CIBIL Score check ನೀವು ಎಲ್ಲೆಲ್ಲಿ ಸಾಲ ಪಡೆದಿದ್ದೀರಿ? ಇಲ್ಲೇ ಚೆಕ್ ಮಾಡಿ 2024

Written by Admin

Published on:

Spread the love

CIBIL Score check ಇಂದು ನಾವು ಯಾವ ಬ್ಯಾಂಕಿನಲ್ಲಿ ಯಾವ ಖಾಸಗಿ ಸಂಸ್ಥೆಗಳಲ್ಲಿ ಸಾಲ ಪಡೆದಿದ್ದೇವೆ ನೀವೆಷ್ಟು ಸಾಲ ಹಿಂದಿರುಗಿಸಬೇಕಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ನೀವು ಕೇವಲ ಒಂದೇ ನಿಮಿಷದಲ್ಲಿ ಎಲ್ಲಿಯೂ ಹೋಗದೆ ಮನೆಯಲ್ಲಿಯೇ ಕುಳಿತು ಚೆಕ್ ಮಾಡಬಹುದು. ಎಲ್ಲೆಲ್ಲಿ ಸಾಲ ಪಡೆಯಲಾಗಿದೆ ಎಂಬುದು ಹೇಗೆ ಗೊತ್ತಾಗುತ್ತದೆ? ಚೆಕ್ ಮಾಡುವುದು ಹೇಗೆ ಅಂದುಕೊಂಡಿದ್ದೀರಾ? ಸಿಬಿಲ್ ಸ್ಕೋರ್ ಚೆಕ್ ಮಾಡುವುದರ ಮೂಲಕ ನಾವು ಎಲ್ಲೆಲ್ಲಿ ಸಾಲ ಪಡೆಯಲಾಗಿದೆ ಎಂಬ ಮಾಹಿತಿ ಗೊತ್ತಾಗುತ್ತದೆ. ಹೌದು, ಖಾಸಗಿ ಬ್ಯಾಂಕ್ ಆಗಲಿ,ಸರ್ಕಾರಿ ಬ್ಯಾಂಕುಗಳಾಗಲಿ ಎಲ್ಲೇ ಸಾಲ ಪಡೆದಿದ್ದರೂ ಚೆಕ್ ಮಾಡಬಹುದು.

CIBIL Score check

ಯಾರಿಗೆ ಸಾಲ ನೀಡಲಾಗುವುದು?

ಸಿಬಿಲ್ ಸ್ಕೋರ್ ಚೆನ್ನಾಗಿದ್ದರೆ ಮಾತ್ರ ನಿಮಗೆ ಸಾಲ ಸಿಗುವುದು. ಇಲ್ಲದಿದ್ದರೆ ಸಾಲ ಸಿಗುವುದಿಲ್ಲ. ಹೌದು, ನಿಮ್ಮ ಸಿಬಿಲ್ ಸ್ಕೋರ್ ಕಡಿಮೆಯಿದ್ದರೆ ಸಾಲ ನೀಡಲು ಬ್ಯಾಂಕುಗಳು ಹಿಂದೇಟು ಹಾಕುತ್ತವೆ.

ಏನಿದು ಸಿಬಿಲ್ ಸ್ಕೋರ್?

CIBIL ಎಂದರೆ Credit Information Bureau (india) Limited. ಗ್ರಾಹಕರು ಈ ಹಿಂದೆ ಸಾಲಗಳನ್ನು ಪಡೆದಿರೋದು ಹಾಗೂ ಮರುಪಾವತಿಸಿದ ಬಗ್ಗೆ ಬ್ಯಾಂಕುಗಳು ಹಾಗೂ ಸಾಲಗಾರರು ನಿಯಮಿತವಾಗಿ ಸಿಬಿಲ್ ಗೆ ನೀಡಿರುವ ಮಾಹಿತಿಗಳನ್ನು ಆಧರಿಸಿರುತ್ತದೆ.  ಸಿಬಿಲ್ ಸ್ಕೋರ್ ಮಾಹಿತಿ ಸಂಗ್ರಹಿಸಲು ಆರ್.ಬಿ.ಐ ನಾಲ್ಕು ಏಜೆನ್ಸಿಗಳಿಗೆ ನೇಮಿಸಿದೆ.

CIBIL Score check ಸಿಬಿಲ್ ಸ್ಕೋರ್ ಚೆಕ್ ಮಾಡುವುದು ಹೇಗೆ?

ಜನರು ತಮ್ಮ ಸಿಬಿಲ್ ಸ್ಕೋರ್ ನ್ನು ಮೊಬೈಲ್ ನಲ್ಲೇ ಉಚಿತವಾಗಿ ಚೆಕ್ ಮಾಡಬಹುದು. ಹೌದು, ಈ

https://homeloans.sbi/getcibil

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ  ಎಸ್.ಬಿ.ಐ ಬ್ಯಾಂಕಿನ ವತಿಯಿಂದ ಉಚಿತವಾಗಿ ಸಿಬಿಲ್ ಸ್ಕೋರ್ ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ  ನಿಮ್ಮ ಹೆಸರು,  ಲಿಂಗ, ಹುಟ್ಟಿದ ದಿನಾಂಕ ಭರ್ತಿ ಮಾಡಬೇಕು. ವಿಳಾಸ ತುಂಬಬೇಕು.  ಪ್ಯಾನ್ ಕಾರ್ಡ್ ನಮೂದಿಸಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ಹಾಗೂ ಇ ಮೇಲ್ ಐಡಿ ಹಾಕಬೇಕು. ಟರ್ಮ್ಸ್ ಆ್ಯಂಡ್ ಕಂಡಿಶನ್ ಆಯ್ಕೆ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪಿಡಿಎಫ್ ಜನರೇಟ್ ಆಗುತ್ತದೆ. ಅದನ್ನು ಓಪನ್ ಮಾಡುವುದು ಹೇಗೆ ಎಂಬದರ ಪಾಸ್ವರ್ಡ್ ಬರುತ್ತದೆ. ಆ ಪಾಸ್ವರ್ಡ್ ಹಾಕಿ ನೀವು  ಪಿಡಿಎಫ್ ಫೈಲ್ ಓಪನ್ ಮಾಡಬಹುದು.

CIBIL Score check ಸಿಬಿಲ್ ಸ್ಕೋರ್ ಎಷ್ಟಿದ್ದರೆ ಸಾಲ ಸಿಗುವುದು?

ಈಗ ಸಿಬಿಲ್ ಸ್ಕೋರ್ ಚೆನ್ನಾಗಿದ್ದರೆ ಮಾತ್ರ ಸಾಲ ಸಿಗುವುದು. 0 ದಿಂದ 550 ವರೆಗೆ ಸಿಬಿಲ್ ಸ್ಕೋರ್ ಇದ್ದರೆ ತುಂಬಾ ಕೆಟ್ಟದಾಗಿದೆ ಎಂದರ್ಥ. 550 ರಿಂದ 650 ವರೆಗೆ ಇದ್ದರೆ ಕೆಟ್ಟದು. 650 ರಿಂದ 750 ವರೆಗೆ ಇದ್ದರೆ ಒಳ್ಳೆಯದು ಎಂದರ್ಥ.750-900 ವರೆಗೆ ಇದ್ದರೆ ಅತ್ಯುತ್ತಮ ಎಂದರ್ಥ. ನಿಮ್ಮ ಸಿಬಿಲ್ ಸ್ಕೋರ್ 750ಕ್ಕಿಂತ ಹೆಚ್ಚಿದ್ದರೆ ನಿಮಗೆ ಬ್ಯಾಂಕಿವರಾಗಲಿ ಹಣಕಾಸು ಸಂಸ್ಥೆಗಳಾಗಲಿ ಸುಲಭವಾಗಿ ಸಾಲ ನೀಡುತ್ತಾರೆ.

CIBIL Score check ಸಿಬಿಲ್ ಸ್ಕೋರ್ ಪಿಡಿಎಫ್ ಫೈಲ್ ನಲ್ಲಿ ಏನೇನು ಮಾಹಿತಿ ಇರುತ್ತದೆ?

ಸಿಬಿಲ್ ಸ್ಕೋರ್ ಪಿಡಿಎಫ್ ಫೈಲ್ ನಲ್ಲಿ ನೀವು ಎಲ್ಲೆಲ್ಲಿ ಸಾಲ ಪಡೆದಿದ್ದೀರಿ? ಹಾಗೂ ಯಾವಾ ಬ್ಯಾಂಕಿನಲ್ಲಿ ಯಾವಾಗ ಸಾಲ ಪಡೆದಿದ್ದೀರಿ ಎಂಬುದರ ಬಗ್ಗೆ ಮಾಹಿತಿ ಇರುತ್ತದೆ. ಇದರೊಂದಿಗೆ ನಿಮ್ಮ ಸಿಬಿಲ್ ಸ್ಕೋರ್ ಎಷ್ಟಿದೆ ಎಂಬ ಮಾಹಿತಿಯೂ ಇಲ್ಲಿ ಇರುತ್ತದೆ.

ಇದನ್ನೂ ಓದಿ : Land map ನಿಮ್ಮಜಮೀನಿನ ಮ್ಯಾಪ್ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿ 2024

ನೀವು ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆದಿದ್ದರೂ ಎಷ್ಟು ಸಾಲ ಪಡೆದಿದ್ದೀರಿ? ಎಷ್ಟು ಸಾಲ ಮರುಪಾವತಿಸಲಾಗಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ. ಈ ಆಧಾರ ಮೇಲೆ ನೀವು ಯಾವುದೇ ಬ್ಯಾಂಕಿನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

Leave a Comment