Crop insurance helpline number ಬೆಳೆ ವಿಮೆ ಸಹಾಯವಾಣಿ ನಂಬರ್

Written by Admin

Published on:

Spread the love

Crop insurance helpline number ರೈತರು ತಮ್ಮ ಬಳಿಯಿರುವ ಮೊಬೈಲ್ ನಿಂದ ಬೆಳೆ ವಿಮೆ ಸಹಾಯವಾಣಿ ನಂಬರ್ ಗೆ ಕರೆ ಮಾಡಿ ತಮಗೆ ಯಾವಾಗ ಬೆಲೆ ವಿಮೆ ಹಣ ಜಮೆಯಾಗುತ್ತದೆ ಎಂಬುದನ್ನುತಿಳಿದುಕೊಳ್ಳಬಹುದು.

ಹೌದು, ರೈತರು ಬೆಳೆ ವಿಮೆಯ ಮಾಹಿತಿ ಪಡೆಯಲು ಈಗ ವಿಮಾ ಕಂಪನಿಗಳಿಗೆ ಹೋಗಬೇಕಿಲ್ಲ. ವಿಮಾ ಕಂಪನಿಗಳ ಎದುರು ಸರತಿ ಸಾಲಿನಲ್ಲಿ ನಿಲ್ಲಬೇಕಿಲ್ಲ. ಕೇವಲ ಒಂದು ಕರೆ ಮಾಡಿ ಬೆಳೆ ವಿಮೆ ಹಣ ಏಕೆ ಜಮೆಯಾಗಿಲ್ಲ? ಯಾವಾಗ ಜಮೆಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ರೈತರಿಗೆ ಇಲ್ಲಿದೆ ನೋಡಿ ಮಾಹಿತಿ.

ಬಹುತೇಕ ರೈತರು ಬೆಳೆ ವಿಮೆ ಮಾಡಿಸಿರುತ್ತಾರೆ. ಆದರೆ ನಂತರ ತಮಗೇಕೆ ಬೆಳೆ ವಿಮೆ ಹಣ ಜಮೆಯಾಗಿಲ್ಲ ಎಂಬುದರ ಕುರಿತು ಯಾರಿಗೆ ಕೇಳಬೇಕು ಎಂಬ ಮಾಹಿತಿ ಗೊತ್ತಿರುವುದಿಲ್ಲ. ಅಂತಹ ರೈತರು ಈ ಕೆಳಗೆ ನೀಡಲಾದ Crop insurance helpline number ಸಹಾಯವಾಣಿ ನಂಬರ್ ಗೆ ಕರೆ ಮಾಡಿ ಬೆಳೆ ವಿಮೆಯ ಮಾಹಿತಿ ಪಡೆದುಕೊಳ್ಳಬಹುದು.

crop insurance helpline number
crop insurance helpline number

Crop insurance helpline number  ವಿಮಾ ಕಂಪನಿಗಳ ಸಂಪರ್ಕಿಸುವ ನಂಬರ್ ಗಳು

Crop insurance helpline number : ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿ ಸಹಾಯವಾಣಿ ನಂಬರ್ 1800 425 0505, ಯೂನಿವರ್ಸಲ್ ಸೋಂಪೋ ಸಹಾಯವಾಣಿ ನಂಬರ್ 1800 200 5142, ಎಸ್.ಬಿ.ಐ ವಿಮಾ ಕಂಪನಿಯ ಸಹಾಯವಾಣಿ 1800 180 1551, 1800 209 1111, ಹೆಚ್.ಡಿಎಫ್ಸಿ ಅರ್ಗೋ 1800 266 0700, ಫ್ಯೂಚರ್ ಜನರಲಿ ಸಹಾಯವಾಣಿ ನಂಬರ್ 1800 266 4141, ಐಸಿಐಸಿ ಲೋಂಬೋರ್ಡ್  ಸಹಾಯವಾಣಿ1800 103 7712, ಬಜಾಜ್ ಅಲಾಯನ್ಸ್ ಜಿಐಸಿ 1800 209 5959, ರಿಲಾಯನ್ಸ್ ಜನರಲ್ ಇನ್ಸುರೆನ್ಸ್ ಕಂ. ಲಿಮಿಟೆಡ್ ಸಹಾಯವಾಣಿ ನಂಬರ್1800 102 4088 ಗೆ ಸಂಪರ್ಕಿಸಲು ಕೋರಲಾಗಿದೆ.

ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಕುರಿತಂತೆ  ರೈತರು 080 2656 4535, ಅಥವಾ 080 2656 4536 ಗೆ ಂಪರ್ಕಿಸಬಹುದು.

Crop insurance helpline number ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ?

ರೈತರು ಬೆಳೆ ವಿಮೆ ಹಣವನ್ನು ಯಾವ ಕಂಪನಿಗೆ ಕಟ್ಟಿರುತ್ತಾರೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅಂದರೆ ರೈತರು ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕೆ? ಹೌದು ಪ್ರತಿಯೊಂದು ಜಿಲ್ಲೆಗೆ ಒಂದೊಂದು ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ.

ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://samrakshane.karnataka.gov.in/HomePages/frmKnowYourInsCompany.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕರ್ನಾಟಕದಲ್ಲಿ ಯಾವ ಜಿಲ್ಲೆಗೆ ಯಾ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬ ಪಟ್ಟಿ ಕಾಣಿಸುತ್ತದೆ. ನಿಮ್ಮ ಜಿಲ್ಲೆಯ ಎದುರುಗಡೆ ಯಾವ  ವಿಮಾ ಕಂಪನಿ ಹೆಸರು ಇದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಅಥವಾ ವಿಮಾ ಕಂಪನಿಯನ್ನು ನೀವು  ಬರೆದಿಟ್ಟುಕೊಳ್ಳಬೇಕು. .

ಉದಾಹರಣೆಗೆ ನೀವು ಕಲಬುರಗಿ ಜಿಲ್ಲೆಯ ನಿವಾಸಿಯಾಗಿದ್ದರೆ  ನಿಮ್ಮ ಜಿಲ್ಲೆಗೆ Universal Sompo GIC  ಹಾಗೂ  KSHEMA Insurance Co. Ltd ಯನ್ನು ನಿಯೋಜಿಸಲಾಗಿದೆ.

ಇದನ್ನು ಓದಿ : ರೈತರಿಗೆ ಗುಡ್ ನ್ಯೂಸ್ ಈ ದಿನ PM kisan 16ನೇ ಕಂತು ಜಮೆ

ಅದೇ ರೀತಿ ಕೋಲಾರ ಜಿಲ್ಲೆಗೆ ಬಜಾಜ್ ಅಲಾಯಾನ್ಸ್ ಜಿಐಸಿ ಹಾಗೂ ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ನ್ನು ನಿಯೋಜಿಸಲಾಗಿದೆ. ಪಟ್ಟಿಯಲ್ಲಿ ಎಲ್ಲಾ ಜಿಲ್ಲೆಗಳ ವಿಮಾ ಕಂಪನಿಗಳಿವೆ.

ಬೆಳೆ ವಿಮೆಯ ಸ್ಟೇಟಸ್ ಮೊಬೈಲ್ ನಲ್ಲಿ ಚೆಕ್ ಮಾಡಬೇಕೆ? ಇಲ್ಲಿದೆ ಮಾಹಿತಿ

ಪ್ರಸಕ್ತ ಸಾಲಿನ ಹಾಗೂ ಕಳೆದ ಸಾಲಿನ ಬೆಳೆ ವಿಮೆ ಜಮೆಯ ಸ್ಟೇಟಸ್  ಸ್ಟೇಟಸ್ ಮೊಬೈಲ್ ನಲ್ಲಿ ಚೆಕ್ ಮಾಡಲು ಈ

https://samrakshane.karnataka.gov.in/publichome.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ Farmers ಕೆಳಗಡೆ ನಿಮಗೆ check status ಎಂಬ ಮಾಹಿತಿ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ Proposal , Mobile No. Aadhaar ಹೀಗೆ ಮೂರು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೀವು Mobile No ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಂತರ ನಿಮ್ಮ ಮೊಬೈಲ್ ನಂಬರ್ ಹಾಕಬೇಕು. ಅದರ ಕೆಳಗಡೆ ಅಲ್ಲಿ ಕಾಣಿಸುವ ಕ್ಯಾಪ್ಚ್ಯಾಕೋಡ್ ಹಾಕಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

bele vime status
bele vime status check in mobile

ನೀವು ಕ್ಯಾಪ್ಚ್ಯಾ ಕೋಡ್ ಸರಿಯಾಗಿ ನಮೂದಿಸಿದರೆ ಮಾತ್ರ ನಿಮಗೆ ಇನ್ನೊಂದು ಪೇಜ್ ಕಾಣಿಸುತ್ತದೆ. ಅಲ್ಲಿ ಪ್ರೊಪೋಸಲ್ ಸಂಖ್ಯೆ, ಮೊಬೈಲ್ ನಂಬರ್ ಕೊನೆಯ ಮೂರು ಅಂಕಿಗಳು, ನಿಮ್ಮ ಹೆಸರು ಕಾಣಿಸುತ್ತದೆ. ಅದರ ಮುಂದೆ ಸ್ಟೇಟಸ್ ಅಂದರೆ ನಿಮ್ಮ ಅರ್ಜಿಯ ಸ್ಟೇಟಸ್ ಕಾಣಿಸುತ್ತದೆ  ಅರ್ಜಿ ಬೆಳೆ ನೋಂದಣಿಯು ಪ್ರಗತಿಯಲ್ಲಿದೆಯೇ? ಅರ್ಜಿಯನ್ನುತೆಗೆದುಹಾಕಲಾಗಿದೆಯೇ ಅಥವಾ ಅಥವಾ ಸ್ವೀಕೃತವಾಗಿದೆಯೋ ಎಬುದು ಕಾಣಿಸುತ್ತದೆ. ನೀವು ಎಲ್ಲಿ ಬೆಳೆ ವಿಮೆ ಹಣ ಪಾವತಿಸಿದ್ದೀರಿ ಅದು ಪೇಮೆಂಟ್ ಸಕ್ಸೆಸ್ ಫುಲ್ ಆಗಿದೆಯೋ ಇಲ್ಲವೋ ಎಂಬುದು ಕಾಣಿಸುತ್ತದೆ. ಅದರ ಮುಂದುಗಡೆ ಕಾಣಿಸುವ ಸೆಲೆಕ್ಟ್  ಮೇಲೆ ಕ್ಲಿಕ್ ಮಾಡಬೇಕು.  ನಂತರ View Details ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ :    Bargala parihara hana jame 2024 ಯಾರಿಗೆ ಎಷ್ಟು ಜಮೆ? ಚೆಕ್ ಮಾಡಿ

ಆಗ ನಿಮ್ಮ ಹೆಸರು, ವಿಳಾಸ ಹೋಬಳಿ, ಊರು, ಸರ್ವೆ ನಂಬರ್, ಯಾವ ಬೆಳೆಗೆ ವಿಮೆ ಮಾಡಿಸಿದ್ದೀರಿ ನೀವು ಎಷ್ಟು ಬೆಳೆ ವಿಮೆ ಹಣ ಪಾವತಿಸಿದ್ದೀರಿ? ನಿಮಗೆಷ್ಟು ಬೆಳೆ ವಿಮೆ ಹಣ ಜಮೆಯಾಗಬಹುದು ಎಂಬ ಮಾಹಿತಿಯೂ ಕಾಣಿಸುತ್ತದೆ. ಬಿತ್ತನೆ ಮಾಡಿದ ದಿನಾಂಕ ಎಂಬ ಮಾಹಿತಿಯೂ ನಿಮಗೆ ಕಾಣಿಸುತ್ತದೆ. ಈ ಆಧಾರದ ಮೇಲೆ ನೀವು ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ಚೆಕ್ ನಿಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

Leave a Comment