Crop insurance eligibility : ಮುಂಗಾರು, ಹಿಂಗಾರು ಹಂಗಾಮಿನ ಬೆಳೆ ವಿಮೆ ಹಣ ಜಮೆಯಾಗಬೇಕಾದರೆ ರೈತರೇನು ಮಾಡಬೇಕು? ಬೆಳೆ ವಿಮೆ ಜಮೆಯಾಗಲು ರೈತರು ಯಾರಿಗೆ ಯಾವಾಗ ಕರೆ ಮಾಡಬೇಕು ಎಂಬುದರ ಮಾಹಿತಿ ಇಲ್ಲಿದೆ.
Crop insurance eligibility ಏನಿದು ಫಸಲ್ ಬಿಮಾ ಯೋಜನೆ (ಬೆಳೆ ವಿಮೆ)?
ಕೇಂದ್ರ ಸರ್ಕಾರವು ಜಾರಿಗೆ ತಂದ ಯೋಜನೆಗಳಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯು ರೈತರಿಗೆ ಅತ್ಯಂತ ಉಪಯುಕ್ತವಾಗಿದೆ. ಈ ಯೋಜನೆಯಡಿ ರೈತರಿಗೆ ಬೆಳೆ ವಿಮೆ ಮಾಡಲು ಅವಕಾಶವಿರುತ್ತದೆ. ಬಿತ್ತನೆಯಿಂದ ಹಿಡಿದು ಕೊಯ್ಲು ಮಾಡುವವರೆಗೂ ವಿಮೆಗೆ ಬೆಳೆ ಒಳಪಟ್ಟಿರುತ್ತದೆ. ರೈತರು ವಿಮಾ ಮೊತ್ತದ ಶೇ. 2 ರಷ್ಟು ಪಾವತಿ ಮಾಡಬೇಕಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರವು ತಲಾ ಶೇ. 5 ರಷ್ಟು ಪಾವತಿಸುತ್ತದೆ. ರೈತರ ಬೆಳೆ ಹಾನಿಯಾದ ರೈತರಿಗೆ ಆರ್ಥಿಕ ಸಹಾಯ ನೀಡಲಾಗುವುದು.
Crop insurance eligibility ಬೆಳೆ ವಿಮೆ ಹೇಗೆ ನಿರ್ಧರಿಸತ್ತಾರೆ?
ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡ ರೈತರ ಜಮೀನು ಸ್ಥಳ, ನಿರ್ಧಿಷ್ಠ, ಪ್ರಕೃತಿ ವಿಕೋಪ, ಆಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಘ ಸ್ಫೋಟ ಹಾಗೂ ಗುಡುಗು ಮಿಂಚುಗಳಿಂದಾಗಿ ಉಂಟಾಗುವ ಬೆಳೆ ಅವಘಡ ಸಂದರ್ಭದಲ್ಲಿ ಬೆಳೆ ನಷ್ಟವಾದರೆ ಬೆಳೆ ವಿಮಾ ನಷ್ಟ ಪರಿಹಾರವನ್ನು ನೀಡಲಾಗುವುದು.
Crop insurance eligibility ನಿಮಗೆಷ್ಟು ಬೆಳೆ ವಿಮೆ ಹಣ ಜಮೆಯಾಗಿದೆ? ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ
ಕಳೆದ ಸಾಲಿನಲ್ಲಿ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರ ವಿಮೆ ಹಣ ಜಮೆಯಾಗಲು ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಚೆಕ್ ಮಾಡಲು ಈ
https://samrakshane.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗನಿಮಗೆ ಬೆಳೆ ವಿಮೆ ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ವರ್ಷದ ಆಯ್ಕೆ 2023-2024 ಆಯ್ಕೆ ಮಾಡಿಕೊಳ್ಳಬೇಕು.ನಂತರ ಮುಂದೆ / ಗೋ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಇನ್ನೊಂದು ಪೇಜ್ ಓಪನ್ ಆಗಿದ್ದು ಕಾಣಿಸುತ್ತದೆ. ಅಲ್ಲಿ ನೀವು check Status ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ ಮೂರು ಆಯ್ಕೆಗಳು ಕಾಣಿಸುತ್ತವೆ. Proposal Mobile No and Aadhaar ಹೀಗೆ ಮೂರು ಆಯ್ಕೆಗಳು ಕಾಣಿಸುತ್ತವೆ.
ಅದರಲ್ಲಿ ನೀವು Mobile No. ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ಬರೆಯಬೇಕು. ಇದಾದ ನಂತರ ಅಲ್ಲಿ ಕಾಣುವ Captcha ಕೋಡ್ ಹಾಕಬೇಕು. ನಂತರ Search ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಅರ್ಜಿ ವಿಮಾ ಕಂಪನಿಯಿಂದ ಸ್ವೀಕೃತವಾಗಿರುವ ಮಾಹಿತಿ ಕಾಣಿಸುತ್ತದೆ.
ಇದನ್ನೂ ಓದಿ : Land Tippani ನಿಮ್ಮ ಜಮೀನಿನ ಹಳೆಯ ಟಿಪ್ಪಣಿ ಮೊಬೈಲ್ ನಲ್ಲಿ ಹೀಗೆ ಡೌನ್ಲೋಡ್ ಮಾಡಿ 2024
ಇದಾದ ನಂತರ ಅಲ್ಲಿ ಕಾಣುವ Select ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ View Details ಮೇಲೆ ಕ್ಲಿಕ್ ಮಾಡಬೇಕು. ಆಗ ತೆರೆದುಕೊಳ್ಳುವ ಪೇಜ್ ನಲ್ಲಿನೀವು ಯಾವ ಸರ್ವೆ ನಂಬರಿಗೆ ವಿಮೆ ಮಾಡಿಸಿದ್ದೀರಿ ಎಷ್ಟು ವಿಮೆ ಹಣ ಪಾವತಿಸಿದ್ದೀರಿ?ನಿಮ್ಮ ಬೆಳೆ ಸಂಪೂರ್ಣ ಹಾನಿಯಾದರೆ ಎಷ್ಟುವಿಮೆ ಹಣ ಜಮೆಯಾಗಬಹುದು ಎಂಬ ಮಾಹಿತಿ ಕಾಣಿಸುತ್ತದೆ.
Crop insurance eligibility ಬೆಳೆ ಹಾನಿಯಾದಾಗ ರೈತರೇನು ಮಾಡಬೇಕು?
ಅತೀವೃಷ್ಟಿ, ಅನಾವಷ್ಟಿ, ಪ್ರವಾರ, ಗುಡುಗು, ಮಿಂಚಿನಿಂದಾಗು ಬೆಂಕಿ ಅವಘಡ, ಭೂ ಕುಸಿತದಿಂದಾಗಿ ಬೆಳ ಹಾನಿಯಾದರೆ ರೈತರೂ 72 ಗಂಟೆಯೊಳಗೆ ವಿಮಾ ಕಂಪನಿಗೆ ದೂರು ನೀಡದ ನಂತರವೇ ಬೆಳೆ ವಿಮೆ ಜಮೆಯಾಗುವುದು.
ಬೆಳೆ ವಿಮೆ ಪರಿಹಾರ ಯಾವಾಗ ಯಾವ ರೈತರಿಗೆ ಎಷ್ಟು ನೀಡಲಾಗುವುದು?
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದಾಗಿ ಬರದ ಛಾಯೆ ಆವರಿಸಿದೆ. ಇಂತಹ ಮಳೆ ಅಭಾವ ಅಥವಾ ಇತರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಧಿಸೂಚಿತ ಬೆಳೆ ವಿಮೆ ಘಟಕದಲ್ಲಿ ಶೇ. 75 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಠ ಶೇ. 25 ರಷ್ಟು ಪರಿಹಾರವನ್ನು ವಿತರಿಸಲು ಯೋಜನೆಯಲ್ಲಿ ಅವಕಾಶ ಇರುತ್ತದೆ.