crop insurance money ಜಮೆಯಾಗಲು ರೈತರೇನು ಮಾಡಬೇಕು? 2024

Written by Admin

Updated on:

Spread the love

crop insurance money:  ರೈತರಿಗೆ ಬೆಳೆ ವಿಮೆ ಹಣ ಜಮೆಯಾಗಬೇಕಾದರೆ ರೈತರೇನು ಮಾಡಬೇಕು? ಯಾರಿಗೆ ಸಂಪರ್ಕಿಸಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರತಿ ವರ್ಷದಂತೆ  ಈ ವರ್ಷವೂ ಸಹ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಲು ಕರ್ನಾಟಕ ರಾಜ್ಯದ ರೈತರಿಂದ ಅರ್ಜಿ ಆಹ್ವಾನಿಸಲಾಗಿತ್ತು. ರೈತರೂ ಸಹ ನಿಗದಿತ ಸಮಯದಲ್ಲಿ ಬೆಳೆ ವಿಮೆಗೆ ಅರ್ಜಿ ಸಲ್ಲಿಸಿರುತ್ತಾರೆ.

ಬಹುತೇಕ ರೈತರು ಬೆಳೆ ವಿಮೆ ಮಾಡಿಸಿರುತ್ತಾರೆ. ಆದರೆ ಬೆಳೆ ವಿಮೆ ಪಾವತಿಸಿದ ನಂತರ ಏನು ಮಾಡಬೇಕು? ಅಂದರೆ ಪ್ರಾಕೃತಿಕ ವಿಕೋಪದಿಂದಾಗಿ ಬೆಳೆ ಹಾನಿಯಾದರೆ ಯಾರಿಗೆ ಸಂಪರ್ಕಿಸಬೇಕು? ಯಾವಾಗ ಯಾರಿಗೆ ಕರೆ ಮಾಡಿದರೆ ಬೆಳೆ ವಿಮೆ ಹಣ ಜಮೆಯಾಗಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಕೇಂದ್ರ ಸರ್ಕಾರವು ಜಾರಿಗೆ ತಂದ ಯೋಜನೆಗಳಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯು ರೈತರಿಗೆ ಅತ್ಯಂತ ಉಪಯುಕ್ತವಾಗಿದೆ. ಈ ಯೋಜನೆಯಡಿಯಲ್ಲಿ ರೈತರು ಬೆಳೆ ವಿಮೆ ಮಾಡಿಸಿ ವಿಮಾ ಸೌಲಭ್ಯ ಪಡೆದುಕೊಳ್ಳುತ್ತಿರುವುದುತಮಗೆಲ್ಲಾ ಗೊತ್ತಿದ್ದ ಸಂಗತಿ. ಆದರೂ ಸಹ ಇನ್ನೂ ಬಹಳ ರೈತರು ಈ ಯೋಜನೆಯ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂಬುದು ಖೇದಕರ ಸಂಗತಿಯಾಗಿದೆ.

Crop insurance money  ಯಾವಾಗ ಬೆಳೆ ಹಾಳಾದರೆ ವಿಮೆ ನಿರ್ಧರಿಸಲಾಗುವುದು?

ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡ ರೈತರ ಜಮೀನು ಸ್ಥಳ, ನಿರ್ಧಿಷ್ಠ, ಪ್ರಕೃತಿ ವಿಕೋಪ, ಆಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಘ ಸ್ಫೋಟ ಹಾಗೂ ಗುಡುಗು ಮಿಂಚುಗಳಿಂದಾಗಿ ಉಂಟಾಗುವ ಬೆಳೆ ಅವಘಡ ಸಂದರ್ಭದಲ್ಲಿ ಬೆಳೆ ನಷ್ಟವಾದರೆ ವೈಯಕ್ತಿಕ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸು ಬೆಳೆ ವಿಮಾ ನಷ್ಟ ಪರಿಹಾರವನ್ನು ನೀಡಲಾಗುವುದು.

Crop insurance money  ಮುಂಗಾರು ಹಂಗಾಮಿಗೆ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು?

ಮುಂಗಾರು ಹಂಗಾಮಿನ ಬೆಳೆಗಳಾದ ಹೆಸರು, ಉದ್ದು, ತೊಗರಿ, ಮುಸುಕಿನ ಜೋಳ, ಸಜ್ಜೆ, ಸೋಯಾ ಅವರೆ, ಎಳ್ಳು, ನೆಲಗಡಲೆ (ಶೇಂಗಾ), ಹತ್ತಿ, ಅರಿಶಿಣ, ಭತ್ತ, ಸೂರ್ಯಕಾಂತಿ, ಟೋಮ್ಯಾಟೋ, ಈರುಳ್ಳಿು, ಕೆಂಪು ಮೆಣಸಿನ ಕಾಯಿ, ಪಪ್ಪಾಯ ಸೇರಿದಂತೆ ಇನ್ನಿತರ ಬೆಳೆಗಳ ವಿಮೆ ಮಾಡಿಸಬಹುದು. ಆದರೆ ಈ ಬೆಳೆಗಳು ಜಿಲ್ಲೆಯಿಂದ ಜಿಲ್ಲೆಗೆ ವ್ಯತ್ಯಾಸವಾಗಿರುತ್ತದೆ. ಹಾಗಾಗಿ ನಿಮ್ಮ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬುದನ್ನು ವಿಚಾರಿಸಿ ವಿಮೆ ಮಾಡಿಸಬೇಕು.

Crop insurance money  ಯಾವಾಗ ಎಷ್ಟು ಪ್ರಮಾಣದಲ್ಲಿ ನೀಡಲಾಗುವುದು?

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದಾಗಿ ಬರದ ಛಾಯೆ ಆವರಿಸಿದೆ. ಇಂತಹ ಮಳೆ ಅಭಾವ ಅಥವಾ ಇತರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಧಿಸೂಚಿತ ಬೆಳೆ ವಿಮೆ ಘಟಕದಲ್ಲಿ ಶೇ. 75 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಠ ಶೇ. 25 ರಷ್ಟು ಪರಿಹಾರವನ್ನು ವಿತರಿಸಲು ಯೋಜನೆಯಲ್ಲಿ ಅವಕಾಶ ಇರುತ್ತದೆ. ಈ ರೀತಿಯ ಪರಿಹಾರವು ಗ್ರಾಮ ಪಂಚಾಯತಿ ಮಟ್ಟದ ಅಧಿಸೂಚಿತ ಬೆಳೆಗಳಿಗೆ ನೋಂದಣಿ ಮಾಡಿಸಿದ ರೈತರಿಗೆ ಮಾತ್ರ ಅನ್ವಯವಾಗುತ್ತದೆ. ಈಗಾಗಲೇ ಬಿತ್ತನೆ ಮಾಡಿರುವ ರೈತರು ಬೆಳೆವಿಮೆ ನೋಂದಣಿ ಮಾಡಿಸದೆ ಇದ್ದಲ್ಲಿ ತಮ್ಮ ಗ್ರಾಮ ಪಂಚಾಯತ್ ಮಟ್ಟದ ಅಧಿಸೂಚಿತ ಬೆಳೆಗಳಿಗೆ ಕೊನೆಯ ದಿನಾಂಕದೊಳಗಾಗಿ ಬೆಳೆ ವಿಮೆ ನೋಂದಣಿ ಮಾಡಿಸಲು ಕೋರಲಾಗಿದೆ.

Crop insurance money ಜಮೆಯಾಗಬೇಕಾದರೆ ರೈತರೇನು ಮಾಡಬೇಕು?

ಮುಂಗಾರು ಹಂಗಾಮಿಗೆ ಬೆಳೆಯಲಾದ ಬೆಳೆಗಳು ಪ್ರಕೃತಿ ವಿಕೋಪದಿಂದಾಗಿ ಅಂದರೆ ಅತೀವೃಷ್ಟಿ, ಅನಾವಷ್ಟಿ, ಪ್ರವಾರ, ಗುಡುಗು, ಮಿಂಚಿನಿಂದಾಗು ಬೆಂಕಿ ಅವಘಡ, ಭೂ ಕುಸಿತದಿಂದಾಗಿ ಬೆಳ ಹಾನಿಯಾದರೆ ರೈತರೂ 72 ಗಂಟೆಯೊಳಗೆ ವಿಮಾ ಕಂಪನಿಗೆ ತಿಳಿಸುವುದು ಕಡ್ಡಾಯವಾಗಿದೆ.

ಇದನ್ನೂ ಓದಿ PM kisan fund released ಸ್ಟೇಟಸ್ -2024 ಚೆಕ್ ಮಾಡಿ

ಒಂದು ವೇಳೆ ನೀವು 72 ಗಂಟೆಯೊಳಗೆ ವಿಮಾ ಕಂಪನಿಗೆ ತಿಳಿಸದೆ ಇದ್ದಲ್ಲಿ ನಿಮಗೆ ವಿಮೆಯ ಹಣ ಜಮೆಯಾಗುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ ರೈತರು ಯಾವ ವಿಮಾ ಕಂಪನಿಗೆ ವಿಮೆ ಪಾವತಿಸಿದ್ದಾರೋ ಆ ವಿಮಾ ಕಂಪನಿಯ ಸಿಬ್ಬಂದಿಗೆ ಕರೆ ಮಾಡಿ ತಿಳಿಸಬೇಕು. ಆಗ ವಿಮಾ ಕಂಪನಿಯ ಸಿಬ್ಬಂದಿಗಳು ನಿಮ್ಮ ಜಮೀನಿಗೆ ಬಂದು ಬೆಳೆ ಹಾನಿಯಾಗಿರುವ ಕುರಿತು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ ನಂತರ ರೈತರಿಗೆ ವಿಮೆ ಹಣ ಪಾವತಿಸಲಾಗುವುದು.

ಯಾವ ಬೆಳೆಗೆ ವಿಮೆ ಮಾಡಿಸಿರುತ್ತಾರೋ ಆ ಬೆಳೆಗೆ ವಿಮೆ ಹಣ ಜಮೆಯಾಗುತ್ತದೆ. ಇದು ಒಂದು ಬೆಳೆ ಗೆ ಇನ್ನೊಂದು ಬೆಳೆಗೆ ವ್ಯತ್ಯಾಸವಾಗಿರುತ್ತದೆ.

Crop insurance money  ಸ್ಟೇಟಸ್ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

ಬೆಳೆ ವಿಮೆ ಮಾಡಿಸಿದ ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಬೆಳೆ ವಿಮೆಯ ಸ್ಟೇಟಸ್ ಚೆಕ್ ಮಾಡಬಹುದು. ಹೌದು, ಈ

https://samrakshane.karnataka.gov.in/publichome.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

ಆಗ ತೆರೆದುಕೊಳ್ಳುವ ಪೇಜ್ ನಲ್ಲಿ Farmers ಕೆಳಗಡೆ ನಿಮಗೆ check status ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ Proposal , Mobile No. Aadhaar ಹೀಗೆ ಮೂರು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೀವು Mobile No ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ಹಾಕಬೇಕು. ಅದರ ಕೆಳಗಡೆ ಅಲ್ಲಿ ಕಾಣಿಸುವ ಕ್ಯಾಪ್ಚ್ಯಾಕೋಡ್ ಹಾಕಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ನೀವು ಕ್ಯಾಪ್ಚ್ಯಾ ಕೋಡ್ ಸರಿಯಾಗಿ ನಮೂದಿಸಿದರೆ ಮಾತ್ರ ನಿಮಗೆ ಇನ್ನೊಂದು ಪೇಜ್ ಕಾಣಿಸುತ್ತದೆ.  ಅರ್ಜಿ  ನೋಂದಣಿಯು ಪ್ರಗತಿಯಲ್ಲಿದೆಯೇ? ಅರ್ಜಿಯನ್ನುತೆಗೆದುಹಾಕಲಾಗಿದೆಯೇ ಅಥವಾ ಅಥವಾ ಸ್ವೀಕೃತವಾಗಿದೆಯೋ ಎಬುದು ಕಾಣಿಸುತ್ತದೆ. ನೀವು ಎಲ್ಲಿ ಬೆಳೆ ವಿಮೆ ಹಣ ಪಾವತಿಸಿದ್ದೀರಿ ಅದು ಪೇಮೆಂಟ್ ಸಕ್ಸೆಸ್ ಫುಲ್ ಆಗಿದೆಯೋ ಇಲ್ಲವೋ ಎಂಬುದು ಕಾಣಿಸುತ್ತದೆ. ಅದರ ಮುಂದುಗಡೆ ಕಾಣಿಸುವ ಸೆಲೆಕ್ಟ್  ಮೇಲೆ ಕ್ಲಿಕ್ ಮಾಡಬೇಕು.  ನಂತರ View Details ಮೇಲೆ ಕ್ಲಿಕ್ ಮಾಡಿ ಸ್ಟೇಟಸ್ ಚೆಕ್ ಮಾಡಬಹುದು.

Leave a Comment