದಲ್ಲಿಯೇ ಮಾಹಿತಿ ನೋಡಲು ಸುಲಭವಾಗುತ್ತದೆ. ಹಾಗಾಗಿ ಕನ್ನಡ ಭಾಷೆ ಆಯ್ಕೆ ಮಾಡಿಕೊಂಡ ನಂತರ ನಿಮ್ಮ ಹೆಸರು, ಈ ಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ಹಾಕಿದ ನಂತರ ನಿಮ್ಮ ಮೊಬೈಲಿಗೆ ಓಟಿಪಿ ಪಡೆಯಲು ಓಟಿಪಿ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಂತರ ನೀವು ನಮೂದಿಸಿದ ಮೊಬೈಲಿಗೆ ಓಟಿಪಿ ಬರುತ್ತದೆ.

ಇದನ್ನೂ ಓದಿ Farm 9 and 11B document ನಿಮ್ಮ ಆಸ್ತಿಗಳ ಫಾರ್ಮ್ 9 ಮತ್ತು 11ಬಿ ಇಲ್ಲೇ ಡೌನ್ಲೋಡ್ ಮಾಡಿ

ಆ ಓಟಿಪಿ ನಂಬರನ್ನು ನಮೂದಿಸಿ ನೋಂದಾಯಿಸಿ ಮೇಲೆ ಕ್ಲಿಕ್ ಮಾಡಬೇಕು.  ಆಗ ನಿಮ್ಮ ಮೊಬೈಲಿನಲ್ಲಿ Dishaank App ಓಪನ್ ಆಗುತ್ತದೆ.  ಆಗ ನೀವು ಯಾವ ಸ್ಥಳದಲ್ಲಿ ನಿಂತಿರುತ್ತೀರೋ ಆ ಜಾಗದ ಪಾಯಿಂಟ್ ಕಾಣಿಸುತ್ತದೆ. ನೀವು ಝೂಮ್ ಮಾಡಿದಾಗ ಯಾವ ಸರ್ವೆ ನಂಬರಿನಲ್ಲಿ ನಿಂತಿರುತ್ತೀರೋ ಆ ಸ್ಥಳದ ಪಾಯಿಂಟ್ ಕಾಣಿಸುತ್ತದೆ.

Check Land owner Name

Check Land owner Name ರೈತರಿಗೆ ಯಾವ ಯಾವ ಮಾಹಿತಿಗಳು ಕಾಣಿಸುತ್ತವೆ?

ರೈತರು ನಿಂತಿರುವ ಸರ್ವೆ ನಂಬರ್ ನೊಂದಿಗೆ ಆ ಸ್ಥಳದ ಸುತ್ತಮುತ್ತಲಿರುವ ಸರ್ವೆ ನಂಬರ್ ಗಳು, ಅಕ್ಕಪಕ್ಕದ ಕಾಲೋನಿಗಳ ಮಾಹಿತಿ ಕಾಣಿಸುತ್ತದೆ. ಅಲ್ಲಿ ಕಾಣವ ಪಾಯಿಂಟ್ ಮೇಲೆ ಕ್ಲಿಕ್ ಮಾಡಿದರೆ ಮತ್ತೊಂದು ಪೇಜ್ ಓಪನ್ ಆಗುತ್ತದೆ.  ಸರ್ವೆ ನಂಬರ್, ಗ್ರಾಮದ ಹೆಸರು, ಹೋಬಳಿ, ತಾಲೂಕು, ಜಿಲ್ಲೆಯ ಮಾಹಿತಿ ಕಾಣಿಸುತ್ತದೆ.

Check Land owner Name ಹೆಚ್ಚಿನ ವಿವರಗಳ ಮೇಲೆ ಕ್ಲಿಕ್ ಮಾಡಿ

ಹೆಚ್ಚಿನ ವಿವರಗಳು ಮೇಲೆ ಕ್ಲಿಕ್ ಮಾಡಿದರೆ ಮತ್ತೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಸರ್ನೋಕ್ ಸಂಖ್ಯೆಯಲ್ಲಿ ಸ್ಟಾರ್ ಹಾಗೂ ಹಿಸ್ಸಾ ನಂಬರ್ ನಲ್ಲಿ ಹಿಸ್ಸಾ ಆ?್ಕೆ ಮಾಡಿಕೊಂಡು ಆ ಸ್ಥಳ ಯಾರ ಹೆಸರಿಗೆ ಎಂಬುದನ್ನು ಚೆಕ್ ಮಾಡಬಹುದು

ಆ ಜಮೀನಿನ ಮಾಲಿಕರು ಯಾರಿದ್ದಾರೆ. ಆ ಜಮೀನಿನ ವಿಸ್ತೀರ್ಣ ಎಷ್ಟಿದೆ? ಜಮೀನು ಜಂಟಿಯಾಗಿದ್ದರೆ ಜಂಟಿ ಮಾಲಿಕರ ಹೆಸರು ಸಹ ಕಾಣಿಸುತ್ತದೆ. ರೈತರು ಮೇಲಿನ ವಿಧಾನದ ಮೂಲಕ ಸುಲಭವಾಗಿ ಮಾಹಿತಿಗಳನ್ನು ಚೆಕ್ ಮಾಡಬಹುದು.

Leave a Comment