crop insurance last date july 31st ಬೆಳೆ ವಿಮೆ ನೋಂದಣಿಗೆ ಜುಲೈ 31 ಕೊನೆಯ ದಿನ

Written by Admin

Published on:

Spread the love

crop insurance last date july 31st :  ಜುಲೈ 31 ರೊಳಗೆ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬದರ ಮಾಹಿತಿ ಇಲ್ಲಿದೆ ನೋಡಿ.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬೆಳೆದಿರುವ ಬೆಳೆಗಳಾದ ತೊಗರಿ, ಹೆಸರು, ಉದ್ದು, ಹತ್ತಿ, ಸೋಯಾ ಹಾಗೂ ಇತರೆ ಎಲ್ಲಾ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ಮಾಡಿಸಲು ಬರುವ ಜುಲೈ 31 ಕೊನೆ ದಿನವಾಗಿದ್ದು, ಜಿಲ್ಲೆಯ ರೈತ ಬಾಂಧವರು ನಿಗಧಿತ ಅವಧಿಯಲ್ಲಿ ನೊಂದಣಿ ಮಾಡಿಕೊಳ್ಳುವ ಮೂಲಕ ಲಾಭ ಪಡೆಯುವಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮನವಿ ಮಾಡಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಶೇ.90 ರಷ್ಟು ಪ್ರದೇಶ ಮಳೆಯಾಶ್ರಿತವಾಗಿರುವುದರಿಂದ ಅತೀವೃಷ್ಟಿ ಹಾಗೂ ಅನಾವೃಷ್ಟಿಗೆ ಸತತವಾಗಿ ಬೆಳೆಗಳು ತುತ್ತಾಗುವ ಸಾಧ್ಯತೆ ಇರುತ್ತದೆ. ಬಿತ್ತನೆ ಪೂರ್ವದಿಂದ ಕೊಯ್ಲಿನ ನಂತರದ ವರೆಗೆ ಅನಿರೀಕ್ಷಿತ ನೈಸರ್ಗಿಕ ವಿಕೋಪಗಳಿಂದಾಗಿ, ಅತೀವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆಯಂತಹ ಪ್ರಕೃತಿ ವಿಕೋಪಗಳಿಂದ ಯಾವುದೇ ಹಂತದಲ್ಲಿ ಬೆಳೆ ನಾಶವಾಗಬಹುದು. ಇಂತಹ ಬೆಳೆ ನಷ್ಟದಿಂದ ರೈತರನ್ನು ರಕ್ಷಿಸಲು ಸೂಕ್ತ ಪರಿಹಾರ ಪಡೆಯುವ ನಿಟ್ಟಿನಲ್ಲಿ ರೈತ ಭಾಂದವರು ಬಿತ್ತಿದ ಬೆಳೆಯ ಕ್ಷೇತ್ರವನ್ನು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ವ್ಯಾಪ್ತಿಗೆ ನೊಂದಾಯಿಸುವುದು ಅವಶ್ಯಕವಾಗಿದೆ ಎಂದಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ 6.64 ಲಕ್ಷ ರೈತರು ಬೆಳೆ ವಿಮೆ ನೊಂದಣಿ ಮಾಡಿ 70.80 ಕೋಟಿ ರೂಪಾಯಿ ತಮ್ಮ ವಂತಿಕೆ ಪಾವತಿಸಿದ್ದರು. ಪರಿಣಾಮ ಬೆಳೆ ನಾಶದಿಂದ ಬೆಳೆ ವಿಮೆ ಯೋಜನೆಯಡಿ 1,035.33 ಕೋಟಿ ರೂ. ಪರಿಹಾರ ಧನ ಪಡೆದಿರುತ್ತಾರೆ. ಇಂತಹ ಸುವರ್ಣಾವಕಾಶವನ್ನು ರೈತರು ಸದುಪಯೋಗ ಪಡೆದುಕೊಳ್ಳುವಂತೆ ಕೋರಿರುವ ಡಿ.ಸಿ. ಅವರು, ರೈತರು ತಮ್ಮ ಹತ್ತಿರದ ಗ್ರಾಮ್-ಒನ್, ಸಿ.ಎಸ್.ಸಿ ಕೇಂದ್ರ, ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.

crop insurance last date july 31st ಯಾವ ಯಾವ ಬೆಳೆಗೆ ವಿಮೆ ಮಾಡಿಸಬಹುದು?

ಬೆಳೆವಾರು ರೈತರು ಪಾವತಿಸಬೇಕಾದ ವಂತಿಕೆ ಮೊತ್ತ: ಹೆಸರು (ಮಳೆಆಶ್ರಿತ) ಪ್ರತಿ ಎಕರೆಗೆ 269.13 ರೂಪಾಯಿ, ಉದ್ದು (ಮಳೆಆಶ್ರಿತ) ಪ್ರತಿ ಎಕರೆಗೆ 265.08 ರೂಪಾಯಿ, ತೊಗರಿ (ಮಳೆಆಶ್ರಿತ) ಪ್ರತಿ ಎಕರೆಗೆ 388.51 ರೂಪಾಯಿ ತೊಗರಿ (ನೀರಾವರಿ) ಪ್ರತಿ ಎಕರೆಗೆ 406.72 ರೂಪಾಯಿ, ಹತ್ತಿ (ಮಳೆಆಶ್ರಿತ) ಪ್ರತಿ ಎಕರೆಗೆ 865.75 ರೂಪಾಯಿ, ಹತ್ತಿ (ನೀರಾವರಿ) ಪ್ರತಿ ಎಕರೆಗೆ 1,492.33 ರೂಪಾಯಿ, ಸೂಯಾ ಅವರೆ (ಮಳೆಆಶ್ರಿತ) ಪ್ರತಿ ಎಕರೆಗೆ 331.85 ರೂಪಾಯಿ, ಮುಸುಕಿನ ಜೋಳ (ಮಳೆಆಶ್ರಿತ) ಪ್ರತಿ ಎಕರೆಗೆ 457.31 ರೂಪಾಯಿ, ಮುಸುಕಿನ ಜೋಳ (ನೀರಾವರಿ) ಪ್ರತಿ ಎಕರೆಗೆ 522.06 ರೂಪಾಯಿ, ಜೋಳ (ಮಳೆ ಆಶ್ರಿತ) ಪ್ರತಿ ಎಕರೆಗೆ 317.82 ರೂಪಾಯಿ, ಎಳ್ಳು (ಮಳೆ ಆಶ್ರಿತ) ಪ್ರತಿ ಎಕರೆಗೆ 238.88 ರೂಪಾಯಿ, ನೆಲಗಡಲೆ (ಶೇಂಗಾ) (ಮಳೆ ಆಶ್ರಿತ) ಪ್ರತಿ ಎಕರೆಗೆ 452.84 ರೂಪಾಯಿ. ಗಳನ್ನು ರೈತರು ತಮ್ಮ ವಂತಿಕೆ ಮೊತ್ತ ಪಾವತಿಸಿ ಜುಲೈ 31 ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಅದೇ ರೀತಿ ಸೂರ್ಯಕಾಂತಿ (ಮಳೆ ಆಶ್ರಿತ) ಪ್ರತಿ ಎಕರೆಗೆ 329.83 ರೂಪಾಯಿ ಹಾಗೂ ಭತ್ತ (ನೀರಾವರಿ) ಪ್ರತಿ ಎಕರೆಗೆ 754.77 ರೂ. ವಂತಿಕೆ ಪಾವತಿಸಿ ಆಗಸ್ಟ್ 16 ರೊಳಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಮೊಬೈಲ್ ನಲ್ಲಿ ವಿಮೆ ಹಣ ಎಷ್ಟು ಹಣ ಕಟ್ಟಬೇಕು ಹಾಗೂ ಎಷ್ಟು ಹಣ ಜಮೆಯಾಗುವುದು ಎಂಬುದನ್ನು ಚೆಕ್ ಮಾಡಲು ಈ

https://samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಬೆಳೆ ವಿಮೆ ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ಅಲ್ಲಿ Farmers ಕೆಳಗಡೆ ನಿಮಗೆ Premium Calculator ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುವುದು. ಅಲ್ಲಿ ನೀವು ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು.

ಇದನ್ನೂ ಓದಿ Goods vehicle purchase subsidies ಗೂಡ್ಸ್ ವಾಹನ ಖರೀದಿಗೆ 3 ಲಕ್ಷ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ

ಯಾವ ಬೆಳೆಗೆ ಎಷ್ಟು ಎಕರೆಗೆ ಬೆಳೆ ವಿಮೆ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ಬೆಳೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ಎಷ್ಟು ಎಕರೆಗೆ ಬೆಳೆ ವಿಮೆ ಮಾಡಿಸಬೇಕೆಂದುಕೊಂಡಿದ್ದೀರೋ ಎಕರೆ ನಮೂದಿಸಬೇಕು. ಗುಂಟೆಯಲ್ಲಿ ಜಮೀನಿದ್ದರೂ ಗುಂಟೆ ನಮೂಡಿಸಬೇಕು. ಇದಾದ ನಂತರ  Show Premium ಮೇಲೆ ಕ್ಲಿಕ್ ಮಾಡಬೇಕು.  ಆಗ ನೀವು ನಮೂದಿಸಿದ ಎಕರೆ, ಒಟ್ಟು ಎಷ್ಟು ಬೆಳೆ ವಿಮೆ ಪರಿಹಾರ ಜಮೆಯಾಗಬಹುದು ಎಂಬ ಮಾಹಿತಿ ಕಾಣಿಸುತ್ತದೆ. ಇದರೊಂದಿಗೆ ರಾಜ್ಯ, ಕೇಂದ್ರ ಹಾಗೂ ನಿಮ್ಮ ಪಾವತಿಸಿದ ಒಟ್ಟು ಬೆಳೆ ವಿಮೆ ಹಣ ಕಾಣಸುತ್ತದೆ. ಅದರ ಮುಂದುಗಡೆ ನೀವೆಷ್ಟು ಹಣ ಪಾವತಿಸೇಬಾಕುಗುತ್ತದೆ ಎಂಬ ಮಾಹಿತಿಯೂ ಕಾಣಿಸುತ್ತದೆ. ಪ್ರಾಕೃತಿಕ ವಿಕೋದಿಂದಾಗಿ ಬೆಳೆ ಹಾಳಾದರೆ ನಿಮಗೆಷ್ಟು ಬೆಳೆ ವಿಮೆ ಹಣ ಜಮೆಯಾಗಬಹುದು ಎಂಬ ಮಾಹಿತಿ ಸಹ ಕಾಣಿಸುತ್ತದೆ.

Leave a Comment