DBT status ಯಾವ ಯೋಜನೆಯಿಂದ ನಿಮಗೆಷ್ಟು ಹಣ ಜಮೆ? ಇಲ್ಲೇ ಚೆಕ್ ಮಾಡಿ 2024

Written by Admin

Updated on:

Spread the love

DBT status : ರೈತರು, ಸಾರ್ವಜನಿಕರು ತಮಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಿಂದ ಅಂದರೆ ಯಾವ ಯೋಜನೆಯಿಂದ ತಮ್ಮ ಖಾತೆಗೆ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಬಹುದು.

ಹೌದು, ಸರ್ಕಾರದ ಯೋಜನೆಗಳಿಂದ ರೈತರಿಗೆ ಸಿಗುವ ಸೌಲಭ್ಯಗಳ ಮಾಹಿತಿ ಪಡೆಯುವುದರೊಂದಿಗೆ ಯಾವ ಯೋಜನೆಯಿಂದ ತಮ್ಮ ಖಾತೆಗೆ ಎಷ್ಟು ಹಣ ಜಮೆ ಆಗಿದೆ ಎಂಬುದನ್ನು ಮನೆಯಲ್ಲಿಯೇ ಕುಳಿತು ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

DBT status

ಕೇಂದ್ರ ಸರ್ಕಾರವು ಸಾರ್ವಜನಿಕರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ.ಅದೇ ರೀತಿ ರಾಜ್ಯ ಸರ್ಕಾರದಿಂದಲೂ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಯೋಜನೆಗಳ ಸೌಲಭ್ಯಗಳ ತಮಗೆ ಸಿಗುತ್ತಿದೆಯೇ? ಸಿಗುತ್ತಿದ್ದರೆ ಯಾವ ಯಾವ ಯೋಜನೆಯ ಸೌಲಭ್ಯ ನೀವು ಪಡೆಯುತ್ತಿದ್ದೀರೆಂಬುದನ್ನು ಚೆಕ್ ಮಾಡಬಹುದು.

DBT status ಯಾವ ಯಾವ ಯೋಜನೆಗಳು ರೈತರಿಗೆ ಸಾರ್ವಜನಿಕರಿಗೆ ಸಿಗುತ್ತಿವೆ?

ತಮಗೆಲ್ಲಾ ಗೊತ್ತಿದ್ದ ಹಾಗೆ  ಕೇಂದ್ರ ಸರ್ಕಾರದ ವತಿಯಿಂದ  ಪಿಎಂ ಕಿಸಾನ್ ಯೋಜನೆ, ಕೃಷಿ ಸಿಂಚಾಯಿ ಯೋಜನೆ, ಫಸಲ್ ಬಿಮಾ ಯೋಜನೆ, ಮಾನ್ ಧನ್ ಯೋಜನೆ, ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ ಹಾಗೂ ಇತರ ಯೋಜನೆಗಳಿವೆ.

ಇದನ್ನೂ ಓದಿ Land detail ನಿಮ್ಮ ಅಕ್ಕಪಕ್ಕದ ಜಮೀನು ಯಾರ ಹೆಸರಿಗಿದೆ? ಇಲ್ಲೇ ಚೆಕ್ ಮಾಡಿ 2024

ರಾಜ್ಯ ಸರ್ಕಾರದ ವತಿಯಿಂದ ರೈತ ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮೀ ಯೋಜನೆ, ಗೃಹಶಕ್ತಿ, ಶಕ್ತಿಯೋಜನೆಯಂತೆ ಇನ್ನೂ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಯೋಜನೆಗಳಿಂದ ತಮಗೆ ಎಷ್ಟು ಹಣ ಯಾವ ತಿಂಗಳಲ್ಲಿ ಜಮೆಯಾಗಿದೆ ಎಂಬುದನ್ನು ಅತೀ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು.

DBT status ದಿಂದ ಚೆಕ್ ಮಾಡಿ ಯಾವ ಯೋಜನೆಯಿಂದ ಎಷ್ಟು ಹಣ ಜಮೆಯಾಗುತ್ತಿದೆ?

ಸರ್ಕಾರದ ವಿವಿಧ ಯೋಜನೆಗಳಿಂದ ತಮಗೆಷ್ಟು ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಗೂಗಲ್ ಪ್ಲೇ ಸ್ಟೋರ್ ನಲ್ಲಿ

DBT Karnataka  ಎಂದು ಟೈಪ್ ಮಾಡಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಅಥವಾ ಈ

https://play.google.com/store/apps/details?id=com.dbtkarnataka

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಡಿಬಿಟಿ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ ಇನಸ್ಟಾಲ್ ಮೇಲೆ ಕ್ಲಿಕ್ ಮಾಡಿದ ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು.  ನಂತರ ಅಲೋ ಡಿಬಿಟಿ ಕೆಳಗಡೆ ಅಲೋ ಮೇಲೆ ಕ್ಲಿಕ್ ಮಾಡಬೇಕು.  ಮತ್ತೊಂದು ಸಲ ಅಲೋ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಬೇಕು. ನಂತರ ಅಲ್ಲಿ ಕೆಳಗಡೆ ಕಾಣಿಸುವ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು.

ಆಗ ನಿಮ್ಮ ಆಧಾರ್ ಕಾರ್ಡಿಗೆ ನೋಂದಣಿಯಾಗಿರುವ ಮೊಬೈಲ್ ನಂಬರಿಗೆ  ಓಟಿಪಿ ಬರುತ್ತದೆ. ಆ ಓಟಿಪಿ ನಮೂದಿಸಿದ ನಂತರ ನೀವು ಪಿನ್ ಕ್ರಿಯೇಟ್ ಮಾಡಿಕೊಳ್ಳಬೇಕು. ಮೇಲ್ಗಡೆ ನಮೂದಿಸಿ ಪಿನ್ ನ್ನು ಮತ್ತೇ ಕೆಳಗಡೆ ಹಾಕಬೇಕು. ಈ ಪಿನ್ ಅನ್ನು ನೀವು ನೆನಪಿಟ್ಟುಕೊಳ್ಳಬೇಕು. ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು..ಆಗ ನಿಮ್ಮ ಫೋಟೋ ಕಾಣಿಸುತ್ತದೆ.

DBT app status

DBT status ನಲ್ಲಿಯಾವ ಯಾವ ಮಾಹಿತಿ ಕಾಣಿಸುತ್ತದೆ?

ಅಲ್ಲಿ ನಿಮ್ಮ ಹೆಸರು, ವಿಳಾಸ ಕಾಣಿಸುತ್ತದೆ. ನಿಮ್ಮ ಹುಟ್ಟಿದ ದಿನಾಂಕ ಕಾಣಿಸುತ್ತದೆ. ಅದರ ಕೆಳಗಡೆ ನಿಮ್ಮ ಮೊಬೈಲ್ ನಂಬರ್ ಹಾಕಬೇಕು. ನಂತರ ಓಕೆ ಮೇಲೆ ಕ್ಲಿಕ್ ಮಾಡಬೇಕು. ನಂತರ ಡಿಬಿಟಿ ಆ್ಯಪ್  ಓಪನ್ ಆಗುತ್ತದೆ.

ಅಲ್ಲಿ ಪೇಮೆಂಟ್ ಸ್ಟೇಟಸ್, ಪ್ರೌಫೈಲ್ ಹಾಗೂ ಕಂಟ್ಯಾಕ್ಟ್ ಹೀಗೆ ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೀವು ಪೇಮೆಂಟ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವ ಯಾವ ಯೋಜನೆಗಳಿಂದ ನಿಮಗೆ ಹಣ ಜಮೆಯಾಗುತ್ತಿದೆ ಎಂಬ ಪಟ್ಟಿ ಕಾಣಿಸುತ್ತದೆ. ಆ ಯೋಜನೆಯ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಇಲ್ಲಿಯವರೆಗೆ ಎಷ್ಟು ಕಂತುಗಳು ಹಾಗೂ ಎಷ್ಟು ಹಣ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ. ಇದು ರೈತರಿಗೆ ತುಂಬಾ ಉಪಯುಕ್ತವಾದ ಆ್ಯಪ್ ಆಗಿದೆ.

Leave a Comment