Check your crop loan : ರೈತರು ತಾವು ಹೊಂದಿರುವ ಜಮೀನುಗಳ ಮೇಲೆ ಸಾಲ ಎಷ್ಟು ಪಡೆಯಲಾಗಿದೆ? ಯಾವ ವರ್ಷ ಪಡೆಯಲಾಗಿದೆ? ಸಾಲ ತೀರಿಸಿದರೂ ಇನ್ನೂ ಬೆಳೆ ಸಾಲ ಇದೆಯೆಂದು ತೋರಿಸುತ್ತಿದೆಯೇ? ಹಾಗಾದರೆ ರೈತರು ತಮಗೆ ಗೊತ್ತಿಲ್ಲದೆ ಯಾರಾದರೂ ಸಾಲ ಪಡೆದಿದ್ದರೆ ಹೇಗೆ ಚೆಕ್ ಮಾಡಬೇಕು ಎಂಬುದರ ಮಾಹಿತಿ ಇಲ್ಲಿದೆ.
ಈಗ ಸಾಲ ಪಡೆಯಬೇಕಾದರೆ ರೈತರ ಆಧಾರ್ ಕಾರ್ಡ್ ಹಾಗೂ ಜಮೀನಿನ ದಾಖಲೆ ಮತ್ತು ಸಾಲ ಪಡೆಯುವ ವ್ಯಕ್ತಿ ಇರಲೇಬೇಕು. ಆದರೆ ಈ ಹಿಂದೆ ಯಾರದ್ದೋ ಹೆಸರಿನ ಮೇಲೆ ಯಾರದ್ದೋ ಜಮೀನಿನ ದಾಖಲೆ ಮೇಲೆ ಸಾಲ ಪಡೆಯುತ್ತಿದ್ದರು. ಕೆಲವು ಸರ ರೈತರಿಗೆ ತಮ್ಮ ಜಮೀನಿನ ಮೇಲೆ ಸಾಲ ಪಡೆದಿರುವುದು ಗೊತ್ತೇ ಇರುವುದಿಲ್ಲ. ಕೆಲವು ವರ್ಷಗಳ ನಂತರ ತಮಗೆ ನೋಟಿಸ್ ಬಂದನಂತರವೇ ಜಮೀನಿನ ಮೇಲೆ ಸಾಲವಿರುವುದು ಗೊತ್ತಾಗುತ್ತಿತ್ತು. ಅಲ್ಲಿಯವರೆಗೆ ತಮ್ಮ ಹೆಸರಿನ ಮೇಲೆ ಸಾಲ ಇರುವ ವಿಷಯವೇ ಗೊತ್ತಾಗುತ್ತಿರಲಿಲ್ಲ. ಹಾಗಾಗಿ ತಮಗೆ ಗೊತ್ತಿಲ್ಲದೆ ಜಮೀನಿನ ಮೇಲೆ ಸಾಲ ಇರುವುದನ್ನು ಇಲ್ಲೇ ಒಮ್ಮೆ ( Check your crop loan ) ಚೆಕ್ ಮಾಡಿ ನೋಡೋಣವೇ?
Check your crop loan ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲವಿದೆ? ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ
ರೈತರು ಈಗ ತಮ್ಮಲ್ಲಿರುವ ಮೊಬೈಲ್ ನಿಂದ ತಮ್ಮ ಜಮೀನಿನ ಮೇಲಿರುವ ಸಾಲದ ಮಾಹಿತಿಯನ್ನು ಚೆಕ್ ಮಾಡಬೇಕಾದರೆ ಈ
https://landrecords.karnataka.gov.in/Service2/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ Bhoomi Online Land Records view ಎಂಬ ಕಂದಾಯ ಇಲಾಖೆಯ ಪೇಜ್ ಓಪನ್ ಆಗಿರುವುದು ನಿಮಗೆ ಕಾಣಿಸುತ್ತದೆ.
ಸ್ಟೇಪ್ 1
ರೈತರು ಮೊದಲು ತಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ತಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ನೀವು ನಿಮ್ಮ ಸರ್ವೆ ನಂಬರ್ ಹಾಕಿ Go ಮೇಲೆ ಕ್ಲಿಕ್ ಮಾಡಲೇಬೇಕು. ನಂತರ Select Surnoc ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಹಿಸ್ಸಾ ನಂಬರ್ ನಲ್ಲೂ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ Fetch Details ಮೇಲೆ ಕ್ಲಿಕ್ ಮಾಡಬೇಕು.
ಸ್ಟೇಪ್ 2
ಜಮೀನಿನ ಮಾಲಿಕರ ಹೆಸರು ಕಾಣಿಸುತ್ತದೆ. ಅಲ್ಲಿ ಯಾವ ಮಾಲಿಕರಿಗೆ ಎಷ್ಟು ಎಕರೆ ಜಮೀನಿದೆ ಹಾಗೂ ಆ ಜಮೀನು ಮಾಲಿಕರ ಖಾತಾ ನಂಬರ್ ಸಹ ನಿಮಗೆ ಕಾಣಿಸುತ್ತದೆ. ಅಲ್ಲಿ View ಮೇಲೆ ಕ್ಲಿಕ್ ಮಾಡಬೇಕು.
ಸ್ಟೇಪ್ 3
ನಿಮಗೆ ನಿಮ್ಮ ಜಮೀನಿನ ಪಹಣಿ (ಆರ್.ಟಿ.ಸಿ) ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಮೂದಿಸಿದ ಸರ್ವೆ ನಂಬರ್ ಆ ಸರ್ವೆ ನಂಬರ್ ಅಡಿಯಲ್ಲಿ ಒಟ್ಟು ಎಷ್ಟು ಎಕರೆ ಜಮೀನಿದೆ?
ಇದನ್ನೂ ಓದಿ : RTC aadhar card link ಪಹಣಿಗೆ ಆಧಾರ್ ಲಿಂಕ್ ಹೀಗೆ ಮಾಡಿ 2024
ಆ ಸರ್ವೆ ನಂಬರ್ ನಲ್ಲಿ ಜಮೀನಿನ ಮಾಲಿಕರ ಹೆಸರು ತಂದೆಯ ಹೆಸರು ಹಾಗೂ ಅವರಿಗೆ ಎಷ್ಟು ಎಕರೆ ಜಮೀನಿದೆ ಎಂಬ ಮಾಹಿತಿ ಕಾಣಿಸುತ್ತದೆ. ಅದರ ಎದುರುಗಡೆ ನಿಮ್ಮ ಜಮೀನು ಯಾವಾಗ ಮುಟೇಶನ್ ಆಗಿದೆ ಎಂಬ ಮಾಹಿತಿಯೂ ಇರುತ್ತದೆ.
ಸ್ಪೇಪ್ 3
ಹಕ್ಕುಗಳು ಕೆಳಗಡೆ ರೈತರು ಯಾವ ಬ್ಯಾಂಕಿನಲ್ಲಿ ಸಾಲ ಪಡೆದಿದ್ದಾರೆ? (Check your crop loan) ಎಷ್ಟು ಸಾಲ ಪಡೆದಿದ್ದಾರೆ ಎಂಬ ಮಾಹಿತಿಯೂ ಕಾಣಣಿುತ್ತದೆ. ಇದರೊಂದಿಗೆ ಯಾವಾಗ ಸಾಲ ಪಡೆಯಲಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ. ಈ ಸಾಲ ನೀವೇ ಪಡೆದಿದ್ದೀರೋ ಅಥವಾ ನಿಮ್ಮ ಹೆಸರಿಗೆ ಬೇರೆಯವರು ಪಡೆದಿದ್ದಾರೋ ಎಂಬುದು ನಿಮಗೆ ಗೊತ್ತಾಗುತ್ತದೆ.
ಒಂದು ವೇಳೆ ನೀವೇ ಸಾಲ ಪಡೆದು ಸಾಲ ತೀರಿಸಿದ್ದರೆ ಪಹಣಿಯಲ್ಲಿ ಇನ್ನೂ ಹಾಗೆ ತೋರಿಸುತ್ತಿದ್ದರೆ ಕೂಡಲೇ ನಿಮ್ಮ ಬ್ಯಾಂಕ್ ಶಾಖೆಗೆ ತೆರಳಿ ಈ ಕುರಿತು ಬ್ಯಾಂಕ್ ಮ್ಯಾನೇಜರ್ ಜೊತೆಗೆ ಚರ್ಚಿಸಿ ಪಹಣಿಯಿಂದ ಸಾಲದ ಮಾಹಿತಿ ತೆಗೆದು ಹಾಕಿಸಬಹುದು.