FID for bara parihara : ರೈತ ಬಾಂಧವರಿಗೆ ತಮಗೆಲ್ಲಾ ಗೊತ್ತಿದ್ದ ಹಾಗೆ ಬರಗಾಲ ಪರಿಹಾರ ಹಣ ಕೆಲವು ರೈತರಿಗೆ ಜಮೆಯಾದರೆ ಇನ್ನೂ ಕೆಲವು ರೈತರಿಗೆ ಜಮೆಯಾಗಿಲ್ಲ. ಯಾವ ಯಾವ ರೈತರಿಗೆ ಬರಗಾಲ ಪರಿಹಾರ ಹಣ ಜಮೆಯಾಗಿಲ್ಲವೋ ಅವರು ಕೂಡಲೇ ಈ ಕೆಳಗೆ ನೀಡಲಾದ ಕೆಲಸಗಳನ್ನು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನಿಮಗೆ ಬರಗಾಲ ಪರಿಹಾರ ಹಣ ಜಮೆಯಾಗಲ್ಲ. ಬರಗಾಲ ಪರಿಹಾರದ ಮುಂದಿನ ಕಂತು ಜಮೆಯಾಗಬೇಕಾದರೆ ಇದರೊಂದಿಗೆ ಬೆಳೆ ವಿಮೆ ಪರಿಹಾರ ಹಣ ಜಮೆಯಾಗಬೇಕಾದರೂ ಸಹ ಇ ಕೆಳಗಿನ ಕೆಲಸ ಮಾಡಲೇಬೇಕು.
FID for bara parihara ಬರಗಾಲ ಪರಿಹಾರ ಜಮೆಯಾಗಲು ಫ್ರೂಟ್ಸ್ ಐಡಿ ಮಾಡಲು ಇನ್ನೂ ಕಾಲಾವಕಾಶವಿದೆ
ಬರಗಾಲ ಪರಿಹಾರ ಹಣ ಜಮೆಯಾಗಲು ಇನ್ನೂ ಕಾಲಾವಕಾಶವಿದೆ. ಹೌದು, ಈಗಲೇ ನೀವು ಫ್ರೂಟ್ಸ್ ಐಡಿ ಮಾಡಿಕೊಳ್ಳಬೇಕು. ನೀವು ಫ್ರೂಟ್ಸ್ ಐಡಿಗೆ ನೋಂದಣಿ ಮಾಡಲು ಅವಕಾಶವಿದೆ. ಬರ ಪರಿಹಾರ ಹಣ ಜಮೆಯಾಗಬೇಕಾದರೆ ರೈತರು ಕೂಡಲೇ ಫ್ರೂಟ್ಸ್ ತಂತ್ರಾಂಶದಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಭಬೇಕು. ಇಲ್ಲದಿದ್ದರೆ ಬರ ಪರಿಹಾರ ಹಣ ಜಮೆಯಾಗುವ ಸಾಧ್ಯತೆ ಕಡಿಮೆಯಿದೆ.
FID for bara parihara ನಿಮ್ಮ ಖಾತೆಗೆ ಬರ ಪರಿಹಾರ ಹಣ ಎಷ್ಟು ಜಮೆ ಮಾಡಲಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ
ಬರಗಾಲ ಪರಿಹಾರ ಹಣ ನಿಮ್ಮ ಖಾತೆಗೆ ಎಷ್ಟು ಹಣ ಜಮೆ ಮಾಡಲಾಗಿದೆ ಎಂಬುದನ್ನು ಚೆಕ್ ಮಾಡಲು ಈ
https://parihara.karnataka.gov.in/service92/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಂತರ ನಿಮಗೆ ಭೂಮಿ ಆನ್ಲೈನ್ ಪರಿಹಾರ ಇನ್ಪುಟ್ ಸಬ್ಸಿಡಿ ಪಾವತಿ ವಿವರಗಳು ಪೇಜ್ ಓಪನ್ ಆಗುತ್ತದೆ.
ಅಲ್ಲಿ ನೀವು Select Year / ವರ್ಷ 2023-24 ಆಯ್ಕೆ ಮಾಡಿಕೊಳ್ಳಬೇಕು. ನಂತರ Select Season / ಋತು ಆಯ್ಕೆ ಮಾಡಿಯಲ್ಲಿ ಮುಂಗಾರು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ Select Calamity ವಿಪತ್ತು ಆಯ್ಕೆ ಮಾಡಿಯಲ್ಲಿ ಬರ ಆಯ್ಕೆ ಮಾಡಬೇಕು. ನಂತರ Get Data / ಹುಡುಕು ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ : Link RTC aadhar card ಮೊಬೈಲ್ ನಲ್ಲೇ ಪಹಣಿಗೆ ಆಧಾರ್ ಲಿಂಕ್ ಮಾಡಿ ಬರಗಾಲ ಬೆಳೆ ವಿಮೆ ಪರಿಹಾರ ಪಡೆಯಿರಿ 2024
ಅಲ್ಲಿ ನಿಮಗೆ ಆಧಾರ್ ಸಂಖ್ಯೆ, ರೈತರ ಗುರುತಿನ ಸಂಖ್ಯೆ, ಮೊಬೈಲ್ ಸಂಖ್ಯೆಹಾಗೂ ಸರ್ವೆ ನಂಬರ್ ಈ ನಾಲ್ಕರಲ್ಲಿ ಆಧಾರ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ನಂತರ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಆಧಾರ್ ಕಾರ್ಡ್ ಕೊನೆಯ ಸಂಖ್ಯೆ, ನಿಮ್ಮ ಹೆಸರು ನಿಮ್ಮ ಎಫ್ಐಡಿ ಕಾಣಿಸುತ್ತದೆ. ಅಲ್ಲಿ ಕಾಣುವ ಸರ್ಕಲ್ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮಗೆ ಮಾಲಿಕರ ಹೆಸರು ಕಾಣಿಸುತ್ತದೆ. ಆ ಮಾಲಿಕರಿಗೆ ಯಾವ ಬ್ಯಾಂಕಿನಲ್ಲಿ ಯಾವಾಗ ಬರ ಪರಿಹಾರ ಹಣ ಜಮೆಯಾಗಿದೆ ಎಂಬುದು ಕಾಣಿಸುತ್ತದೆ.
FID for bara parihara ಬರಗಾಲ ಪರಿಹಾರ ಪಡೆಯಲು ಫ್ರೂಟ್ಸ್ ಐಡಿ ಕಡ್ಡಾಯ
ಬರ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಲಾಗಿರುವ ಎಲ್ಲಾ ತಾಲೂಕುಗಳ ರೈತರಿಗೆ ಬರ ಪರಿಹಾರಹಣ ಜಮೆಯಾಗುವುದು. ಇದರೊಂದಿಗೆ ಸರ್ಕಾರದ ಸೌಲಭ್ಯ ಪಡೆಯಲು ರೈತರಿಗೆ ಫ್ರೂಟ್ಸ್ ಐಡಿ ಕಡ್ಡಾಯವಾಗಿದೆ.
ಮುಂಗಾರು ಹಂಗಾಮಿನ ಬರ ಪರಿಹಾರ ಪಡೆಯಲು ಪಡೆದುಕೊಳ್ಳಲು ರೈತರು ಕೂಡಲೇ ಜಮೀನಿನ ಸರ್ವೆ ನಂಬರ್ ನ್ನು ಎಫ್ಐಡಿಗೆ ಸೇರ್ಪಡೆಗೊಳಿಸಬೇಕು. ಇದುವರೆಗೂ ಎಫ್ಐಡಿ ಮಾಡಿಸದ ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ನ ಝರಾಕ್ಸ್ ಪ್ರತಿಗಳೊಂದಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಎಫ್ಐಡಿಗಳನ್ನು ಮಾಡಿಸಿಕೊಳ್ಳಬೇಕು.