crop you can Insure : ನಿಮ್ಮೂರಿನಲ್ಲಿ ಯಾವ ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗಲಿದೆ ಎಂದು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ಪ್ರತಿಯೊಬ್ಬ ರೈತರು ಪ್ರತಿ ಹೆಕ್ಟೇರಿಗೆ ಯಾವ ಯಾವ ಬೆಳೆಗೆ ವಿಮೆ ಮಾಡಿಸಿದರೆ ಎಷ್ಟುವಿಮೆ ಹಣ ಜಮೆಯಾಗಲಿದೆ ಎಂಬುದನ್ನು ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
crop you can Insure ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗಲಿದೆ?
ಕರ್ನಾಟಕದ ರೈತ ಬಾಂಧವರೇ, ನಿಮಗೆ ಈ ಲೇಖನದಲ್ಲಿ ನಿಮ್ಮ ಊರಿನಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಿದರೆ ನಿಮಗೆ ವಿಮೆ ಮಾಡಿಸಿದ ನಂತರ ಎಷ್ಟು ವಿಮೆ ಹಣ ಜಮೆಯಾಗಲಿದೆ ಎಂಬುದನ್ನು ಚೆಕ್ ಮಾಡಲು ಈ
https://samrakshane.karnataka.gov.in/Premium/Crops_You_Can_Insure.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಸಂರಕ್ಷಣೆಯ crop you can Insure ಎಂಬ ಪೇಜ್ ತೆರೆದುಕೊಳ್ಳುತ್ತದೆ. ಒಂದು ವೇಳೆ ನಿಮಗೆ ಮೇಲಿನ ಲಿಂಕ್ ಓಪನ್ ಆಗದಿದ್ದರೆ ಈ
https://samrakshane.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ನೀವು ಮುಂಗಾರು ಹಂಗಾಮಿಗೆ Kharif ಹಿಂಗಾರು ಹಂಗಾಮಿಗೆ Rabi ಆಯ್ಕೆ ಮಾಡಿಕೊಂಡು ಮುಂದೆ / Go ಮೇಲೆ ಕ್ಲಿಕ್ ಮಾಡಬೇಕು. ನಂತರ ಫಾರ್ಮರ್ಸ್ ಕೆಳಗಡೆ ಕಾಣುವ Crop you can Insure ಮೇಲೆ ಕ್ಲಿಕ್ ಮಾಡಬೇಕು. Crop you can Insure ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದಾದ ನಂತರ ನೀವು Display ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
ಆಗ ನೀವು ಯಾವ ಯಾವ ಯಾವ ಬೆಳೆಗಳಿಗೆ ಎಷ್ಟು ವಿಮೆ ಹಣ ಜಮೆಯಾಗಲಿದೆ ಎಂಬ ಮಾಹಿತಿ ಕಾಣಿಸುತ್ತದೆ. ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಊರು, ಕಾಣಿಸುತ್ತದೆ. ಅದರ ಬೆಳೆಗಳ ಹೆಸರು, ಎಷ್ಟು ವಿಮೆ ಹಣ ಜಮೆಯಾಗಲಿದೆ ಎಂಬ ಮಾಹಿತಿ ಕಾಣಿಸುತ್ತದೆ.
crop you can Insure ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆ?
ಉದಾಹರಣೆಗೆ ನೀವು ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನವರಾಗಿದ್ದರೆ ತೊಗರಿ ಬೆಳೆಗೆ ಪ್ರತಿ ಹೆಕ್ಟೇರಿಗೆ 48 ಸಾವಿರ ರೂಪಾಯಿಯವರೆಗೆ ಬೆಳೆ ವಿಮೆ ಹಣ ಜಮೆಯಾಗಲಿದೆ.
ಇದನ್ನೂ ಓದಿ : Voter list released ಈ ಪಟ್ಟಿಯಲ್ಲಿರುವವರಿಗೆ ಮಾತ್ರ ಓಟ್ ಹಾಕುವ ಹಕ್ಕಿದೆ 2024
ಪಪ್ಪಾಯ ಬೆಳೆಗೆ 1 ಲಕ್ಷ 34 ಸಾವಿರ ರೂಪಾಯಿಯವರೆಗೆ ಬೆಳೆ ವಿಮೆ ಹಣ ಜಮೆಯಾಗಲಿದೆ. ಅದೇ ರೀತಿ ನೀರಾವರಿ ಭತ್ತ ಬೆಳೆಗೆ ವಿಮೆ ಮಾಡಿಸಿದ್ದರೆ ಪ್ರತಿ ಹೆಕ್ಟೇರಿಗೆ 93250 ರೂಪಾಯಿಯವರೆಗೆ ಹಣ ಜಮೆಯಾಗಲಿದೆ.
ಮೆಣಸಿನ ಕಾಯಿಗೆ ಬೆಳೆ ವಿಮೆ ಮಾಡಿಸಿದ್ದರೆ 71 ಸಾವಿರ ರೂಪಾಯಿಯವರೆಗೆ ವಿಮೆ ಹಣ ಜಮೆಯಾಗಲಿದೆ. ಅದೇ ರೀತಿ ಉದ್ದಿನಬೆಳೆಗೆ ವಿಮೆ ಮಾಡಿಸಿದ್ದರೆ ಪ್ರತಿ ಹೆಕ್ಟೇರಿಗೆ 32750 ರೂಪಾಯಿ ಹಣ ಜಮೆಯಾಗಲಿದೆ. ಸೂರ್ಯಕಾಂತಿ ಬೆಳೆಗೆ ವಿಮೆ ಮಾಡಿಸಿದ್ದರೆ ಪ್ರತಿ ಹೆಕ್ಟೇರಿಗೆ 40 ಸಾವಿರ ರೂಪಾಯಿಯವರೆಗೆ ವಿಮೆ ಹಣ ಜಮೆಯಾಗಲಿದೆ.
ಹತ್ತಿ ಬೆಳೆಗೆ ವಿಮೆ ಮಾಡಿಸಿದ್ದರೆ ಪ್ರತಿ ಹೆಕ್ಟೇರಿಗೆ 49 ಸಾವಿರ ರೂಪಾಯಿಯವರೆಗೆ ಬೆಳೆ ವಿಮೆ ಹಣ ಜಮೆಯಾಗಲಿದೆ. ಅದೇ ರೀತಿ ಹೆಸರು ಬೆಳೆಗೆ ವಿಮೆ ಮಾಡಿಸಿದ್ದರೆ 33 ಸಾವಿರ ರೂಪಾಯಿಯವರೆಗೆ ರೈತರ ಖಾತೆಗೆ ಹಣ ಜಮೆಯಾಗಲಿದೆ.
ಇದೇ ರೀತಿ ನೀವು ನಿಮ್ಮ ಜಿಲ್ಲೆ, ತಾಲೂಕು ಹಾಗೂ ಹೋಬಳಿ ಆಯ್ಕೆ ಮಾಡಿಕೊಂಡು ನಿಮ್ಮೂರಿನಲ್ಲಿ ಯಾವ ಯಾವ ಬೆಳೆಗೆ ಪ್ರತಿ ಹೆಕ್ಟೇರಿಗೆ ಎಷ್ಟು ವಿಮೆ ಹಣ ಜಮೆಯಾಗಲಿದೆ ಎಂಬ ಮಾಹಿತಿಯನ್ನು ಚೆಕ್ ಮಾಡಬಹುದು.