crop loan check : ರೈತರ ಯಾವ ಜಮೀನಿನ ಅಂದರೆ ಸರ್ವೆ ನಂಬರ್ ಮೇಲೆ ಎಷ್ಟು ಸಾಲವಿದೆ ಎಂಬುದನ್ನು ಈಗ ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ರೈತ ಮಿತ್ರರೆ ನಿಮಗೆ ಗೊತ್ತಿಲ್ಲದೆ ನಿಮ್ಮ ಜಮೀನಿನ ಮೇಲೆ ಯಾರಾದರೂ ಸಾಲ ತೆಗೆದುಕೊಂಡಿದ್ದಾರೆಯೇ? ಅಥವಾ ನೀವು ತೆಗೆದುಕೊಂಡ ಸಾಲ ಮರುಪಾವತಿಸಿದ್ದರೂ ಇನ್ನೂ ಸರ್ವೆ ನಂಬರ್ ನಲ್ಲಿ ಸಾಲ ತೋರಿಸಲಾಗಿದೆಯೇ ಎಂಬುದರ ಕುರಿತು ಈಗ ಚೆಕ್ ಮಾಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
ನೀವು ಯಾವುದೇ ಕಾರಣಕ್ಕೂ ನಿಮ್ಮ ಜಮೀನಿನ ದಾಖಲೆಗಳನ್ನು ಅಪರಿಚಿತ ವ್ಯಕ್ತಿಗಳಿಗೆ ನೀಡಬಾರದು. ನಿಮ್ಮ ವೈಯಕ್ತಿಕ ಕಾರಣಕ್ಕಾಗಿ ಸಾಲ ಪಡೆಯುವಾಗ ನಿಮ್ಮ ದಾಖಲೆಗಳನ್ನು ನೀಡುವಾಗಲೂ ಎಚ್ಚರವಾಗಿರಬೇಕು. ಹಿಂದೆ ರೈತರ ಜಮೀನುಗಳ ಮೇಲೆ ಕೆಲವರು ತಮಗೆ ಗೊತ್ತಿಲ್ಲದೆ ಸಾಲ ಪಡೆದುಕೊಳ್ಳುತ್ತಿದ್ದರು. ಹಾಗಾಗಿ ನಿಮ್ಮ ಜಮೀನಿನ ಮೇಲೆ ಸಾಲವಿದೆಯೇ ಎಷ್ಟು ಸಾಲವಿದೆ ಎಂಬುದನ್ನು ಈಗ ಇಲ್ಲೇ ಚೆಕ್ ಮಾಡಿ .
crop loan check ನಿಮ್ಮ ಜಮೀನಿನ ಯಾವ ಸರ್ವೆ ನಂಬರ್ ನಲ್ಲಿ ಎಷ್ಟು ಸಾಲವಿದೆ? ಚೆಕ್ ಮಾಡಿ
ರೈತರು ಈಗ ತಮ್ಮಲ್ಲಿರುವ ಮೊಬೈಲ್ ನಿಂದ ತಮ್ಮ ಜಮೀನಿನ ಮೇಲಿರುವ ಸಾಲದ ಮಾಹಿತಿಯನ್ನು ಚೆಕ್ ಮಾಡಬೇಕಾದರೆ ಈ
https://landrecords.karnataka.gov.in/Service2/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ Bhoomi Online Land Records view ಎಂಬ ಕಂದಾಯ ಇಲಾಖೆಯ ಪೇಜ್ ತೆರೆದುಕೊಳ್ಳುತ್ತದೆ..
ರೈತರು ಮೊದಲು ತಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ತಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ನೀವು ನಿಮ್ಮ ಸರ್ವೆ ನಂಬರ್ ಹಾಕಿ Go ಮೇಲೆ ಕ್ಲಿಕ್ ಮಾಡಲೇಬೇಕು. ನಂತರ Select Surnoc ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಹಿಸ್ಸಾ ನಂಬರ್ ನಲ್ಲೂ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ Fetch Details ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ : Bele hani parihara status 7 ಲಕ್ಷ ರೈತರ ಖಾತೆಗೆ ಬರ ಪರಿಹಾರ ಜಮೆ ನಿಮಗೆಷ್ಟು ಜಮೆ ಚೆಕ್ ಮಾಡಿ
ಜಮೀನಿನ ಮಾಲಿಕರ ಹೆಸರು ಕಾಣಿಸುತ್ತದೆ. ಅಲ್ಲಿ ಯಾವ ಮಾಲಿಕರಿಗೆ ಎಷ್ಟು ಎಕರೆ ಜಮೀನಿದೆ ಹಾಗೂ ಆ ಜಮೀನು ಮಾಲಿಕರ ಖಾತಾ ನಂಬರ್ ಸಹ ನಿಮಗೆ ಕಾಣಿಸುತ್ತದೆ. ಅಲ್ಲಿ View ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
crop loan check ಪೇಜ್ ನಲ್ಲಿ ಏನೇನು ಮಾಹಿತಿ ಇರುತ್ತದೆ?
ನಿಮಗೆ ನಿಮ್ಮ ಜಮೀನಿನ ಪಹಣಿ (ಆರ್.ಟಿ.ಸಿ) ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಮೂದಿಸಿದ ಸರ್ವೆ ನಂಬರ್ ಆ ಸರ್ವೆ ನಂಬರ್ ಅಡಿಯಲ್ಲಿ ಒಟ್ಟು ಎಷ್ಟು ಎಕರೆ ಜಮೀನಿದೆ?
ಆ ಸರ್ವೆ ನಂಬರ್ ನಲ್ಲಿ ಜಮೀನಿನ ಮಾಲಿಕರ ಹೆಸರು ತಂದೆಯ ಹೆಸರು ಹಾಗೂ ಅವರಿಗೆ ಎಷ್ಟು ಎಕರೆ ಜಮೀನಿದೆ ಎಂಬ ಮಾಹಿತಿ ಕಾಣಿಸುತ್ತದೆ. ಅದರ ಎದುರುಗಡೆ ನಿಮ್ಮ ಜಮೀನು ಯಾವಾಗ ಮುಟೇಶನ್ ಆಗಿದೆ ಎಂಬ ಮಾಹಿತಿಯೂ ಇರುತ್ತದೆ.
ಹಕ್ಕುಗಳು ಕೆಳಗಡೆ ರೈತರು ಯಾವ ಬ್ಯಾಂಕಿನಲ್ಲಿ ಸಾಲ ಪಡೆದಿದ್ದಾರೆ? ಎಷ್ಟು ಸಾಲ ಪಡೆದಿದ್ದಾರೆ ಎಂಬ ಮಾಹಿತಿಯೂ ಕಾಣಣಿುತ್ತದೆ. ಇದರೊಂದಿಗೆ ಯಾವಾಗ ಸಾಲ ಪಡೆಯಲಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ. ಈ ಸಾಲ ನೀವೇ ಪಡೆದಿದ್ದೀರೋ ಅಥವಾ ನಿಮ್ಮ ಹೆಸರಿಗೆ ಬೇರೆಯವರು ಪಡೆದಿದ್ದಾರೋ ಎಂಬುದು ನಿಮಗೆ ಗೊತ್ತಾಗುತ್ತದೆ.
crop loan check ಪಹಣಿಯಲ್ಲಿ ಸಾಲ ತೋರಿಸುತ್ತಿದ್ದರೆ ರೈತರೇನು ಮಾಡಬೇಕು?
ಒಂದು ವೇಳೆ ನೀವೇ ಸಾಲ ಪಡೆದು ಸಾಲ ತೀರಿಸಿದ್ದರೆ ಪಹಣಿಯಲ್ಲಿ ಇನ್ನೂ ಹಾಗೆ ತೋರಿಸುತ್ತಿದ್ದರೆ ಕೂಡಲೇ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ತೆರಳಿ ನಿಮ್ಮ ದಾಖಲೆ ತೋರಿಸಬೇಕು. ನಿಮ್ಮ ಜಮೀನಿನ ಮೇಲಿರುವ ಸಾಲದ ಕುರಿತು ಬ್ಯಾಂಕ್ ಮ್ಯಾನೇಜರ್ ಜೊತೆಗೆ ಚರ್ಚಿಸಿ ಪಹಣಿಯಿಂದ ಸಾಲದ ಮಾಹಿತಿ ತೆಗೆದು ಹಾಕಿಸಬಹುದು.