Check land transfer details : ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ನಿಮ್ಮ ಜಮೀನಿನ ಅಕ್ಕಪಕ್ಕದ ಜಮೀನು ಯಾರ ಹೆಸರಿನಿಂದ ಯಾರ ಹೆಸರಿಗೆ ವರ್ಗಾವಣೆಯಾಗಿದೆ ಎಂಬುದನ್ನು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ರೈತ ಮಿತ್ರರೇ ನೀವು ನಿಮ್ಮ ಜಮೀನಿನ ಸುತ್ತಲೂ ಇರುವ ಜಮೀನಿನ ಮಾಲಿಕರು ಯಾರು ಅವರ ಹೆಸರಿಗೆ ಎಷ್ಟು ಜಮೀನಿದೆ ಎಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
Check land transfer details ನಿಮ್ಮಅಕ್ಕಪಕ್ಕದ ಜಮೀನು ಯಾರ ಹೆಸರಿಗೆ ಎಷ್ಟು ಎಕರೆ ಜಮೀನಿದೆ? ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ
ರೈತರು ನೆರೆಹೊರೆಯವರ ಹೆಸರಿಗೆ ಎ ಷ್ಟು ಎಕರೆ ಜಮೀನಿದೆ ಎಂಬುದನ್ನ ಚೆಕ್ ಮಾಡಲು ಈ
https://landrecords.karnataka.gov.in/service40/PendcySurveyNoWiseRpt
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ರಿಪೋರ್ಟ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಇದಾದಮೇಲೆ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಸೆಲೆಕ್ಟ್ ಮಾಡಿಕೊಂಡ ನಂತರ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸರ್ವೆ ನಂಬರ್ ನಮೂದಿಸಿ Get Report ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
ನೀವು ನಮೂದಿಸಿ ಸರ್ವೆ ನಂಬರಿನಲ್ಲಿ ಬರುವ ಹಿಸ್ಸಾ ನಂಬರ್ ನಲ್ಲಿ ಜಮೀನು ಹೇಗೆ ವರ್ಗಾವಣೆಯಾಗಿದೆ? ಯಾವಾಗ ವರ್ಗಾವಣೆಯಾಗಿದೆ ಎಂಬ ಮಾಹಿತಿ ಇರುತ್ತದೆ.
Check land transfer details ನೀವು ನಮೂದಿಸಿದ ಸರ್ವೆ ನಂಬರ್ ಅಕ್ಕಪಕ್ಕದ ಸರ್ವೆ ನಂಬರ್ ಹಾಗೂ ಮಾಲೀಕರ ಮಾಹಿತಿ
ರೈತರು ನಮೂದಿಸಿದ ಸರ್ವೆ ನಂಬರ್ ಅಕ್ಕಪಕ್ಕದ ಸರ್ವೆ ನಂಬರ್ ಹಾಗೂ ಯಾರ ಹೆಸರಿಗೆ ಎಷ್ಟು ಎಕರೆ ಜಮೀನಿದೆ? ಜಮೀನು ಜಂಟಿಯಾಗಿದ್ದರೆ ಯಾರ ಯಾರ ಹೆಸರು ಜಂಟಿಯಾಗಿದೆ? ಎಷ್ಟು ಎಕರೆ ಜಮೀನು ಜಂಟಿಯಾಗಿದೆ ಎಂಬ ಮಾಹಿತಿ ಇರುತ್ತದೆ. ಒಂದು ವೇಳೆ ರೈತರು ಸಾಲ ಪಡೆದಿದ್ದರೆ ಯಾವ ಬ್ಯಾಂಕಿನಿಂದ ಸಾಲಪಡೆಯಲಾಗಿದೆ ಎಂಬ ಮಾಹಿತಿಯೂ ಇರುತ್ತದೆ.
Check land transfer details ನೀವು ನಮೂದಿಸಿ ಸರ್ವೆ ನಂಬರಿನಲ್ಲಿ ಯಾರ ಯಾರ ಜಮೀನಿದೆ
ನೀವು ನಮೂದಿಸಿದ ಸರ್ವೆ ನಂಬರಿನಲ್ಲಿ ಯಾರ ಯಾರ ಹೆಸರಿಗೆ ಜಮೀನಿದೆ? ರೈತರ ಹೆಸರು ತಂದೆಯ ಹೆಸರು ಹಾಗೂ ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬ ಸಂಪೂರ್ಣ ಮಾಹಿತಿ ಇರುತ್ತದೆ.
Check land transfer details ನೀವು ನಮೂದಿಸಿ ಸರ್ವೆ ನಂಬರಿನ ಪಹಣಿಯಲ್ಲಿ ಯಾರ ಯಾರ ಹೆಸರಿದೆ ಚೆಕ್ ಹೀಗೆ ಮಾಡಿ
ರೈತರು ಸರ್ವೆ ನಂಬರ್ ನಮೂದಿಸಿ ಪಹಣಿಯಲ್ಲಿ ಯಾರ ಯಾರ ಹೆಸರಿದೆ ಎಂಬುದನ್ನು ಚೆಕ್ ಮಾಡಲು ಈ
https://landrecords.karnataka.gov.in/Service2/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ತೆರೆದುಕೊಳ್ಳುವ ಪೇಜ್ ನಲ್ಲಿ ಜಿಲ್ಲೆ , ತಾಲೂಕು, ಹೋಬಳಿ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸರ್ವೆ ನಂಬರ್ ಆಯ್ಕೆ ಮಾಡಿಕೊಂಡು ಗೋ ಮೇಲೆ ಕ್ಲಿಕ್ ಮಾಡಬೇಕು. ನಂತರ ಸರ್ನೋಕ್ ನಲ್ಲಿ ಸ್ಟಾರ್ ಹಾಗೂ ಹಿಸ್ಸಾ ನಂಬರ್ ನಲ್ಲಿಯೂ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸೆಲೆಕ್ಟ್ ಪಿರಿಯಡ್ ನಲ್ಲಿ 2023-2024 ಆಯ್ಕೆ ಮಾಡಿಕೊಳ್ಳಬೇಕು. ಸೆಲೆಕ್ಟ್ ಇಯರ್ ನಲ್ಲಿ 2023- 2024 ಆಯ್ಕೆ ಮಾಡಿಕೊಂಡು Fetch details ಮೇಲೆ ಕ್ಲಿಕ್ ಮಾಡಬೇಕು ನಂತರ View ಮೇಲೆ ಕ್ಲಿಕ್ ಮಾಡಿದಾಗ ಪಹಣಿ ಪೇಜ್ ತೆರೆದುಕೊಳ್ಳುತ್ತದೆ.ಅಲ್ಲಿನೀವು ನಮೂದಿಸಿ ಸರ್ವೆ ನಂಬರಿನ ಪಹಣಿಯಲ್ಲಿ ಯಾರ ಯಾರ ಹೆಸರಿದೆ ಎಂಬುದು ಕಾಣುತ್ತದೆ.