eKYC ಮಾಡಿದರೆ ಮಾತ್ರ ಈ ರೈತರಿಗೆ ಪಿಎಂ ಕಿಸಾನ್ 17ನೇ ಕಂತಿನ ಹಣ ಜಮೆ

Written by Admin

Updated on:

Spread the love

eKYC : ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತು ನಿಮ್ಮ ಖಾತೆಗೆ ಜಮೆಯಾಗಬೇಕಾದರೆ  ಇಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. 

ಹೌದು, ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿದ ಫಲಾನುಭವಿಗಳಿಗೆ ಮುಂದಿನ ಕಂತು ಅಂದರೆ 17ನೇ ಕಂತು ರೈತರ ಖಾತೆಗೆ ಹಣ ಜಮೆಯಾಗಬೇಕಾದರೆ eKYC ಮಾಡಿಸುವುದು ಕಡ್ಡಾಯವಾಗಿದೆ. ಹಾಗಾದರೆ ಇಕೆವೈಸಿ ಎಲ್ಲಿ ಮಾಡಿಸಬೇಕು? ಇಕೆವೈಸಿ ಮಾಡಿಸಲು ಯಾವ ಯಾವ ದಾಖಲೆ ಬೇಕು? ಮೊಬೈಲ್ ನಲ್ಲಿ ಇಕೆವೈಸಿ ಮಾಡಿಸುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

eKYC

ಪಿಎಂ ಕಿಸಾನ್ ಯೋಜನೆಯನ್ನು 2018-19ನೇ ಸಾಲಿನಲ್ಲಿ ಆರಂಭಿಸಲಾಯಿತು. ಆರಂಭದಲ್ಲಿ ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿದ ರೈತರ ಸಂಖ್ಯೆ ತುಂಬಾ ಕಡಿಮೆ ಇತ್ತು. ನಂತರದ ದಿನಗಳಲ್ಲಿ ಜನರಲ್ಲಿ ಯೋಜನೆಯ ಕುರಿತು ಜಾಗೃತಿ ಮೂಡತೊಡಗಿತು. ಹಾಗಾಗಿ 2019-20 ರಿಂದ 2020-21 ನೇ ಸಾಲಿನಲ್ಲಿ ಅತೀ ಹೆಚ್ಚು ರೈತರು ಪಿಎಂ ಕಿಸಾನ್ ಯೋಜನೆಗೆ ತಮ್ಮ ಹೆಸರು ನೋಂದಣಿ ಮಾಡಿಸಿಕೊಂಡರು. ಆರಂಭದಲ್ಲಿ ಯಾವುದೇ ಷರತ್ತಿರಲಿಲ್ಲ. ಹಾಗಾಗಿ ಪಿಎಂಕಿಸಾನ್ ಯೋಜನೆಗೆ ಅರ್ಹತೆ ಇಲ್ಲದವರೂ ಸಹ  ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿಕೊಂಡು ಯೋಜನೆಯ ಹಣ ಪಡೆಯುತ್ತಿದ್ದರು. ಅನರ್ಹರು ಯೋಜನೆಯ ಹಣ ಪಡೆಯುವುದನ್ನುತಡೆಯುವುದಕ್ಕಾಗಿ eKYC ಕಡ್ಡಾಯಗೊಳಿಸಲಾಯಿತು.

ಪಿಎಂ ಕಿಸಾನ್ ಯೋಜನೆಗೆ ಯಾರು ಯಾರು ನೋಂದಣಿ ಮಾಡಿಸಿಕೊಂಡಿದ್ದರು?

ಪಿಎಂ ಕಿಸಾನ್ ಯೋಜನೆಗೆ ಅರ್ಹತೆ ಇಲ್ಲದ ರೈತರು ಸಹ ತಮ್ಮ ಹೆಸರು ನೋಂದಣಿ ಮಾಡಿಸಿಕೊಂಡಿದ್ದರು. ಸರ್ಕಾರಿ ನೌಕರರು, ಜನಪ್ರತಿನಿಧಿಗಳು ಹಾಗೂ ಒಂದು ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚಿನ ಸದಸ್ಯರು ತಮ್ಮ ಹೆಸರು ನೋಂದಣಿ ಮಾಡಿಸಿಕೊಂಡಿದ್ದರು. ಹಾಗಾಗಿ ಪಾರದರ್ಶಕವಾಗಿ ನಿಜವಾದ ಫಲಾನುಭವಿಗಳಿಗೆ ಪಿಎಂ ಕಿಸಾನ್ ಯೋಜನೆಯನ್ನು ತಲುಪಿಸುವುದಕ್ಕಾಗಿ ಇಕೆವೈಸಿ ಮಾಡಿಸುವುದು ಕಡ್ಡಾಯಗೊಳಿಸಲಾಯಿತು.

eKYC ಅರ್ಹತೆ ಇದ್ದರೂ ಕೆಲವು ರೈತರಿಗೇಕೆ ಹಣ ಜಮೆಯಾಗುತ್ತಿಲ್ಲ?

ಪಿಎಂ ಕಿಸಾನ್ ಯೋಜನೆಗೆ ಎಲ್ಲಾ ಅರ್ಹತೆ ಹೊಂದಿದ್ದರೂ ಸಹ ಕೆಲವು ರೈತರಿಗೆ ಯೋಜನೆಯ ಲಾಭ ತಲುಪುತ್ತಿಲ್ಲ. ಏಕೆಂದರೆ ದಾಖಲೆಗಳ ಸಮಸ್ಯೆ. ಅಂದರೆ ಆಧಾರ್ ಕಾರ್ಡ್ ನಲ್ಲಿರುವಂತೆ ಜಮೀನಿನ ದಾಖಲೆಗಳಲ್ಲಿ ಹೆಸರು ಒಂದೇ ರೀತಿ ಇರುವುದಿಲ್ಲ.

ಇದನ್ನೂ ಓದಿ Aadhaar Number ಹಾಕಿ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿ- 2024

ಇನ್ನೂ ಕೆಲವರದ್ದು ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಹಾಗೂ ಜಮೀನಿನ ಪಹಣಿಯ ದಾಖಲೆಗಳ ಹೆಸರು ತಾಳೆಯಾಗುತ್ತಿರಲಿಲ್ಲ. ಹಾಗಾಗಿ ಕೆಲವು ರೈತರಿಗೆ ಅರ್ಹತೆ ಇದ್ದರೂ ಯೋಜನೆಯ ಲಾಭ ಸಿಗುತ್ತಿರಲಿಲ್ಲ.

eKYC  ಪಿಎಂ ಕಿಸಾನ್ ಯೋಜನೆಗೆ  ಇಕೆವೈಸಿ ಆಗಿದೆಯೋ ಇಲ್ಲವೋ ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ

ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿದ ಫಲಾನುಭವಿಗಳು ತಮ್ಮ ಹೆಸರಿಗೆ ಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://pmkisan.gov.in/aadharekyc.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ Search ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಹೆಸರಿಗೆ ಇಕೆವೈಸಿ ಆಗಿದ್ದರೆ ekYC successfully done ಎಂಬ ಮೆಸೆಜ್ ಕಾಣಿಸುತ್ತದೆ. ಒಂದು ವೇಳೆ ನಿಮ್ಮ ಹೆಸರಿಗೆ ಇಕೆವೈಸಿ ಆಗದೆ ಇದ್ದರೆ ನೀವು ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು. ನಂತರ ಓಟಿಪಿ ಬರುತ್ತದೆ. ಓಟಿಪಿ ಹಾಕಿದ ನೀವು ಇಕೆವೈಸಿ

ekyc farmer

ಮಾಡಿಕೊಳ್ಳಬಹುದು.

eKYC  ಮೊಬೈಲ್ ನಲ್ಲಿ ಇಕೆವೈಸಿ ಆಗದಿದ್ದರೆ ರೈತರೇನು ಮಾಡಬೇಕು?

ಮೊಬೈಲ್ ನಲ್ಲಿ ಇಕೆವೈಸಿ ಮಾಡಲು ಸಮಸ್ಯೆಯಾಗುತ್ತಿದ್ದರೆ ಕೂಡಲೇ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಇಕೆವೈಸಿ ಮಾಡಿಸಿಕೊಳ್ಳಬೇಕು. ಹೌದು, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಜಮೀನಿನ ದಾಖಲೆ ಸಲ್ಲಿಸಿ ಇಕೆವೈಸಿ ಮಾಡಿಕೊಳ್ಳಬಹುದು.

Leave a Comment