Crop insurance calculate ರೈತರ ಯಾವ ಯಾವ ಬೆಳೆಗಳಿಗೆ ವಿಮೆ ಹಣ ಜಮೆ? ಇಲ್ಲೇ ಚೆಕ್ ಮಾಡಿ 2024

Written by Admin

Published on:

Spread the love

Crop insurance calculate : ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ರೈತರು ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಿದರೆ ವಿಮಾ ಹಣ ಜಮೆಯಾಗಲಿದೆ ಎಂಬುದನ್ನು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಪ್ರಸಕ್ತ 2024-25 ನೇ ಸಾಲಿನ ಮುಂಗಾರು ಹಂಗಾಮಿಗೆ  ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು.  ಆ ಬೆಳೆಗಳಿಗೆ ರೈತರು ಎಷ್ಟು ವಿಮೆ ಹಣ ಪಾವತಿಸಬೇಕು ಬೆಳೆಗಳಿಗೆ ವಿಮೆ ಮಾಡಿಸಲು ಕೊನೆಯ ದಿನಾಂಕ ಯಾವುದು ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ರೈತರು ಯಾರ ಸಹಾಯವೂ ಇಲ್ಲದೆ, ಯಾವ ಯಾವ ಬೆಳೆಗಳಿಗೆ ವಿಮೆ ಹಣ ಜಮೆಯಾಗಲಿದೆ? ವಿಮೆ ಮಾಡಿಸಲು ಯಾವುದು ಕೊನೆಯ ದಿನಾಂಕ ಎಂಬುದನ್ನು ಚೆಕ್ ಮಾಡಬಹುದು.

crop insurance calculate

Crop insurance calculate ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು?

ರೈತರು ಪ್ರಸಕ್ತ ಸಾಲಿನ 2024-25ನೇ ಸಾಲಿಗೆ ಮುಂಗಾರು  ಹಂಗಾಮಿಗೆ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬುದನ್ನು ಚೆಕ್ ಮಾಡಲು

https://samrakshane.karnataka.gov.in/Premium/Premium_Chart.aspx

ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಆಗ cropwise Premium Calculator ಪೇಜ್ ಓಪನ್ ಆಗುತ್ತದೆ.

ಒಂದು ವೇಳೆ ಮೇಲಿನ ಲಿಂಕ್ ಓಪನ್ ಆಗದಿದ್ದರೆ ಈ

https://samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ 2024-25 ಆಯ್ಕೆ ಮಾಡಿಕೊಳ್ಳಬೇಕು. ನಂತರ ಋತು Kharif ಆಯ್ಕೆ ಮಾಡಿಕೊಳ್ಳಬೇಕು.  ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು.  ಇದಾದ ನಂತರ Farmers ಕೆಳಗಡೆ  Premium Calculator ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದ್ ಪೇಜ್ ತೆರೆದುಕೊಳ್ಳುತ್ತದೆ.

ನೀವು ಯಾವ ಜಿಲ್ಲೆಯವರೋ ಆ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ಯಾವ ಬೆಳೆಗೆ ವಿಮೆ ಮಾಡಿಸಬೇಕೆಂದುಕೊಂಡಿದ್ದೀರೋ ಆ ಬೆಳೆ ಆಯ್ಕೆ ಮಾಡಿಕೊಳ್ಳಬೇಕು.

ಉದಾಹರಣೆಗೆ ನೀವು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮುಧೋಳ ಹೋಬಳಿಯವರಾಗಿದ್ದರೆ ಹೆಸರು.ಉದ್ದು, ಹತ್ತಿ, ಭತ್ತ, ಸೂರ್ಯಕಾಂತಿ ಬೆಳೆಗಳಿಗೆ ವಿಮೆ ಮಾಡಿಸಬಹುದು.

ಇದನ್ನೂ ಓದಿ FID check ನಿಮ್ಮ ಹೆಸರಿಗೆ ಎಫ್ಐಡಿ ಇದೆಯೋ ಇಲ್ಲವೋ? ಇಲ್ಲೇ ಚೆಕ್ ಮಾಡಿ 2024

ಉದಾಹರಣೆಗೆ ನೀವು ತೊಗರಿ ಬೆಳೆಗೆ ವಿಮೆ ಮಾಡಿಸುವುದಾದರೆ ಒಂದು ಎಕರೆಗೆೆ ನಿಮಗೆ 19400ರೂಪಾಯಿಯವರೆಗೆ ವಿಮೆ ಹಣ ಜಮೆಯಾಗಲಿದೆ. ನೀವು 388 ರೂಪಾಯಿಯವರೆಗೆ ವಿಮೆ ಹಣ ಪಾವತಿಸಬೇಕು.

ಪ್ರಾಕೃತಿಕ ವಿಕೋಪದಿಂದಾಗಿ ಬೆಳೆ ಹಾಳಾದಾಗ ಬೆಳೆ ಹಾಳಾಗಿರುವ ಪ್ರಮಾಣದ ಮೇಲೆ ವಿಮೆ ಹಣ ನಿರ್ಧರಿಸಲಾಗುವುದು. ನಿಮ್ಮ ಬೆಳೆ ಸಂಪೂರ್ಣ ಹಾನಿಯಾಗಿದ್ದರೆ ಮಾತ್ರ 19400 ರೂಪಾಯಿಯವರೆಗೆ ವಿಮೆ ಹಣ ಜಮೆಯಾಗಲಿದೆ.

Crop insurance calculate  ನಿಮ್ಮ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು?

crop insurance calculation check

ನಿಮ್ಮ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬುದನ್ನು ಚೆಕ್ ಮಾಡಲು ರೈತರು ಈ

https://www.samrakshane.karnataka.gov.in/PublicView/FindCutOff.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ತಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಆಗ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಹಾಗೂ ವಿಮೆ ಮಾಡಿಸಲು ಕೊನೆಯ ದಿನ ಯಾವುದು? ವಿಮೆ ಮಾಡಿಸಲು ಇನ್ನೂ ಎಷ್ಟು ದಿನ ಬಾಕಿ ಉಳಿದಿದೆ ಎಂಬ ಪಟ್ಟಿ ಕಾಣುತ್ತದೆ.

Crop insurance calculate ಬೆಳೆ ಹಾನಿಯಾದರೆ ಯಾರಿಗೆ ಯಾವಾಗ ಕರೆ ಮಾಡಬೇಕು?

ವಿಮೆ ಮಾಡಿಸಿದ ರೈತರು ಬೆಳೆ ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾನಿಯಾದರೆ 72 ಗಂಟೆಯೊಳಗೆ ಯಾವ ವಿಮಾ ಕಂಪನಿಗೆ ಬೆಳೆ ವಿಮೆ ಹಣ ಪಾವತಿಸಿದ್ದೀರೋ ಆ ವಿಮಾ ಕಂಪನಿಗೆ ಕರೆ ಮಾಡಬೇಕು. ಆಗ ವಿಮಾ ಕಂಪನಿಯ ಸಿಬ್ಬಂದಿಗಳು ರೈತರ ಜಮೀನಿಗೆ ಬಂದು ಬೆಳೆ ಹಾಳಾಗಿರುವ ಬೆಳೆಯನ್ನುಪರಿಶೀಲನೆ ಮಾಡಿ ಬೆಳೆ ಹಾನಿ ಪರಿಹಾರಕ್ಕಾಗಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತಾರೆ. ನಂತರ ರೈತರ ಖಾತೆಗೆ ವಿಮೆ ಹಣ ಜಮೆಯಾಗುವುದು.

Leave a Comment