Crop Insurance Status 2023-24 ಮೊಬೈಲ್ ನಲ್ಲೇ ಚೆಕ್ ಮಾಡಿ

Written by Admin

Published on:

Spread the love

Crop insurance status ನ್ನು ರೈತರು  ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಮುಂಗಾರು ಹಿಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರು ಬೆಳೆ ವಿಮೆ ಸ್ಟೇಟಸನ್ನು MObileನಲ್ಲೇ  ಚೆಕ್ ಮಾಡಬಹುದು.

ಹೌದು, ರೈತರ ಬಳಿಯಿರುವ ಮೊಬೈಲ್ ನಲ್ಲೇ ಕೇವಲ ಒಂದೇ ನಿಮಿಷದಲ್ಲಿ ಎಷ್ಟು ಬೆಳೆ ವಿಮೆ ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಮುಂಗಾರು ಹಂಗಾಮಿನ ಬೆಳೆಗಳಿಗೆ ರೈತರು ನಿಗದಿತ ಅವಧಿಯಲ್ಲಿ ಬೆಳೆ ವಿಮೆ ಹಣ ಪಾವತಿಸಿದ್ದರು. ಆದರೆ ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರ ಬೆಳೆಗಳು ಹಾನಿಯಾದವು. ಸಂಕಷ್ಟದಲ್ಲಿರುವ ರೈತರು ಮುಂಗಾರು ಹಂಗಾಮಿನ ಬೆಳೆಗಳಿಗೆ ವಿಮೆ ಪಾವತಿಸಿದ್ದರಿಂದ ಬೆಳೆ ವಿಮೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಸಂಬಂಧಿಸಿದ ಅಧಿಕಾರಿಗಳು ರೈತರ ಜಮೀನುಗಳು ಬಂದು ಬೆಳೆ ವಿಮೆ ಪರೀಶೀಲನೆ ನಡೆಸಿದರು. ನಂತರ  ಸಂಬಂಧಿಸಿದ ಮೇಲಧಿಕಾರಿಗಳಿಗೆ ವರದಿಯನ್ನು ಸಲ್ಲಿಸಿದ್ದರು. ನಂತರ ಅಧಿಕಾರಿಗಳು ರೈತರಿಗೆ ಬೆಳೆ ವಿಮೆ ಹಣ ಪಾವತಿಸಲು ಕಂಪನಿಗೆ ಸೂಚಿಸಿತು. ಹಾಗಾಗಿ ವಿವಿಧ ರಾಜ್ಯಗಳಲ್ಲಿ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಹಣ ಬಿಡುಗಡೆ ಮಾಡಿದರು. ಆದರೆ ಯಾವ ಯಾವ ರೈತರಿಗೆ ಬೆಳೆ ವಿಮೆ ಹಣ ಜಮೆಯಾಗಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

Crop Insurance Status 2023-24 ಮೊಬೈಲ್ ನಲ್ಲೇ ಚೆಕ್ ಮಾಡಿ
Farmer Crop growing

ಮುಂಗಾರು ಹಂಗಾಮಿಗೆ ತೋಟಗಾರಿಕೆ, ತರಕಾರಿ, ಹಾಗೂ ಇತರೆ ಬೆಳೆಗಳಿಗೆ ವಿಮೆಗೆ ಹಲವಾರು ರೈತರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಯಾರು ಬೆಳೆ ವಿಮೆ ಮಾಡಿಸಿದ್ದಾರೋ ಆ ರೈತರ ಅರ್ಜಿ ಯಾವ ಸ್ಥಿತಿಯಲ್ಲಿದೆ? ಅರ್ಜಿ ಸ್ವೀಕೃತವಾಗಿದೆಯೇ ಅಥವಾ ತಿರಸ್ಕೃತವಾಗಿದಷ್ಟೇ ಅಲ್ಲ, ಅವರಿಗೆ ಎಷ್ಟು ಬೆಳೆ ವಿಮೆ ಹಣ ಜಮೆಯಾಗಿದೆ ಎಂಬುದನ್ನು ಒಂದೇ ನಿಮಿಷದಲ್ಲಿ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಕ್ಷೀಪ್ತ ಮಾಹಿತಿ.

Crop Insurance Status ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

ಬೆಳೆ ವಿಮೆ ಸ್ಟೇಟಸ್ ಮೊಬೈಲ್ ನಲ್ಲಿ ಚೆಕ್ ಮಾಡಬೇಕಾದರೆ ರೈತರು

ಈ ಕೆಳಗಿನ ಲಿಂಕ್

https://samrakshane.karnataka.gov.in/publichome.aspx

ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.  ಆಗ ರೈತರಿಗೆ ಸಂರಕ್ಷಣೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ Farmers  ಕಾಲಂ ಕೆಳಗಡೆ  check status ಎಂಬ ಮಾಹಿತಿ ಕಾಣಿಸುತ್ತದೆ. ಅದೇ Crop Insurance Status  ಚೆಕ್ ಮಾಡುವ ಲಿಂಕ್ ಆಗಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಅಲ್ಲಿ ನಿಮಗೆ Proposal , Mobile No. Aadhaar ಹೀಗೆ ಮೂರು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೀವು Mobile No ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಂತರ ನೀವು ನಿಮ್ಮ  ಮೊಬೈಲ್ ನಂಬರ್ ಹಾಕಬೇಕಾಗುತ್ತದೆ. ಅದರ ಕೆಳಗಡೆ ಅಲ್ಲಿ ಕಾಣಿಸುವ ಕ್ಯಾಪ್ಚ್ಯಾಕೋಡ್ ಹಾಕಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ನೀವು ಕ್ಯಾಪ್ಚ್ಯಾ ಕೋಡ್ ಸರಿಯಾಗಿ ನಮೂದಿಸಿದರೆ ಮಾತ್ರ ನಿಮಗೆ ಇನ್ನೊಂದು ಪೇಜ್ ಕಾಣಿಸುತ್ತದೆ. ಅಲ್ಲಿ ಪ್ರೊಪೋಸಲ್ ಸಂಖ್ಯೆ, ಮೊಬೈಲ್ ನಂಬರ್ ಕೊನೆಯ ಮೂರು ಅಂಕಿಗಳು, ನಿಮ್ಮ ಹೆಸರು ಕಾಣಿಸುತ್ತದೆ. ಅದರ ಮುಂದೆ ಸ್ಟೇಟಸ್ ಅಂದರೆ ನಿಮ್ಮ ಅರ್ಜಿಯ ಸ್ಟೇಟಸ್ ಕಾಣಿಸುತ್ತದೆ  ಅರ್ಜಿ ಬೆಳೆ ನೋಂದಣಿಯು ಪ್ರಗತಿಯಲ್ಲಿದೆಯೇ? ಅರ್ಜಿಯನ್ನುತೆಗೆದುಹಾಕಲಾಗಿದೆಯೇ ಅಥವಾ ಸ್ವೀಕೃತವಾಗಿದೆಯೋ ಎಬುದು ಕಾಣಿಸುತ್ತದೆ. ನೀವು ಎಲ್ಲಿ ಬೆಳೆ ವಿಮೆ ಹಣ ಪಾವತಿಸಿದ್ದೀರಿ ಅದು ಪೇಮೆಂಟ್ ಸಕ್ಸೆಸ್ ಫುಲ್ ಆಗಿದೆಯೋ ಇಲ್ಲವೋ ಎಂಬ ಮಾಹಿತಿ ಕಾಣಿಸುತ್ತದೆ. ಅದರ ಮುಂದುಗಡೆ ಕಾಣಿಸುವ ಸೆಲೆಕ್ಟ್  ಮೇಲೆ ಕ್ಲಿಕ್ ಮಾಡಬೇಕು.  ನಂತರ View Details ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ What is Crop Insurance? ಬೆಳೆ ವಿಮೆ ಎಂದರೇನು?

ಆಗ ನಿಮ್ಮ ಹೆಸರು, ವಿಳಾಸ ಹೋಬಳಿ, ಊರು, ಸರ್ವೆ ನಂಬರ್, ಯಾವ ಬೆಳೆಗೆ ವಿಮೆ ಮಾಡಿಸಿದ್ದೀರಿ ನೀವು ಎಷ್ಟು ಬೆಳೆ ವಿಮೆ ಹಣ ಪಾವತಿಸಿದ್ದೀರಿ? ನಿಮಗೆಷ್ಟು ಬೆಳೆ ವಿಮೆ ಹಣ ಜಮೆಯಾಗಬಹುದು ಎಂಬ ಮಾಹಿತಿಯೂ ಕಾಣಿಸುತ್ತದೆ. ಬಿತ್ತನೆ ಮಾಡಿದ ದಿನಾಂಕ ಎಂಬ ಮಾಹಿತಿಯೂ ನಿಮಗೆ ಕಾಣಿಸುತ್ತದೆ. ಈ ಆಧಾರದ ಮೇಲೆನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ಚೆಕ್ ಮಾಡಬಹುದು.

ಬೆಳೆ ಹಾಳಾದ ರೈತರಿಗೆ ಬೆಳೆ ವಿಮೆ (Crop Insurance) ಹಣ ಹೇಗೆ ನಿರ್ಧರಿಸುತ್ತಾರೆ?

ಬೆಳೆ ವಿಮೆ ಮಾಡಿಸಿದ ನಂತರ ರೈತರ ಬೆಳೆ ಪ್ರಾಕೃತಿಕ ವಿಕೋಪದಿಂದಾಗಿ ಹಾಳಾಗಿದ್ದರೆ ರೈತರು ಯಾವ ವಿಮಾ ಕಂಪನಿಗೆ ಬೆಳೆ ವಿಮೆ ಪಾವತಿಸಿದ್ದೀರೋ ಆ ವಿಮಾ ಕಂಪನಿಯ ಸಿಬ್ಬಂದಿಗೆ ಕರೆ ಮಾಡಬೇಕು. ಆಗ ವಿಮಾ ಸಿಬ್ಬಂದಿ ನಿಮ್ಮ ಜಮೀನಿಗೆ ಬಂದು ಬೆಳೆ ಪರಿಶೀಲನೆ ಮಾಡುತ್ತಾರೆ.  ನಂತರ ವಿಮೆಗೆ  ವರದಿ ಸಲ್ಲಿಸುತ್ತಾರೆ. ಕೆಲವು ದಿನಗಳ ನಂತರ ನಿಮ್ಮ ಬೆಳೆ ಎಷ್ಟು ಪ್ರಮಾಣದಲ್ಲಿ ಹಾಳಾಗಿದೆಯೋ ಆ ಆಧಾರದ ಮೇಲೆ ನಿಮಗೆ ಬೆಳೆ ವಿಮೆ ಹಣವನ್ನು ರೈತರ ಖಾತೆಗೆ ಜಮೆ ಮಾಡುತ್ತಾರೆ.

ಬೆಳೆ ವಿಮೆ ಪರಿಹಾರ ಹಾಗೂ ಬೆಳೆ ಹಾನಿ ಪರಿಹಾರ ಎರಡೂ ಒಂದೆನಾ? Crop insurance and crop loss compensation

ಬೆಳೆ ವಿಮೆ ಹಾಗೂ ಬೆಳೆ ಹಾನಿ ಪರಿಹಾರ ಎರಡೂ ಒಂದೇ ಅಲ್ಲವೇ ಅಲ್ಲ, ಬೆಳೆ ವಿಮೆ ಬೇರೆ ಹಾಗೂ ಬಾಳೆ ಹಾನಿ ಪರಿಹಾರ ಬೇರೆ. ಹೌದು, ಬೆಳೆ ಹಾನಿ ಪರಿಹಾರವನ್ನು ರಾಜ್ಯ ಸರ್ಕಾರವು ಘೋಷಣೆ ಮಾಡುತ್ತದೆ. ಅಪಾರ ಪ್ರಮಾಣದ ಮಳೆ ಬಂದು ಬೆಳೆ ಹಾನಿಯಾದರೆ ಹಾಗೂ ಮಳೆಯ ಕೊರತೆಯಿಂದಾಗಿಯೂ ಬೆಳೆ ಹಾನಿಯಾದಾಗ ರಾಜ್ಯ ಸರ್ಕಾರವು ಎಕರೆಗೆ ಇಂತಿಷ್ಟು ಹಣ ಪರಿಹಾರ ಘೋಷಣೆ ಮಾಡುತ್ತದೆ. ಆಗ ರೈತರಿಗೆ ಎಕರೆಗೆ ಬೆಳೆ ಹಾನಿ ಪರಿಹಾರ ಹಣ ಜಮೆ ಮಾಡುತ್ತದೆ.

ಬೆಳೆ ಹಾನಿ ಪರಿಹಾರ ರೈತರಿಗೆ  ಯಾವ ಬೆಳೆಗೆ ಎಷ್ಟು ನೀಡಲಾಗುವುದು? Do you know How much crop insure for crop

ಕೇಂದ್ರ ಸರ್ಕಾರದ ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ (ಎನ್.ಡಿ.ಆರ್.ಎಫ್) ಮಾರ್ಗಸೂಚಿ ಪ್ರಕಾರ ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರಿಗೆ 8500 ರೂಪಾಯಿ ನೀಡಲಾಗುವುದು. ನೀರಾವರಿ ಬೆಳೆಗೆ 17000 ರೂಪಾಯಿ ಪರಿಹಾರ ನೀಡಲಾಗುವುದು. ಅದೇ ರೀತಿ ಬಹುವಾರ್ಷಿಕ ಬೆಳೆಗೆ 22500 ರೂಪಾಯಿ ಪರಿಹಾರ ನೀಡಲು ನಿಗದಿ ಮಾಡಲಾಗಿದೆ.

ನೀವೇಕೆ ನಿಮ್ಮ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಬೇಕು? Why do you check crop insurance status

ಬೆಳೆ ವಿಮೆ ನಿಮಗೆ ಜಮೆಯಾಗಿದೆಯೋ ಇಲ್ಲವೋ ಒಂದು ವೇಳೆ ಜಮೆಯಾಗದಿದ್ದರೆ ನಿಮಗೇಕೆ ಜಮೆಯಾಗಿಲ್ಲ. ನಿಮ್ಮ ಅರ್ಜಿ ಸ್ವೀಕೃತವಾಗಿಲ್ಲದಿದ್ದರೆ ಏಕೆ ಸ್ವೀಕೃತವಾಗಿಲ್ಲ. ಯಾರಿಗೆ ಸಂಪರ್ಕಿಸಬೇಕು. ಯಾರಿಗೆ ದೂರು ನೀಡಬೇಕು? ಎಂಬ ಚಿಂತೆಯಲ್ಲಿದ್ದೀರಾ… ಹಾಗಾದರೆ ಈ ಕೆಳಗೆ ನೀಡಲಾದ ಮೊಬೈಲ್ ನಂಬರ್ ಗೆ ಕರೆ ಮಾಡಿ ನಿಮ್ಮ ಬೆಳೆ ವಿಮೆಯ ಸ್ಥಿತಿ ತಿಳಿದುಕೊಳ್ಳಬಹುದು..

ವಿಮಾ ಕಂಪನಿಗಳ ಸಂಪರ್ಕಿಸುವ ನಂಬರ್ ಗಳು Crop Insurance companies 

Agriculture Insurance company ಸಹಾಯವಾಣಿ ನಂಬರ್ 1800 425 0505, ಯೂನಿವರ್ಸಲ್ ಸೋಂಪೋ ಸಹಾಯವಾಣಿ ನಂಬರ್ 1800 200 5142, ಎಸ್.ಬಿ.ಐ ವಿಮಾ ಕಂಪನಿಯ ಸಹಾಯವಾಣಿ 1800 180 1551, 1800 209 1111, ಹೆಚ್.ಡಿಎಫ್ಸಿ ಅರ್ಗೋ 1800 266 0700, ಫ್ಯೂಚರ್ ಜನರಲಿ ಸಹಾಯವಾಣಿ ನಂಬರ್ 1800 266 4141, ಐಸಿಐಸಿ ಲೋಂಬೋರ್ಡ್  ಸಹಾಯವಾಣಿ1800 103 7712, ಬಜಾಜ್ ಅಲಾಯನ್ಸ್ ಜಿಐಸಿ 1800 209 5959, ರಿಲಾಯನ್ಸ್ ಜನರಲ್ ಇನ್ಸುರೆನ್ಸ್ ಕಂ. ಲಿಮಿಟೆಡ್ ಸಹಾಯವಾಣಿ ನಂಬರ್1800 102 4088 ಗೆ ಸಂಪರ್ಕಿಸಲು ಕೋರಲಾಗಿದೆ.

ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಕುರಿತಂತೆ  ರೈತರು 080 2656 4535, ಅಥವಾ 080 2656 4536 ಗೆ ಸಂಪರ್ಕಿಸಬಹುದು.

ಈ ಲೇಖನ ನಿಮಗೆ ಉಪಯುಕ್ತವಾಗಿದ್ದರೆ ದಯವಿಟ್ಟು ನೀವು ಕಾಮೆಂಟ್ ಮಾಡಿ ತಿಳಿಸಬಹುದು. ನಿಮ್ಮ ಕಾಮೆಂಟ್ ನಮಗೆ ಸ್ಪೂರ್ತಿ ನೀಡುತ್ತದೆ. ಇದೇ ರೀತಿ ಮುಂದೆ ಇನ್ನೂ ಒಳ್ಳೆಯ ಲೇಖನಗಳನ್ನು ಬರೆಯಲು ಸ್ಪೂರ್ತಿ ನೀಡಿದಂತಾಗುತ್ತದೆ. ಕ್ರಾಪ್ ಇನ್ಸುರೆನ್ಸ್ ನ್ಯೂಸ್ ಬ್ಲಾಗ್ ನಲ್ಲಿ ಸದಾ ರೈತರಿಗೆ ಉಪಯುಕ್ತವಾಗುವ ಮಾಹಿತಿಗಳನ್ನು ನೀಡಲು ಪ್ರಯತ್ಸಿಸಲಾಗುವುದು.

ಉದಾಹರಣೆಗೆ ನೀವು ಕಲಬುರಗಿ ಜಿಲ್ಲೆಯವರಾಗಿದ್ದರೆ ನಿಮ್ಮ ಜಿಲ್ಲೆಗೆ Universal Sompo GIC  ಹಾಗೂ  KSHEMA Insurance Co. Ltd ಯನ್ನು ನಿಯೋಜಿಸಲಾಗಿದೆ.

ಅದೇ ರೀತಿ ಕೋಲಾರ ಜಿಲ್ಲೆಗೆ ಬಜಾಜ್ ಅಲಾಯಾನ್ಸ್ ಜಿಐಸಿ ಹಾಗೂ ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ನ್ನು ನಿಯೋಜಿಸಲಾಗಿದೆ. ಪಟ್ಟಿಯಲ್ಲಿ ಎಲ್ಲಾ ಜಿಲ್ಲೆಗಳ ವಿಮಾ ಕಂಪನಿಗಳಿವೆ.

Leave a Comment