Crop Insurance money released ರಾಜ್ಯದ ಮುಂಗಾರು ಹಿಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರಿಗೆ ಸಂತಸದ ಸುದ್ದಿ. ಈಗಾಗಲೇ ರಾಜ್ಯದಲ್ಲಿ ಬೆಳೆ ವಿಮೆ ಮಾಡಿಸಿದ ರೈತರಿಗೆ ವಿಮೆ ಹಣ ಬಿಡುಗಡೆ ಮಾಡಲಾಗುತ್ತಿದೆ.
ಹೌದು, ಕಳೆದ ಸಾಲಿನ ಅಂದರೆ 2023-24ನೇ ಸಾಲಿನಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರ ಖಾತೆಗೆ ಮೊದಲ ಕಂತು ಹಣ ಜಮೆ ಮಾಡಲಾಗುತ್ತಿದೆ. ಯಾವ ಯಾವ ಬೆಳೆಗೆ ವಿಮೆ ಹಣ ಬಿಡುಗಡೆ ಮಾಡಲಾಗುತ್ತಿದೆ? ಎಷ್ಟು ಹಣ ಜಮೆ ಮಾಡಲಾಗುತ್ತಿದೆ ಎಂಬುದನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
Crop Insurance money released ಯಾವ ಯಾವ ಬೆಳೆಗೆ ವಿಮೆ ಹಣ ಜಮೆಯಾಗುತ್ತಿದೆ?
ಮುಂಗಾರು ಹಂಗಾಮಿನ ತೊಗರಿ, ಹೆಸರು, ಉದ್ದು, ಮುಸುಕಿನ ಜೋಳ, ಶೇಂಗಾ, ತರಕಾರಿ ಬೆಳೆಗಳಾದ ಟೊಮ್ಯಾಟೋ, ಮೆಣಸಿನ ಕಾಯಿ, ಹಾಗೂ ಇನ್ನತರ ಬೆಳೆಗಳಾದ ಸೂರ್ಯಕಾಂತಿ, ಅರಿಶಿಣ, ಭತ್ತ, ಹತ್ತಿ, ಎಳ್ಳು, ಸೋಯಾ ಅವರೆ ಸೇರಿದಂತೆ ಇತರ ಬೆಳೆಗಳಿಗೆ ವಿಮೆ ಮಾಡಿಸಿದ ರೈತರಿಗೆ ವಿಮೆ ಹಣ ಜಮೆ ಮಾಡಲಾಗುತ್ತಿದೆ. ನೀವು ವಿಮೆ ಮಾಡಿಸಿದ್ದರೆ ನಿಮಗೆ ಇನ್ನೂ ವಿಮೆ ಹಣ ಜಮೆಯಾಗದಿದ್ದರೆ ಕೂಡಲೇ ವಿಮಾ ಕಂಪನಿಗೆ ವಿಚಾರಿಸಬಹುದು.
Crop Insurance money released ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗಬಹುದು?
ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರು ತಮಗೆ ಷ್ಟು ವಿಮೆ ಹಣ ಜಮೆಯಾಗಬಹುದು ಎಂಬುದನ್ನು ಚೆಕ್ ಮಾಡಲು ಈ
https://samrakshane.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನೀವು ಋತು ಆಯ್ಕೆಯಲ್ಲಿ ಖಾರೀಫ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಪ್ರೋಪೋಸಲ್ ಸಂಖ್ಯೆ, ಮೊಬೈಲ್ ನಂಬರ್ ಕೊನೆಯ ಮೂರು ಅಂಕಿಗಳು, ನಿಮ್ಮ ಹೆಸರು, ವಿಮಾ ಕಂಪನಿಯ ಅರ್ಜಿ ಸ್ಥಿತಿ ಹಾಗೂ ಕೊನೆಯಲ್ಲಿ ಸೆಲೆಕ್ಟ್ Select ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ಇನ್ನೊಂದು ಪೇಜ್ ಕಾಣಿಸುತ್ತದೆ. ಅಲ್ಲಿ ವೀವ್ ಡಿಟೇಲ್ View Details ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮಗೆ ನೀವು ಯಾವ ಬೆಳಗೆ ವಿಮೆ ಮಾಡಿಸಿದ್ದೀರಿ? ನಿಮಗೆಷ್ಟು ವಿಮೆ ಹಣ ಜಮೆಯಾಗಬಹುದು (Sum Assured) ಕಾಣಿಸುತ್ತದೆ.
ಬೆಳೆ ವಿಮೆ ಪರಿಹಾರ ಯಾವಾಗ ಎಷ್ಟು ಪ್ರಮಾಣದಲ್ಲಿ ನೀಡಲಾಗುವುದು?
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದಾಗಿ ಬರದ ಛಾಯೆ ಆವರಿಸಿದೆ. ಇಂತಹ ಮಳೆ ಅಭಾವ ಅಥವಾ ಇತರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಧಿಸೂಚಿತ ಬೆಳೆ ವಿಮೆ ಘಟಕದಲ್ಲಿ ಶೇ. 75 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಠ ಶೇ. 25 ರಷ್ಟು ಪರಿಹಾರವನ್ನು ವಿತರಿಸಲು ಯೋಜನೆಯಲ್ಲಿ ಅವಕಾಶ ಇರುತ್ತದೆ.
ಇದನ್ನೂ ಓದಿ : Grahalakshmi Scheme status 2024 ಮೊಬೈಲ್ ನಲ್ಲೇ ಚೆಕ್ ಮಾಡಿ
ಈ ರೀತಿಯ ಪರಿಹಾರವು ಗ್ರಾಮ ಪಂಚಾಯತಿ ಮಟ್ಟದ ಅಧಿಸೂಚಿತ ಬೆಳೆಗಳಿಗೆ ನೋಂದಣಿ ಮಾಡಿಸಿದ ರೈತರಿಗೆ ಮಾತ್ರ ಅನ್ವಯವಾಗುತ್ತದೆ. ಈಗಾಗಲೇ ಬಿತ್ತನೆ ಮಾಡಿರುವ ರೈತರು ಬೆಳೆವಿಮೆ ನೋಂದಣಿ ಮಾಡಿಸದೆ ಇದ್ದಲ್ಲಿ ತಮ್ಮ ಗ್ರಾಮ ಪಂಚಾಯತ್ ಮಟ್ಟದ ಅಧಿಸೂಚಿತ ಬೆಳೆಗಳಿಗೆ ಕೊನೆಯ ದಿನಾಂಕದೊಳಗಾಗಿ ಬೆಳೆ ವಿಮೆ ನೋಂದಣಿ ಮಾಡಿಸಲು ಕೋರಲಾಗಿದೆ.
ಬೆಳೆ ಹಾನಿಯಾದಾಗ ರೈತರೇನು ಮಾಡಬೇಕು?
ಮುಂಗಾರು ಹಂಗಾಮಿಗೆ ಬೆಳೆಯಲಾದ ಬೆಳೆಗಳು ಪ್ರಕೃತಿ ವಿಕೋಪದಿಂದಾಗಿ ಅಂದರೆ ಅತೀವೃಷ್ಟಿ, ಅನಾವಷ್ಟಿ, ಪ್ರವಾರ, ಗುಡುಗು, ಮಿಂಚಿನಿಂದಾಗು ಬೆಂಕಿ ಅವಘಡ, ಭೂ ಕುಸಿತದಿಂದಾಗಿ ಬೆಳ ಹಾನಿಯಾದರೆ ರೈತರೂ 72 ಗಂಟೆಯೊಳಗೆ ವಿಮಾ ಕಂಪನಿಗೆ ತಿಳಿಸುವುದು ಕಡ್ಡಾಯವಾಗಿದೆ.
ಒಂದು ವೇಳೆ ನೀವು 72 ಗಂಟೆಯೊಳಗೆ ವಿಮಾ ಕಂಪನಿಗೆ ತಿಳಿಸದೆ ಇದ್ದಲ್ಲಿ ನಿಮಗೆ ವಿಮೆಯ ಹಣ ಜಮೆಯಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಹಾಗಾಗಿ ರೈತರು ಯಾವ ವಿಮಾ ಕಂಪನಿಗೆ ವಿಮೆ ಪಾವತಿಸಿದ್ದಾರೋ ಆ ವಿಮಾ ಕಂಪನಿಯ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ಆಗ ವಿಮಾ ಕಂಪನಿಯ ಸಿಬ್ಬಂದಿಗಳು ನಿಮ್ಮ ಜಮೀನಿಗೆ ಬಂದು ಬೆಳೆ ಹಾನಿಯಾಗಿರುವ ಕುರಿತು ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತಾರೆ. ನಂತರ ನಿಮಗೆ ಬೆಳೆ ವಿಮೆ ಹಣ ಜಮೆಯಾಗುವ ಸಾಧ್ಯತೆಯಿರುತ್ತದೆ. ಇನ್ನೇಕೆ ತಡ ಒಮ್ಮೆ ಸ್ಟೇಟಸ್ ಚೆ್ಕ್ ಮಾಡಿ ನೋಡಿ.