Crop insurance calculates ಯಾವ ಯಾವ ಬೆಳೆಗೆ ವಿಮೆ ಹಣ ಜಮೆ? ಇಲ್ಲೇ ಚೆಕ್ ಮಾಡಿ 2024

Written by Admin

Published on:

Spread the love

Crop insurance calculates :  ರೈತರು ಯಾವ ಯಾವ ಬೆಳೆಗಳಿಗೆ ಎಷ್ಟು ವಿಮೆ ಹಣ ಜಮೆಯಾಗಿದೆ ಹಾಗೂ ಜಮೆಯಾಗಲಿದೆ ಎಂಬುದನ್ನು ಈಗ ಮೊಬೈಲ್ ನಲ್ಲಿ ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು.

ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಹೌದು, ರೈತ ಮಿುತ್ರರೆ ಈ ಲೇಖನದಲ್ಲಿ ನಿಮಗೆ ಬೆಳೆ ವಿಮೆ ಹಣ ಜಮೆಯಾಗಿದೆಯೋ ಇಲ್ಲವೋ ಹಾಗೂ ಯಾವ ಯಾವ ಬೆಳೆಗಳಿಗೆ ವಿಮೆ ಹಣ ಜಮೆಯಾಗಿದೆ ಹಾಗೂ ಎಷ್ಟು ವಿಮೆ ಹಣ ಜಮೆಯಾಗಲಿದೆ ಎಂಬುದನ್ನು ತುಂಬಾ ಸರಳವಾಗಿ ಹೇಗೆ ಚೆಕ್ ಮಾಡಬೇಕು ಎಂಬುದರ ವಿಧಾನವನ್ನು ತಿಳಿಸಲಾಗುವುದು.

crop insurance calculate

Crop insurance calculates ಯಾವ ಯಾವ ಬೆಳಗೆ ಎಷ್ಟು ವಿಮೆ ಹಣ ಜಮೆಯಾಗಲಿದೆ?

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದವರು ಕಳೆದ ಸಾಲಿನಲ್ಲಿ ಹಾಗೂ ಪ್ರಸಕ್ತ ಸಾಲಿನಲ್ಲಿ ಎಷ್ಟು ಬೆಳೆ ವಿಮೆ ಹಣ ಜಮೆಯಾಗಲಿದೆ ಎಂಬುದನ್ನು ಚೆಕ್ ಮಾಡಲು  ಈ

https://samrakshane.karnataka.gov.in/      

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ  ಬೆಳೆ ವಿಮೆ ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ನೀವು ಪ್ರಸಕ್ತ ಸಾಲಿನ ಅಂದರೆ ಈ ವರ್ಷದ ಮುಂಗಾರು ಹಂಗಾಮಿನ ಬೆಳೆಗಳ ಸ್ಟೇಟಸ್ ಚೆಕ್ ಮಾಡಬೇಕೆಂದುಕೊಂಡಿದ್ದರೆ ಋತು ಆಯ್ಕೆಯಲ್ಲಿ  Kharif ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ಮುಂದೆ / Go ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ನಿಮಗೆ ಕಾಣಿಸುತ್ತದೆ. ಅಲ್ಲಿ ನೀವು Premium Calculator ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ Crop wise Premium Calculator ಪೇಜ್ ಕಾಣಿಸುತ್ತದೆ. ಅಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು.  ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ಯಾವ ಬೆಳೆಗೆ ವಿಮೆ ಮಾಡಿಸಿದ್ದೀರೋ  ಆ ಬೆಳೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

Crop insurance calculates

ಉದಾಹರಣೆಗೆ ನೀವು ತೊಗರಿ ಬೆಳೆಗೆ ಬೆಳೆ ವಿಮೆ ಮಾಡಿಸಿದ್ದರೆ PMFBY Pigion Pea (Red Gram) ನಂತರ ನೀವು ಎಷ್ಟು ಎಕರೆಗೆ ಬೆಳೆ ವಿಮೆ ಮಾಡಿಸಿದ್ದೀರಿ ಅದನ್ನು ಅಲ್ಲಿ ನಮೂದಿಸಬೇಕು. ಗುಂಟೆಯಲ್ಲಿ ಬೆಳೆ ವಿಮೆ ಮಾಡಿಸಿದ್ದರೂ ಅದನ್ನು ನಮೂದಿಸಬೇಕು. ಉದಾಹರಣೆಗೆ 1 ಎಕರೆಗೆ ಬೆಳೆ ವಿಮೆ ಮಾಡಿಸಿದ್ದರೆ ಒಂದು ಎಕರೆ ನಮೂದಿಸಿ ನಂತರ Show Premium ಮೇಲೆ ಕ್ಲಿಕ್ ಮಾಡಬೇಕು.  ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ.

Crop insurance calculates  ಯಾವ ಬೆಳಗೆ ವಿಮೆ ಹಣ ಜಮೆ?  ಹೀಗೆ ಲೆಕ್ಕ ಹಾಕಿ

crop insurance calculation in mobile

ಅಲ್ಲಿ ನಿಮಗೆ ಒಂದು ಹೆಕ್ಟೇರಿಗೆ ಎಷ್ಟುಬೆಳೆ ವಿಮೆ ಜಮೆಯಾಗಲಿದೆ ಎಂಬ ಮಾಹಿತಿ Sum Insured Rs 48000 per Hectare ಕಾಣಿಸುತ್ತದೆ. ಅದರ ಕೆಳಗಡೆ ನೀವು ನಮೂದಿಸಿದ ಅಂದರೆ ನೀವು ಎಷ್ಟು ಎಕರೆ ಬೆಳೆ ವಿಮೆ ಮಾಡಿಸಿದ್ದೀರಿ ನಿಮಗೆ ಎಷ್ಟು ಬೆಳೆ ವಿಮೆ ಹಣ ಜಮೆಯಾಗಲಿದೆ ಎಂಬ ಮಾಹಿತಿ ಕಾಣಿಸುತ್ತದೆ. ಅಂದರೆ Sum Insured ಕೆಳಗಡೆ ಎಷ್ಟು ಹಣ ಜಮೆಯಾಗಲಿದೆ ಎಂಬ ಮಾಹಿತಿಕಾಣಿಸುತ್ತದೆ.

ಇದನ್ನೂ ಓದಿ : Land Measurement ನಿಮ್ಮ ಜಮೀನಿನ ಅಳತೆ ಮೊಬೈಲ್ ನಲ್ಲಿ ಹೀಗೆ ಮಾಡಿ 2024   

ನೀವು ತೊಗರಿ ಬೆಳೆಗೆ  ಒಂದು ಎಕರೆಗೆ ಬೆಳೆ ವಿಮೆ ಮಾಡಿಸಿದ್ದರೆ ನಿಮಗೆ 19425 ರೂಪಾಯಿಯವರೆಗೆ ಬೆಳೆ ವಿಮೆ ಹಣ ಜಮೆಯಾಗಲಿದೆ. ಅದು ನಿಮ್ಮಬೆಳೆ ಯಾವ ಪ್ರಮಾಣದಲ್ಲಿ ಹಾನಿಯಾಗಿರುತ್ತದೆಯೋ ಆ ಆಧಾರದ ಮೇಲೆ ನಿಮಗೆ ಬೆಳೆ ವಿಮೆ ಹಣ ಜಮೆಯಾಗಲಿದೆ.  ಬೆಳೆ ಸಂಪೂರ್ಣ ನಾಶವಾಗಿದ್ದರೆ ಮಾತ್ರ ನಿಮಗೆ 19ಸಾವಿರ ರೂಪಾಯಿಯವರೆಗೆ ಹಣ ಜಮೆಯಾಗಲಿದೆ. ಒಂದು ವೇಳೆ ಬಿತ್ತಣಿಕೆ ಸಮಯದಲ್ಲಿ ಬೆಳೆ ಹಾನಿಯಾದರೆ ಕಡಿಮೆ ಹಣ ಜಮೆಯಾಗಲಿದೆ.

Leave a Comment