Crop Survey check ಬೆಳೆ ಸಮೀಕ್ಷೆ ಆಗಿದೆಯೋ ಇಲ್ಲವೋ ಇಲ್ಲೇ ಚೆಕ್ ಮಾಡಿ 2024

Written by Admin

Published on:

Spread the love

Crop Survey check : ಬೆಳೆ ವಿಮೆ ಮಾಡಿಸಿದ ನಂತರ ರೈತರ ಸಮೀಕ್ಷೆ ಆಗಿದೆಯೋ ಇಲ್ಲವೋ ಎಂಬುದನ್ನು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ರೈತರು ಈ ಕೆಳಗೆ ನೀಡಲಾದ ಮಾಹಿತಿಗಳ ಪ್ರಕಾರ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ಮಾಹಿತಿ.

Crop Survey check

ಹೌದು, ಬೆಳೆ ಸಮೀಕ್ಷೆ ಆ್ಯಪ್ ನಲ್ಲಿ ಅಪ್ಲೋಡ್ ಮಾಡಿರುವ ಮಾಹಿತಿ ಸರಿಯಾಗಿ ಅಪ್ಲೋಡ್ ಆಗಿರುವುದನ್ನು ಸಹ ಚೆಕ್ ಮಾಡಬಹುದು. ಮುಂಗಾರು ಹಂಗಾಮಿನ ಬೆಳೆಗಳಿಗೆ ಬೆಳೆ ಹಾನಿ ಪರಿಹಾರ, ಬೆಳೆ ವಿಮೆ ಹಣ, ಬೆಂಬಲ ಬೆಲೆ ಯೋಜನೆಯ ಸೌಲಭ್ಯ ಪಡೆಯಲು ಬೆಳೆ ಸಮೀಕ್ಷೆ ಮಾಡುವುದು ಕಡ್ಡಾಯಗೊಳಿಸಲಾಗಿತ್ತು. ಬೆಳೆ ಸಮೀಕ್ಷೆ ಮಾಡಿದರೆ ಮಾತ್ರ ಬೆಳೆ ವಿಮೆ ಹಾಗೂ ಬೆಳೆ ಹಾನಿ ಪರಿಹಾರ ನೀಡಲಾಗುವುದು ಎಂದು ರೈತರಿಗೆ ಮಾಹಿತಿ ನೀಡಲಾಗಿತ್ತು. ಆದರೂ ಸಹ ಬಹುತೇಕ ರೈತರು ಬೆಳೆ ಸಮೀಕ್ಷೆ ಮಾಡಿಸಿರುವುದಿಲ್ಲ.ಕೆಲವು ರೈತರು ತಪ್ಪಾಗಿ ಬೆಳೆ ಸಮೀಕ್ಷೆ ಮಾಡಿಸಿದ್ದಾರೆ ಅಂದರೆ ಜಮೀನಿನನಲ್ಲಿರುವ ಬೆಳೆಂಯೇ ಬೇರೆ? ಸಮೀಕ್ಷೆ ಆಗಿರುವ ಬೆಳೆಯೇ ಬೇರೆ? ಹೀಗಾಗಿ ಕೆಲವು ರೈತರು ಬರ ಪರಿಹಾರದಿಂದ ವಂಚಿತರಾಗಿರುತ್ತದೆ. ಹಾಗಾಗಿ ರೈತರು ಬೆಳೆ ಸಮೀಕ್ಷೆ ಆಗಿರುವುದನ್ನು ಮೊಬೈಲ್ ನಲ್ಲೇಚ ಚೆಕ್ ಮಾಡಿಕೊಳ್ಳಬಹುದು.

Crop Survey check ಬೆಳೆ ಸಮೀಕ್ಷೆ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡುವುದು ಹೇಗೆ?

ಬೆಳೆ ಸಮೀಕ್ಷೆ ಮಾಡಿದ ರೈತರು ತಮ್ಮ ಬೆಳೆ ಸಮೀಕ್ಷೆ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://play.google.com/store/apps/details?id=com.crop.offcskharif_2021

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಥವಾ ಗೂಗಲ್ ಪ್ಲೇ ಸ್ಟೋರ್ ನಲ್ಲಿ Bele darshak 2023-24 ಎಂದು ಟೈಪ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಬೆಳೆ ದರ್ಶಕ್ ಆ್ಯಪ್ ಕಾಣಿಸುತ್ತದೆ. ಅಲ್ಲಿ install ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಬೆಳೆ ದರ್ಶಕ್ 23-24 ಕೆಳಗಡೆ ಬೆಳೆ ಸಮೀಕ್ಷೆ ಮಾಹಿತಿ ವೀಕ್ಷಣೆ  ಕಾಣಿಸುತ್ತದೆ. ಅದರ ಕೆಳಗಡೆ  ಸರ್ಕಾರಿ ಸಿಬ್ಬಂದಿ ಪ್ರೈವೆಟ್ ರೆಸಡೆಂಟ್ಸ್  ಹಾಗೂ ರೈತ ಎಂಬ ಆಯ್ಕೆಗಳು ಕಾಣಿಸುತ್ತವೆ.  ರೈತ ಮೇಲೆ ಕ್ಲಿಕ್ ಮಾಡಬೇಕು. ವೈಲ್ ಯೂಸಿಂಗ್ ದಿಸ್ ಆ್ಯಪ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲೋ ಮೇಲೆ ಕ್ಲಿಕ್ ಮಾಡಬೇಕು.

Crop Survey check ಬೆಳೆ ಸಮೀಕ್ಷೆಯಲ್ಲಿ ಏನೇನು ಮಾಹಿತಿ ಇರುತ್ತದೆ?

ಆಗ ನಿಮಗೆ ಸರ್ವೆ ನಂಬರ್ ಆಯ್ಕೆ ಕೆಳಗಡೆ ಕೆಲವು ಆಯ್ಕೆಗಳು ಕಾಣಿಸುತ್ತವೆ.  ವರ್ಷ, ಋತು, ಜಿಲ್ಲೆ, ತಾಲೂಕು,  ಹೋಬಳಿ, ಗ್ರಾಮ, ಸರ್ವೆನಂಬರ್ ಹೀಗೆ ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ನೀವು ಒಂದೊಂದಾಗಿ ಸರಿಯಾಗಿ ಮಾಹಿತಿಗಳನ್ನು ಭರ್ತಿ ಮಾಡಬೇಕು.

ಇದನ್ನೂಓದಿ Rejected Ration card list ರೇಷನ್ ಕಾರ್ಡ್ ಲಿಸ್ಟ್ ನಿಂದ ನಿಮ್ಮ ಹೆಸರು ರದ್ದಾಗಿದೆಯೇ? ಚೆಕ್ ಮಾಡಿ 2024

ವರ್ಷ 2023-24 ಆಯ್ಕೆ ಮಾಡಿಕೊಳ್ಳಬೇಕು.  ಋತು- ಮುಂಗಾರು ಆಯ್ಕೆ ಮಾಡಿಕೊಳ್ಳಬೇಕು. ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು.ನಂತರ ನಿಮ್ಮ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಸರ್ವೆ ನಂಬರ್ ನಮೂದಿಸಿ ವಿವರ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು.

FID check in mobile

ಸರ್ವೆ ನಂಬರ್ ಹಿಸ್ಸಾ ನಂಬರ್ ಆಯ್ಕೆ ಮಾಡಿಕೊಂಡು ಮಾಲಿಕ ವಿವರ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಸರ್ವೆ ನಂಬರ್ ನಲ್ಲಿರುವ ಮಾಲಿಕರ ಹೆಸರು ಕಾಣಿಸುತ್ತದೆ. ನಿಮ್ಮ ಹೆಸರು ಆಯ್ಕೆ ಮಾಡಿಕೊಳ್ಳಬೇಕು. ಸಮೀಕ್ಷೆಯ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್ ಮಾಡಿದರೆ ನೀವು ಅಪ್ಲೋಡ್ ಮಾಡಿದ ಮಾಹಿತಿ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಇಲ್ಲೇ ಚೆಕ್ ಮಾಡಬಹುದು. .

ಒಂದು ವೇಳೆ ನೀವು Crop Survey check ಮಾಡಿರದಿದ್ದರೆ ಈ ಸರ್ವೆ ನಂಬರ್ ಬೆಳೆ ಸಮೀಕ್ಷೆ ಇನ್ನೂ ಪೂರ್ಣಗೊಂಡಿಲ್ಲ ಎಂಬ ಮೆಸೆಜ್ ಕಾಣಿಸುತ್ತದೆ.

Leave a Comment