Crop survey in mobile : ಬರಗಾಲ ಪರಿಹಾರ, ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ ಪರಿಹಾರ ರೈತರ ಖಾತೆಗೆ ಜಮೆಯಾಗಬೇಕಾದರೆ ಬೆಳೆ ಸಮೀಕ್ಷೆ ಮಾಡುವುದು ಕಡ್ಡಾಯವಾಗಿರುತ್ತದೆ.
ಹೌದು, ಯಾವ ಯಾವ ರೈತರು ಬೆಳೆ ಸಮೀಕ್ಷೆ ಮಾಡಿರುತ್ತಾರೆಯೋ ಅಂತಹ ರೈತರ ಖಾತೆಗೆ ಬರಗಾಲ ಪರಿಹಾರ, ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ ಪರಿಹಾರ ಹಣ ಜಮೆಯಾಗಲಿದೆ. ಹಾಗಾದರೆ ಯಾವ ಯಾವ ರೈತರು ಬೆಳೆ ಸಮೀಕ್ಷೆ ಮಾಡಿದ್ದಾರೆ? ಬೆಳೆ ಸಮೀಕ್ಷೆಯಲ್ಲಿ ರೈತರು ಎಲ್ಲಾ ಸರ್ವೆ ನಂಬರ್ ಗಳು ಅಪ್ಲೋಡ್ ಆಗಿದೆಯೋ ಇಲ್ಲವೋ ಎಂಬ ಮಾಹಿತಿಯನ್ನು ಮೊಬೈಲ್ ನಲ್ಲೆ ಚೇಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
ಬರಗಾಲ ಪರಿಹಾರ ಜಮೆಯಾಗಲು ಬೆಳೆ ಸಮೀಕ್ಷೆ ಮಾಡಿಕೊಳ್ಳಬೇಕೆಂದು ಕೃಷಿ ಇಲಾಖೆ ಪ್ರಕಟಣೆಗಳ ಮೂಲಕ ಮನವಿ ಮಾಡಿತ್ತು. ಹಾಗಾಗಿ ಬಹುತೇಕ ರೈತರು ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಮಾಡಿಸಿಕೊಂಡಿದ್ದಾರೆ. ಇನ್ನೂ ಕೆಲವು ರೈತರು ಕೃ ಷಿ ಇಲಾಖೆ ನಿಯೋಜಿಸಿ ಪ್ರತಿನಿಧಿಯಿಂದ ಬೆಳೆ ಸಮೀಕ್ಷೆ ಮಾಡಿಸಿದ್ದಾರೆ. ಇಂತಹ ರೈತರು ತಮ್ಮ ಬೆಳೆ ಸಮೀಕ್ಷೆ ಸರಿಯಾಗಿ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.
Crop survey in mobile: ನಿಮ್ಮ ಬೆಳೆ ಸಮೀಕ್ಷೆ ಸರಿಯಾಗಿದೆಯೇ? ಚೆಕ್ ಮಾಡಿ
ರೈತರ ಬೆಳೆ ಸಮೀಕ್ಷೆ ಸರಿಯಾಗಿ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಲು ಈ
https://play.google.com/store/apps/details?id=com.crop.offcskharif_2021
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ದರ್ಶಕ್ ಆ್ಯಪ್ ಓಪನ್ ಆಗುತ್ತದೆ. ನಂತರ ಇನಸ್ಟಾಲ್ ಮೇಲೆ ಕ್ಲಿಕ್ ಮಾಡಿ ಓಪನ್ ಮೇಲ ಕ್ಲಿಕಿ ಮಾಡಬೇಕಾಗುತ್ತದೆ. ಅಲ್ಲಿ ನಿಮಗೆ ಎರಡು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೀವು ರೈತ ಆಯ್ಕೆ ಮಾಡಿಕೊಳ್ಳಬೇಕು. ನಂತರ ವೈಲ್ ಯೂಸಿಂಗ್ ದಿಸ್ ಆ್ಯಪ್ ಮೇಲೆ ಒತ್ತಿದ ನಂತರ ಅಲೋ ಬಟನ್ ಮೇಲೆ ಕ್ಲಿಕ್ ಮಾಡಬೇಕು. ನಂತರ 2023-24 ಆಯ್ಕೆ ಮಾಡಿಕೊಂಡು ಮುಂಗಾರು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ನಿಮ್ಮ ತಾಲೂಕು, ಹೋಬಳಿ ಆಯ್ಕೆ ಮಾಡಿಕೊಂಡ ನಂತರ ನಿಮ್ಮ ಊರು ಸೆಲೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ. ಇದಾದ ನಂತರ ನಿಮ್ಮ ಸರ್ವೆ ನಂಬರ್ ಹಾಕಿ ವಿವರ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಮಾಲಿಕರ ವಿವರ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರು ಸೆಲೆಕ್ಟ್ ಮಾಡಿಕೊಳ್ಳಬೇಕು. ನಂತರ ಸಮೀಕ್ಷೆಯ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್ ಮಾಡಿ ನಿಮ್ಮ ಬೆಳೆ ಸಮೀಕ್ಷೆ ಆಗಿದೆಯೋ ಇಲ್ಲವೋ ಎಂಬುದನ್ನು ಮೇಲೆ ತಿಳಿಸಿದ ವಿಧಾನದ ಮೂಲಕ ಚೆಕ್ ಮಾಡಬಹುದು.
Crop survey in mobile : ಬೆಳೆ ಸಮೀಕ್ಷೆ ಹೇಗೆ ಮಾಡಿಸಬೇಕು?
ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು ಬೆಳೆ ಸಮೀಕ್ಷೆ ನಡೆಸಿದ್ದರು ಗ್ರಾಮ ಲೆಕ್ಕಿಗರು ಬೆಳೆ ಸಮೀಕ್ಷೆಗೆ ಬಂದಾಗ ಅವರಿಗೆ ಸಹಕರಿಸಿದ ರೈತರ ಬೆಳೆ ಸಮೀಕ್ಷೆ ಆಗಿದೆ. ಗ್ರಾಮ ಲೆಕ್ಕಿಗರು ಬರದ ಗ್ರಾಮಗಳಲ್ಲಿ ರೈತರು ಸ್ವತಃ ಬೆಳೆ ಸಮೀಕ್ಷೆ ಮಾಡಿಸಿಕೊಂಡಿದ್ದರು.. ಹೌದು, ರೈತರು ಸ್ವತಃ ಬೆಳೆ ಸಮೀಕ್ಷೆ ಮಾಡಲು ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯು ಬೆಳೆ ಸಮೀಕ್ಷೆ ಆ್ಯಪ್ ಮಾಡಿದೆ. ಈ ಆ್ಯಪ್ ಸಹಾಯದಿಂದ ಬಹಳ ಷ್ಟು ರೈತರು ಬೆಳೆ ಸಮೀಕ್ಷೆ ಮಾಡಿಸಿದ್ದಾರೆ.
ಇದನ್ನೂ ಓದಿ : PM kisan fund released ಸ್ಟೇಟಸ್ -2024 ಚೆಕ್ ಮಾಡಿ
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ರೈತರು ಬೆಳೆ ಸಮೀಕ್ಷೆಗೆ ಗೂಗಲ್ ಪ್ಲೇಸ್ಟೋರ್ ನಲ್ಲಿ ಬೆಳೆ ಸಮೀಕ್ಷೆ 2023 ಆ್ಯಪ್ ಟೈಪ್ ಮಾಡಿ ಆ್ಯಪ್ ಇನಸ್ಟಾಲ್ ಮಾಡಿಕೊಳ್ಳಬಹುದು. ಆ್ಯಪ್ ಇನಸ್ಟಾಲ್ ಮಾಡಿಕೊಂಡ ನಂತರ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಮಾಹಿತಿಯನ್ನು ರೈತರೇ ನಿಖರವಾಗಿ ದಾಖಲಿಸಬೇಕು. ಈ ಬೆಳೆ ಸಮೀಕ್ಷೆ ಮಾಹಿತಿಯನ್ನು ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಬೆಂಬಲ ಬೆಲೆ, ಕೃಷಿ ಸಾಲ ಸೌಲಭ್ಯ ಮತ್ತುಸರ್ಕಾರದ ವಿವಿಧ ಯೋಜನೆಗಳಡಿ ಸವಲತ್ತುಗಳನ್ನು ಪಡೆಯಲು ಬೆಳೆ ಸಮೀಕ್ಷೆ ಯಾಗಿರಬೇಕು.
ಬೆಳೆ ಸಮೀಕ್ಷೆಯನ್ನು ಆಧಾರ್ ಕಾರ್ಡ್ ಮೂಲಕ ಇಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ ನೋಂದಾಯಿಸಿಕೊಂಡು ತಮ್ಮ ಜಮೀನಿನ ವಿವರಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಜಮೀನಿಗೆ ತೆರಳಿ ಸಂಬಂಧಿಸಿದ ಸರ್ವೆನಂಬರ್ ನಲ್ಲಿ ಬೆಳೆದಿರುವ ಬೆಳೆಗಳ ಛಾಯಾಚಿತ್ರ ತೆಗೆದು ಅಪ್ಲೋಡ್ ಮಾಡಬೇಕಾಗುತ್ತದೆ.
ರೈತರು ಗೂಗಲ್ ಪ್ಲೇ ಸ್ಟೋರ್ ನಲ್ಲಿ Rabi farmer crop survey 2023-24 ಎಂದು ಟೈಪ್ ಮಾಡಿ ಬೆಳೆ ಸಮೀಕ್ಷೆ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಜಮೀನುಗಳ ಸರ್ವೆ ನಂಬರ್, ಹಿಸ್ಸಾ ನಂಬರ್, ತಾವು ಬೆಳೆದ ಕೃಷಿ ಬೆಳೆಗಳ ಹಾಗೂ ಜಮೀನಿನಲ್ಲಿರುವ ಬಹುವಾರ್ಷಿಕ ತೋಟಗಾರಿಕೆ, ಅರಣ್ಯ ಇತರೆ ಬೆಳೆಗಳ ಮಾಹಿತಿಯಯನ್ನು ಛಾಯಾಚಿ್ರ ಸಹಿತ ಅಪ್ಲೋಡ್ ಮಾಡಬೇಕು.
ರೈತರೇಕೆ ಬೆಳೆ ಸಮೀಕ್ಷೆ ಮಾಡಿಸಬೇಕು?
ಕೃಷಿ, ರೇಷ್ಮೆ, ತೋಟಗಾರಿಕೆ ಬೆಳೆಗಳ ವಿಸ್ತೀರ್ಣ ಎಣಿಕೆ ಕಾರ್ಯಗಳಲ್ಲಿ ಬೆಳೆ ವಿಮೆ ಯೋಜನೆಯ ಸರ್ವೆ ನಂಬರ್ ವಾರು ಬೆಳೆ ಪರಿಶೀಲನೆ ಹಾಗೂ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು ಉಪಯೋಗವಾಗುತ್ತದೆ. ಸರ್ವೆ ನಂಬರ್ ಆಯ್ಕೆ ಮಾಡಲು ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲು ಬೆಳೆ ಸಮೀಕ್ಷೆಯ ಕೆಲಸಕ್ಕೆ ಬರುತ್ತದೆ. ಅರ್ಹ ಫಲಾನುಭವಿಗಳನ್ನು ಗುರುತಿಸಲು, ಆರ್.ಟಿ.ಸಿ ಯಲ್ಲಿ ಬೆಳೆ ವಿವರಗಳನ್ನು ದಾಖಲಾತಿಗಾಗಿ ಬೆಳೆ ಸಮೀಕ್ಷೆ ಉಪಯೋಗವಾಗುತ್ತದೆ.
ಎನ್.ಡಿ.ಆರ್.ಎಫ್, ಎಸ್.ಬಿ. ಆರ್. ಎಫ್ ಅಡಿಯಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಹಾನಿಗೊಳಗಾದ ಬೆಳೆಯ ವಿಸ್ತೀರ್ಣದ ವಿವರ ಹಾಗೂ ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸುವ ಸಂದರ್ಭದಲ್ಲಿ ಬೆಳೆ ಸಮೀಕ್ಷೆ ಬಳಸಬಹುದು.
ರೈತರು ಹೆಚ್ಚಿನ ಆಸಕ್ತಿಯೊಂದಿಗೆ ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡು ತಮ್ಮ ಜಮೀನಿನಲ್ಲಿರುವ ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಇತರೆ ಬೆಳೆಗಳ ವಿವರಗಳನ್ನು ಬೆಳೆ ಸಮೀಕ್ಷೆ ಆ್ಯಪ್ ನಲ್ಲಿ ನಮೂದಿಸಬೇಕಾಗುತ್ತದೆ.
ಹಿಂಗಾರು (ರಾಬಿ) ಬೆಳೆ ಬೆಳೆ ಸಮೀಕ್ಷೆ ಮಾಡುವುದು ಹೇಗೆ?
ರೈತರು ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಮಾಡಲು ಈ
https://play.google.com/store/apps/details?id=com.csk.PR_Kharif_2023.cropsurvey&hl=en_US
ಲಿಂಕ್ ಮೇಲೆ ಕ್ಲಿಕ್ ಮಾಡಿ install ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ಇದಾದಮೇಲೆ ರೈತರ ಬೆಳೆ ಸಮೀಕ್ಷೆ 2023-24 ಆ್ಯಪ್ ಕಾಣಿಸುತ್ತದೆ. ನಂತರ ವೈಲ್ ಯುಸಿಂಗ್ ದ ಆ್ಯಪ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಡಿವೈಸ್ ಲೊಕೇಶನ್ ಕೆಳಗಡೆ Precise ಅಂದರೆ ನಿಖರವಾದ ಹಾಗೂ Approximate ಎಂಬ ಎರಡು ಬಾಕ್ಸ್ ಕಾಣುತ್ತದೆ. ಅಲ್ಲಿ Precise ಆಯ್ಕೆಯಾಗಿರುತ್ತದೆ. ವೈಲ್ ಯೂಸಿಂಗ್ ದ ಆ್ಯಪ್ ಮೇಲೆ ಕ್ಲಿಕ್ ಮಾಡಿ ಅಲೋ ಮೇಲೆ ಎರಡು ಸಲ ಕ್ಲಿಕ್ ಮಾಡಿದ ನಂತರ ಬೆಳೆ ಸಮೀಕ್ಷೆ ಹಿಂಗಾರು ಓಪನ್ ಆಗುತ್ತದೆ. ಅಲ್ಲಿ ಬೆಳೆ ಸಮೀಕ್ಷೆ ಸಹಾಯವಾಣಿ ನಂಬರ್ ಕಾಣಿಸುತ್ತದೆ.8448447715 ಸಹಾಯವಾಣಿ ನಂಬರ್ ಆಗಿದೆ.