Crop insurance status ಮೊಬೈಲ್ ನಂಬರ್ ಹಾಕಿ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿ 2024

Written by Admin

Updated on:

Spread the love

Crop insurance status : ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರು ತಮ್ಮ ಮೊಬೈಲ್ ನಂಬರ್ ಹಾಕಿ ಬೆಳೆ ವಿಮೆ ಹಣ ಜಮೆಯಾಗಿರುವುದನ್ನು ಚೆಕ್ ಮಾಡಬಹುದು.

Crop insurance status

ಹೌದು, ರೈತ ಬಾಂಧವರೇ, ಈ ಲೇಖನದಲ್ಲಿ ನಿಮಗೆ ಮುಂಗಾರುಹಾಗೂ ಹಿಂಗಾರು ಹಂಗಾಮಿನ ಹಣ ಜಮೆಯಾಗಿರುವುದನ್ನು ಹೇಗೆ ಚೆಕ್ ಮಾಡಬೇಕೆಂಬುದುರ ಕುರಿತು ತಿಳಿಸಲಾಗುವುದು. ಇಲ್ಲಿ ಕೆಳಗೆ ನೀಮಗೆ ತಿಳಿಸಿದ ಪ್ರಕಾರ ಅಂದರೆ ಕೇವಲ ನಿಮ್ಮ ಮೊಬೈಲ್ ನಂಬರ್ ಹಾಕಿ ನೀವು ಬೆಳೆ ವಿಮೆ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

Crop insurance status ಮೊಬೈಲ್ ನಂಬರ್ ಹಾಕಿ ಬೆಳೆ ವಿಮೆ ಜಮೆಯಾಗಿರುವುದನ್ನು ಚೆಕ್ ಮಾಡುವುದು ಹೇಗೆ?

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಬೆಳೆ ವಿಮೆ ಪಾವತಿಸಿದ ರೈತರು ಹಾಗೂ ತಮ್ಮ ಬೆಳೆ ಮಳೆಯಿಲ್ಲದೆ ಹಾನಿಯಾಗಿದ್ದರೆ ನಿಮಗೆ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. . ಆಗ ನಿಮಗೆ ಕ್ರಾಪ್ ಇನ್ಸುರೆನ್ಸ್ ಸ್ಟೇಟಸ್ ಚೆಕ್ ಮಾಡುವ ಪೇಜ್ ಕಾಣಿಸುತ್ತದೆ. ಮಾಡಬೇಕು ಅಲ್ಲಿ ನೀವು ಮುಂಗಾರು ಹಾಗೂ ಹಿಂಗಾರು ಹೀಗೆ ಯಾವ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಅದನ್ನು ನಿರ್ಧರಿಸಿ ಮುಂದಿನ ಪ್ರಕ್ರಿಯೆ ಆರಂಭಿಸಬೇಕು.

ಉದಾಹರಣೆಗೆ 2023-24ನೇ ಸಾಲಿನ  ಮುಂಗಾರು ಹಂಗಾಮಿನ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವುದಿದ್ದರೆ ಖಾರೀಫ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ.  Farmers ಕಾಲಂ ಕೆಳಗಡೆ ಕಾಣುವ Check Status ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊದು ಪೇಜ್ ತೆರೆದುಕೊಳ್ಳುತ್ತದೆ.

ನೀವು ಮೊಬೈಲ್ ನಂಬರ್ ಹಾಕಿ ಸ್ಟೇಟಸ್ ಚೆಕ್ ಮಾಡತ್ತೀರೆಂದರೆ  ಇಲ್ಲಿ ಮೊಬೈಲ್ ನಂಬರ್ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ಬೆಳೆ ವಿಮೆ ಮಾಡಿಸುವಾಗ ಯಾವ ಮೊಬೈಲ್ ನಂಬರ್ ಕೊಟ್ಟಿರುತ್ತಾರೋ ಆ ಮೊಬೈಲ್ ನಂಬರ್ ನಮೂದಿಸಬೇಕು. ಸಾಮಾನ್ಯವಾಗಿ ರೈತರ ಬಳಿ ಒಂದೇ ಮೊಬೈಲ್ ನಂಬರ್ ಇರುತ್ತದೆ. ಒಂದು ವೇಳೆ ನೀವು ಮೊಬೈಲ್ ನಂಬರ್ ಇತ್ತೀಚೆಗೆ ಬದಲಿಸಿದ್ದರೆ ಮಾತ್ರ ಹಳೆ ನಂಬರ್ ಹಾಕಬೇಕಾಗುತ್ತದೆ.

ಇದನ್ನೂ ಓದಿ Land map ನಿಮ್ಮಜಮೀನಿನ ಮ್ಯಾಪ್ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿ 2024

ಇದಾದ ಮೇಲೆ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ಒಂದು ವೇಳೆ ನಿಮಗೆ ಕ್ಯಾಪ್ಚ್ಯಾ ಕೋಡ್ ಸರಿಯಾಗಿ ಕಾಣಿಸದಿದ್ದರೆ Refress ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಹೊಸ ಕ್ಯಾಪ್ಚ್ಯಾ ಕೋಡ್ ಅಪ್ಡೇಟ್ ಆಗುತ್ತದೆ. ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ನಮೂದಿಸಿ Search ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಬೆಳೆ ವಿಮೆ ಹಣ ಜಮೆಯಾಗಿದೆಯೋ ಇಲ್ಲವೋ ಎಂಬ ಮಾಹಿತಿ ಕಾಣಿಸುತ್ತದೆ.

Crop insurance status ಬೆಳೆ ವಿಮೆ ಅರ್ಜಿ ಸ್ವೀಕೃತವಾಗಿದೆಯೋ ಇಲ್ಲವೋ? ಚೆಕ್ ಮಾಡಿ

ನಿಮಗೆಇನ್ನೂ ಬೆಳೆ ವಿಮೆ ಜಮೆಯಾಗಿರದಿದ್ದರೆ ನಿಮ್ಮ ಬೆಳೆ ವಿಮೆಯ ಅರ್ಜಿ ವಿಮಾ ಕಂಪನಿಯಿಂದ ಸ್ವೀಕೃತವಾಗಿದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತದೆ. ಆಲ್ಲಿ ನೀವು ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಿದರೆ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿನೀವು ಯಾವ ಬೆಳೆಗೆ ವಿಮೆ ಮಾಡಿಸಿದ್ದೀರಿ? ನಿಮಗೆ ಬೆಳೆ ವಿಮೆ ಹಣ ಎಷ್ಟು ರೂಪಾಯಿಯವರೆಗೆ ಜಮೆ ಆಗಬಹುದು ಎಂಬ ಮಾಹಿತಿ ಕಾಣಿಸುತ್ತದೆ.

agriculture land

ನಿಮಗೆ ಬೆಳೆ ವಿಮೆ ಹಣ ಇನ್ನೂ ಜಮೆಯಾಗಿಲ್ಲವಾದರೆ ನೀವು ಯಾವ ವಿಮಾ ಕಂಪನಿಗೆ ಬೆಳೆ ವಿಮೆ ಮಾಡಿಸಿದ್ದೀರೋ ಆ ವಿಮಾ ಕಂಪನಿಗೆ ಸಂಪರ್ಕಿಸಬೇಕು. ನಿಮಗೆ ಬೆಳೆ ವಿಮಾ ಕಂಪನಿ ನಂಬರ್ ಗೊತ್ತಿಲ್ಲದಿದ್ದರೆ  ಈ 1800 180 1551

ಉಚಿತ ಸಹಾಯವಾಣಿ ನಂಬರ್ ಗೆ ಕರೆ ಮಾಡಿ ವಿಚಾರಿಸಬಹುದು. ಮೇಲಿನ ಉಚಿತ ಸಹಾಯವಾಣಿ ನಂಬರ್ ಗೆ ಕರೆ ಮಾಡಿದರೆ ನಿಮಗೆ ನಿಮ್ಮ ಜಿಲ್ಲೆಯ ವಿಮಾ ಕಂಪನಿಯ ನಂಬರ್ ನೀಡುತ್ತಾರೆ.ಅವರಿಗೆ ಕರೆ ಮಾಡಿ ಬೆಳೆ ವಿಮೆ ಕುರಿತಂತೆ ಮಾಹಿತಿ ಪಡೆಯಬಹುದು.

ಹೆಚ್ಚಿನ ಮಾಹಿತಿಗೆ ಈ ಬೆಳೆ ವಿಮೆ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಚೆಕ್ ಮಾಡಬಹುದು.

Leave a Comment