Crop insurance check : ಬೆಳೆ ವಿಮೆ ಮಾಡಿಸಿದ ರೈತರು ಈಗ ತಮ್ಮ ಸರ್ವೆ ನಂಬರ್ ಹಾಕಿ ತಮಗೆಷ್ಟು ಬೆಳೆ ವಿಮೆ ಹಣ ಜಮೆಯಾಗಲಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ಕೇವಲ ಸರ್ವೆ ನಂಬರ್ ನಮೂದಿಸಿದರೆ ಸಾಕು, ನಿಮಗೆ ನಿಮಗೆ ಎಷ್ಟು ರೂಪಾಯಿಯವರೆಗೆ ಬೆಳೆ ವಿಮೆ ಹಣ ಜಮೆಯಾಗಬಹುದು. ಹಾಗೂ ನೀವು ಎಷ್ಟು ವಿಮೆ ಹಣ ಪಾವತಿಸಿದ್ದೀರಿ ಎಂಬ ಮಾಹಿತಿ ಸಹ ಕಾಣಿಸುತ್ತದೆ. ಹಾಗಾದರೆ ಸರ್ವೆ ನಂಬರ್ ಹಾಕಿ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವುದು ಹೇಗಪ್ಪಾ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡ್ರಿ ತುಂಬಾ ಸರಳ ವಿಧಾನ.
Crop insurance check ಸರ್ವೆ ನಂಬರ್ ಹಾಕಿ ನಿಮಗೆ ಬೆಳೆ ವಿಮೆ ಹಣ ಜಮೆಯಾಗಲಿದೆ? ಚೆಕ್ ಮಾಡುವುದು ಹೇಗೆ?
ಸರ್ವೆ ನಂಬರ್ ಹಾಕಿ ಮುಂಗಾರು ಹಂಗಾಮಿನ ಬೆಳೆ ವಿಮೆ ಎಷ್ಟು ಹಣ ಜಮೆಯಾಗಲಿದೆ ಎಂಬ ಸ್ಟೇಟಸ್ ಚೆಕ್ ಮಾಡಲು ಈ
https://samrakshane.karnataka.gov.in/HomePages/AppliOnSurveyNos.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ Crop Insurance Detail on Survey No ಪೇಜ್ ಕಾಣಿಸುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆ ತಾಲೂಕು, ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಸರ್ವೆ ನಂಬರ್ ನಮೂದಿಸಿ Search ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
ಅಲ್ಲಿ ನೀವು ನಮೂದಿಸಿದ ಸರ್ವೆ ನಂಬರಿನಲ್ಲಿ ಬರುವ ಎಲ್ಲಾ ರೈತರ ಹೆಸರು ಕಾಣಿಸುತ್ತದೆ. ನಿಮ್ಮ ಹೆಸರಿನ ಹಿಂದಿರುವ ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ಕಾಣಿಸುತ್ತದೆ. ಅಲ್ಲಿ ಅಪ್ಲಿಕೇಶನ್ ನಂಬರ್ ಕಾಣಿಸುತ್ತದೆ. ಅದರ ಮುಂದುಗಡೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ನಂತರ ನಿಮ್ಮ ಹೆಸರು ಕಾಣಿಸುತ್ತದೆ.
ಇದನ್ನೂ ಓದಿ : Job card list ನಲ್ಲಿ ನಿಮ್ಮ ಹೆಸರಿದೆಯೇ ಮೊಬೈಲ್ ನಲ್ಲೇ ಚೆಕ್ ಮಾಡಿ 2024
ನೀವು ಅಪ್ಲಿಕೇಶನ್ ನಂಬರ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಹೋಬಳಿ, ನಿಮ್ಮ ಊರು, ಸರ್ವೆ ನಂಬರ್ ಕಾಣಿಸುತ್ತದೆ. ಯಾವ ಬೆಳೆಗೆ ವಿಮೆ ಮಾಡಿಸಿದ್ದೀರಿ ಆ ಬೆಳೆಯ ಹೆಸರು ಕಾಣಿಸುತ್ತದೆ. ನಂತರ ನಿಮ್ಮ ಎಕರೆ ಹಾಗೂ ಗುಂಟೆ ಕಾಣಿಸುತ್ತದೆ. ಅಧರ ಮುಂದುಗಡೆ ನಿಮಗೆಷ್ಟು ಬೆಳೆ ವಿಮೆ ಹಣ ಜಮೆಯಾಗಲಿದೆ ಅದರ ಎದುರುಗಡೆ ನೀವು ಎಷ್ಟು ಪ್ರಿಮಿಯಂ ಹಣ ಪಾವತಿಸಿದ್ದೀರಿ ಎಂಬ ಮಾಹಿತಿ ಕಾಣಿಸುತ್ತದೆ.
ನಿಮಗೆ ಬೆಳೆ ವಿಮೆ ಜಮೆಯಾಗಿಲ್ಲವೇ? ನಿಮ್ಮ ಜಿಲ್ಲೆಯ ಈ ವಿಮಾ ಕಂಪನಿಗೆ ಕರೆ ಮಾಡಿ
Crop insurance check ಯಾವ ಜಿಲ್ಲೆಯ ರೈತರು ಯಾವ ವಿಮಾ ಕಂಪನಿಗೆ ಕರೆ ಮಾಡಬೇಕು?
ನಿಮ್ಮ ಜಿಲ್ಲೆಯ ವಿಮಾ ಕಂಪನಿಗಳ ಹೆಸರು ಚೆಕ್ ಮಾಡಲು
ಈ https://samrakshane.karnataka.gov.in/HomePages/frmKnowYourInsCompany.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ನಂತರ Select District ನಲ್ಲಿ ನಿಮ್ಮ ಜಿಲ್ಲೆಆಯ್ಕೆ ಮಾಡಿಕೊಳ್ಳಬೇಕು. ಆಗ ಜಿಲ್ಲಾವಾರು ವಿಮಾ ಕಂಪನಿಗಳ ಹೆಸರು ಕಾಣಿಸುತ್ತದೆ. ನಿಮ್ಮ ಜಿಲ್ಲೆಯ ಎದುರುಗಡೆ ವಿಮಾ ಕಂಪನಿಗಳ ಹೆಸರು ಇರುತ್ತದೆ. ನಿಮ್ಮ ಜಿಲ್ಲೆಯ ವಿಮಾ ಕಂಪನಿ ನೆನಪಿಟ್ಟುಕೊಂಡು ಕೆಳಗೆ ನೀಡಲಾದ ವಿಮಾ ಕಂಪನಿಗಳಿಗೆ ಕರೆ ಮಾಡಬಹುದು.
ಯೂನಿವರ್ಸಲ್ ಸ್ಯಾಂಪೂ ಕಂಪನಿಯ ಉಚಿತ ಸಹಾಯವಾಣಿ 1800 200 5142 ಗೆ ಸಂಪರ್ಕಿಸಬಹುದು.
ಫ್ಯೂಚರ್ ಜನರಲ್ ಇನ್ಸುರೆನ್ಸ್ ಕಂಪನಿಯ ಉಚಿತ ಸಹಾಯವಾಣಿ 1800 266 4141 ಗೆ ಸಂಪರ್ಕಿಸಬಹುದು.
ಐಸಿಐಸಿಐ ಲೋಂಬಾರ್ಡ್ ಇನ್ಸುರೆನ್ಸ್ ಕಂಪನಿ ಉಚಿತ ಸಹಾಯವಾಣಿ 1800 103 7712 ಗೆ ಸಂಪರ್ಕಿಸಬಹುದು.
ಬಜಾಜ್ ಅಲಾಯನ್ಸ್ ಇನ್ಸುರೆನ್ಸ್ ಕಂಪನಿ ಉಚಿತ ಸಹಾಯವಾಣಿ 1800 209 5959 ಗೆ ಸಂಪರ್ಕಿಸಬಹುದು.
ಎಸ್.ಬಿ.ಐ ಕಂಪನಿಯ ಉಚಿತ ಸಹಾಯವಾಣಿ 1800 180 1551 ಗೆ ಸಂಪರ್ಕಿಸಬಹುದು.
ಹೆಚ್.ಡಿ.ಎಫ್.ಸಿ ಎರ್ಗೋ ಉಚಿತ ಸಹಾಯವಾಣಿ 1800 266 0700 ಗೆ ಸಂಪರ್ಕಿಸಬಹುದು.
ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿಯ ಉಚಿತ ಸಹಾಯವಾಣಿ 1800 425 0505 ಗೆ ಸಂಪರ್ಕಿಸಬಹುದು.