FRUITS ID : ರೈತರ ಹೆಸರಿಗೆ ಫ್ರೂಟ್ಸ್ ಇದೆಯೇ? ಮೊಬೈಲ್ ನಲ್ಲೇ ಚೆಕ್ ಮಾಡಿ 2024

Written by Admin

Published on:

Spread the love

FRUITS ID ರೈತರ ಹೆಸರಿಗೆ ಫ್ರೂಟ್ಸ್ ಐಡಿ ಇದೆಯೋ ಇಲ್ಲವೋ ಎಂಬುದನ್ನು ರೈತರು ಈಗ ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಇದರೊಂದಿಗೆ  ಎಷ್ಟು ಸರ್ವೆ ನಂಬರ್ ಗಳನ್ನು ಫ್ರೂಟ್ಸ್ ಐಡಿಯಲ್ಲಿ ಸೇರಿಸಲಾಗಿದೆ ಎಂಬುದನ್ನು ಸಹ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ತಮಗೆಲ್ಲಾ ಗೊತ್ತಿದ್ದ ಹಾಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯಬೇಕಾದರೆ ರೈತರಿಗೆ ಫ್ರೂಟ್ಸ್ ಐಡಿ ಕಡ್ಡಾಯಗೊಳಿಸಲಾಗಿದೆ. ಫ್ರೂಟ್ಸ್ ಐಡಿ ಇಲ್ಲದಿದ್ದರೆ ರೈತರಿಗೆ ಇನ್ನೂಮುಂದೆ ಯಾವುದೇ ಸೌಲಭ್ಯ ಸಿಗುವುದಿಲ್ಲ. ಕೇವಲ ಯೋಜನೆಗಳಷ್ಟೇ ಅಲ್ಲ, ಬ್ಯಾಂಕಿನಲ್ಲಿ ಸಾಲವೂ ಸಿಗುವುದಿಲ್ಲ.

FRUITS ID

ಕೃಷಿ ಇಲಾಖೆಗೆ ತಮಲ್ಲಿರುವ ದಾಖಲೆಗಳನುಸಾರವಾಗಿ ರೈತರ ಫ್ರೂಟ್ಸ್ ಐಡಿಯನ್ನು ಮಾಡಿದ್ದಾರೆ. ಇನ್ನೂ ಕೆಲವು ರೈತರ ಫ್ರೂಟ್ಸ್ ಐಡಿ ಆಗಿರುವುದಿಲ್ಲ. ಹೊಸದಾಗಿ ಜಮೀನು ಖರೀದಿಸಿದ ನಂತರ ಅವರ ಹೆಸರಿಗೆ ಫ್ರೂಟ್ಸ್ ಐಡಿ ಇರುವುದಿಲ್ಲ. ಅಂತಹ ರೈತರು ತಮ್ಮ ಹೆಸರಿಗೆ ಪ್ರೂಟ್ಸ್ ಐಡಿ ಆಗಿರುವುದನ್ನು ಚೆಕ್ ಮಾಡಿಕೊಳ್ಳಬಹುದು.

FRUITS ID ಫ್ರೂಟ್ಸ್ ಐಡಿ ಚೆಕ್ ಮಾಡುವುದು ಹೇಗೆ?

ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಪ್ರೂಟ್ಸ್ ಐಡಿಯನ್ನು ಚೆಕ್ ಮಾಡಲು ಈ

https://fruitspmk.karnataka.gov.in/MISReport/GetDetailsByAadhaar.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ Farmer Registration and unified beneficiary information system Pm kisan FRUITS PM KISAN ಪೇಜ್ ಕಾಣಿಸುತ್ತದೆ. ಅಲ್ಲಿ ಫಾರ್ಮರ್ ಡಿಟೇಲ್ ಕೆಳಗಡೆ ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಬೇಕು.  ನಂತರ Search ಆಗ ನಿಮ್ಮ ಹೆಸರಿಗೆ ಪ್ರೂಟ್ಸ್ ಐಡಿ ಇದ್ದರೆ ಇನ್ನೊಂದು ಪೇಜ್ ಓಪನ್ ಆಗುವುದು. ಅಲ್ಲಿ ನಿಮ್ಮ ಹೆಸರು, ಪ್ರೂಟ್ಸ್ ಐಡಿ ಕಾಣಿಸುತ್ತದೆ. ಅದೇ ನಿಮ್ಮ ಫ್ರೂಟ್ಸ್ ಐಡಿ.

FRUITS ID ಫ್ರೂಟ್ಸ್ ಐಡಿ ಯಾವ ಯಾವ ಸೌಲಭ್ಯ ಪಡೆಯಲು ಬೇಕಾಗುತ್ತದೆ?

ಫ್ರೂಟ್ಸ್ ಐಡಿಯನ್ನು ಸರ್ಕಾರದ ಸೌಲಭ್ಯಗಳು ಅಂದರೆ ಬಿತ್ತನೆಯಿಂದ ಹಿಡಿದು ಬೆಳೆ ಕಟಾವುವರೆಗೆ ಬೇಕಾಗುವ ಕೃಷಿ ಯಂತ್ರೋಪಕರಣಗಳ ಖರೀದಿಗೆ ಬೇಕಾಗುತ್ತದೆ. ತೋಟಗಾರಿಕೆ, ಕೃಷಿ ಇಲಾಖೆ, ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆ ಇಲಾಖೆಯಿಂದ ರೈತರು ಯಾವುದೇ ಸೌಲಭ್ಯ ಪಡೆಯಬೇಕಾದರೆ ಅವರಿಗೆ ಫ್ರೂಟ್ಸ್ ಐಡಿ ಕಡ್ಡಾಯವಾಗಿರುತ್ತದೆ.

ಕುರಿ, ಕೋಳಿ,ಮೇಕೆ ಸಾಕಾಣಿಕೆಗೆ  ಸಬ್ಸಿಡಿ ಪಡೆಯಲು, ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಬೋರ್ವೆಲ್ ಕೊರೆಯಲು ಸಬ್ಸಿಡಿ ಪಡೆಯಲು ಫ್ರೂಟ್ಸ್ ಐಡಿ ಬೇಕಾಗುತ್ತದೆ. ಇದರೊಂದಿಗೆ ಕೃಷಿ ಹೊಂಡ ನಿರ್ಮಾಣಕ್ಕೂ ಫ್ರೂಟ್ಸ್ ಐಡಿಯ ಅವಶ್ಯಕತೆಯಿರುತ್ತದೆ.

ಇದನ್ನೂ ಓದಿ Land mutation ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ 2024

ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ರೇಶನ್ ಕಾರ್ಡ್, ವೋಟರ್ ಐಡಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿರುತ್ತದೆ ಫ್ರೂಟ್ಸ್ ಐಡಿ. ಹೌದು, ರೈತರ ಅತ್ಯಂತ ಮಹತ್ವದ ದಾಖಲೆಗಳಲ್ಲಿ ಫ್ರೂಟ್ಸ್ ಐಡಿಯೂ ಒಂದಾಗಿದೆ.

FRUITS ID ಫ್ರೂಟ್ಸ್ ಐಡಿ ಮಾಡಿಸಲು ಯಾವ ಯಾವ ದಾಖಲೆ ಬೇಕು?

ಫ್ರೂಟ್ಸ್ ಐಡಿ ಪಡೆಯಲು ರೈತರು ತಮ್ಮ ಆಧಾರ್ ಕಾರ್ಡ್ ಹೊಂದಿರಬೇಕು. ಜಮೀನಿನ ದಾಖಲೆಗಳು ಅಂದರೆ ಪಹಣಿ (ಆರ್.ಟಿ.ಸಿ) ಇರಬೇಕು. ರೈತರು ಎಷ್ಟೇ ಸರ್ವೆ ನಂಬರ್ ಹೊಂದಿರಲಿ ಎಲ್ಲಾ ಸರ್ವೆ ನಂಬರ್ ಗಳ ಪಹಣಿ ನೀಡಬೇಕು. ರೈತರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಆರ್.ಡಿ. ಸಂಖ್ಯೆ ಹೊಂದಿರುವ ಜಾತಿ ಪ್ರಮಾಣ ಪತ್ರ ನೀಡಬೇಕು. ಬ್ಯಾಂಕ್ ಪಾಸ್ ಬುಕ್ ಪ್ರತಿಯನ್ನು ಸಹ ನೀಡಬೇಕು. ಇದರೊಂದಿಗೆ ಇತ್ತೀಚಿನ ಫೋಟೋ ನೀಡಬೇಕಾಗುತ್ತದೆ.

farmers crop
Farmer Crop growing

FRUITS ID ಫ್ರೂಟ್ಸ್ ಐಡಿಯನ್ನು ಎಲ್ಲಿ ಮಾಡಿಸಬೇಕು?

ರೈತರು ತಮ್ಮ ಫ್ರೂಟ್ಸ್ ಐಡಿಯನ್ನು ಮೊಬೈಲ್ ನಲ್ಲೇ ಮಾಡಿಕೊಳ್ಳಬಹುದು. ಅದಕ್ಕೆ ಸ್ವಲ್ಪ ತಂತ್ರಜ್ಞಾನದ ಜ್ಞಾನ ಇದ್ದರೆ ಸಾಕು. ಮೊಬೈಲ್ನಲ್ಲಿ ಸಮಸ್ಯೆಯಾಗುತ್ತಿದ್ದರೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಡಿಸಬಹುದು. ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್,  ಸಿಎಸ್.ಸಿ ಕೇಂದ್ರಗಳಲ್ಲಿಯೂ ಫ್ರೂಟ್ಸ್ ಐಡಿ ಮಾಡಿಕೊಳ್ಳಬಹುದು.

Leave a Comment