Crop insurance number ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ವಿಮೆ ಮಾಡಿಸಿದ ರೈತರು ಕರ್ನಾಟಕದ ರೈತರಿಗೆ ವಿಮೆ ಹಣ ಜಮೆಯಾಗದಿದ್ದರೆ ಕೆಳಗೆ ನೀಡಲಾದ ಬೆಳೆ ವಿಮೆ ಸಹಾಯವಾಣಿ ನಂಬರಿಗೆ ಕರೆ ಮಾಡಿ.
ಹೌದು, ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿವಿಧ ವಿಮಾ ಕಂಪನಿಗಳನ್ನು ನಿಯೋಜಿಸಲಾಗಿದೆ.ನಿಮ್ಮ ಜಿಲ್ಲೆಗೆ ಯಾವಿ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಹಾಗೂ ನಿಮಗೆ ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗಲಿದೆ ಎಂಬುದು ಸೇರಿದಂತೆ ಪ್ರಧಾನಮಂತ್ರಿ ಫಸಲಿ ಬಿಮಾ ಯೋಜನೆಯ ಮಾಹಿತಿಯನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
Crop insurance number ಬೆಳೆ ಮಾಡಿಸಿದ ರೈತರು ಯಾರಿಗೆ ಕರೆ ಮಾಡಬೇಕು?
ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ವಿವಿಧ ಬೆಳೆಗಳಿಗೆ ವಿಮೆ ಪಾವತಿಸಿದ ರೈತರಿಗೆ ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದಾರೆ ಎಂಬುದು ಬಹುತೇಕರಿಗೆ ಗೊತ್ತೇ ಇರುವುದಿಲ್ಲ. ವಿಮೆ ಹಣ ಜಮೆಯಾಗಿಲ್ಲವೆಂದು ಕೊರಗುತ್ತಿರುತ್ತಾರೆ. ಆದರೆ ಯಾರಿಗೆ ಕರೆ ಮಾಡಬೇಕೆಂಬ ಗೊಂದಲದಲ್ಲಿರುತ್ತಾರೆ.
Crop insurance number ಯಾವ ಜಿಲ್ಲೆಯ ರೈತರು ಯಾವ ವಿಮಾ ಕಂಪನಿಗೆ ಕರೆ ಮಾಡಬೇಕು?
ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ಬೆಳೆ ವಿಮೆ ಪಾವತಿಸಿದ ರೈತರಿಗೆ ಜಿಲ್ಲಾವಾರು ವಿಮಾ ಕಂಪನಿಗಳ ಮಾಹಿತಿ ಇಲ್ಲಿದೆ.
ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬುದನ್ನು ಚೆಕ್ ಮಾಡಲು ಈ
https://samrakshane.karnataka.gov.in/publichome.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ Farmers ಕೆಳಗಡೆ Premium Calculator, crop you can insure, check status, know your Insurance co. Find Gram Panchayat ueit crop Insurance details on survey No ಹೀಗೆ ಕೆಲವು ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ನೀವು Know Your Insurance Co ಮೇಲೆ ಕ್ಲಿಕ್ ಮಾಡಬೇಕು.
ಅಥವಾ ಈ https://samrakshane.karnataka.gov.in/HomePages/frmKnowYourInsCompany.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಆಗ ಜಿಲ್ಲಾವಾರು ವಿಮಾ ಕಂಪನಿಯ ಪೇಜ್ ಕಾಣಿಸುತ್ತದೆ. ಅಲ್ಲಿ ನೀವು Select District ನಲ್ಲಿ ನಿಮ್ಮ ಜಿಲ್ಲೆಆಯ್ಕೆ ಮಾಡಿಕೊಳ್ಳಬೇಕು. ಆಗ ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬುದು ಕಾಣಿಸುತ್ತದೆ. ಇಲ್ಲಿ ಕೆಳಗೆ ವಿಮಾ ಕಂಪನಿಯ ಹೆಸರು ಹಾಗೂ ಆ ಕಂಪನಿಯ ಸಹಾಯವಾಣಿ ನಂಬರ್ ನೀಡಲಾಗಿದೆ.ಆ ನಂಬರಿಗೆ ನೀವು ಕರೆ ಮಾಡಿ ವಿಚಾರಿಸಬಹುದು.
ಬೆಳೆ ವಿಮೆ ನೋಂದಣಿ ಪ್ರಕ್ರಿಯೆಗೆ ಸಂಬಂಧಿಸಿದಂತೆ 080-2656 4535, 080 2656 4536, 080 2656 4537 ಗೆ ಕರೆ ಮಾಡಬಹುದು.
ಬೆಳೆ ವಿಮೆ ಜಮೆಯ ಕುರಿತಂತೆ ಈ ಕೆಳಗಿನ ನಂಬರುಗಳಿಗೆ ಕರೆ ಮಾಡಬಹುದು.
ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿಯ ಉಚಿತ ಸಹಾಯವಾಣಿ 1800 425 0505 ಗೆ ಸಂಪರ್ಕಿಸಬಹುದು.
ಯೂನಿವರ್ಸಲ್ ಸ್ಯಾಂಪೂ ಕಂಪನಿಯ ಉಚಿತ ಸಹಾಯವಾಣಿ 1800 200 5142 ಗೆ ಸಂಪರ್ಕಿಸಬಹುದು.
ಎಸ್.ಬಿ.ಐ ಕಂಪನಿಯ ಉಚಿತ ಸಹಾಯವಾಣಿ 1800 180 1551 ಗೆ ಸಂಪರ್ಕಿಸಬಹುದು.
ಹೆಚ್.ಡಿ.ಎಫ್.ಸಿ ಎರ್ಗೋ ಉಚಿತ ಸಹಾಯವಾಣಿ 1800 266 0700 ಗೆ ಸಂಪರ್ಕಿಸಬಹುದು.
ಫ್ಯೂಚರ್ ಜನರಲ್ ಇನ್ಸುರೆನ್ಸ್ ಕಂಪನಿಯ ಉಚಿತ ಸಹಾಯವಾಣಿ 1800 266 4141 ಗೆ ಸಂಪರ್ಕಿಸಬಹುದು.
ಇದನ್ನೂ ಓದಿ : Land mutation ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ 2024
ಐಸಿಐಸಿಐ ಲೋಂಬಾರ್ಡ್ ಇನ್ಸುರೆನ್ಸ್ ಕಂಪನಿ ಉಚಿತ ಸಹಾಯವಾಣಿ 1800 103 7712 ಗೆ ಸಂಪರ್ಕಿಸಬಹುದು.
ಬಜಾಜ್ ಅಲಾಯನ್ಸ್ ಇನ್ಸುರೆನ್ಸ್ ಕಂಪನಿ ಉಚಿತ ಸಹಾಯವಾಣಿ 1800 209 5959 ಗೆ ಸಂಪರ್ಕಿಸಬಹುದು.
ಇನ್ನೇಕೆ ತಡ,ಕೂಡಲೇ ನಿಮ್ಮ ಜಿಲ್ಲೆಯ ವಿಮಾ ಕಂಪನಿಗೆ ಕರೆ ಮಾಡಿ ಬೆಳೆ ವಿಮೆ ಹಣ ಪಡೆಯಿರಿ.
ಬೆಳೆ ವಿಮೆ ಕಂಪನಿಗೆ ಕರೆ ಮಾಡಿದ ನಂತರ ನೀವು ನಿಮ್ಮ ಮೊಬೈಲ್ ನಲ್ಲೇ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಬಹುದು.